ನಾಯಕತ್ವದ ಬದಲಾವಣೆ ತಿಕ್ಕಾಟದ ಮಧ್ಯೆ ನಡೆದ ಸಿದ್ದರಾಮಯ್ಯ-ಶಿವಕುಮಾರ ʼಬ್ರೇಕ್‌ ಫಾಸ್ಟ್‌ʼ ಸಭೆ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಬಣದ ನಡುವೆ ತಿಕ್ಕಾಟ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಶನಿವಾರ ಬೆಳಿಗ್ಗೆ ಉಪಾಹಾರ ಸಭೆ ಸೇರಿರುವ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ ಅವರು ಈ ಕುರಿತ ಫೋಟೋ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ … Continued

ಹೈಕಮಾಂಡ್ ಸೂಚನೆ ಮೇರೆಗೆ ನಾಳೆ (ನ.29) ಬೆಳಿಗ್ಗೆ ಸಿದ್ದರಾಮಯ್ಯ ನಿವಾಸಕ್ಕೆ ಡಿಕೆಶಿ ಭೇಟಿ..?

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ಆಂತರಿಕ ಕಲಹವನ್ನು ಕೊನೆಗೊಳಿಸಲು ಪಕ್ಷದ ಹೈಕಮಾಂಡ್ ಶುಕ್ರವಾರ ಮಧ್ಯಪ್ರವೇಶಿಸಿದ್ದು, ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಸೂಚಿಸಿದೆ ಎಂದು ಸುದ್ದಿ ಹೊರಬಿದ್ದಿದೆ. ಹೈಕಮಾಂಡ್‌ನ ಸೂಚನೆಯ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ (ನವೆಂಬರ್‌ 29) ಉಪಾಹಾರಕ್ಕಾಗಿ … Continued

ವೀಡಿಯೊಗಳು..| ಪರ್ತಗಾಳಿ ಮಠದಲ್ಲಿ 77 ಅಡಿ ಎತ್ತರದ ಭಗವಾನ್‌ ಶ್ರೀರಾಮನ ಕಂಚಿನ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ಮೋದಿ

ಪರ್ತಗಾಳಿ (ಗೋವಾ) : ಪರ್ತಗಾಳಿ ಮಠವು ಪರಂಪರೆ ಹಾಗೂ ಆಧುನಿಕತೆಯ ಜೊತೆ ಸೇತುವೆಯಾಗುವ ಪ್ರಮುಖ ಭೂಮಿಯಕೆಯಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಆಶಿಸಿದರು. ಪರ್ತಗಾಳಿ ಜೋವೋತ್ತಮ ಮಠದಲ್ಲಿ ಶುಕ್ರವಾರ 77 ಅಡಿ ಎತ್ತರದ ರಾಮನ ಕಂಚಿನ ಮೂರ್ತಿಯನ್ನು ಅನಾವರಣ ಮಾಡಿ, ರಾಮಾಯಣ ಥೀಮ್‌ ಪಾರ್ಕ್‌ ಉದ್ಘಾಟಿಸಿ, ಮಠದ 550 ನೇ ವರ್ಷದ ಅಂಗವಾಗಿ ಕೇಂದ್ರ ಸರ್ಕಾರ … Continued

ಬಹುಪತ್ನಿತ್ವ ನಿಷೇಧ ಮಸೂದೆ ಅಸ್ಸಾಂ ವಿಧಾನಸಭೆಯಲ್ಲಿ ಅಂಗೀಕಾರ

ಗುವಾಹತಿ: ಅಸ್ಸಾಂ ವಿಧಾನಸಭೆಯಲ್ಲಿ ಗುರುವಾರ ಬಹುಪತ್ನಿತ್ವವನ್ನು ನಿಷೇಧಿಸುವ ಮಸೂದೆಗೆ ಅಂಗೀಕಾರ ನೀಡಲಾಗಿದೆ. ಈ ಕಾಯಿದೆಯು ಬಹುಪತ್ನಿತ್ವವನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಿದ್ದು, ಈ ಕೃತ್ಯಕ್ಕೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಸಂತ್ರಸ್ತ ಮಹಿಳೆಗೆ ಪರಿಹಾರ ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ‘ಅಸ್ಸಾಂ ಬಹುಪತ್ನಿತ್ವ ನಿಷೇಧ ಮಸೂದೆ, 2025’ … Continued

2014 ರಲ್ಲಿ ಕಾಂಗ್ರೆಸ್ ಸೋಲಿಗೆ ಸಿಐಎ, ಮೊಸಾದ್ ಸಂಚು ರೂಪಿಸಿದ್ದವು: ಕಾಂಗ್ರೆಸ್‌ ಮಾಜಿ ಸಂಸದರ ಹೇಳಿಕೆ

ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಅಮೆರಿಕಾದ ಗುಪ್ತಚರ ಸಂಸ್ಥೆ ಸಿಐಎ (CIA) ಮತ್ತು ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸ್ಸಾದ್ (Mossad) ಸಂಚು ರೂಪಿಸಿದ್ದವು ಎಂದು ಕಾಂಗ್ರೆಸ್‌ನ ಮಾಜಿ ಸಂಸದರಾದ ಕುಮಾರ ಕೇತ್ಕರ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಸಂವಿಧಾನ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇತ್ಕರ್, ಈ ಹೇಳಿಕೆ … Continued

ವೀಡಿಯೊ | ಯೂಟ್ಯೂಬ್‌ ನಲ್ಲಿ 500 ಕೋಟಿ ವೀಕ್ಷಣೆ ಕಂಡ ‘ಶ್ರೀ ಹನುಮಾನ್ ಚಾಲೀಸಾ’ ; ಡಿಜಿಟಲ್ ಲೋಕದಲ್ಲಿ ಇತಿಹಾಸ ಸೃಷ್ಟಿ

ನವದೆಹಲಿ: ಟಿ-ಸೀರೀಸ್ (T-series) ನ ಭಕ್ತಿಗೀತೆ, ‘ಶ್ರೀ ಹನುಮಾನ್ ಚಾಲೀಸಾ’ (Shree Hanuman Chalisa) ಇತಿಹಾಸ ನಿರ್ಮಿಸಿದೆ. ‘ಶ್ರೀ ಹನುಮಾನ್ ಚಾಲೀಸಾ’ವು ಯೂಟ್ಯೂಬ್‌ನಲ್ಲಿ 5 ಬಿಲಿಯನ್ (500 ಕೋಟಿ) ವೀಕ್ಷಣೆಗಳನ್ನು ಗಳಿಸಿದ ಭಾರತದ ಮೊದಲ ವೀಡಿಯೊಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುಲ್ಶನ್ ಕುಮಾರ ಅವರ ಈ ಹನುಮಾನ್ ಚಾಲೀಸಾವು ಸಾರ್ವಕಾಲಿಕವಾಗಿ ಹೆಚ್ಚು ವೀಕ್ಷಿಸಲ್ಪಟ್ಟ ವೀಡಿಯೊಗಳ ಸಾಲಿನಲ್ಲಿ ಸ್ಥಾನ … Continued

ಇಂದಿನಿಂದ ಗೋಕರ್ಣ ಪರ್ತಗಾಳಿ ಮಠದಲ್ಲಿ ಸಾರ್ಧ ಪಂಚಶತಮಾನೋತ್ಸವ ಕಾರ್ಯಕ್ರಮ ; ನ.28ರಂದು ಪ್ರಧಾನಿಯಿಂದ 77 ಅಡಿ ಎತ್ತರದ ಭಗವಾನ್‌ ಶ್ರೀರಾಮನ ಪ್ರತಿಮೆ ಅನಾವರಣ

ಕಾರವಾರ: ಗೋವಾದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷಾಚರಣೆ ಅಂಗವಾಗಿ ಶ್ರೀಮಠದಲ್ಲಿ ನವೆಂಬರ್ 27ರಿಂದ ಡಿಸೆಂಬರ್ 7ರವರೆಗೆ ನಡೆಯಲಿರುವ 11 ದಿನಗಳ ಸಾರ್ಧ ಪಂಚಶತಮಾನೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿ ನೇತೃತ್ವದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. 11 ದಿನಗಳ … Continued

ಪೋಕ್ಸೊ ಪ್ರಕರಣ : ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಖುಲಾಸೆಗೊಳಿಸಿದ ಕೋರ್ಟ್‌

ಚಿತ್ರದುರ್ಗ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ (POCSO case) ಸಂಬಂಧಿಸಿ ದಾಖಲಾಗಿದ್ದ ಮೊದಲ ಪೋಕ್ಸೊ ಕೇಸ್‌ನಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಗೆ ಬುಧವಾರ ಬಿಗ್‌ ರಿಲೀಫ್‌ ಸಿಕ್ಕಿದೆ.  ಪೋಕ್ಸೊ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸೇರಿ ಮೂವರನ್ನು ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯವು ನಿರ್ದೋಷಿಗಳು ಎಂದು  … Continued

ಕಾರು ಅಪಘಾತ: ಐಎಎಸ್‌ ಅಧಿಕಾರಿ ಸೇರಿ ಮೂವರು ಸಾವು

ಕಲಬುರಗಿ: ಇನ್ನೋವಾ ಕಾರು ಅಪಘಾತದಲ್ಲಿ ಐಎಎಸ್‌ ಅಧಿಕಾರಿ ಸೇರಿ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ಜೇವರ್ಗಿಯ ಗೌನಳ್ಳಿ ಕ್ರಾಸ್ ಬಳಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಬೀಳಗಿ (51) ಹಾಗೂ ಇವರ ಸಹೋದರ ಸಂಬಂಧಿಗಳಾದ ಶಂಕರ ಬೀಳಗಿ (55) ಹಾಗೂ ಈರಣ್ಣ (53) … Continued

ವೀಡಿಯೊಗಳು…| ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ ; ರಾಮ ಮಂದಿರ ಶಿಖರದ ಮೇಲೆ ಕೇಸರಿ ಧ್ವಜ ಹಾರಿಸಿದ ಪ್ರಧಾನಿ ಮೋದಿ

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ಶ್ರೀರಾಮ ಮಂದಿರದ ಗೋಪುರದ (ಶಿಖರ) ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಕೇಸರಿ ಧ್ವಜವನ್ನು ಹಾರಿಸುವ ಮೂಲಕ ದೇವಾಲಯದ ನಿರ್ಮಾಣ ಕಾರ್ಯದ ಪೂರ್ಣಗೊಳಿಸುವಿಕೆಯನ್ನು ಘೋಷಿಸಿದ್ದಾರೆ. ಪ್ರಧಾನಮಂತ್ರಿಗಳ ಕಚೇರಿ (PMO) ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, 10 ಅಡಿ ಎತ್ತರ ಮತ್ತು 20 ಅಡಿ ಉದ್ದವಿರುವ ಈ … Continued