ಸುವೇಂದು ಅಧಿಕಾರಿ ಆಪ್ತ ಕಾರ್ಯದರ್ಶಿ ಹತ್ಯೆ ಪ್ರಕರಣ: ಯುಪಿಐ ಹಣ ಪಾವತಿಯಿಂದ ಸಿಕ್ಕಿಬಿದ್ದ ಮೂವರು ಆರೋಪಿಗಳು…!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ ಆಪ್ತ ಸಹಾಯಕ (PA) ಚಂದ್ರನಾಥ ರಥ್ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಹಂತಕರು ಟೋಲ್ ಗೇಟ್‌ನಲ್ಲಿ ಮಾಡಿದ ಒಂದು ಸಣ್ಣ ಯುಪಿಐ (UPI) ಪಾವತಿಯನ್ನು ಬೆನ್ನತ್ತಿದ ವಿಶೇಷ ತನಿಖಾ ತಂಡ (SIT)ವು, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕಾರ್ಯಾಚರಣೆ ನಡೆಸಿ ಮೂವರು … Continued

ಟಿಸಿಎಸ್ ಮತಾಂತರ ಪ್ರಕರಣ; ಪ್ರಮುಖ ಆರೋಪಿ ನಿದಾ ಖಾನ್‌ ಬಂಧನ

ಮುಂಬೈ/ನಾಸಿಕ್: ಬಹುರಾಷ್ಟ್ರೀಯ ಐಟಿ ಕಂಪನಿ ಟಿಸಿಎಸ್ (TCS) ನಲ್ಲಿ ನಡೆದಿದೆ ಎನ್ನಲಾದ ‘ಬಲವಂತದ ಮತಾಂತರ’ ಜಾಲಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಉದ್ಯೋಗಿ ನಿದಾ ಖಾನ್ ನನ್ನು ಗುರುವಾರ ರಾತ್ರಿ ಛತ್ರಪತಿ ಸಂಭಾಜಿನಗರದಲ್ಲಿ ಬಂಧಿಸಲಾಗಿದೆ. ಖಾನ್ ಕಳೆದ ನಾಲ್ಕು ದಿನಗಳಿಂದ ನರೇಗಾಂವ್‌ನ ಕೈಸರ್ ಕಾಲೋನಿಯಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದು, ಪೊಲೀಸರು ಫ್ಲಾಟ್ ಮೇಲೆ ನಿಗಾ ಇಟ್ಟಿದ್ದರು. ಪ್ಲಾಟ್‌ನಲ್ಲಿ ನಿದಾ ತನ್ನ … Continued

ಟರ್ಕಿಯಲ್ಲಿ 1.5 ವರ್ಷದಿಂದ ರೂಮಿನಿಂದ ಹೊರಬರದೆ ಅಡಗಿಕೊಂಡಿದ್ದ ದಾವೂದ್ ಆಪ್ತ : ಆದ್ರೆ ಒಂದೇ ಒಂದು ಸಣ್ಣ ತಪ್ಪಿನಿಂದ ಸಿಕ್ಕಿಬಿದ್ದ…!

ನವದೆಹಲಿ: ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಹಾಗೂ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸಾಗಣೆದಾರ ಮೊಹಮ್ಮದ್ ಸಲೀಂ ಡೋಲಾನನ್ನು ಇತ್ತೀಚೆಗೆ ಟರ್ಕಿಯಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಮುಂಬೈನ ಡೋಂಗ್ರಿ ನಿವಾಸಿಯಾದ 59 ವರ್ಷದ ಸಲೀಂ ಡೋಲಾ, ಭಾರತದಲ್ಲಿ ದಾಖಲಾಗಿರುವ ಹಲವಾರು ಮಾದಕ ದ್ರವ್ಯ ಸಾಗಣೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಭಾರತದ ಮನವಿಯ ಮೇರೆಗೆ 2024ರಲ್ಲಿ ಇಂಟರ್‌ಪೋಲ್ … Continued

ಹೋಟೆಲ್‌ ರೂಂನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳಾ ವೈದ್ಯರ ವಿಡಿಯೋ ಚಿತ್ರೀಕರಿಸಿದ ಶ್ರೀಲಂಕಾದ ಇಬ್ಬರು ಕ್ರಿಕೆಟಿಗರು ಬಂಧನ

ಕೊಲೊಂಬೊ: ಶ್ರೀಲಂಕಾ ಕ್ರಿಕೆಟಿಗರು ಮೈದಾನದ ಹೊರಗಿನ ಅಶಿಸ್ತಿನ ಕಾರಣಗಳಿಗಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ದೇಶದ ಇಬ್ಬರು 19 ವರ್ಷದೊಳಗಿನ (U-19) ಕ್ರಿಕೆಟಿಗರು ಖಾಸಗಿ ಹೋಟೆಲ್‌ನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳಾ ವೈದ್ಯರ ವಿಡಿಯೋವನ್ನು ಗುಟ್ಟಾಗಿ ಚಿತ್ರೀಕರಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ವೃತ್ತಿಪರ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಮಹಿಳಾ ವೈದ್ಯರು ಆ ಹೋಟೆಲ್‌ನಲ್ಲಿ ತಂಗಿದ್ದರು ಎನ್ನಲಾಗಿದೆ. ಪೊಲೀಸರ ಮಾಹಿತಿ … Continued

ಶಿರಸಿ : ಆಯುರ್ವೇದ ವೈದ್ಯನ ಕೊಲೆ ಆರೋಪಿಯನ್ನು ಬಂಧಿಸಿದ ಪೊಲೀಸರು ; ಚಿನ್ನದ ಆಸೆಗೆ ಪರಿಚಯಸ್ಥನಿಂದಲೇ ಕೊಲೆ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯ(sirsi) ಕೆ.ಹೆಚ್.ಬಿ ಕಾಲೋನಿಯಲ್ಲಿ ಮದುವೆ ಸಿದ್ಧತೆಯಲ್ಲಿದ್ದ ವೈದ್ಯರನ್ನು ಹತ್ಯೆ ಮಾಡಿದ ಆರೋಪಿಯನ್ನು ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಬಂಗಾರದ ಸಮೇತ ಬಂಧಿಸಿದ್ದಾರೆ. ಡಾ. ರಮೇಶ್ ಕಲಗುಟಕರ (51) ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಮಂಜುನಾಥ ಪಿ.ಎಲ್‌. (70) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. … Continued

ಯಲ್ಲಾಪುರ : ಅರೆಬೈಲ್ ಘಟ್ಟದಲ್ಲಿ ಚಾಲಕನ ಸಮೇತ ಕಾರು ಸುಟ್ಟುಹೋದ ಪ್ರಕರಣ ; ಮೂವರ ಬಂಧನ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಕಾರಿನ ಸಮೇತ ಚಾಲಕ ಸುಟ್ಟುಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ವ್ಯಕ್ತಿಯನ್ನು ಕೊಲೆ ಮಾಡಿ, ನಂತರ ಕೃತ್ಯವನ್ನು ಮುಚ್ಚಿಹಾಕಲು ಅರೆಬೈಲ್‌ ಘಟ್ಟದಲ್ಲಿ ಕಾರು ಸಮೇತ ವ್ಯಕ್ತಿಯನ್ನು ಸುಟ್ಟು ಹಾಕಿ ಇದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು … Continued

ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸರು

ನವದೆಹಲಿ: ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಚು ರೂಪಿಸಿದ್ದ ನಾಲ್ವರು “ಕಟ್ಟರ್ ಪಂಥೀಯ” ವ್ಯಕ್ತಿಗಳನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತರು ಮಹಾರಾಷ್ಟ್ರ, ಒಡಿಶಾ ಮತ್ತು ಬಿಹಾರ ರಾಜ್ಯಗಳಿಗೆ ಸೇರಿದವರಾಗಿದ್ದು, ಜನನಿಬಿಡ ಪ್ರದೇಶಗಳಲ್ಲಿ ದಾಳಿ ನಡೆಸಲು ಸ್ಕೆಚ್ ಹಾಕಿದ್ದರು ಎಂದು ತಿಳಿದುಬಂದಿದೆ. ದೆಹಲಿ ಪೊಲೀಸ್‌ನ ವಿಶೇಷ ದಳ (Special Cell) ಈ ಕಾರ್ಯಾಚರಣೆಯನ್ನು ನಡೆಸಿದ್ದು, ಬಂಧಿತರನ್ನು ಮೊಸೈಬ್ ಅಹ್ಮದ್, … Continued

ಚಿಕನ್ ಖಾದ್ಯದ ಜೊತೆ ಶ್ರೀಕೃಷ್ಣನ ಚಿತ್ರವಿರುವ ಕಾರ್ಡ್ ಪ್ರಕಟಣೆ : ರೆಸ್ಟೋರೆಂಟ್ ಮಾಲೀಕನ ಬಂಧನ

ಆಲಪ್ಪುಳ: ವಿಷು ಹಬ್ಬದ ಶುಭಾಶಯ ಕೋರುವ ಕಾರ್ಡ್‌ನಲ್ಲಿ ಭಗವಾನ್ ಶ್ರೀಕೃಷ್ಣನ ಚಿತ್ರದ ಪಕ್ಕದಲ್ಲಿ ‘ಚಿಕನ್ ಮಂಡಿ’ (ಗ್ರಿಲ್ಡ್ ಚಿಕನ್ ಮತ್ತು ಅನ್ನದ ಖಾದ್ಯ) ಇರುವ ಫೋಟೋವನ್ನು ಬಳಸಿ ವಿವಾದ ಸೃಷ್ಟಿಸಿದ್ದ ಕೇರಳದ ರೆಸ್ಟೋರೆಂಟ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಚೇರ್ತಲಾದ ಮನೋರಮಾ ಜಂಕ್ಷನ್ ಬಳಿ ಇರುವ ‘ಮೆಹರ್ ಮಂದಿ ಅಂಡ್ ಗ್ರಿಲ್ಸ್’ ಹೋಟೆಲ್‌ನ ಮಾಲೀಕ ಅರ್ಷದ್ ಬಂಧಿತ … Continued

ವಿಡಿಯೋ | ದಂಡದಿಂದ ಪಾರಾಗಲು ಜೇಮ್ಸ್ ಬಾಂಡ್ ಶೈಲಿಯಲ್ಲಿ ಬಟನ್‌ ಒತ್ತಿ ಕಾರಿನ ನಂಬರ್‌ ಬದಲಿಸುತ್ತಿದ್ದ ವೈದ್ಯ ; ಪೊಲೀಸರೇ ಶಾಕ್ !

ಹೈದರಾಬಾದ್: ಸಿನೆಮಾದಲ್ಲಿ ಜೇಮ್ಸ್ ಬಾಂಡ್ ತನ್ನ ಕಾರಿನ ನಂಬರ್ ಪ್ಲೇಟ್ ಅನ್ನು ಕ್ಷಣಾರ್ಧದಲ್ಲಿ ಬದಲಿಸುವುದನ್ನು ನೋಡಿರಬಹುದು. ಅದೇ ಮಾದರಿಯ ಘಟನೆಯೊಂದು ಹೈದರಾಬಾದ್‌ನಲ್ಲಿ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ವೈದ್ಯನೊಬ್ಬ ತನ್ನ ಐಷಾರಾಮಿ ಬಿಎಂಡಬ್ಲ್ಯು (BMW) ಕಾರಿನ ನಂಬರ್ ಪ್ಲೇಟ್ ಅನ್ನು ಪೊಲೀಸರ ಮುಂದೆಯೇ ಬದಲಿಸಿ ಎಲ್ಲರನ್ನೂ ದಂಗಾಗಿಸಿದ್ದಾನೆ. ಶನಿವಾರ ರಾತ್ರಿ ಹೈದರಾಬಾದ್‌ನ ಶ್ರೀಮಂತ ಪ್ರದೇಶವಾದ ಜುಬಿಲಿ ಹಿಲ್ಸ್‌ನಲ್ಲಿ … Continued

180 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; 350 ವೀಡಿಯೊ ಚಿತ್ರೀಕರಿಸಿ ವೈರಲ್‌ ; ಆರೋಪಿಯ ಬಂಧನ

ಮುಂಬೈ: ಕನಿಷ್ಠ 180 ಅಪ್ರಾಪ್ತ ಬಾಲಕಿಯರನ್ನು ಲೈಂಗಿಕವಾಗಿ ಶೋಷಿಸಿ, ಅವರ 350ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಿದ್ದ ಆರೋಪಿಯನ್ನು ಮಹಾರಾಷ್ಟ್ರದ ಅಮರಾವತಿಯಲ್ಲಿ ಬಂಧಿಸಲಾಗಿದೆ. ಬಿಜೆಪಿ ಸಂಸದರೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಪರತವಾಡ ನಗರದ ನಿವಾಸಿ ಮೊಹಮ್ಮದ್ ಅಯಾಜ್ (ಅಲಿಯಾಸ್ ತನ್ವೀರ್) ಎಂಬಾತ ಬಾಲಕಿಯರನ್ನು “ಪ್ರೀತಿಯ ಜಾಲ”ಕ್ಕೆ (ಲವ್ ಟ್ರ್ಯಾಪ್) ಬೀಳಿಸುತ್ತಿದ್ದ … Continued