ಮತ್ತೆ ಏರಿಕೆ..ಕರ್ನಾಟಕದಲ್ಲಿ 1488 ದೈನಂದಿನ ಕೊರೊನಾ ಸೋಂಕು..!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಆರ್ಭಟ ಹೆಚ್ಚಾಗುತ್ತಿದ್ದು ಕಳೆದ 24 ತಾಸಿನಲ್ಲಿ ಕೊರೊನಾ ದೈನಂದಿನ ಸೋಂಕು ಗುರುವಾರ ಹೊಸ ಒಂದುಸಾವಿರದ ಸಮೀಪ ಬಂದಿದ್ದು, 1488 ಜನರಿಗೆ ಸೊಂಕು ದೃಢ ಪಟ್ಟಿದೆ. ಕೊರೊನಾದಿಂದ ಕಳೆದ 24 ಗಂಟೆಗಳಲ್ಲಿ 8 ಸೋಂಕಿತರು ಮೃತಪಟ್ಟಿದ್ದು ಬೆಂಗಳೂರು ನಗರ ದಲ್ಲಿ 7 ಜನರು ಹಾಗೂ ಬೀದರಿನಲ್ಲಿ ಒಬ್ಬರು ಕೊರನಾದಿಂದ ಮೃತಪಟ್ಟಿದ್ದಾರೆ. ಸಕ್ರಿಯ … Continued

ಕೊರೊನಾ ಋತುಮಾನಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಕಾಯಿಲೆಯಾಗುವ ಸಾಧ್ಯತೆ: ವಿಶ್ವಸಂಸ್ಥೆ

ಜೆನಿವಾ: ಕೊರೊನಾ ಋತುಮಾನಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಕಾಯಿಲೆಯ ರೂಪ ಪಡೆಯುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಹವಾಮಾನ ಬದಲಾವಣೆಯನ್ನು ಆಧಾರವಾಗಿಟ್ಟುಕೊಂಡು ಕೊವಿಡ್‌-೧೯ ಪ್ರಸಾರ ತಡೆಯಲು ಜಾರಿಗೊಳಿಸಿರುವ ಮಾರ್ಗಸೂಚಿಗಳ ಪಾಲನೆ ಅಗತ್ಯವಾಗಿದೆ ಎಂದು ತಿಳಿಸಿದೆ. ವಿಶ್ವಸಂಸ್ಥೆಯ ಹವಾಮಾನ ಸಂಘಟನೆ, ಕೊರೊನಾ ಪ್ರಸರಣದ ಮೇಲೆ ಹವಾಮಾನ ಬದಲಾವಣೆ ಹಾಗೂ ವಾಯುವಿನ ಗುಣಮಟ್ಟ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು … Continued

ಕರ್ನಾಟಕ ಉಪಚುನಾವಣೆ: ಎರಡು ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಪ್ರಕಟ

ಬೆಂಗಳೂರು: ಉಪಚುನಾವಣೆ ನಡೆಯಲಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಆದರೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ  ಅಭ್ಯರ್ಥಿ ಹೆಸರು ಇನ್ನೂ ಪ್ರಕಟಿಸಬೇಕಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರ ವಿಧಾನಸಬಾ ಕ್ಷೇತ್ರದಿಂದ ದಿವಂಗತ ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಅವರಿಗೆ ಟಿಕೆಟ್‌ ನೀಡಲಾಗಿದೆ. ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಬಸವನಗೌಡ ಆರ್. ತಿರುವಿಹಾಳ ಅವರಿಗೆ … Continued

ಶೀಘ್ರದಲ್ಲಿ ಹುಕ್ಕಾ ಪಾರ್ಲರ್ ಬಂದ್, ಎಂಟಿ ಡ್ರಗ್ ಪಾಲಿಸಿ : ಬೊಮ್ಮಾಯಿ

ಬೆಂಗಳೂರು: ಶೀಘ್ರದಲ್ಲೇ ಹುಕ್ಕಾ ಪಾರ್ಲರ್ ಗಳನ್ನು ಬಂದ್ ಮಾಡಲಾಗುವುದು ಮತ್ತು ಎಂಟಿ ಡ್ರಗ್ ಪಾಲಿಸಿ ಜಾರಿಗೆ ತರಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಮಹಾಂತೇಶ್ ಕವಟಗಿಮಠ ಪ್ರಶ್ನೆಗೆ ಉತ್ತರಿಸಿದ ಅವರು, ಮಾದಕ ವಸ್ತು ಸೇವನೆ ಸಂಪೂರ್ಣವಾಗಿ ನಿಷೇಧ ಆಗಬೇಕಾಗಿದೆ.  ಸಿಂಥೆಟಿಕ್‌ ಡ್ರಗ್ ಅನ್ನು ವಿದ್ಯಾರ್ಥಿಗಳಿಗೆ ಕೊಡುವ ಕೆಲಸವಾಗುತ್ತಿದೆ, … Continued

ಮಹಾರಾಷ್ಟ್ರ: 26 ಸಾವಿರ ಸಮೀಪ ಬಂದ ಕೊರೊನಾ ಪ್ರಕರಣಗಳ ಸಂಖ್ಯೆ..!

ಮುಂಬೈ: ಮಹಾರಾಷ್ಟ್ರವು ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಕಳೆದ 24 ತಾಸಿನಲ್ಲಿ 25 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿದೆ ಮಹಾರಾಷ್ಟ್ರದಲ್ಲಿ ಗುರುವಾರ ಒಂದೇ ದಿನದಲ್ಲಿ 25,833 ಸೋಂಕುಗಳು ವರದಿಯಾಗಿವೆ, ಬುಧವಾರ ರಾಜ್ಯವು 23,000ಕ್ಕೂ ಹೆಚ್ಚು ಹೊಸ ಪ್ರಕರಣಗಳ ಹೆಚ್ಚಳವನ್ನು ವರದಿ ಮಾಡಿತ್ತು. ಆದಾಗ್ಯೂ, ವೈರಸ್ ಸಂಬಂಧಿತ ಸಾವುನೋವುಗಳು ಇಳಿಮುಖವಾಗಿವೆ. ಗುರುವಾರ … Continued

ಕರ್ನಾಟಕದಲ್ಲಿ ಎರಡನೇ ಅಲೆ ಭೀತಿ: ಆರೋಗ್ಯ ಸಿಬ್ಬಂದಿಗೆ 50 ದಿನ ರಜೆ ಇಲ್ಲ ಎಂದ ಆರೋಗ್ಯ ಸಚಿವರು

ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಮುನ್ಸೂಚನೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಇನ್ನು 50 ದಿನಗಳು ರಜೆ ನೀಡದಿರಲು ತೀರ್ಮಾನಿಸಲಾಗಿದೆ. ಎಲ್ಲರೂ ಇದಕ್ಕೆ ಸ್ಪಂದಿಸಬೇಕು ಎಂದು ಆರೋಗ್ಯ ಖಾತೆ ಸಚಿವ ಡಾ.ಆರ್‌.ಸುಧಾಕರ ಮನವಿ ಮಾಡಿದ್ದಾರೆ. ಗುರುವಾರ ಆರೋಗ್ಯ ಇಲಾಖೆ ಅಧಿಕಾರಿಗಳು, ಮುಖ್ಯ ಆಸ್ಪತ್ರೆ ವೈದ್ಯರ ನೇತೃತ್ವದಲ್ಲಿ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ … Continued

7 ರಾಷ್ಟ್ರೀಯ- 41 ಪ್ರಾದೇಶಿಕ ಪಕ್ಷಗಳ ಆಸ್ತಿ ವಿವರ ಬಹಿರಂಗ

ನವ ದೆಹಲಿ: ಚುನಾವಣಾ ಆಯೋಗಕ್ಕೆ 7 ರಾಷ್ಟ್ರೀಯ ಹಾಗೂ 41 ಪ್ರಾದೇಶಿಕ ಪಕ್ಷಗಳು ಸಲ್ಲಿಸಿರುವ ಪ್ರಕಾರ ಈ ಪಕ್ಷಗಳು 7372.96 ಕೋಟಿ ರೂ. ಆಸ್ತಿ ಹೊಂದಿರುವುದು ಬಹಿರಂಗವಾಗಿದೆ. 7 ರಾಷ್ಟ್ರೀಯ ಪಕ್ಷಗಳು 5349.25 ಕೋಟಿ ರೂ. ಹಾಗೂ 41 ಪ್ರಾದೇಶಿಕ ಪಕ್ಷಗಳು 2023.71 ಕೋಟಿ ರೂ. ಆಸ್ತಿ ಹೊಂದಿವೆ ಎನ್ನಲಾಗಿದೆ. ಬಿಜೆಪಿ ಅತಿ ಹೆಚ್ಚು ಆಸ್ತಿ … Continued

ತನಗೆ ಚಿಕಿತ್ಸೆ ನೀಡಿದ ವೈದ್ಯನ 12 ವರ್ಷಗಳ ನಂತರ ಗುರುತಿಸಿ ಕೃತಜ್ಞತೆ ಸಲ್ಲಿಸಿದ ಕಾಡಾನೆ…!

ತನಗೆ ಆರೈಕೆ ಮಾಡಿದ್ದ ವೈದ್ಯರೊಬ್ಬರನ್ನು 12 ವರ್ಷಗಳ ಬಳಿಕ ಗುರುತು ಹಿಡಿದ ಥಾಯ್ಲೆಂಡ್‌ನ ಕಾಡಾನೆಯೊಂದರ ಕ್ಯಾಮೆರಾದಲ್ಲಿ ಸೆರೆ ಹಿಡಿದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗುತ್ತಿದೆ. ಥಾಯ್ಲೆಂಡಿನ ಪಶುವೈದ್ಯ ಡಾ. ಪಟ್ಟರಪಾಲ್ ಮನೀಯನ್‌ ಅವರನ್ನು ೧೨ ವರ್ಷಗಳ ಬಳಿಕ 31 ವರ್ಷದ ಈ ಆನೆ ಗುರುತು ಹಿಡಿದಿದೆ. ತನ್ನ ಸೊಂಡಿಲಿನಿಂದ … Continued

ವರ್ಷದೊಳಗೆ ಎಲ್ಲ ಹೆದ್ದಾರಿ ಟೋಲ್‌ಗೇಟುಗಳಿಗೆ ಮುಕ್ತಿ…!

ನವ ದೆಹಲಿ: ಭಾರತದಲ್ಲಿ ಟೋಲ್ ಗೇಟುಗಳ ವ್ಯವಸ್ಥೆ ಸ್ಥಗಿತಗೊಳ್ಳಲಿವೆ ಮತ್ತು ಒಂದು ವರ್ಷದೊಳಗೆ ಸಂಪೂರ್ಣ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹವನ್ನು ಜಾರಿಗೆ ತರಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಲೋಕಸಭೆಗೆ ತಿಳಿಸಿದ್ದಾರೆ. 93% ವಾಹನಗಳು ಫಾಸ್ಟ್ಯಾಗ್ ಬಳಸಿ ಟೋಲ್ ಪಾವತಿಸುತ್ತವೆ, ಆದರೆ ಉಳಿದ ಶೇಕಡಾ 7 ರಷ್ಟು ಜನರು … Continued

ಭಾರತದಲ್ಲಿ ಒಂದೇ ದಿನದಲ್ಲಿ 36 ಸಾವಿರದ ಸಮೀಪ ಬಂದ ಕೊರೊನಾ ಪ್ರಕರಣ..ಮತ್ತೆ ಬಾರಿಸಿದೆ ಎಚ್ಚರಿಕೆ ಗಂಟೆ..!!

ನವ ದೆಹಲಿ: ದೇಶದಲ್ಲಿ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದು, ಕಳೆದ 24 ತಾಸಿನಲ್ಲಿ ಭಾರತದಲ್ಲಿ 35,871 ದೈನಂದಿನ ಕೊರೊನಾ ಪ್ರಕರಣಗಳು ದಾಖಲಾಗಿವೆ..!! ಇದು ಈ ವರ್ಷದ ಅತಿ ಗರಿಷ್ಠ ದೈನಂದಿನ ಪ್ರಕರಣವಾಗಿದೆ. ಪ್ರ ಒಂದೇ 172 ಜನರು ಇದರಿಂದ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 1,59,216ಕ್ಕೆ ಏರಿಕೆಯಾಗಿದೆ. ಬುಧವಾರ 17,741 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ … Continued