ಇನ್ನೂ ಕೇರಳಕ್ಕೆ ಬಾರದ ನೈಋತ್ವ ಮಾನ್ಸೂನ್‌

ನವದೆಹಲಿ: ಭಾನುವಾರ ಕೇರಳಕ್ಕೆ ಮಾನ್ಸೂನ್‌ ಆಗಮಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಗಮಿಸಲಿಲ್ಲ ಹಾಗೂ ಭಾರತ ಹವಾಮಾನ ಇಲಾಖೆಯು ಮಾನ್ಸೂನ್‌ ಕೇರಳಕ್ಕೆ ಆಗಮಿಸುವುದು ಇನ್ನೂ ಮೂರರಿಂದ ನಾಲ್ಕು ದಿನಗಳು ವಿಳಂಬವಾಗಬಹುದು ಎಂದು ಹೇಳಿದೆ. ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1 ರಂದು ಸುಮಾರು ಏಳು ದಿನಗಳ ಪ್ರಮಾಣಿತ ವಿಚಲನದೊಂದಿಗೆ ಕೇರಳದ ಮೇಲೆ ಪ್ರಾರಂಭವಾಗುತ್ತದೆ. ಭಾರತೀಯ ಹವಾಮಾನ ಇಲಾಖೆ … Continued

ಟಾಟಾದಿಂದ ಗುಜರಾತ್‌ನಲ್ಲಿ ₹ 13,000 ಕೋಟಿ ವೆಚ್ಚದಲ್ಲಿ ಇವಿ ಬ್ಯಾಟರಿ ಘಟಕ ನಿರ್ಮಾಣ

ಲಿಥಿಯಂ-ಐಯಾನ್ ಸೆಲ್‌ಗಳನ್ನು ತಯಾರಿಸಲು ಗಿಗಾ-ಫ್ಯಾಕ್ಟರಿಯನ್ನು ಸ್ಥಾಪಿಸಲು ಸಾಲ್ಟ್-ಟು-ಸಾಫ್ಟ್‌ವೇರ್ ಸಂಘಟಿತ ಟಾಟಾ ಗ್ರೂಪ್ ಗುಜರಾತ್ ಸರ್ಕಾರದೊಂದಿಗೆ ಅಂದಾಜು ₹ 13,000 ಕೋಟಿ ಆರಂಭಿಕ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಟಾಟಾ ಅಗರಟಾಸ್ ಎನರ್ಜಿ ಸ್ಟೋರೇಜ್ ಸೊಲ್ಯೂಷನ್ಸ್ ಪ್ರೈವೇಟ್ ಶುಕ್ರವಾರ 20 ಗಿಗಾವ್ಯಾಟ್ ಗಂಟೆಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ವಿದ್ಯುತ್-ವಾಹನ ಬ್ಯಾಟರಿ ಘಟಕವನ್ನು ಸ್ಥಾಪಿಸಲು … Continued

ಪಾಟ್ನಾದಲ್ಲಿ ನಡೆಯಬೇಕಿದ್ದ ವಿಪಕ್ಷಗಳ ಬೃಹತ್‌ ಸಭೆ ಜೂನ್ 23ಕ್ಕೆ ಮುಂದೂಡಿಕೆ

ನವದೆಹಲಿ: ಜೂನ್ 12 ರಂದು ಬಿಹಾರದ ಪಾಟ್ನಾದಲ್ಲಿ ನಡೆಯಬೇಕಿದ್ದ ವಿರೋಧ ಪಕ್ಷಗಳ ಸಭೆಯನ್ನು ಭಾನುವಾರ ಮುಂದೂಡಲಾಗಿದೆ. ಈಗ ವಿಪಕ್ಷಗಳ ಸಭೆ ಜೂನ್ 23 ಕ್ಕೆ ನಿಗದಿ ಮಾಡಲಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಸಭೆಯನ್ನು ಮುಂದೂಡಲು ಕಾರಣ ಬಹಿರಂಗಪಡಿಸಲಾಗಿದೆ. ಜೂನ್ 12 ರಂದು ನಡೆಯಲಿರುವ ಸಭೆಗೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು … Continued

ಹಿರಿಯ ನಟಿ ಸುಲೋಚನಾ ಲಾಟ್ಕರ್ ಮುಂಬೈನಲ್ಲಿ ನಿಧನ

ಮುಂಬೈ: ಖ್ಯಾತ ನಟಿ ಸುಲೋಚನಾ ಲಾಟ್ಕರ್ ಅವರು ಇಲ್ಲಿನ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ ಎಂದು ಅವರ ಮೊಮ್ಮಗ ಪರಾಗ್ ಅಜಗಾಂವ್ಕರ ಖಚಿತಪಡಿಸಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಮರಾಠಿ ಮತ್ತು ಹಿಂದಿ ಚಿತ್ರರಂಗದ ಪ್ರಸಿದ್ಧ ನಟಿ ಸುಲೋಚನಾ ಲಾಟ್ಕರ್ ಅವರು 1940ರ ದಶಕದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 250 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಅವರು … Continued

ವೀಡಿಯೊ : ನೋಡನೋಡುತ್ತಲೇ ಕೆಲವೇ ಸೆಕೆಂಡುಗಳಲ್ಲಿ ಕುಸಿದುಬಿದ್ದ ಚತುಷ್ಪಥ ಸೇತುವೆ | ವೀಕ್ಷಿಸಿ

ಭಾಗಲ್ಪುರ: ಬಿಹಾರದ ಭಾಗಲ್ಪುರದಲ್ಲಿ ಮುಖ್ಯಮಂತ್ರಿ ನಿತೀಶಕುಮಾರ ಅವರು ಶಂಕುಸ್ಥಾಪನೆ ಮಾಡಿದ 3160 ಮೀಟರ್ ಉದ್ದದ ಸೇತುವೆಯ ಅಡಿಪಾಯ ಭಾನುವಾರ ಸಂಜೆ ಎರಡನೇ ಬಾರಿಗೆ ಕುಸಿದಿದೆ. ಸ್ಥಳೀಯರು ಸೇತುವೆ ಕುಸಿಯುತ್ತಿರುವ ವೀಡಿಯೊಗಳನ್ನು ಸೆರೆಹಿಡಿದಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಆಗುವಾನ್-ಸುಲ್ತಂಗಂಜ್ ಸೇತುವೆಯು ಕೆಲವೇ ಸೆಕೆಂಡುಗಳಲ್ಲಿ ಬಿದ್ದುಹೋಯಿತು. ನಿತೀಶಕುಮಾರ ಅವರ ಕನಸಿನ ಯೋಜನೆಯಾಗಿದ್ದ 1,710 ಕೋಟಿ ರೂಪಾಯಿ ವೆಚ್ಚದ ಸೇತುವೆಯ ಸುಮಾರು … Continued

ಒಡಿಶಾ ರೈಲು ಅಪಘಾತ : ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು

ನವದೆಹಲಿ: 275 ಜನರ ಸಾವು ಮತ್ತು 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಒಡಿಶಾ ರೈಲ್ವೆ ಅಪಘಾತದ ತನಿಖೆಯನ್ನು ರೈಲ್ವೆ ಮಂಡಳಿಯು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಶಿಫಾರಸು ಮಾಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಇಂದು, ಭಾನುವಾರ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಮರುಸ್ಥಾಪನೆ ಕಾರ್ಯ ನಡೆಯುತ್ತಿದೆ, ಟ್ರ್ಯಾಕ್‌ಗೆ … Continued

ಅಂಕೋಲಾ: ಸಂಶಯಕ್ಕೆ ಕಾರಣವಾದ ಗೋಡೆಗೆ ಅಂಟಿಸಿದ ಚಿತ್ರ-ವಿಚಿತ್ರ ಬರಹದ ಪೋಸ್ಟರುಗಳು…!

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಂಡೀಬಜಾರದ ನಾಲ್ಕು ರಸ್ತೆ ಕೂಡಿದ ಚಿಕನ್ ಅಂಗಡಿಯ ಪಕ್ಕದ ಸ್ಪೋರ್ಟ್ಸ್ ಅಂಗಡಿಯ ಗೋಡೆಗೆ ಮೂರು ಪೋಸ್ಟರಗಳನ್ನು ಅಂಟಿಸಲಾಗಿದೆ. ಬೆಳಿಗ್ಗೆ ಹಲವರು ಇದನ್ನು ಗಮನಿಸಿದ್ದಾರೆ ಬಿಳಿ ಗಾಳೆಯ ಮೇಲೆ ಕೆಂಪು ಬಣ್ಣದ ಮಾರ್ಕರ್ ನಿಂದ ಈ ಬರಹಗಳನ್ನು ಬರೆಯಲಾಗಿದೆ. ಈ ಬರಹಗಳನ್ನು ಯಾರು ಬರೆದು ಅಂಟಿಸಿದ್ದಾರೆಂಬುದು ಗೊತ್ತಾಗಿಲ್ಲ. ಇಂಗ್ಲಿಷ್ ನಲ್ಲಿ … Continued

ಕಿರುಕುಳ ಆರೋಪದ ಮೇಲೆ ಜ್ಞಾನವಾಪಿ ಪ್ರಕರಣಗಳಿಂದ ಹಿಂದೆ ಸರಿಯಲು ನಿರ್ಧರಿಸಿದ ಹಿಂದೂ ಅರ್ಜಿದಾರರು

ವಾರಾಣಸಿ: ‘ಕಿರುಕುಳ’ ಆರೋಪದ ಕಾರಣದಿಂದ ತಾನು ಮತ್ತು ತನ್ನ ಕುಟುಂಬ ಗ್ಯಾನವಾಪಿ ಮಸೀದಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಿಂದ ಹಿಂದೆ ಸರಿಯುತ್ತಿರುವುದಾಗಿ ಹಿಂದೂ ಪಕ್ಷದ ಪ್ರಮುಖ ದಾವೆದಾರರಲ್ಲಿ ಒಬ್ಬರಾದ ಜಿತೇಂದ್ರ ಸಿಂಗ್ ವಿಸೇನ್ ಪ್ರಕಟಿಸಿದ್ದಾರೆ. ಅವರ ವಕೀಲ ಶಿವಂ ಗೌರ್ ಕೂಡ ಪ್ರಕರಣಗಳಿಂದ ಹಿಂದೆ ಸರಿದಿದ್ದರು. “ನಾನು ಮತ್ತು ನನ್ನ ಕುಟುಂಬ (ಪತ್ನಿ ಕಿರಣ್ ಸಿಂಗ್ ಮತ್ತು … Continued

ನಾನು ಭಾರತಕ್ಕೆ ಹಿಂತಿರುಗಿದಾಗ ನನ್ನನ್ನು ನೋಡಿ : ಅಮೆರಿಕದಲ್ಲಿ ರಾಹುಲ್ ಗಾಂಧಿ ಹೇಳಿಕೆಗೆ ವಿದೇಶಾಂಗ ಸಚಿವ ಜೈಶಂಕರ ಉತ್ತರ

ಕೇಪ್‌ಟೌನ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಅಮೆರಿಕದಲ್ಲಿ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ವಿದೇಶಾಂಗ ಸಚಿವ ಎಸ್‌.ಜೈಶಂಕರ ಅವರು ಶನಿವಾರ ವಾಗ್ದಾಳಿ ನಡೆಸಿದ್ದು, ವಿದೇಶಕ್ಕೆ ಹೋದಾಗ ರಾಜಕೀಯ ಮಾಡುವುದನ್ನು ಬಿಟ್ಟು, ಭಾರತಕ್ಕೆ ಮರಳಿದ ನಂತರ ಇದಕ್ಕೆ ಉತ್ತರಿಸುವುದಾಗಿ ಹೇಳಿದೆ. ರಾಹುಲ್ ಗಾಂಧಿಯನ್ನು ಹೆಸರಿಸದೆ, ಸಚಿವ ಜೈಶಂಕರ ಅವರು ಟೀಕಿಸಿದ್ದಾರೆ. ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು … Continued

ಒಡಿಶಾ ರೈಲು ದುರಂತ : ‘ವಿದ್ಯುನ್ಮಾನ ಇಂಟರ್‌ಲಾಕಿಂಗ್‌ನಲ್ಲಿ ಬದಲಾವಣೆ’ಯಿಂದ ಅಪಘಾತ ; ರೈಲ್ವೆ ಸಚಿವ ಅಶ್ವಿನಿ ವೈಷ್ಣವ

ನವದೆಹಲಿ: ಟ್ರಿಪಲ್ ರೈಲು ಡಿಕ್ಕಿ ಸಂಭವಿಸಿದ ಒಡಿಶಾದ ಬಾಲಸೋರ್‌ನಲ್ಲಿ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ನಂತರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅಪಘಾತದ ಮೂಲ ಕಾರಣವನ್ನು ಗುರುತಿಸಲಾಗಿದೆ ಎಂದು ಭಾನುವಾರ ಹೇಳಿದ್ದಾರೆ. ರೈಲು ಅಪಘಾತದ ತನಿಖೆ ಪೂರ್ಣಗೊಂಡಿದ್ದು, ರೈಲು ಸುರಕ್ಷತಾ ಆಯುಕ್ತರು ಆದಷ್ಟು ಬೇಗ ವರದಿ ಸಲ್ಲಿಸಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. “ರೈಲ್ವೆ … Continued