ಗ್ರೋಕ್‌ (Grok) ಎಐ ದುರ್ಬಳಕೆಗೆ ತೀವ್ರ ಆಕ್ಷೇಪ ; ಎಕ್ಸ್ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ ಖಡಕ್ ನೋಟಿಸ್

ನವದೆಹಲಿ: ಮಹಿಳೆಯರ ವಿರುದ್ಧ ಅಶ್ಲೀಲ ಮತ್ತು ಅವಹೇಳನಕಾರಿ ವಿಷಯಗಳನ್ನು ಸೃಷ್ಟಿಸಲು ಗ್ರೋಕ್‌ (‘Grok)’ ಎಂಬ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮೈಕ್ರೋಬ್ಲಾಗಿಂಗ್ ತಾಣ ‘X’ (ಹಿಂದಿನ ಟ್ವಿಟರ್) ಸಂಸ್ಥೆಗೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಗಂಭೀರ ನೋಟಿಸ್ ನೀಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಐಟಿ … Continued

ಸ್ವಿಟ್ಜರ್ಲೆಂಡ್ ಬಾರ್‌ನಲ್ಲಿ ಭೀಕರ ಅಗ್ನಿ ದುರಂತ: 40ಕ್ಕೂ ಹೆಚ್ಚು ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ-ವರದಿ

ಕ್ರಾನ್ಸ್ ಮೊಂಟಾನ (ಸ್ವಿಟ್ಜರ್ಲೆಂಡ್): ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಸ್ವಿಟ್ಜರ್ಲೆಂಡ್‌ನ ಐಷಾರಾಮಿ ಆಲ್ಪೈನ್ ಸ್ಕೀ ರೆಸಾರ್ಟ್ ಪಟ್ಟಣವಾದ ಕ್ರಾನ್ಸ್ ಮೊಂಟಾನಾದ ಬಾರ್‌ ಒಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಸುಮಾರು 40ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಗುರುವಾರ ಮುಂಜಾನೆ ಸುಮಾರು 1:30ರ … Continued

ಭಾರಿ ತೆರಿಗೆ ಏರಿಕೆ; ಫೆಬ್ರವರಿ 1ರಿಂದ ಸಿಗರೇಟ್, ಬೀಡಿ, ಪಾನ್ ಮಸಾಲ ದುಬಾರಿ

ನವದೆಹಲಿ: ದೇಶದಲ್ಲಿ ಸಿಗರೇಟ್, ತಂಬಾಕು ಉತ್ಪನ್ನಗಳು ಮತ್ತು ಪಾನ್ ಮಸಾಲಾ ಬೆಲೆಗಳು ಫೆಬ್ರವರಿ 1, 2026 ರಿಂದ ಗಣನೀಯವಾಗಿ ಏರಿಕೆಯಾಗಲಿವೆ. ಪ್ರಸ್ತುತ ಚಾಲ್ತಿಯಲ್ಲಿರುವ ಜಿಎಸ್‌ಟಿ (GST) ಪರಿಹಾರ ಸೆಸ್ ಅನ್ನು ರದ್ದುಗೊಳಿಸಿ, ಅದರ ಬದಲಿಗೆ ಹೊಸ ಅಬಕಾರಿ ಸುಂಕ ಮತ್ತು ಸೆಸ್ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬುಧವಾರ ತಡರಾತ್ರಿ ಹೊರಡಿಸಲಾದ ಅಧಿಕೃತ ಅಧಿಸೂಚನೆಯ ಪ್ರಕಾರ, … Continued

ಜಪಾನ್‌ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾದ ಭಾರತ ; ವರದಿ

ನವದೆಹಲಿ: ಭಾರತದ ಆರ್ಥಿಕ ಶಕ್ತಿಯು ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. 2025ರ ಆರ್ಥಿಕ ಸುಧಾರಣೆಗಳ ಕುರಿತಾದ ಸರ್ಕಾರದ ಅಧಿಕೃತ ವರದಿಯ ಪ್ರಕಾರ, ಭಾರತವು 4.18 ಟ್ರಿಲಿಯನ್ ಅಮೆರಿಕನ್‌ ಡಾಲರ್ ಒಟ್ಟು ದೇಶೀಯ ಉತ್ಪನ್ನದ (GDP) ಗಾತ್ರದೊಂದಿಗೆ ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಭಾರತದ ಆರ್ಥಿಕತೆಯು ಇದೇ ವೇಗದಲ್ಲಿ ಮುಂದುವರಿದರೆ, … Continued

ಭಾರತದ ʼಆಪರೇಶನ್‌ ಸಿಂಧೂರʼ ; ಪಾಕಿಸ್ತಾನದ ವಾಯುನೆಲೆ-ಸೈನಿಕರಿಗೆ ಹಾನಿಯಾಗಿದ್ದನ್ನು ಒಪ್ಪಿಕೊಂಡ ಪಾಕ್‌ ವಿದೇಶಾಂಗ ಸಚಿವ…!

ಇಸ್ಲಾಮಾಬಾದ್/ನವದೆಹಲಿ: ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಮುಖಭಂಗಕ್ಕೀಡಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಭಾರತ ನಡೆಸಿದ ʼಆಪರೇಶನ್‌ ಸಿಂಧೂರʼ ಕಾರ್ಯಾಚರಣೆಯ ‘ನಿಖರ ವೈಮಾನಿಕ ದಾಳಿ’ಯಿಂದ (Precision Strikes) ತನ್ನ ಸೇನಾ ನೆಲೆಗಳಿಗೆ ಭಾರಿ ಹಾನಿಯಾಗಿರುವುದನ್ನು ಪಾಕಿಸ್ತಾನ ಕೊನೆಗೂ ಒಪ್ಪಿಕೊಂಡಿದೆ. ಶನಿವಾರ ನಡೆದ ವರ್ಷಾಂತ್ಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಮತ್ತು ಉಪ ಪ್ರಧಾನಿ ಇಶಾಕ್ … Continued

5 ದಿನದಲ್ಲಿ 5,000 ಕಿ.ಮೀ ದೂರ ದಾಖಲೆಯ ಹಾರಾಟ…! ಭಾರತದಿಂದ ಆಫ್ರಿಕಾ ತಲುಪಿದ ಪುಟ್ಟ ಅಮುರ್ ಫಾಲ್ಕನ್‌ ಪಕ್ಷಿಗಳು..!!

ನವದೆಹಲಿ : ವಿಶ್ವದ ಅತ್ಯಂತ ಸುದೀರ್ಘ ವಲಸೆ ಹಕ್ಕಿ ಎಂಬ ಖ್ಯಾತಿಯ ‘ಅಮೂರ್ ಫಾಲ್ಕನ್’ (Amur Falcon) ಪಕ್ಷಿಗಳು ಇದೀಗ ಮತ್ತೆ ಸುದ್ದಿಯಲ್ಲಿವೆ. ಮಣಿಪುರದಲ್ಲಿ ಸ್ಯಾಟಲೈಟ್ ಟ್ಯಾಗ್ ಅಳವಡಿಸಲಾಗಿದ್ದ ಮೂರು ಪುಟ್ಟ ‘ಅಮೂರ್ ಫಾಲ್ಕನ್’ ಹಕ್ಕಿಗಳು ಸಾವಿರಾರು ಕಿಲೋಮೀಟರ್ ಕ್ರಮಿಸಿ ಆಫ್ರಿಕಾ ಖಂಡವನ್ನು ತಲುಪುವ ಮೂಲಕ ವಿಜ್ಞಾನಿಗಳನ್ನು ಬೆರಗುಗೊಳಿಸಿವೆ. ಕ್ರಿಸ್‌ಮಸ್ ಸಂಭ್ರಮದ ಹೊತ್ತಲ್ಲೇ, ‘ಅಪಾಪಾಂಗ್’ ಎಂಬ … Continued

ತಿರುವನಂತಪುರಂ ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿಯ ವಿ.ವಿ. ರಾಜೇಶ ಆಯ್ಕೆ ; 45 ವರ್ಷಗಳ ಎಡರಂಗದ ಆಡಳಿತಕ್ಕೆ ತೆರೆ

ತಿರುವನಂತಪುರಂ: ಕೇರಳದ ರಾಜಧಾನಿಯಲ್ಲಿ ಬಿಜೆಪಿಯ ಪ್ರಮುಖ ಮುಖಗಳಲ್ಲಿ ಒಬ್ಬರಾದ ಹಿರಿಯ ನಾಯಕ ವಿ.ವಿ. ರಾಜೇಶ ಅವರು ಶುಕ್ರವಾರ ತಿರುವನಂತಪುರಂ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ಸಾಧಿಸಿತ್ತು. ಒಟ್ಟು 101 ಸ್ಥಾನಗಳ ಪೈಕಿ 50 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ … Continued

ಅದೃಷ್ಟ ಅಂದ್ರೆ ಇದಪ್ಪ…: 16,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಲಾಟರಿ ಗೆದ್ದ ವ್ಯಕ್ತಿ…!

ಅರ್ಕಾನ್ಸಾಸ್ (ಅಮೆರಿಕ): ಕ್ರಿಸ್‌ಮಸ್ ಮುನ್ನಾದಿನದಂದು ನಡೆದ ಪವರ್‌ಬಾಲ್ (Powerball) ಲಾಟರಿ ಡ್ರಾದಲ್ಲಿ ಅರ್ಕಾನ್ಸಾಸ್ ರಾಜ್ಯದ ವ್ಯಕ್ತಿಯೊಬ್ಬರು ಬರೋಬ್ಬರಿ $1.817 ಶತಕೋಟಿ (ಸುಮಾರು 16,322 ಕೋಟಿ ರೂಪಾಯಿ) ಮೊತ್ತದ ಬೃಹತ್ ಜಾಕ್‌ಪಾಟ್ ಗೆದ್ದಿದ್ದಾರೆ. ಕಳೆದ ಮೂರು ತಿಂಗಳಿನಿಂದ ಯಾವುದೇ ವಿಜೇತರಿಲ್ಲದೆ ಬಾಕಿ ಉಳಿದಿದ್ದ ಈ ಲಾಟರಿ ಮೊತ್ತವು ಇದೀಗ ಒಬ್ಬ ವ್ಯಕ್ತಿಯ ಪಾಲಾಗಿದೆ. ಬುಧವಾರ ರಾತ್ರಿ ನಡೆದ … Continued

1.1 ಕೋಟಿ ರೂ. ಬಹುಮಾನ ಹೊಂದಿದ್ದ ಟಾಪ್ ನಕ್ಸಲ್ ನಾಯಕ ಗಣೇಶ ಉಯಿಕೆ ಹತ

ಭುವನೇಶ್ವರ/ಹೈದರಾಬಾದ್: ಒಡಿಶಾದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಗುರುವಾರ ಐತಿಹಾಸಿಕ ಯಶಸ್ಸು ಸಾಧಿಸಿವೆ. ಸಿಪಿಐ (ಮಾವೋವಾದಿ) ಸಂಘಟನೆಯ ಕೇಂದ್ರ ಸಮಿತಿ ಸದಸ್ಯ ಹಾಗೂ ಒಡಿಶಾ ಕಾರ್ಯಾಚರಣೆಗಳ ಮುಖ್ಯಸ್ಥ, 69 ವರ್ಷದ ಗಣೇಶ ಉಯಿಕೆ ಅಲಿಯಾಸ್ ಪಕ್ಕಾ ಹನುಮಂತು ಎಂಬಾತನನ್ನು ಬಿಎಸ್ಎಫ್ (BSF) ಮತ್ತು ಸಿಆರ್‌ಪಿಎಫ್ (CRPF) ಪಡೆಗಳು ಎನ್ಕೌಂಟರ್‌ನಲ್ಲಿ ಹೊಡೆದುರುಳಿಸಿವೆ. ಕಂಧಮಾಲ್ ಮತ್ತು ಗಂಜಾಂ … Continued

ಸತತ ವಿದ್ಯುತ್ ಕಡಿತಕ್ಕೆ ಆಕ್ರೋಶ: ವಿದ್ಯುತ್‌ ಇಲಾಖೆ ಅಧಿಕಾರಿಗಳ ಮನೆಯ ವಿದ್ಯುತ್‌ ಕಟ್ ಮಾಡಿದ ಶಾಸಕ…!

ಹರಿದ್ವಾರ : ಸತತ ವಿದ್ಯುತ್ ಕಡಿತದಿಂದ ಆಕ್ರೋಶಗೊಂಡ ಹರಿದ್ವಾರ ಜಿಲ್ಲೆಯ ಜಬ್ರೇಡಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಅವರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸ್ವತಃ ವಿದ್ಯುತ್ ಕಂಬ ಏರಿದ ಶಾಸಕರು, ವಿದ್ಯುತ್‌ ಇಲಾಖೆಯ ಮೂವರು ಉನ್ನತ ಅಧಿಕಾರಿಗಳ ನಿವಾಸದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವಿದ್ಯುತ್ ಇಲಾಖೆಯು ರೂರ್ಕಿ ಸಿವಿಲ್ ಲೈನ್ಸ್ … Continued