ಜೊಯಿಡಾ: ಶಾಲಾ ಪ್ರವಾಸದ ಬಸ್​ ಪಲ್ಟಿ ; 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶ ಗುಡಿ ಬಳಿ ಶಾಲಾ ಪ್ರವಾಸದ ಬಸ್​ ಪಲ್ಟಿಯಾಗಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ. ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಬಸ್‌ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ಖಾಸಗಿ ಬಸ್​ನಲ್ಲಿ ಪ್ರವಾಸಕ್ಕೆ ಬಂದಿದ್ದ ಚಿತ್ರದುರ್ಗ … Continued

ವಿಜಯಪುರ | ಭೀಕರ ಅಪಘಾತ ; ಐದು ಮಂದಿ ಸಾವು

ವಿಜಯಪುರ: ತೊಗರಿ ಕಟಾವು ಯಂತ್ರ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸಾವಿಗೀಡಾದ ಘಟನೆ ತಾಳಿಕೋಟೆ ಬಿಳೇಬಾವಿ ಕ್ರಾಸ್ ಬಳಿ ಶುಕ್ರವಾರ(ಡಿ.6) ನಡೆದಿದೆ ಎಂದು ವರದಿಯಾಗಿದೆ. ಮೃತರಲ್ಲಿ ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರು ಇದ್ದಾರೆ. ಮೃತರನ್ನು ವಿಜಯಪುರದ ಅಲಿಯಾಬಾದ್ ನಿವಾಸಿಗಳಾದ ನಿಂಗಪ್ಪ ಪಾಟೀಲ ( 55), ಶಾಂತವ್ವ ಶಂಕರ ಪಾಟೀಲ (45),ಭೀಮಶಿ … Continued

ವೀಡಿಯೊ..| ನಿಲ್ದಾಣದಲ್ಲಿ ಕುಳಿತಿದ್ದ ಪ್ರಯಾಣಿಕನ ಮೇಲೆ ಹರಿದ ಬಸ್‌ ; ಪವಾಡಸದೃಶ ರೀತಿಯಲ್ಲಿ ಪಾರಾದ ಪ್ರಯಾಣಿಕ…!

ಕೇರಳದ ಟರ್ಮಿನಲ್ ಬಸ್‌ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದಾಗ ಬಸ್ ಡಿಕ್ಕಿ ಹೊಡೆದರೂ ಯುವಕನೊಬ್ಬ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾನೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಡುಕ್ಕಿ ಜಿಲ್ಲೆಯ ಕುಮಲಿ ಮೂಲದ ವಿಷ್ಣು ಎಂದು ಗುರುತಿಸಲಾದ ವ್ಯಕ್ತಿ ಡಿಸೆಂಬರ್ 1 ರಂದು ಕಟ್ಟಪ್ಪನ ಹೊಸ ಬಸ್ ನಿಲ್ದಾಣ ಟರ್ಮಿನಲ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ವೀಡಿಯೋದಲ್ಲಿ, … Continued

ಕಾಂತಾರ-1 ಸಿನೆಮಾ ಕಲಾವಿದರನ್ನು ಒಯ್ಯುತ್ತಿದ್ದ ಮಿನಿ ಬಸ್ ಪಲ್ಟಿ : ಹಲವರಿಗೆ ಗಾಯ

ಕುಂದಾಪುರ : ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ-1 ಚಲನಚಿತ್ರದ ಚಿತ್ರೀಕರಣಕ್ಕೆ ತೆರಳುತ್ತಿದ್ದ ನೃತ್ಯ ಕಲಾವಿದರಿದ್ದ ಮಿನಿ ಬಸ್ ಭಾನುವಾರ ರಾತ್ರಿ ಪಲ್ಟಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸುಮಾರು 25 ಜೂನಿಯರ್ ನೃತ್ಯಗಾರರು ಕಾಂತಾರ ಸಿನಿಮಾದ ಶೂಟಿಂಗ್ ನಲ್ಲಿ ಭಾಗವಹಿಸಿ ಮಿನಿ ಬಸ್ ನಲ್ಲಿ ತೆರಳುತ್ತಿದ್ದರು. ಸ್ಕೂಟಿ ಅಡ್ಡ ಬಂದ ಪರಿಣಾಮ ಅಪಘಾತವತಪ್ಪಿಸಲು ಚಾಲಕ ಯತ್ನಿಸಿದಾಗ … Continued

ವೀಡಿಯೊ…| ಸೈಕಲ್ ಮೇಲಿದ್ದ 5 ವರ್ಷದ ಬಾಲಕನ ಮೇಲೆ ಓಡಿದ ಕಾರು ; ಪವಾಡ ಸದೃಶರೀತಿಯಲ್ಲಿ ಪಾರಾದ ಬಾಲಕ…!

ಸೈಕಲ್ ಮೇಲೆ ಕುಳಿತು ಮನೆ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಬಾಲಕನೊಬ್ಬನಿಗೆ ಡಿಕ್ಕಿ ಹೊಡೆದ ಕಾರು ಆತನ ಮೇಲೆ ಹತ್ತಿ ಹೋದರೂ ಆತ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಮಧ್ಯಪ್ರದೇಶದ ಬೇತುಲ್‌ ಎಂಬಲ್ಲಿ ನಡೆದಿದೆ. ಈ ಘಟನೆ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೇತುಲ್ ಜಿಲ್ಲೆಯ ಕೊತ್ವಾಲಿ ಪೊಲೀಸ್ … Continued

ಮರ ಬಿದ್ದು ವ್ಯಕ್ತಿ ಮೃತಪಟ್ಟು ಎರಡು ದಿನ ಕಳೆದರೂ ಸ್ಥಳ ಬಿಟ್ಟು ಕದಲದ ಆತ ಒಯ್ಯುತ್ತಿದ್ದ ಕೋಳಿ…!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಡಿಂಬಾಳ ಸಮೀಪದ ಪುಳಿಕುಕ್ಕು ಮರಚೆಡವು ಬಳಿ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ದೂಪದ ಮರ ಬಿದ್ದು ಎಡಮಂಗಲ ಗ್ರಾಮದ ದೇವಸ್ಯ ಸೀತಾರಾಮ ಗೌಡ ಸ್ಥಳದಲ್ಲೇ ಮೃತಪಟ್ಟು ಎರಡು ದಿನ ಕಳೆದಿದೆ. ಆದರೆ, ಅವರು ಸ್ಕೂಟಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಕೋಳಿ ಮಾತ್ರ ಘಟನೆ ನಡೆದು ಎರಡು ದಿನ ಕಳೆದರೂ ಆ … Continued

ವೀಡಿಯೊ..| ಕೇರಳ ಸಿಎಂ ಬೆಂಗಾವಲು ವಾಹನಗಳ ಸರಣಿ ಡಿಕ್ಕಿ ; ಪಿಣರಾಯಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ತಿರುವನಂತಪುರಂ : ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ತಿರುವನಂತಪುರದಲ್ಲಿ ಈ ಘಟನೆ ನಡೆದಿದ್ದು, ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದುವುದನ್ನು ತಪ್ಪಿಸಲು ಹೋಗಿ ಒಮ್ಮೆಲೇ ಬ್ರೇಕ್‌ ಹಾಕಿದ ಪರಿಣಾಮ ಅವರ ಬೆಂಗಾವಲು ಕಾರುಗಳು ಸರಣಿಯಾಗಿ ಡಿಕ್ಕಿ ಹೊಡೆದುಕೊಂಡಿವೆ. ಈ ಅಪಘಾತದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ … Continued

ಹುನಗುಂದ | ಭೀಕರ ಅಪಘಾತ ; ನಾಲ್ವರು ಸಾವು

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕು ದನ್ನೂರು ಟೋಲ್ ನಾಕಾ ಸನಿಹ ಗುರುವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಲಾರಿ ಮತ್ತು ಕಾರಿನ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಬೆಳಗಿನ ಜಾವ ಹೊಸಪೇಟೆ ಸನಿಹದ ಹುಲಿಗೆಮ್ಮ ದೇವಸ್ಥಾನದ ದೇವರ ದರ್ಶನ ಮುಗಿಸಿಕೊಂಡು ಊರಿಗೆ ವಾಪಸ್ ಆಗುವಾಗ ಕಾರು … Continued

ವೀಡಿಯೊ..| ಕಾರು ಡಿಕ್ಕಿ ಹೊಡೆದ ರಭಸಕ್ಕೆ ಎಲಿವೇಟೆಡ್ ರಸ್ತೆಯಿಂದ ಪಿಲ್ಲರ್‌ ಗೆ ಹಾರಿಬಿದ್ದ ಮಹಿಳೆ…!

ನವದೆಹಲಿ: ನೋಯ್ಡಾದ ಎಲಿವೇಟೆಡ್ ರಸ್ತೆಯಲ್ಲಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ದ್ವಿಚಕ್ರ ವಾಹನದಲ್ಲಿದ್ದ ಮಹಿಳೆ ಎಗರಿ ಬಿದ್ದು ಫ್ಲೈಓವರ್‌ನ ಪಿಲ್ಲರ್‌ಗಳ ನಡುವೆ ಸಿಲುಕಿಕೊಂಡ ಘಟನೆ ನಡೆದಿದೆ. ಅದೃಷ್ಟವಶಾತ್ ಅವರು ಗಂಭೀರ ಗಾಯಗಳಿಂದ ಪಾರಾಗಿದ್ದಾರೆ. ಅವರು ಫ್ಲೈಓವರ್‌ ಕೆಳಗೆ ಬಿದ್ದಿದ್ದರೆ ಅವರ ಪ್ರಾಣಕ್ಕೆ ಅಪಾಯವಾಗುವ ಎಲ್ಲ ಸಾಧ್ಯತೆಗಳಿದ್ದವು. ಮಹಿಳೆಯನ್ನು ಪಿಲ್ಲರ್‌ಗಳ ನಡುವಿನಿಂದ ರಕ್ಷಣೆ ಮಾಡುವ … Continued

ರಸ್ತೆ ಅಪಘಾತ ; ಬಾಲಿವುಡ್‌ ನಟ ಪರ್ವಿನ್ ದಾಬಾಸ್ ಆಸ್ಪತ್ರೆಗೆ ದಾಖಲು

ಮುಂಬೈ: ನಟ ಪರ್ವಿನ್ ದಾಬಾಸ್ ಅವರು ಶನಿವಾರ (ಸೆಪ್ಟೆಂಬರ್ 21) ಮುಂಜಾನೆ ಅಪಘಾತಕ್ಕೀಡಾಗಿದ್ದಾರೆ ಹಾಗೂ ಅವರನ್ನು ಬಾಂದ್ರಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಅವರ ತಂಡವು ಸ್ವೀಕರಿಸಿದ ಮಾಹಿತಿಯ ಪ್ರಕಾರ, ನಟನನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಎಲ್ಲಾ ಪರೀಕ್ಷೆಗಳನ್ನು ನಡೆಸಿದರು. ಅವರ ಪತ್ನಿ, ನಟಿ ಪ್ರೀತಿ ಜಾಂಗಿಯಾನಿ ಆಸ್ಪತ್ರೆಯಲ್ಲಿ ಅವರನ್ನು … Continued