ಮೈಕ್ರೋಸಾಫ್ಟ್‌ನಿಂದ ಭಾರತದಲ್ಲಿ ಅತ್ಯಧಿಕ ಹೂಡಿಕೆ: “ಎಐ ಫರ್ಸ್ಟ್‌ ಫ್ಯೂಚರ್”ಗಾಗಿ 1.5 ಲಕ್ಷ ಕೋಟಿ ರೂ. ವಿನಿಯೋಗ

ನವದೆಹಲಿ: ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸತ್ಯ ನಾದೆಲ್ಲಾ ಅವರು ಬುಧವಾರ ಸಂಜೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಕೃತಕ ಬುದ್ಧಿಮತ್ತೆ (Artificial Intelligence – AI) ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು $17.5 ಬಿಲಿಯನ್ (ಸುಮಾರು ₹1.5 ಲಕ್ಷ ಕೋಟಿ) ಮೊತ್ತವನ್ನು ಹೂಡಿಕೆ ಮಾಡುವುದಾಗಿ ಬದ್ಧತೆ ನೀಡಿದ್ದಾರೆ. ಇದು ಅಮೆರಿಕ ಮೂಲದ ಈ … Continued

ಮುಂದಿನ ಸಿಲಿಕಾನ್ ಸೂಪರ್ ಪವರ್ ಆಗುವ ಹಾದಿಯಲ್ಲಿ ಭಾರತ ; ಚಿಪ್ಸ್, ಎಐ ಲ್ಯಾಪ್‌ಟಾಪ್‌ ತಯಾರಿಕೆಗೆ ಟಾಟಾ-ಇಂಟೆಲ್ ಒಪ್ಪಂದ

ನವದೆಹಲಿ: ಚಿಪ್ ಉತ್ಪಾದನಾ ಕ್ಷೇತ್ರದಲ್ಲಿ ಭಾರತವನ್ನು ಮುನ್ನಡೆಸುವ ಒಂದು ಪ್ರಮುಖ ಬೆಳವಣಿಗೆಯಲ್ಲಿ, ಟಾಟಾ ಎಲೆಕ್ಟ್ರಾನಿಕ್ಸ್ (Tata Electronics) ಒಂದು ಮಹತ್ವದ ಪಾಲುದಾರಿಕೆಯನ್ನು (significant partnership) ಘೋಷಿಸಿದೆ. ಟಾಟಾ ಎಲೆಕ್ಟ್ರಾನಿಕ್ಸ್, ಇಂಟೆಲ್‌ನ (Intel) ಎರಡು ದೊಡ್ಡ ಚಿಪ್ ಘಟಕಗಳಿಗೆ ಮೊದಲ ಪ್ರಮುಖ ಗ್ರಾಹಕ ಆಗಲಿದೆ. ಈ ಸುದ್ದಿಯನ್ನು ಭಾರತದಲ್ಲಿ ಚಿಪ್ ತಯಾರಿಕೆಯ ಶುಭಾರಂಭ ಎಂದು ನೋಡಲಾಗುತ್ತಿದೆ. ಭಾರತೀಯ … Continued

ಇಂಡಿಗೋ ವಿಮಾನ ಬಿಕ್ಕಟ್ಟು : ಟಿಕೆಟ್‌ಗಳ ಹಣ 610 ಕೋಟಿ ರೂ. ಗ್ರಾಹಕರಿಗೆ ಮರುಪಾವತಿ, ವಿಮಾನಗಳ ಸಂಚಾರದಲ್ಲಿ ಸುಧಾರಣೆ

ನವದೆಹಲಿ: ಇಂಡಿಗೋ (IndiGo) ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ಶಮನಗೊಳ್ಳುವ ಲಕ್ಷಣಗಳು ಕಾಣಿಸುತ್ತಿದ್ದಂತೆ ವಿಮಾನಗಳ ವ್ಯಾಪಕ ರದ್ದತಿ ಮತ್ತು ವಿಳಂಬದಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಯು ಈವರೆಗೆ ₹ 610 ಕೋಟಿ ಮರುಪಾವತಿ ಮಾಡಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಭಾನುವಾರ ತಿಳಿಸಿದೆ. ಶನಿವಾರದ ಹೊತ್ತಿಗೆ, ದೇಶಾದ್ಯಂತ ಸುಮಾರು 3,000 ಸಾಮಾನು ಸರಂಜಾಮುಗಳನ್ನು ಸಹ ಪ್ರಯಾಣಿಕರಿಗೆ ತಲುಪಿಸಲಾಗಿದೆ. … Continued

ಗೋವಾ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ: 25 ಮಂದಿ ಸಾವು

ಆರ್ಪೋರಾ (ಉತ್ತರ ಗೋವಾ): ಉತ್ತರ ಗೋವಾದ ಆರ್ಪೋರಾದಲ್ಲಿರುವ ನೈಟ್‌ಕ್ಲಬ್‌ವೊಂದರಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಿಂದಾಗಿ ಕನಿಷ್ಠ 25 ಜನರು ಸಾವಿಗೀಡಾಗಿದ್ದು, ಏಳು ಮಂದಿ ಗಾಯಗೊಂಡಿರುವ ದುರ್ಘಟನೆ ಸಂಭವಿಸಿದೆ. ಮೃತರಾದವರಲ್ಲಿ ಬಹುತೇಕರು ಕ್ಲಬ್‌ನ ಸಿಬ್ಬಂದಿ ಎಂದು ತಿಳಿದುಬಂದಿದೆ. ರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ನೈಟ್‌ಕ್ಲಬ್‌ನ ಅಡುಗೆಮನೆಯ (Kitchen) ಸಮೀಪದಲ್ಲಿ ಸಿಲಿಂಡರ್ ಸ್ಫೋಟದಿಂದ ಬೆಂಕಿ … Continued

2030ರ ವೇಳೆಗೆ ಭಾರತ-ರಷ್ಯಾ ವ್ಯಾಪಾರ-ಆರ್ಥಿಕ ಪಾಲುದಾರಿಕೆಯಲ್ಲಿ $100 ಶತಕೋಟಿಗೆ ತಲುಪುವ ಗುರಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ವ್ಲಾದಿಮಿರ್ ಪುತಿನ್ ನೇತೃತ್ವದಲ್ಲಿ ನಡೆದ 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯ ನಂತರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯು, ಸಂಕೀರ್ಣ ಜಾಗತಿಕ ಭೂ-ರಾಜಕೀಯ ಸನ್ನಿವೇಶದ ನಡುವೆಯೂ ಎರಡೂ ದೇಶಗಳು ‘ವಿಶೇಷ ಮತ್ತು ಸವಲತ್ತುಳ್ಳ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ (Special and Privileged Strategic Partnership)ತಮ್ಮ ಆರ್ಥಿಕ ಮತ್ತು ಇಂಧನ … Continued

ಇಂಡಿಗೋ ಬಿಕ್ಕಟ್ಟು : ಉನ್ನತ ಮಟ್ಟದ ತನಿಖೆಗೆ ಕೇಂದ್ರ ಸರ್ಕಾರದ ಆದೇಶ

ನವದೆಹಲಿ: ಇಂಡಿಗೋ ವಿಮಾನಗಳ ರದ್ದತಿ ಮತ್ತು ವಿಳಂಬದಿಂದ ತೀವ್ರ ತೊಂದರೆಗೊಳಗಾದ ಪ್ರಯಾಣಿಕರಿಗೆ ಸಂತಸದ ಸುದ್ದಿ ಎಂಬಂತೆ, ವಿಮಾನಗಳ ವೇಳಾಪಟ್ಟಿ ಶನಿವಾರದೊಳಗೆ ಸ್ಥಿರಗೊಳ್ಳುವ ನಿರೀಕ್ಷೆಯಿದೆ ಮತ್ತು ಸೋಮವಾರದೊಳಗೆ ಅಂದರೆ ಮೂರು ದಿನಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸತತ ಎರಡನೇ ದಿನವೂ ಇಂಡಿಗೋದ ವಿಮಾನಗಳ ರದ್ದತಿ 500 ಗಡಿಯನ್ನು … Continued

ಗುರುವಾರ 550ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ ಇಂಡಿಗೋ

ನವದೆಹಲಿ : ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ (IndiGo) ಗುರುವಾರ 550ಕ್ಕೂ ಹೆಚ್ಚು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದ್ದು, ಹಲವಾರು ವಿಮಾನ ನಿಲ್ದಾಣಗಳಲ್ಲಿ ಸೇವೆಗಳು ವಿಳಂಬವಾಗಿವೆ. ಸತತ ಮೂರನೇ ದಿನವೂ ವಿಮಾನ ಕಾರ್ಯಾಚರಣೆಯ ಅಡಚಣೆಗಳು ಮುಂದುವರಿದಿದ್ದು, ನೂರಾರು ಪ್ರಯಾಣಿಕರ ಮೇಲೆ ತೀವ್ರ ಪರಿಣಾಮ ಬೀರಿದೆ. ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಿಮಾನಯಾನ … Continued

ಆಹಾರದ ಲ್ಯಾಬ್‌ನಿಂದ ಪೂಪ್ ಸೂಟ್‌ಕೇಸ್ ವರೆಗೆ..ಕ್ಷಿಪಣಿ ವಿರೋಧಿ ವ್ಯವಸ್ಥೆಯಿಂದ ರಾಡಾರ್-ಜ್ಯಾಮಿಂಗ್ ತಂತ್ರಜ್ಞಾನದ ವರೆಗೆ…ರಷ್ಯಾ ಅಧ್ಯಕ್ಷರ ಅಸಾಧಾರಣ ಭದ್ರತೆ ಬಗ್ಗೆ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಅವರ ವಿದೇಶ ಪ್ರವಾಸಗಳ  ಕಟ್ಟುನಿಟ್ಟಾದ ಮತ್ತು ಅತಿ ಗೋಪ್ಯ ಭದ್ರತಾ ಕ್ರಮಗಳು ಮತ್ತೊಮ್ಮೆ ವಿಶ್ವದ ಗಮನ ಸೆಳೆದಿವೆ. ಆತಿಥೇಯ ರಾಷ್ಟ್ರವು ತನ್ನದೇ ಆದ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಿದರೂ, ಪುತಿನ್ ಅವರ ವಿದೇಶ ಪ್ರಯಾಣದ ಭದ್ರೆತೆಯು ಪರಮ ಎಚ್ಚರಿಕೆ, ಕಟ್ಟುನಿಟ್ಟಿನ ವ್ಯವಸ್ಥಾಪನಾ ನಿಯಂತ್ರಣ ಮತ್ತು … Continued

ಶಾಕಿಂಗ್ : ಜೆಇಎಂ ಭಯೋತ್ಪಾದಕ ಸಂಘಟನೆ ಮಹಿಳಾ ವಿಭಾಗಕ್ಕೆ 5000ಕ್ಕೂ ಹೆಚ್ಚು ಮಹಿಳೆಯರ ನೇಮಕ..! ಆನ್‌ಲೈನ್ ತರಬೇತಿ…

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಇ-ಮೊಹಮ್ಮದ್ (JeM) ನ ಮುಖ್ಯಸ್ಥ ಮಸೂದ್ ಅಜರ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾನೆ. ಈ ಸಂಘಟನೆಯ ಮಹಿಳಾ ವಿಭಾಗಕ್ಕೆ 5,000ಕ್ಕೂ ಹೆಚ್ಚು ಮಹಿಳೆಯರನ್ನು ನೇಮಕ ಮಾಡಲಾಗಿದೆ ಎಂದು ಆತ ಹೇಳಿಕೊಂಡಿದ್ದಾನೆ. ಈ ಮಹಿಳಾ ಸದಸ್ಯರಿಗೆ ಆತ್ಮಹತ್ಯಾ ದಾಳಿಗಳಿಗಾಗಿ ತರಬೇತಿ ನೀಡಲಾಗುತ್ತಿದ್ದು, ಉಗ್ರವಾದದ ಸಿದ್ಧಾಂತಕ್ಕೆ ಅವರನ್ನು ಒಳಪಡಿಸಲಾಗುತ್ತಿದೆ ಎಂದು … Continued

ದೇಶಾದ್ಯಂತ ಒಂದೇ ದಿನ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ರದ್ದು ; ಪ್ರಯಾಣಿಕರ ಪರದಾಟ

ನವದೆಹಲಿ: ಭಾರತದ ವಿಮಾನ ನಿಲ್ದಾಣಗಳಲ್ಲಿ ಬುಧವಾರ ಇಂಡಿಗೋ ವಿಮಾನ ಸಂಚಾರದಲ್ಲಿ ಭಾರೀ ಅಸ್ತವ್ಯಸ್ತತೆ ಉಂಟಾಗಿದ್ದು, ಸುಮಾರು 200ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ ಎಂದು ವರದಿಯಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ವಿಮಾನಯಾನ ಸಂಸ್ಥೆಯ ಅತ್ಯಂತ ಗಂಭೀರ ಕಾರ್ಯಾಚರಣೆಯ ವೈಫಲ್ಯಗಳಲ್ಲಿ ಒಂದಾಗಿದೆ. ನೂರಾರು ಪ್ರಯಾಣಿಕರು ಸಿಲುಕಿಕೊಂಡಿದ್ದು, ಇಂಡಿಗೋ ಈ ಅನನುಕೂಲತೆಗಾಗಿ ಕ್ಷಮೆಯಾಚಿಸಿದೆ. ನ್ಯೂಸ್18 ವರದಿಯ ಪ್ರಕಾರ, ಬುಧವಾರ ಮಧ್ಯಾಹ್ನದವರೆಗೆ … Continued