ಕನಿಷ್ಠ ಬೆಂಬಲ ಬೆಲೆ ಇತ್ತು, ಇದೆ, ಮುಂದೆಯೂ ಇರಲಿದೆ: ರೈತರಿಗೆ ಪ್ರಧಾನಿ ಅಭಯ

ಕೃಷಿ ಕಾನೂನುಗಳನ್ನು ಹಸಿರು ಕ್ರಾಂತಿಯೊಂದಿಗೆ ಹೋಲಿಸಿದ ಪ್ರಧಾನಿ   ನವ ದೆಹಲಿ; ಕೃಷಿ ಉತ್ಪನ್ನಕ್ಕೆ ಕನಿಷ್ಠ ಬೆಂಬಲ ಬೆಲೆ ಇತ್ತು, ಇದೆ, ಮುಂದೆಯೂ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಪುನಃ ಆಶ್ವಾಸನೆ ನೀಡಿದರು. ರಾಷ್ಟ್ರಪತಿ ಭಾಷಣಕ್ಕೆ ಅಭಿನಂದನಾ ಚರ್ಚೆಯಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ನಾವು ಈ ಸಮಯವನ್ನು ಕಳೆದುಕೊಳ್ಳಬಾರದು, ಪ್ರಗತಿ ಹೊಂದಬೇಕು, … Continued

ರೈತರ ಪ್ರತಿಭಟನೆ: 1,178 ಖಾತೆ ತೆಗೆಯಲು ಟ್ವಿಟರ್‌ಗೆ ಕೇಂದ್ರ ಸರ್ಕಾರದ ಸೂಚನೆ

ನವ ದೆಹಲಿ: ರೈತರ ಪ್ರತಿಭಟನೆಯ ಸುತ್ತಲಿನ ‘ಟೂಲ್‌ಕಿಟ್’ ವಿವಾದದ ಮಧ್ಯೆ, ರೈತರ ಆಂದೋಲನದ ಬಗ್ಗೆ ತಪ್ಪು ಮಾಹಿತಿ ಮತ್ತು ಪ್ರಚೋದನಕಾರಿ ವಿಷಯ ಹರಡುವ 1,178 “ಪಾಕಿಸ್ತಾನಿ-ಖಲಿಸ್ತಾನಿ ಖಾತೆಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರವು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ಗೆ ನಿರ್ದೇಶನ ನೀಡಿದೆ” ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಟ್ವಿಟರ್ ಇನ್ನೂ ಆದೇಶಗಳನ್ನು ಸಂಪೂರ್ಣವಾಗಿ ಪಾಲಿಸಿಲ್ಲ. ರೈತ ಸಂಘಗಳ … Continued

ಉತ್ತರಾಖಂಡದಲ್ಲಿ ಹಿಮಪದರ ಕುಸಿತ: ೨೬ ಸಾವು, 15 ಜನರ ರಕ್ಷಣೆ

ಉತ್ತರಾಖಂಡ: ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟಗೊಂಡ ನಂತರ ಉತ್ತರಾಖಂಡದ ತಪೋವನ್ ಜಲ-ವಿದ್ಯುತ್ ಶಕ್ತಿ ಅಣೆಕಟ್ಟು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ ಎಂದು ಭಾರತೀಯ ವಾಯುಪಡೆಯ ಆರಂಭಿಕ ವರದಿಯಲ್ಲಿ ತೋರಿಸಲಾಗಿದೆ. ಧೌಲಿ ಗಂಗಾ ಮತ್ತು ರಿಷಿ ಗಂಗಾ ನದಿಗಳ ಸಂಗಮದಲ್ಲಿರುವ ಅಣೆಕಟ್ಟು ಸಂಪೂರ್ಣವಾಗಿ ನಾಶವಾಗಿದೆ ಎಂದು ಸಮೀಕ್ಷೆಯ ಚಿತ್ರಗಳು ತೋರಿಸಿದೆ. ಮಲಾರಿ ಕಣಿವೆಯ ಪ್ರವೇಶದ್ವಾರದಲ್ಲಿ ಮತ್ತು ತಪೋವನ್ ಬಳಿಯಿರುವ … Continued

ಕಾಂಗ್ರೆಸ್‌ ಹೆಗಲ ಮೇಲೆ ಬಂದೂಕಿಟ್ಟು ಸ್ವಪಕ್ಷೀಯರಿಗೆ ಗುರಿ ಇಟ್ಟ ಬಿಎಸ್‌ವೈ

ಕಾಂಗ್ರೆಸ್‌ ಅನ್ನು ರಾಜ್ಯದಲ್ಲಿ ಶಾಶ್ವತವಾಗಿ ಪ್ರತಿಪಕ್ಷದಲ್ಲಿರುವಂತೆ ಮಾಡುತ್ತೇನೆ… ಮುಂದಿನ ಚುನಾವಣೆಯಲ್ಲಿ ೧೫೦ ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಅಧಿಕಾರಕ್ಕೆ ತರುತ್ತೇನೆ. ನಾನು ಅನೇಕ ಸವಾಲುಗಳನ್ನು ಎದುರಿಸಿ, ಮೆಟ್ಟಿನಿಂತು ಮುಖ್ಯಮಂತ್ರಿಯಾಗಿದ್ದೇನೆ…ಕಳೆದ ೬ ತಿಂಗಳಿನಿಂದ ಪ್ರತಿಪಕ್ಷದ ನಾಯಕರು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಈಗ ರಾಜೀನಾಮೆ ಕೊಡ್ತಾರೆ, ಆಗ ರಾಜೀನಾಮೆ ಕೊಡ್ತಾರೆ ಎಂದು ಹೇಳುತ್ತಲೇ ಬಂದಿದ್ದಾರೆ… ಆದರೆ ಪ್ರಧಾನಿ ಮೋದಿ ಹಾಗೂ … Continued

ರೈತರ ಹೋರಾಟ: ಮೋದಿ ಸರ್ಕಾರಕ್ಕೆ ಉಗುಳಲೂ ಆಗದ ನುಂಗಲೂ ಆಗದ ತುತ್ತು

ಕೇಂದ್ರದ ಮೋದಿ ಸರ್ಕಾರವು ಕೃಷಿ ಕಾನೂನುಗಳ ಯುದ್ಧದಲ್ಲಿ ಕೆಲವಷ್ಟನ್ನು ಕಳೆದುಕೊಂಡಿದೆ, ಆದರೆ ಕಳೆದುಕೊಂಡಿದ್ದನ್ನು ಮರೆಮಾಚಲು ಮುಗಿದು ಹೋಗಿದ್ದ ಹಾಗೂ ಮುಗಿಯಲೇ ಬೇಕಾಗಿದ್ದ ಸಿಖ್ ಪ್ರತ್ಯೇಕತಾವಾದಿ ವಿಷಯವನ್ನುಮತ್ತೆ ಮುನ್ನೆಲೆಗೆ ತರುವ ದುಸ್ಸಾಹಸಕ್ಕೆ ಕೈ ಹಾಕಿದೆ. ಈಗ ರೈತರ ಪ್ರತಿಭಟನೆಗೆ ಮೂರು ತಿಂಗಳಾಗಿದೆ. ದೆಹಲಿಯ ಹೊರವಲಯದಲ್ಲಿ ರೈತರು ನಿರಂತರವಾಗಿ ಒಂದೇ ಸಮನೆ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರದ … Continued

ರಾಜೀವ ಹಂತಕರ ಬಿಡುಗಡೆ ವಿಷಯ: ತಮಿಳುನಾಡು ರಾಜಕೀಯದಲ್ಲಿ ಮತ್ತೆ ಮುನ್ನೆಲೆಗೆ

ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮಾಜಿ ಪ್ರಧಾನಿ ದಿ.ರಾಜೀವ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಬಿಜೆಪಿ ಹಾಗೂ ಕೇಂದ್ರದ ಮೇಲೆ ತಮಿಳುನಾಡಿನ ಎಐಎಡಿಎಂಕೆ ಸರ್ಕಾರದ ಒತ್ತಡ ಹೆಚ್ಚಾಗುತ್ತಿದೆ. ರಾಜೀವ ಗಾಂಧಿ ಹಂತಕರನ್ನು ಬಿಡುಗಡೆ ಮಾಡಬೇಕು ಎಂದು ತಮಿಳುನಾಡಿನ ಆಡಳಿತಾರೂಢ ಪಕ್ಷವಾದ ಎಐಎಡಿಎಂಕೆ ಪಕ್ಷ ಕೇಂದ್ರದ ಬಿಜೆಪಿ ನೇತೃತ್ವದ ಪಕ್ಷವನ್ನು ಒತ್ತಾಯಿಸುತ್ತಿದ್ದು, ಇದರಿಂದ ರಾಜಕೀಯವಾಗಿ … Continued

ಪಾಕಿಸ್ಥಾನದಲ್ಲಿ ಈಗ ಗೋವಿನ ಜಪ…!

ಯೂಟ್ಯೂಬ್, ಟ್ವಿಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಭಾರತ-ಪಾಕಿಸ್ತಾನದ ‘ಕಾಮೆಂಟ್‌ʼಗಳ ಯುದ್ಧದಲ್ಲಿ ಹಸುವಿನ ಮಲ-ಮೂತ್ರದ ಬಗ್ಗೆ ಭಾರತೀಯರನ್ನು ಜರೆಯುತ್ತಿದ್ದ ಪಾಕಿಸ್ಥಾನ ಈಗ ಇದೇ ಹಾದಿಯಲ್ಲಿ ಹೆಜ್ಜೆ ಇಟ್ಟಿದೆ..!! ಈಗ ಪಾಕಿಸ್ಥಾನದಲ್ಲಿ ಕೋಷ್ಟಕಗಳು ತಿರುಗಲಾರಂಭಿಸಿವೆ. ಭಾರತ ಮಾತ್ರವಲ್ಲ, ಪಾಕಿಸ್ಥಾನ ಕೂಡ ಇದೇ ಹಾದಿ ಅನುಸರಿಸಲು ಆರಂಭಿಸದೆ ಎಂದರೆ ಯಾರೂ ನಂಬುವುದಿಲ್ಲ. ಆದರೆ ಪಾಕಿಸ್ಥಾನ ಸಹ ಭಾರತವನ್ನು ಇದೇ ಹಾದಿಯಲ್ಲಿ ಅನುಸರಿಸಲು … Continued

ಭಾರತದ ಲಸಿಕೆ ರಾಜತಾಂತ್ರಿಕತೆಗೆ ಚೀನಾ ಸವಾಲು..?

ಬೀಜಿಂಗ್:   ಜಾಗತಿಕ ಕೋವಾಕ್ಸ್ ಉಪಕ್ರಮಕ್ಕೆ 10 ಮಿಲಿಯನ್ ಡೋಸ್ ಕೋವಿಡ್ -19 ಲಸಿಕೆ ನೀಡುವುದಾಗಿ ಚೀನಾ ಬುಧವಾರ ಹೇಳಿದೆ. ಏಕೆಂದರೆ ಕೋವಿಡ್ಲ‌ ಸಿಕೆ ವಿತರಣೆಗೆ ಭಾರತವು “ಎಂಜಿನ್” ಆಗಬಹುದು ಎಂಬ ತಜ್ಞರ ಅಭಿಪ್ರಾಯದ ನಡುವೆ ಚೀನಾ ತನ್ನ ಲಸಿಕೆ ರಾಜತಾಂತ್ರಿಕತೆ ಬಲಪಡಿಸಲು  ಪ್ರಯತ್ನಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)  ಕೋವಾಕ್ಸ್ ಉಪಕ್ರಮಕ್ಕೆ ತುರ್ತು ಅನುಮೋದನೆಗೆ ತಯಾರಿ ನಡೆಸಿರುವಾಗ  … Continued

ಇಂಡಿಯಾ ಟುಗೆದರ್‌: ಕೇಂದ್ರ ಸಚಿವರಿಂದ ಸೋಶಿಯಲ್‌ ಮೀಡಿಯಾ ಚಳವಳಿ

ನವ ದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ   ರೈತರ ಪ್ರತಿಭಟನೆಗೆ ‘ಅಂತಾರಾಷ್ಟ್ರೀಯ ಪ್ರಚೋದನೆ’ ಖಂಡಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರದ ಎಲ್ಲ ಸಚಿವರು    ಈ ಹೇಳಿಕೆ ಖಂಡಿಸಿ  # ಇಂಡಿಯಾ ಟುಗೆದರ್ ಮತ್ತು # ಇಂಡಿಯಾ ಅಗೆನೆಸ್ಟ್‌ ಪ್ರೊಪಗೆಂಡ ಎಂಬ ಸಾಮಾಜಿಕ ಜಾಲತಾಣದ ಚಳವಳಿ ಆರಂಭಿಸಿದ್ದಾರೆ. ‌ ಇದು ಸಾಮಾಜಿಕ ಮಾಧ್ಯಮದ … Continued

ರಿಲಯನ್ಸ್, ಟಾಟಾ, ಮಹೀಂದ್ರಾ ಒಂದುಗೂಡಿಸಲಿರುವ ಹಸಿರು ಇಂಧನ?

ಭಾರತವು ಭೂಮಿಯ ಮೇಲಿನ ಹೇರಳವಾಗಿರುವ ಅಂಶಗಳಲ್ಲಿ ಒಂದಾದ ಹೈಡ್ರೋಜನ್ ಅನ್ನು ಬಂಡವಾಳವಾಗಿಸಲು ಯೋಜಿಸುತ್ತಿದೆ. ಸಾರ್ವತ್ರಿಕವಾಗಿ ಲಭ್ಯವಿರುವ ಈ ಅಂಶದಿಂದ ಲಾಭ ಪಡೆಯಲು ಹಣಕಾಸು ಸಚಿವರಾದ ನಿರ್ಮಲಾ  ಸೀತಾರಾಮನ್‌  2021-22ರ ಬಜೆಟ್ ಸಮಯದಲ್ಲಿ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಘೋಷಿಸಿದ್ದಾರೆ. ಹಸಿರು ಇಂಧನ ಮೂಲವು ಭಾರತದ ಕೆಲವು ದೊಡ್ಡ ಕಂಪನಿಗಳಾದ ರಿಲಯನ್ಸ್, ಟಾಟಾ, ಮಹೀಂದ್ರಾ ಮತ್ತು ಇಂಡಿಯನ್ ಆಯಿಲ್ … Continued