ಸಿಡಿ ಪ್ರಕರಣದಲ್ಲಿ ಗಟ್ಟಿ ಸಾಕ್ಷ್ಯ ಸಂಗ್ರಹ ಮಾಡಿಕೊಂಡೇ ಮೂವರು ಕಿಂಗ್‌ ಪಿನ್‌ ವಿರುದ್ಧ ದೂರು: ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ : ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಪಕ್ಕಾ ಸಾಕ್ಷ್ಯ ಸಂಗ್ರಹ ಮಾಡಿದ ನಂತರ ಈ ಪ್ರಕರಣದ ಮೂವರು ಕಿಂಗ್‌ ಪಿನ್‌ಗಳ ಬಗ್ಗೆ ದೂರು ನೀಡಲಾಗುತ್ತದೆ ಎಂದು ಮಾಜಿ ಸಚಿವ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಎಸ್‌ಐಟಿ ತನಿಖೆ ಬಗ್ಗೆ ಶನಿವಾರ ಪ್ರತಿಕ್ರಿಯೆ ನೀಡಿರುವ ಅವರು, ನಾವು ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ. ಕಾನೂನು … Continued

೨೫ ಸಾವಿರದ ಸಮೀಪ ತಲುಪಿದ ದೇಶದ ದಿನವೊಂದರ ಕೊರೋನಾ ಪ್ರಕರಣಗಳ ಸಂಖ್ಯೆ ..!

ನವದೆಹಲಿ: ಕಳೆದ 24 ತಾಸಿನಲ್ಲಿ ದೇಶದಲ್ಲಿ 24,882 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇದು ಈ ವರ್ಷದಲ್ಲಿ ದಿನವೊಂದಕ್ಕೆ ದಾಖಲಾಗಿರುವ ಅತೀ ಹೆಚ್ಚು ಸಂಖ್ಯೆಯ ಪ್ರಕರಣಗಳಾಗಿವೆ. ಇದರಲ್ಲಿ ಮಾಹಾರಷ್ಟ್ರದ ಪ್ರಕರಣಗಳೇ ಅಧಿಕ. ಕಳೆದ ಒಂದು ದಿನದಲ್ಲಿ 140 ಸೋಂಕಿತರುಮೃತಪಟ್ಟಿದ್ದಾರೆ. ಈವರೆಗೆ ವರದಿಯಾದ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 1,13,33,728 … Continued

ಬೆಳಗಾವಿಯಿಂದ ಕೊಲ್ಲಾಪುರಕ್ಕೆ ಬಸ್‌ ಸಂಚಾರ ಸ್ಥಗಿತ‌

ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಶುಕ್ರವಾರ ರಾತ್ರಿ ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿಯಲು ಶುರು ಮಾಡಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆಯಿಂದ ಬೆಳಗಾವಿಯಿಂದ ಕೊಲ್ಲಾಪುರಕ್ಕೆ ಸಾರಿಗೆ ಸಂಸ್ಥೆ ಬಸ್‌ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ  ಸ್ಥಗಿತಗೊಳಿಸಲಾಗಿದೆ. ಮಹಾರಾಷ್ಟ್ರದಿಂದಲೂ ಬಸ್‌ಗಳು ಬೆಳಗಾವಿಗೆ ಬರುತ್ತಿಲ್ಲ. ಕೆಲ ದಿನಗಳ ಹಿಂದೆ ಕೊಲ್ಲಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಅಂಗಡಿಗಳು, ಮಳಿಗೆಗಳಲ್ಲಿದ್ದ ಕನ್ನಡದ ನಾಮಫಲಕಗಳಿಗೆ ಮಸಿ … Continued

ಸಿಡಿಗೂ ನನಗೆ ಸಂಬಂಧವೇ ಇಲ್ಲ, ನಾನು ಪ್ರಕರಣ ಹಿಂಪಡೆದಿದ್ದೇನೆ: ಕಲ್ಲಹಳ್ಳಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ರಾಸಲೀಲೆ ಸಿಡಿ ಬಿಡುಗಡೆ ಮಾಡಿ, ಸಚಿವ ಸ್ಥಾನದಿಂದ ಅವರು ಕೆಳಗಿಳಿಯಲು ಪ್ರಮುಖ ಕಾರಣರಾಗಿದ್ದ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಇದೀಗ ತಮಗೂ ಸಿಡಿ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಕಲ್ಲಹಳ್ಳಿ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೂ ನನಗೂ … Continued

ಮುಂಬೈ ಸ್ಫೋಟದ ಆರೋಪಿ ಬಳಿ ಸಿಕ್ಕ ಅಂಬಾನಿಗೆ ಬೆದರಿಕೆ ಹೊಣೆ ಸಂದೇಶದ ಮೊಬೈಲ್..!‌

ಇಂಡಿಯನ್‌ ಮುಜಾಹಿದ್ದೀನ್ (ಭಾರತೀಯ ಮುಜಾಹಿದ್ದೀನ್‌) ಮುಖ್ಯಸ್ಥ ಮತ್ತು 2011ರ ಮುಂಬೈ ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ತೆಹ್ಸೀನ್ ಅಖ್ತರ್ ಸೇರಿದಂತೆ ನಾಲ್ವರು ಭಯೋತ್ಪಾದಕರು ತಿಹಾರ್ ಜೈಲಿನ ಒಳಗಿನಿಂದ ಸೆಲ್‌ಫೋನ್ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲ ಆಂಗ್ಲ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ. ಕಳೆದ ತಿಂಗಳು ಮುಂಬೈನ ಮುಖೇಶ್ ಅಂಬಾನಿಯ ನಿವಾಸದ ಹೊರಗೆ ಜೆಲೆಟಿನ್ ತುಂಡುಗಳೊಂದಿಗೆ … Continued

ಹಂಪಿಯಲ್ಲಿ ಐತಿಹಾಸಿಕ ಕೋಟೆ ಗೋಡೆ ಕುಸಿತ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿನ ಕಮಲ ಮಹಲ್ ಬಳಿ ವಿಜಯ ನಗರದ ರಾಮರಾಯನ ಕೋಟೆ ಅರಮನೆಯ ( ಕಮಲ ಮಹಲ್) ಗೋಡೆ ಕುಸಿದಿದೆ. ಕಮಲ ಮಹಲ್ ಕೋಟೆಯ ಹೊರ ಭಾಗ ಕುಸಿದಿದ್ದು, ಆದರೂ ಯಾವುದೇ ಹೆಚ್ಚಿನ ಹಾನಿ ಸಂಭವಿಸಿಲ್ಲ. ಒಂದು ವೇಳೆ ಒಳಭಾಗದಲ್ಲಿ ಕುಸಿತವಾಗಿದ್ದರೆ ಮತ್ತಷ್ಟು ಸ್ಮಾರಕಗಳಿಗೆ ಹಾನಿಯಾಗುವ ಸಂಭವವಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಇಲ್ಲಿ ಶೌಚಾಲಯ … Continued

ವೀರಪ್ಪ ಮೊಯ್ಲಿಯವರ ಮಹಾಕಾವ್ಯ ‘ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ

ನವ ದೆಹಲಿ: 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಪ್ರಕಟಗೊಂಡಿವೆ. ರಾಜಕಾರಣಿ-ಬರಹಗಾರ ವೀರಪ್ಪ ಮೊಯ್ಲಿ, ಕವಿ ಅರುಂಧತಿ ಸುಬ್ರಮಣಿಯನ್ ಸೇರಿದಂತೆ 20 ಬರಹಗಾರರು 2020ನೇ ಸಾಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೀರಪ್ಪ ಮೊಯ್ಲಿ ಅವರ ಕನ್ನಡದ ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಮಹಾಕಾವ್ಯ ಈ ಪ್ರಶಸ್ತಿಗೆ ಆಯ್ಕೆಯಾಗಿದೆ. ವಿವಿಧ ಭಾಷೆಗಳ ಏಳು ಕವನ … Continued

 ಪಂಚಮಸಾಲಿ ೨ಎಗೆ ಸೇರ್ಪಡೆ: ಮಾ.೨೨ರಂದು ಸಾಕ್ಷ್ಯಾಧಾರ ಸಲ್ಲಿಸಲು ಕೂಡಲಸಂಗಮ ಶ್ರೀ -ವಚನಾನಂದ ಶ್ರೀಗಳಿಗೆ ಆಯೋಗದಿಂದ ಪತ್ರ

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ೨ಎಗೆ ಸೇರ್ಪಡೆ ಮಾಡುವ ಕುರಿತು ಶ್ರೀ ಜಯ ಬಸವ ಮೃತ್ಯುಂಜಯ ಸ್ವಾಮಿಗಳು ಹಾಗೂ   ವಚನಾನಂದ ಶ್ರೀಗಳಿಗೆ ದಾಖಲೆಗಳನ್ನು ನೀಡುವಂತೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಪತ್ರ ಬರೆದಿದೆ. ಮಾಚ್೯ ೨೨ ರಂದು ( ಸೋಮವಾರ) ಸೂಕ್ತ ಸಾಕ್ಷ್ಯಾಧಾರಗಳನ್ನು ಆಯೋಗಕ್ಕೆ ನೀಡಬೇಕೆಂದು ಕೂಡಲಸಂಗಮದ ಜಯ ಬಸವ ಮೃತ್ಯುಂಜಯ ಶ್ರೀಗಳು ಹಾಗೂ … Continued

ಮಹಾರಾಷ್ಟ್ರ: 16 ಸಾವಿರದ ಸಮೀಪಕ್ಕೆ ಬಂದ ಪ್ರತಿದಿನದ ಕೊರೊನಾ ಪ್ರಕರಣ…!

ಮುಂಬೈ: ಮಹಾರಾಷ್ಟ್ರದಲ್ಲಿ ಶುಕ್ರವಾರ (ಮಾರ್ಚ್ 12) 15,817 ಹೊಸ ಕೊವಿಡ್‌-19 ಪ್ರಕರಣಗಳು ವರದಿಯಾಗಿವೆ. ಈ ವರ್ಷ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನದಲ್ಲಿ 15 ಸಾವಿರ ಕೊವಿಡ್‌-19 ಪ್ರಕರಣಗಳು ದಾಖಲಾಗಿವೆ. ಈ ವರ್ಷದ ಹಿಂದಿನ ಏಕದಿನದ ಗರಿಷ್ಠ ಏರಿಕೆ ಮಾರ್ಚ್ 11 ರ ಗುರುವಾರ 14,317 ಆಗಿತ್ತು. ದಿನದಲ್ಲಿ 56 ಕೊವಿಡ್‌-19 ಸಾವುಗಳು ದಾಖಲಾಗಿದ್ದು, … Continued

ಬಳ್ಳಾರಿಗೂ ಬಂತು ಆಫ್ರಿಕಾ ರೂಪಾಂತರಿ ಕೊರೊನಾ..!

ಬಳ್ಳಾರಿ : ದುಬೈನಿಂದ ಬಳ್ಳಾರಿಗೆ ಬಂದ ಇಬ್ಬರಿಗೆ ಕೊರೊನಾ ದೃಢಪಟ್ಟಿದ್ದು, ಒಬ್ಬರಿಗೆ  ಆಫ್ರಿಕಾ ರೂಪಾಂತರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವಿಷಯವನ್ನು ಜಿಲ್ಲಾಧಿಕಾರಿ ಪವನಕುಮಾರ ಜೈನ್‌ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ಪವನ್‌ಕುಮಾರ್ ಜೈನ್, ದುಬೈನಿಂದ ಈ ಇಬ್ಬರು ವ್ಯಕ್ತಿಗಳು ಬೆಂಗಳೂರಿಗೆ ಬಂದ ವೇಳೆ ಅವರಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಕೆಲ … Continued