“ಅಸಿಮ್ ಮುನೀರ್ ಸೂಟಿನಲ್ಲಿರುವ ಒಸಾಮಾ ಬಿನ್ ಲಾಡೆನ್ “: ಪಾಕ್‌ ಸೇನಾ ಮುಖ್ಯಸ್ಥನನ್ನು ಉಗ್ರನಿಗೆ ಹೋಲಿಸಿದ ಪೆಂಟಗನ್‌ ಮಾಜಿ ಅಧಿಕಾರಿ…!

ವಾಷಿಂಗ್ಟನ್: ಇತ್ತೀಚಿನ ಪರಮಾಣು ಅಸ್ತ್ರದ ಬಳಕೆ ಹೇಳಿಕೆ ಬಗ್ಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಪೆಂಟಗನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ಟೀಕಿಸಿದ್ದಾರೆ. ಪಾಕಿಸ್ತಾನವು ಯುದ್ಧಪ್ರೇಮಿ ಸೇನಾ ಮುಖ್ಯಸ್ಥನ ಜೊತೆ “ಒಂದು ರಾಕ್ಷಸ ರಾಷ್ಟ್ರ” ದಂತೆ ವರ್ತಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಮುನೀರ್‌ ನನ್ನು 9/11 ದಾಳಿಯ ಹಿಂದಿನ … Continued

ಭಾರತದ ಮೇಲೆ ಅಮೆರಿಕ ಭಾರಿ ಸುಂಕ ವಿಧಿಸಿದ್ದರ ಬಗ್ಗೆ ಡೆಮಾಕ್ರಸಿ ಇನ್ಸ್ಟಿಟ್ಯೂಟ್ ಸಮೀಕ್ಷೆ ; ಅದರಲ್ಲಿ ಟ್ರಂಪಗೆ ಮಂಗಳಾರತಿ…!

ನವದೆಹಲಿ : ರಷ್ಯಾದಿಂದ ತೈಲ ಖರೀದಿಗೆ ಸಂಬಂಧಿಸಿದಂತೆ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಸುಂಕ ವಿಧಿಸಿದ್ದಕ್ಕೆ ಸಂಬಂಧಿಸಿದಂತೆ ಅಮೆರಿಕದ ಚಿಂತಕರ ಚಾವಡಿ (think tank) ಡೆಮಾಕ್ರಸಿ ಇನ್ಸ್ಟಿಟ್ಯೂಟ್ ಸಮೀಕ್ಷೆ ನಡೆಸಿದ್ದು ಅದರಲ್ಲಿ ಕಂಡುಬಂದ ಅಂಶಗಳನ್ನು ಬಿಡುಗಡೆ ಮಾಡಿದೆ. ಭಾರತವು ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ಅಮೆರಿಕವು ಭಾರತದ ಮೇಲೆ ಸುಂಕ ವಿಧಿಸಬಾರದಿತ್ತು ಎಂದು ಅರ್ಧಕ್ಕಿಂತ … Continued

ಅಮೆರಿಕದ ಡಬಲ್ ಸ್ಟ್ಯಾಂಡರ್ಡ್‌ ಬಹಿರಂಗ ; ಮಿತ್ರರಾಷ್ಟ್ರ ಉಕ್ರೇನಿಗಿಂತ ಬದ್ಧವೈರಿ ರಷ್ಯಾದ ಜೊತೆ ಹೆಚ್ಚು ವ್ಯಾಪಾರ ಮಾಡಿದ ಅಮೆರಿಕ…!

ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ದಂಡನಾತ್ಮಕ ಕ್ರಮವಾಗಿ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅತ್ಯಧಿಕ 50%ರಷ್ಟು ಸುಂಕ ವಿಧಿಸುವ ಘೋಷಣೆ ಮಾಡಿದೆ. ಆದರೆ ಅಮೆರಿಕ ಸರ್ಕಾರದ ದತ್ತಾಂಶದ ಆಳವಾದ ತನಿಖೆಯೇ ಅಮೆರಿಕದ ಬೂಟಾಟಿಕೆಯನ್ನು ಬಹಿರಂಗಪಡಿಸಿದೆ…! ರಷ್ಯಾವು ಉಕ್ರೇನ್ ಮೇಲೆ ಆಕ್ರಮಣ ಪ್ರಾರಂಭಿಸಿದ ಸುಮಾರು ನಾಲ್ಕು ವರ್ಷಗಳಲ್ಲಿ ಅಮೆರಿಕವು ತನ್ನ ಮಿತ್ರ ರಾಷ್ಟ್ರವಾದ ಉಕ್ರೇನ್‌ಗಿಂತ … Continued

ಭಾರತದ ಮೇಲೆ ಟ್ರಂಪ್ ಸುಂಕ ಹೇರಿಕೆಯ ನಡುವೆಯೇ ಪ್ರಧಾನಿ ಮೋದಿ-ರಷ್ಯಾ ಅಧ್ಯಕ್ಷ ಪುತಿನ್ ದೂರವಾಣಿಯಲ್ಲಿ ಮಾತುಕತೆ

ನವದೆಹಲಿ: ಉಕ್ರೇನ್‌ನಲ್ಲಿನ ಇತ್ತೀಚಿನ ಬೆಳವಣಿಗೆ ಮತ್ತು ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿನ ಪ್ರಗತಿ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಶುಕ್ರವಾರ ವಿವರವಾಗಿ ಮಾತುಕತೆ ನಡೆಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಘೋಷಣೆಗಳಿಂದ ಉಂಟಾದ ಜಾಗತಿಕ ವ್ಯಾಪಾರ ಅನಿಶ್ಚಿತತೆಯ ನಡುವೆಯೇ ಇಬ್ಬರೂ ನಾಯಕರ ಮಾತುಕತೆ … Continued

ಸುಂಕ ವಿವಾದದ ನಡುವೆ ಭಾರತದ ಜೊತೆ ʼವ್ಯಾಪಾರʼ ಮಾತುಕತೆ ನಿಲ್ಲಿಸಿದ ಟ್ರಂಪ್‌

ನವದೆಹಲಿ: ಭಾರತದ ಆಮದುಗಳ ಮೇಲೆ ಶೇ. 50 ರಷ್ಟು ಸುಂಕ ವಿಧಿಸಿದ ನಂತರ, ಭಾರತದೊಂದಿಗೆ ವ್ಯಾಪಾರ ಮಾತುಕತೆಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ್ದಾರೆ, ಇದು ಎರಡು ದಶಕಗಳಲ್ಲಿ ಅಮೆರಿಕ-ಭಾರತ ವ್ಯಾಪಾರ ಉದ್ವಿಗ್ನತೆಯನ್ನು ಕನಿಷ್ಠ ಮಟ್ಟಕ್ಕೆ ತಳ್ಳಿದೆ. “ನಾವು ಸುಂಕದ ಸಮಸ್ಯೆಯನ್ನು ಪರಿಹರಿಸುವ ವರೆಗೆ ಮಾತುಕತೆ ಇಲ್ಲ” ಎಂದು ಟ್ರಂಪ್ ಓವಲ್ ಕಚೇರಿಯಲ್ಲಿ ವರದಿಗಾರರಿಗೆ ತಿಳಿಸಿದರು. … Continued

ಭಾರತದ ಸರಕುಗಳ ಮೇಲೆ ಟ್ರಂಪ್ ಸುಂಕ ಹೆಚ್ಚಳ ಮಾಡಿದ ಬೆನ್ನಲ್ಲೇ ಪ್ರಧಾನಿ ಮೋದಿಗೆ ಕರೆ ಮಾಡಿದ ಬ್ರೆಜಿಲ್ ಅಧ್ಯಕ್ಷ

ನವದೆಹಲಿ: ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಿ ಸಿಲ್ವಾ ಗುರುವಾರ ಪ್ರಧಾನಿ ನರೇಂದ್ರ ಮೋದಿ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಮಾತುಕತೆ ಸಮಯದಲ್ಲಿ ಅಮೆರಿಕದ “ಏಕಪಕ್ಷೀಯ ಸುಂಕಗಳ ಹೇರಿಕೆ”ಯ ಬಗ್ಗೆ ಚರ್ಚಿಸಿದ ಇಬ್ಬರು ನಾಯಕರು ಜಾಗತಿಕ ಆರ್ಥಿಕತೆಯನ್ನು ಅಲುಗಾಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಪರೀತ ಸುಂಕದ ಕ್ರಮದ ವಿರುದ್ಧ ಸಂಘಟಿತ ಪ್ರಯತ್ನಗಳ ಬಗ್ಗೆ … Continued

ಭಾರತದ ಮೇಲೆ ಟ್ರಂಪ್‌ ಸುಂಕ ಹೆಚ್ಚಳದ ಘೋಷಣೆ ; ಚೀನಾ ತೀವ್ರ ವಿರೋಧ

ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದ ಮೇಲೆ ಭಾರೀ ಸುಂಕಗಳನ್ನು ವಿಧಿಸಿದ್ದನ್ನು ಚೀನಾ ಗುರುವಾರ ವಿರೋಧಿಸಿದೆ. ಇದು “ಸುಂಕ ದುರುಪಯೋಗ”ದ ಸ್ಪಷ್ಟ ಪ್ರಕರಣವಾಗಿದೆ ಎಂದು ಹೇಳಿದೆ. ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇಕಡಾ 25 ರಷ್ಟು ಸುಂಕವನ್ನು ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ ನಂತರ ಚೀನಾದಿಂದ … Continued

ರಷ್ಯಾದ ತೈಲ ಖರೀದಿಗೆ ಭಾರತದ ಮೇಲೆ ಟ್ರಂಪ್‌ ಸುಂಕದ ಟಾರ್ಗೆಟ್‌ ಮಧ್ಯೆ ಪುತಿನ್ ಶೀಘ್ರವೇ ಭಾರತಕ್ಕೆ ಭೇಟಿ

ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಮಾಸ್ಕೋ ಭೇಟಿಯ ಸಂದರ್ಭದಲ್ಲಿ ತಿಳಿಸಿದ್ದಾರೆ. ದಿನಾಂಕಗಳು ಇನ್ನೂ ಅಂತಿಮಗೊಳ್ಳದಿದ್ದರೂ, ಈ ವರ್ಷ ಭೇಟಿ ನಡೆಯುವ ಸಾಧ್ಯತೆಯಿದೆ ಎಂದು ರಷ್ಯಾದ ರಾಜ್ಯ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ. “ನಮ್ಮಲ್ಲಿ ವಿಶೇಷ ಹಾಗೂ ಸುದೀರ್ಘ ಸಂಬಂಧವಿದೆ … Continued

ಯಾವುದೇ ಬೆಲೆ ತೆತ್ತಾದ್ರೂ ನಾವು ನಮ್ಮ ರೈತರನ್ನು ರಕ್ಷಿಸ್ತೇವೆ ; ಟ್ರಂಪ್‌ಗೆ ಪ್ರಧಾನಿ ಮೋದಿಯಿಂದ ಕಠಿಣ ಸಂದೇಶ

ನವದೆಹಲಿ : ಏನೇ ಬೆಲೆ ತೆರಬೇಕಾದರೂ ಸಹ, ಭಾರತ ತನ್ನ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ರಷ್ಯಾದ ತೈಲ ಖರೀದಿಯನ್ನು ಮುಂದುವರೆಸಿದ್ದಕ್ಕಾಗಿ ಭಾರತದ ಮೇಲೆ ಶೇ. 50 ರಷ್ಟು ಸುಂಕ ವಿಧಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೇರ ಉತ್ತರ ಎಂದು ನೋಡಲಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ … Continued

“ಅನ್ಯಾಯ, ನ್ಯಾಯಸಮ್ಮತವಲ್ಲದ್ದು ಮತ್ತು ಅಸಮಂಜಸ…” : ಟ್ರಂಪ್ ಭಾರತದ ಮೇಲೆ 50% ಸುಂಕದ ಘೋಷಿಸಿದ ನಂತರ ಭಾರತದ ಪ್ರತಿಕ್ರಿಯೆ…

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದ ತೈಲ ಆಮದಿನ ಮೇಲೆ ಮತ್ತೆ ಶೇ. 25 ರಷ್ಟು ಸುಂಕ ವಿಧಿಸಲು ನಿರ್ಧರಿಸಿದ ನಂತರ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಬದ್ಧವಾಗಿರುವುದಾಗಿ ಸ್ಪಷ್ಟಪಡಿಸಿದೆ. ಅಲ್ಲದೆ, ಹೆಚ್ಚುವರಿ ಸುಂಕವು “ಅನ್ಯಾಯ, ನ್ಯಾಯಸಮ್ಮತವಲ್ಲ ಮತ್ತು ಅಸಮಂಜಸ” ಎಂದು ಹೇಳಿದೆ ಮತ್ತು “ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ” … Continued