ವೀಡಿಯೊ…| ತನ್ನ ದಾಳಿಯಲ್ಲಿ ಸಾಯುವ ಮೊದಲು ಹಮಾಸ್ ಮುಖ್ಯಸ್ಥನ ಅಂತಿಮ ಕ್ಷಣದ ಡ್ರೋನ್ ದೃಶ್ಯ ಬಿಡುಗಡೆ ಮಾಡಿದ ಇಸ್ರೇಲ್‌

ಇಸ್ರೇಲಿ ಪಡೆಗಳು ಡ್ರೋನ್ ದೃಶ್ಯಗಳನ್ನು ಬಿಡುಗಡೆ ಮಾಡಿದ್ದು, ಇದು ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಇಸ್ರೇಲಿ ದಾಳಿಯಲ್ಲಿ ಸಾಯುವ ಮೊದಲು ಅವರ ಅಂತಿಮ ಕ್ಷಣಗಳನ್ನು ತೋರಿಸುತ್ತದೆ ಎಂದು ಇಸ್ರೇಲಿ ಪಡೆಗಳು ಹೇಳಿಕೊಂಡಿದೆ. ಶೆಲ್ ದಾಳಿಯಿಂದ ಗೋಡೆಗಳು ಹಾರಿಹೋಗಿರುವ ಪಾಳುಬಿದ್ದ ಗಾಜಾ ಅಪಾರ್ಟ್‌ಮೆಂಟ್‌ನಲ್ಲಿ ಗಾಯಗೊಂಡಿರುವ ಸಿನ್ವಾರ್ ‘ಸೋಫಾದ ಮೇಲೆ ಕುಳಿತುಕೊಂಡಿರುವುದನ್ನು’ ಇದು ತೋರಿಸುತ್ತದೆ. ಅವರ ಬಲಗೈಗೆ ತೀವ್ರವಾಗಿ … Continued

ಗಾಜಾ ಕಾರ್ಯಾಚರಣೆ ವೇಳೆ ಹಮಾಸ್ ಮುಖ್ಯಸ್ಥನನ್ನು ಸಾಯಿಸಿದ್ದೇವೆ : ಇಸ್ರೇಲ್ ವಿದೇಶಾಂಗ ಸಚಿವ

ಜೆರುಸಲೇಂ : ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿ ನಡೆದ ದಾಳಿಯ ಮಾಸ್ಟರ್ ಮೈಂಡ್ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಅವರನ್ನು ಗುರುವಾರ ಗಾಜಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಸ್ರೇಲಿ ಪಡೆಗಳು ಕೊಂದು ಹಾಕಿವೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಅವರು ಪ್ರಕಟಿಸಿದ್ದಾರೆ. “ಅಕ್ಟೋಬರ್ 7 ರ ಹತ್ಯಾಕಾಂಡ ಮತ್ತು ದುಷ್ಕೃತ್ಯಗಳಿಗೆ ಕಾರಣವಾದ … Continued

ಇಸ್ರೇಲ್‌-ಹಮಾಸ್‌ ಯುದ್ಧ: ಹಮಾಸ್ ಸರ್ಕಾರದ ಮುಖ್ಯಸ್ಥ, ಇಬ್ಬರು ಉನ್ನತ ನಾಯಕರು ಸಾವು ; ಇಸ್ರೇಲ್ ಮಿಲಿಟರಿ

ಜೆರುಸಲೇಮ್: ಮೂರು ತಿಂಗಳ ಹಿಂದೆ ನಡೆದ ದಾಳಿಯಲ್ಲಿ ಗಾಜಾದಲ್ಲಿ ಮೂವರು ಹಿರಿಯ ಹಮಾಸ್ ನಾಯಕರು ಸಾವಿಗೀಡಾದ್ದಾರೆ ಎಂದು ಇಸ್ರೇಲಿ ಮಿಲಿಟರಿ ಗುರುವಾರ ಹೇಳಿದೆ. ಅಲ್ಲಿ ಸೇನೆಯು ಸುಮಾರು ಒಂದು ವರ್ಷದಿಂದ ಹಮಾಸ್‌ ಗುಂಪಿನೊಂದಿಗೆ ಹೋರಾಡುತ್ತಿದೆ. ಇಸ್ರೇಲಿ ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸರ್ಕಾರದ ಮುಖ್ಯಸ್ಥರಾದ ರಾವಿ ಮುಶ್ತಾಹಾ ಮತ್ತು ಹಮಾಸ್‌ನ ರಾಜಕೀಯ ಬ್ಯೂರೋದ ಭದ್ರತಾ ಖಾತೆ … Continued

ವೈಮಾನಿಕ ದಾಳಿಯಲ್ಲಿ ಮತ್ತೊಬ್ಬ ಹಿಜ್ಬೊಲ್ಲಾ ಉನ್ನತ ನಾಯಕನನ್ನು ಸಾಯಿಸಿದ್ದೇವೆ ಎಂದು ಘೋಷಿಸಿದ ಇಸ್ರೇಲಿ ಮಿಲಿಟರಿ

ಇರಾನ್ ಬೆಂಬಲಿತ ಸಶಸ್ತ್ರ ಸಂಘಟನೆ ಹಿಜ್ಬೊಲ್ಲಾಗೆ ಮತ್ತೊಂದು ಹಿನ್ನಡೆಯಾಗಿ, ಲೆಬನಾನ್ ರಾಜಧಾನಿ ಬೈರುತ್ ನಲ್ಲಿ ಶನಿವಾರ ರಾತ್ರಿ (ಸೆಪ್ಟೆಂಬರ್ 28) ನಡೆದ ಇಸ್ರೇಲಿನ ವೈಮಾನಿಕ ದಾಳಿಯಲ್ಲಿ ಹಿಜ್ಬೊಲ್ಲಾ ಉಗ್ರಗಾಮಿ ಸಂಘಟನೆಯ ಮತ್ತೊಬ್ಬ ಉನ್ನತ ಕಮಾಂಡರ್ ನಬಿಲ್ ಕೌಕ್ (Nabil Qaouk) ಅವರನ್ನು ಕೊಂದುಹಾಕಿದ್ದೇವೆ ಎಂದು ಇಸ್ರೇಲಿ ಸೇನೆ (IDF) ಪ್ರಕಟಿಸಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ … Continued

ಇಸ್ರೇಲ್‌ ದಾಳಿಯಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ ನಸ್ರಲ್ಲಾ ಜೊತೆ ಇರಾನ್‌ ಮಿಲಿಟರಿಯ ಡೆಪ್ಯೂಟಿ ಕಮಾಂಡರ್‌ ಹತ್ಯೆ…!

ದುಬೈ : ಲೆಬನಾನಿನ ಬೈರುತ್‌ನಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರನ್ನು ಕೊಂದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಇರಾನಿನ ಅರೆಸೈನಿಕ ರೆವುಲ್ಯಶ್ನರಿ ಗಾರ್ಡ್‌ನ ಪ್ರಮುಖ ಜನರಲ್ ಕೊಲ್ಲಲ್ಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮಗಳು ಶನಿವಾರ ವರದಿ ಮಾಡಿವೆ. ಜನರಲ್ ಅಬ್ಬಾಸ್ ನಿಲ್ಫೊರುಶನ್ ಅವರ ಹತ್ಯೆಯು ಇರಾನಿನ ಪ್ರಮುಖ ಮಿಲಟರಿ ಸಾವುನೋವುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಗಾಜಾ ಸ್ಟ್ರಿಪ್ನಲ್ಲಿ … Continued

ವೀಡಿಯೊ..| “ನೀವು ಈ ವೀಡಿಯೊ ವೀಕ್ಷಿಸುವುದನ್ನು ಹಿಜ್ಬೊಲ್ಲಾ ಬಯಸುವುದಿಲ್ಲ…”: ಇಸ್ರೇಲ್ ರಕ್ಷಣಾ ಪಡೆಗಳು

ಇಸ್ರೇಲ್ ಡಿಫೆನ್ಸ್ ಫೋರ್ಸಸ್ (IDF) ಲೆಬನಾನ್‌ನೊಳಗೆ ಹಿಜ್ಬೊಲ್ಲಾ ಮೇಲೆ ತನ್ನ ದಾಳಿಗಳನ್ನು ವಿವರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ, ಅಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಹಿಜ್ಬುಲ್ಲಾ ಶಸ್ತ್ರಾಸ್ತ್ರಗಳನ್ನು ಅವಿತು ಇಟ್ಟುಕೊಂಡಿದೆ ಎಂದು ಇಸ್ರೇಲ್‌ ಆರೋಪಿಸಿದೆ. ಲೆಬನಾನಿನ ಮನೆಗಳಲ್ಲಿ ಹಿಜ್ಬೊಲ್ಲಾ ಗುಂಪು ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿದೆ ಎಂದು ಐಡಿಎಫ್‌ (IDF) ಹೇಳಿದೆ. “ಕಳೆದ 20 ವರ್ಷಗಳಿಂದ, ಹಿಜ್ಬೊಲ್ಲಾ ಗುಂಪು ಲೆಬನಾನ್‌ನಲ್ಲಿನ ಜನಸಂಖ್ಯಾ … Continued

ವಾಯುದಾಳಿಯಲ್ಲಿ ಹಮಾಸ್ ಮಿಲಿಟರಿ ಮುಖ್ಯಸ್ಥ, ಅಕ್ಟೋಬರ್ 7ರ ದಾಳಿಯ ʼಮಾಸ್ಟರ್ ಮೈಂಡ್ʼ ಮೊಹಮ್ಮದ್ ಡೀಫ್ ಹತ್ಯೆ : ಇಸ್ರೇಲ್ ಘೋಷಣೆ

ಗಾಜಾದ ದಕ್ಷಿಣ ಪ್ರದೇಶವಾದ ಖಾನ್ ಯೂನಿಸ್‌ನಲ್ಲಿ ಕಳೆದ ತಿಂಗಳು ನಡೆಸಿದ ದಾಳಿಯಲ್ಲಿ ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೀಫ್ ಕೊಲ್ಲಲ್ಪಟ್ಟಿದ್ದಾನೆ ಎಂದು ಇಸ್ರೇಲಿ ಸೇನೆ ಗುರುವಾರ ಘೋಷಣೆ ಮಾಡಿದೆ. ಟೆಹ್ರಾನ್‌ನಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹತ್ಯೆಯಾಗಿದ್ದಾರೆ ಎಂದು ಇರಾನ್ ರೆವುಲ್ಯಶನರಿ ಗಾರ್ಡ್‌ಗಳು ಮತ್ತು ಹಮಾಸ್‌ ಪ್ರಕಟಿಸಿದ ಒಂದು ದಿನದ ನಂತರ ತಾನು ಹಮಾಸ್ ಮಿಲಿಟರಿ … Continued

ವೀಡಿಯೊ: ಒಳನುಗ್ಗಿ ಹಮಾಸ್‌ ವಶದಲ್ಲಿದ್ದ ಮೂವರು ಒತ್ತೆಯಾಳುಗಳನ್ನು ರಕ್ಷಿಸಿದ ಕ್ಷಣದ ವೀಡಿಯೊ ಬಿಡುಗಡೆ ಮಾಡಿದ ಇಸ್ರೇಲ್

ಇಸ್ರೇಲಿ ಮಿಲಿಟರಿ ವಾರಾಂತ್ಯದಲ್ಲಿ “ಸಂಕೀರ್ಣ ಹಗಲಿನ ಕಾರ್ಯಾಚರಣೆ”ಯಲ್ಲಿ ಗಾಜಾದಲ್ಲಿ ಹಮಾಸ್ ಸೆರೆಯಿಂದ ನಾಲ್ಕು ಒತ್ತೆಯಾಳುಗಳನ್ನು ಪಾರು ಮಾಡಿದ್ದಾರೆ. ನಾಲ್ವರು ಒತ್ತೆಯಾಳುಗಳಲ್ಲಿ ಮೂವರನ್ನು – ಅಲ್ಮೋಗ್ ಮೀರ್ ಜಾನ್, ಆಂಡ್ರೆ ಕೊಜ್ಲೋವ್ ಮತ್ತು ಶ್ಲೋಮಿ ಝಿವ್ ಅವರನ್ನು ರಕ್ಷಿಸಿದ ಕ್ಷಣವನ್ನು ತೋರಿಸುವ ವೀಡಿಯೊವನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಗಾಜಾದಲ್ಲಿ ಹಮಾಸ್‌ನಿಂದ ಮೂವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಅಪಾರ್ಟ್‌ಮೆಂಟ್‌ಗೆ ಇಸ್ರೇಲಿ … Continued

ವೀಡಿಯೊ: ಇಸ್ರೇಲಿ ವಿಮಾನಗಳು ಇರಾನ್‌ ಹಾರಿಸಿದ ನೂರಾರು ಡ್ರೋನ್‌ಗಳು, ಕ್ಷಿಪಣಿಗಳನ್ನು ತಡೆದದ್ದು ಹೇಗೆ..?

ತನ್ನ ಭೂಪ್ರದೇಶದ ಮೇಲೆ ಇರಾನ್ ಹಾರಿಸಿದ ನೂರಾರು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಇಸ್ರೇಲ್‌ ಹೇಗೆ ತಡೆದಿದೆ ಎಂಬುದನ್ನು ತೋರಿಸುವ ವೀಡಿಯೊವನ್ನು ಇಸ್ರೇಲ್ ಭಾನುವಾರ ಹಂಚಿಕೊಂಡಿದೆ. ಇರಾನ್‌ ರಾತ್ರಿ ವೇಳೆ ಇಸ್ರೇಲ್‌ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ ದಾಳಿ ನಡೆಸಿತು. ಏಪ್ರಿಲ್ 1 ರಂದು ಡಮಾಸ್ಕಸ್‌ನಲ್ಲಿರುವ ಇರಾನ್‌ ರಾಯಭಾರ ಕಚೇರಿಯ ಮೇಲೆ ನಡೆದ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ … Continued

ಇಸ್ರೇಲ್‌ ದಾಳಿಯಲ್ಲಿ ಕೊಲ್ಲಲ್ಪಟ್ಟ ಹಮಾಸ್ ಉಪ ಸೇನಾ ನಾಯಕ : ವರದಿ

ಗಾಜಾದಲ್ಲಿ ಹಮಾಸ್‌ನ ಮಿಲಿಟರಿ ವಿಭಾಗದ ಉಪ ಕಮಾಂಡರ್ ಮತ್ತು ದಕ್ಷಿಣ ಇಸ್ರೇಲ್‌ನ ಅಕ್ಟೋಬರ್ 7 ರ ದಾಳಿಯ ಮಾಸ್ಟರ್‌ಮೈಂಡ್ ಆಗಿರುವ ಮಾರ್ವಾನ್ ಇಸ್ಸಾ ಒಂದು ವಾರದ ಹಿಂದೆ ಇಸ್ರೇಲಿ ವೈಮಾನಿಕ ದಾಳಿಯ ನಂತರ ಮೃತಪಟ್ಟಿದ್ದಾರೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಹಮಾಸ್‌ನ ಅತ್ಯುನ್ನತ ಶ್ರೇಣಿಯ ಅಧಿಕಾರಿಗಳಲ್ಲಿ ಒಬ್ಬರಾದ ಮಾರ್ವಾನ್ ಇಸ್ಸಾ ಮಾರ್ಚ್ 11 ರಂದು … Continued