ಬಾಲಿವುಡ್ ‘ಹೀ-ಮ್ಯಾನ್’, ಹಿರಿಯ ನಟ ಧರ್ಮೇಂದ್ರ ಇನ್ನಿಲ್ಲ

ಮುಂಬೈ : ಬಾಲಿವುಡ್‌ ಹೀ ಮ್ಯಾನ್‌ ಎಂದೇ ಖ್ಯಾತಿ ಪಡೆದ, ಹಿರಿಯ ನಟ ಧರ್ಮೇಂದ್ರ (Dharmendra) ಸೋಮವಾರ (ನವೆಂಬರ್‌ 24) ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಧರ್ಮೇಂದ್ರ ಅವರನ್ನು ಕೆಲವು ದಿನಗಳ ಹಿಂದೆ ಮುಂಬೈಯ ಬ್ರೀಜ್‌ ಕ್ಯಾಂಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಸಿಕೊಂಡ ಅವರನ್ನು ಡಿಸ್‌ಚಾರ್ಚ್‌ ಮಾಡಲಾಗಿತ್ತು. ಧರ್ಮೇಂದ್ರ ಅವರು ಇಬ್ಬರು ಪತ್ನಿಯರಾದ ಪ್ರಕಾಶ್ ಕೌರ್ … Continued

ಬಿಹಾರದಲ್ಲಿ ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ (U-238) ಪತ್ತೆ….!

 ನವದೆಹಲಿ: ಬಿಹಾರದ ಹಲವಾರು ಜಿಲ್ಲೆಗಳಲ್ಲಿ ಹಾಲುಣಿಸುವ ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ (U-238) ಅಂಶ ಪತ್ತೆಯಾಗಿದೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ಇದು ಶಿಶುಗಳ ಆರೋಗ್ಯಕ್ಕೆ ಸಂಭಾವ್ಯ ಅಪಾಯದ ಬಗ್ಗೆ ಗಂಭೀರ ಆತಂಕಕ್ಕೆ ಕಾರಣವಾಗಿದೆ. ಎದೆಹಾಲು ಉಣಿಸುವುದರ ಮೂಲಕ ಯುರೇನಿಯಂ ದೇಹವನ್ನು ಪ್ರವೇಶಿಸುವುದರಿಂದ ಚಿಕ್ಕ ಮಕ್ಕಳಲ್ಲಿ ಮಹತ್ವದ ‘ಕಾರ್ಸಿನೋಜೆನಿಕ್-ಅಲ್ಲದ’ (non-carcinogenic) ಆರೋಗ್ಯ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಬಹು … Continued

37 ವರ್ಷಗಳಿಂದ ಕಾಣೆಯಾಗಿದ್ದ ಮಗ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಪವಾಡದ ರೀತಿಯಲ್ಲಿ ಕುಟುಂಬದ ಜೊತೆ ಪುನರ್ಮಿಲನ..!

ಪುರೂಲಿಯಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಾದ್ಯಂತ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯು ಪುರೂಲಿಯಾದ ಪುಟ್ಟ ಗ್ರಾಮವೊಂದರಲ್ಲಿ ಅನಿರೀಕ್ಷಿತ ಸಂತೋಷದಾಯಕ ತಿರುವಿಗೆ ಕಾರಣವಾಗಿದೆ. ಸಾಮಾನ್ಯವಾಗಿ ಕೇವಲ ಕಾಗದಪತ್ರಗಳ ಕೆಲಸ ಎಂದು ಪರಿಗಣಿಸಲಾಗುವ ಈ ಪ್ರಕ್ರಿಯೆಯು, ಈ ಅಪರೂಪದ ನಿದರ್ಶನದಲ್ಲಿ, ಸುಮಾರು ನಾಲ್ಕು … Continued

ಪರಮಾಣು ವಿಸ್ಫೋಟವನ್ನೂ ತಡೆದುಕೊಳ್ಳುವ ಸಾಮರ್ಥ್ಯ ಇರುವ ʼತೇಲುವ ಕೃತಕ ದ್ವೀಪʼ ನಿರ್ಮಿಸುತ್ತಿರುವ ಚೀನಾ..!

ಚೀನಾವು 78,000 ಟನ್ ತೂಕದ, ಪರಮಾಣು ವಿಸ್ಫೋಟಗಳನ್ನೂ ತಡೆದುಕೊಳ್ಳುವ ಸಾಮರ್ಥ್ಯ ಇರುವ ಬೃಹತ್ ಕೃತಕ ದ್ವೀಪವೊಂದನ್ನು ನಿರ್ಮಿಸುತ್ತಿದೆ…! ಇದು ಸಂಚಾರಿ (mobile) ದ್ವೀಪವಾಗಿದ್ದು, ಇದು ನೀರಿನಲ್ಲಿ ಅರ್ಧ ಮುಳುಗುವ ಹಾಗೂ ಎರಡು ಹಲ್‌ಗಳನ್ನು (twin-hull) ಹೊಂದಿರುವ ಪ್ಲಾಟ್‌ಫಾರ್ಮ್ ಆಗಿದೆ. ಈ ದ್ವೀಪವು ಹೊಸ ಸರಬರಾಜುಗಳ ಅಗತ್ಯವಿಲ್ಲದೆ ನಾಲ್ಕು ತಿಂಗಳವರೆಗೆ 238 ಜನರಿಗೆ ಆಶ್ರಯ ನೀಡಬಲ್ಲದು. ಇದು … Continued

ಅಪಘಾತದಿಂದಾಗಿ ನೆನಪು ಕಳೆದುಕೊಂಡು ಮನೆಯಿಂದ ದೂರಾಗಿ 45 ವರ್ಷಗಳ ನಂತ್ರ ಮತ್ತೊಂದು ಅಪಘಾತ…ಮರುಕಳಿಸಿದ ನೆನಪು..ಮನೆಗೆ ಬಂದ ವ್ಯಕ್ತಿ..!

ನವದೆಹಲಿ: ಒಂದು ವಿಚಿತ್ರ, ಆದರೆ ಹೃದಯಸ್ಪರ್ಶಿ ಘಟನೆಯಲ್ಲಿ, ಅಪಘಾತದಿಂದ ನೆನಪಿನ ಶಕ್ತಿಯನ್ನು ಕಳೆದುಕೊಂಡು 45 ವರ್ಷಗಳ ಕಾಲ ಕುಟುಂಬದಿಂದ ಸಂಪರ್ಕವಿಲ್ಲದೆ ಇದ್ದ ಹಿಮಾಚಲ ಪ್ರದೇಶದ ವ್ಯಕ್ತಿಯೊಬ್ಬರು ಇದೀಗ ಮರಳಿ ತಮ್ಮ ಮನೆ ಸೇರಿದ್ದಾರೆ. ಅಚ್ಚರಿಯೆಂದರೆ ಅವರಿಗೆ ಮತ್ತೊಂದು ಅಪಘಾತದಿಂದಾ ಕಳೆದುಹೋದ ನೆನಪು ಮರಳಿ ಬಂದಿದ್ದು, ಇಡೀ ಗ್ರಾಮವೇ ಈ ಪವಾಡವನ್ನು ಸಂಭ್ರಮಿಸುತ್ತಿದೆ. ಹಿಮಾಚಲ ಪ್ರದೇಶದ ಸಿರ್ಮೌರ್ … Continued

ಮದುವೆ ದಿನವೇ ಅಪಘಾತ, ಗಾಯಗೊಂಡ ಮದುಮಗಳಿಗೆ ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ ಮದುಮಗ…

ಕೊಚ್ಚಿ: ಕೇರಳದ ಆಲಪ್ಪುಳದ ಥಂಪೋಲಿಯಲ್ಲಿ ಅಪರೂಪದ ವಿದ್ಯಮಾನವೊಂದರಲ್ಲಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಧುವಿಗೆ ಮದುವೆಯ ದಿನ ವರ ತಾಳಿ ಕಟ್ಟಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮದುವೆಗಾಗಿ ದೇವಸ್ಥಾನಕ್ಕೆ ತೆರಳುವ ಮುನ್ನ ಮೇಕಪ್ ಮಾಡಿಸಿಕೊಳ್ಳಲು ಮದುವೆ ದಿನ ಬೆಳಿಗ್ಗೆ ಮನೆಯಿಂದ ತೆರಳಿದ್ದ ವಧು ಅವನಿ ಅಪಘಾತದಿಂದ ಗಾಯಗೊಂಡರು. ಆರಂಭದಲ್ಲಿ … Continued

‘ಸಿಎಂ ಬದಲಾವಣೆ’ ಚರ್ಚೆ ಮತ್ತೆ ಮುನ್ನೆಲೆಗೆ : ಡಿಕೆ ಶಿವಕುಮಾರ ಬಣದ ಶಾಸಕರು ದಿಢೀರ್ ದೆಹಲಿಗೆ…!

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಬಣಕ್ಕೆ ಸೇರಿದ ಕೆಲವು ಕಾಂಗ್ರೆಸ್ ಶಾಸಕರು ದೆಹಲಿಗೆ ದೌಡಾಯಿಸಿದ್ದಾರೆ ಎಂದು ವರದಿಯಾಗಿದೆ. ಕರ್ನಾಟಕದಲ್ಲಿ ಬಹುಕಾಲದಿಂದ ಕೇಳಿಬರುತ್ತಿರುವ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆ ಸೂತ್ರವನ್ನು ಜಾರಿಗೆ ತರಲು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೆಚ್ಚಿಸಲು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಸರ್ಕಾರವು ಗುರುವಾರ (ನವೆಂಬರ್‌  20)ದಂದು 2.5 ವರ್ಷಗಳನ್ನು … Continued

ಇದು ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಕುಗ್ಗಿಸುವ ಪ್ರಯತ್ನ ; ರಾಹುಲ್ ವಿರುದ್ಧ 272 ಮಾಜಿ ನ್ಯಾಯಾಧೀಶರು, ಅಧಿಕಾರಿಗಳ ಗುಂಪಿನಿಂದ ಪತ್ರ

ನವದೆಹಲಿ: ಸುಮಾರು 300 ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳು, ಮಾಜಿ ಸೇನಾ ಅಧಿಕಾರಿಗಳು ಮತ್ತು ರಾಜತಾಂತ್ರಿಕರ ಗುಂಪು ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ‘ವೋಟ್ ಚೋರಿ’ ಅಭಿಯಾನದ ಅಡಿಯಲ್ಲಿ ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಕಳಂಕಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದೆ. ಪತ್ರಕ್ಕೆ ಸಹಿ ಮಾಡಿದ 272 ಜನರಲ್ಲಿ 16 ನಿವೃತ್ತ ನ್ಯಾಯಾಧೀಶರು, … Continued

ವೀಡಿಯೊ | ಕೆಂಪುಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೂ ಭಾರತದ ಮೇಲೆ ದಾಳಿ ಮಾಡಿದ್ದೇವೆ ; ಭಯೋತ್ಪಾದನೆ ಬೆಂಬಲಿಸಿ ಪಾಕ್‌ ನಾಯಕನ ಹೇಳಿಕೆ

ನವದೆಹಲಿ : ದೆಹಲಿಯ ಕೆಂಪುಕೋಟೆ ಬಳಿ ನಡೆದ ಮಾರಣಾಂತಿಕ ದಾಳಿಯ ಒಂದು ವಾರದ ನಂತರ, ಪಾಕಿಸ್ತಾನದ ರಾಜಕಾರಣಿ ಚೌಧರಿ ಅನ್ವರುಲ್ ಹಕ್ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ಒಪ್ಪಿಕೊಂಡಿರುವ ಹೇಳಿಕೆ ನೀಡಿದ್ದಾರೆ. “ಕೆಂಪುಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೆ ನಾವು ಭಾರತವನ್ನು ಹೊಡೆದಿದ್ದೇವೆ” ಎಂದು ಆತ ಹೇಳಿದ್ದಾರೆ. ಹಕ್ ಹೇಳಿಕೆಗಳು ನವೆಂಬರ್ 10 ರಂದು ಕೆಂಪು ಕೋಟೆ ಮೆಟ್ರೋ … Continued

ದೆಹಲಿ ಸ್ಫೋಟಕ್ಕೂ ಮುನ್ನ ಡ್ರೋನ್‌ಗಳನ್ನು ಬಳಸಿ ಹಮಾಸ್ ಮಾದರಿ ದಾಳಿಗೆ ಯೋಜಿಸಿದ್ದ ಭಯೋತ್ಪಾದಕರು…..

ನವದೆಹಲಿ: ನವದೆಹಲಿ: ದೆಹಲಿ ಆತ್ಮಹತ್ಯಾ ಕಾರ್ ಬಾಂಬ್ ದಾಳಿಯಲ್ಲಿ ಭಾಗಿಯಾಗಿರುವ ವೈಟ್ ಕಾಲರ್ ಭಯೋತ್ಪಾದಕ ಮಾಡ್ಯೂಲ್, ನವೆಂಬರ್ 10 ರಂದು ಕೆಂಪು ಕೋಟೆ ಬಳಿ ನಡೆದ ಭಯೋತ್ಪಾದಕ ದಾಳಿಗೆ ಮುಂಚಿತವಾಗಿ ಡ್ರೋನ್‌ಗಳನ್ನು ಶಸ್ತ್ರಾಸ್ತ್ರವಾಗಿ ಮಾರ್ಪಡಿಸಲು ಮತ್ತು ಬಳಕೆಗಾಗಿ ರಾಕೆಟ್‌ಗಳನ್ನು ತಯಾರಿಸಲು ಯೋಜಿಸಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್ 10 ರಂದು ದೆಹಲಿಯಲ್ಲಿ ನಡೆದ ಭೀಕರ ಕಾರು … Continued