ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಎರಡನೇ ವಿಮಾನ ಇಂದು ಅಮೃತಸರಕ್ಕೆ ಆಗಮನ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ವಿರುದ್ಧದ ಕ್ರಮಕೈಗೊಳ್ಳುವ ಭಾಗವಾಗಿ ಎರಡನೇ ಸುತ್ತಿನ ಗಡೀಪಾರುಗಳಲ್ಲಿ, 119 ಅಕ್ರಮ ಭಾರತೀಯ ವಲಸಿಗರು ಶನಿವಾರ ಅಮೆರಿಕದ ಮಿಲಿಟರಿ ವಿಮಾನದಲ್ಲಿ ಪಂಜಾಬ್‌ನ ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಸಿ-17 ಅಮೆರಿಕ ಮಿಲಿಟರಿ ವಿಮಾನವು ಪಂಜಾಬ್‌ನಿಂದ 67, ಹರಿಯಾಣದಿಂದ 33, ಗುಜರಾತ್‌ನಿಂದ ಎಂಟು, ಉತ್ತರ ಪ್ರದೇಶದ ಮೂವರು, … Continued

ಟ್ರಂಪ್‌-ಮೋದಿ ಭೇಟಿ | 5ನೇ ಜನರೇಷನ್‌ ಜೆಟ್‌, ಮಿಷನ್‌ 500…; ಭಾರತ-ಅಮೆರಿಕದ ಮಧ್ಯೆ ಹಲವಾರು ಒಪ್ಪಂದಗಳು…

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ಭೇಟಿಯಾಗಿ ರಕ್ಷಣೆ, ವ್ಯಾಪಾರ, ತಂತ್ರಜ್ಞಾನ ಮತ್ತು ಇಂಧನಕ್ಕೆ ಸಂಬಂಧಿಸಿದ ವಿಷಯಗಳ ಉನ್ನತ ಮಟ್ಟದ ಚರ್ಚೆ ನಡೆಸಿದರು. ಭಾರತ ಸೇರಿದಂತೆ ಅಮೆರಿಕದ ಎಲ್ಲಾ ವ್ಯಾಪಾರ ಪಾಲುದಾರರನ್ನು ಗುರಿಯಾಗಿಸಿಕೊಂಡು ಅಧ್ಯಕ್ಷ ಟ್ರಂಪ್ ಹೊಸ ಪರಸ್ಪರ ಸುಂಕ ನೀತಿಯನ್ನು ಘೋಷಿಸಿದ ಕೆಲವೇ ಗಂಟೆಗಳ ನಂತರ … Continued

ಪಾಕಿಸ್ತಾನ ಸೇನೆಯಿಂದ ಕದನ ವಿರಾಮ ಉಲ್ಲಂಘನೆ ; ಭಾರತದ ಸೇನೆಯ ಪ್ರತ್ಯುತ್ತರಕ್ಕೆ ಶತ್ರು ಪಡೆಗಳಲ್ಲಿ ಭಾರೀ ಸಾವು ನೋವುಗಳು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಭಾರತೀಯ ಪೋಸ್ಟ್‌ಗಳ ಮೇಲೆ ಪಾಕಿಸ್ತಾನ ಸೇನಾ ಪಡೆಗಳು ಬುಧವಾರ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮವನ್ನು ಉಲ್ಲಂಘಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿದ ನಂತರ ಭಾರತೀಯ ಸೇನೆಯ ಇದಕ್ಕೆ ಸೂಕ್ತ ಉತ್ತರ … Continued

ವಿಶ್ವದ ಅತ್ಯಂತ ಭ್ರಷ್ಟ ರಾಷ್ಟ್ರಗಳ ಪಟ್ಟಿ ಬಿಡುಗಡೆ ; ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ…?

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಬಿಡುಗಡೆ ಮಾಡಿದ 2024 ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (Corruption Perceptions Index) ಪ್ರಕಾರ ಭಾರತವು ವಿಶ್ವದ 100 ಅತ್ಯಂತ ಭ್ರಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ ಈ ವರ್ಷ, ಭಾರತವು 180 ದೇಶಗಳಲ್ಲಿ 96 ನೇ ಶ್ರೇಯಾಂಕದಲ್ಲಿದೆ. , ಅದರ 2023 ರ ಶ್ರೇಯಾಂಕದಿಂದ ಮೂರು ಸ್ಥಾನಗಳಷ್ಟು … Continued

ಆನ್‌ಲೈನ್‌ ಪ್ರೇಮಿಗಾಗಿ ಗಡಿದಾಟಿ ಪಾಕಿಸ್ತಾನಕ್ಕೆ ಹೋದ ಯುವಕ, ಇಸ್ಲಾಂಗೆ ಮತಾಂತರ, ಆದ್ರೆ ಆತನನ್ನು ತಿರಸ್ಕರಿಸಿದ ಪ್ರೇಮಿಕಾ : ಮುಂದಾಗಿದ್ದು…

ಉತ್ತರ ಪ್ರದೇಶದ 20 ವರ್ಷದ ವ್ಯಕ್ತಿಯೊಬ್ಬ ತನ್ನ ಆನ್‌ಲೈನ್‌ ಪ್ರೇಮಿಯನ್ನು ಹುಡುಕಲು ಗಡಿದಾಟಿ ಪಾಕಿಸ್ತಾನಕ್ಕೆ ಹೋಗಿದ್ದಾನೆ…! ಆದರೆ ಅದು ಆತ ಪಾಕಿಸ್ತಾನದಲ್ಲಿ ಜೈಲು ಶಿಕ್ಷೆಗೆ ಒಳಗಾಗುವ ಸಾಧ್ಯತೆಯನ್ನು ತಂದೊಡ್ಡಿದೆ…! ಗಡಿದಾಟಿ ಪಾಕಿಸ್ತಾನಕ್ಕೆ ಹೋದ ನಂತರ ಆತನ ಆನ್‌ಲೈನ್ ಪ್ರೇಮಿ ಮದುವೆಯ ಪ್ರಸ್ತಾಪವನ್ನು ತಿರಸ್ಕರಿದ್ದಾಳೆ, ಆಕೆಯ ತಿರಸ್ಕಾರದ ನಂತರ ಮಾನಸಿಕವಾಗಿ ಘಾಸಿಕೊಂಡ ಆತನಿಗೆ ಈಗ ಸಂಭವನೀಯ ಜೈಲು … Continued

ಶೀಘ್ರವೇ 487 ಅಕ್ರಮ ಭಾರತೀಯ ವಲಸಿಗರನ್ನು ಗಡಿಪಾರು ಮಾಡಲಿರುವ ಅಮೆರಿಕ : ಸರ್ಕಾರ

ನವದೆಹಲಿ: ಅಮೆರಿಕದ ಅಧಿಕಾರಿಗಳು ದೇಶದಲ್ಲಿ ನೆಲೆಸಿರುವ ಇನ್ನೂ 487 ಅಕ್ರಮ ಭಾರತೀಯ ವಲಸಿಗರನ್ನು ಗುರುತಿಸಿದ್ದು, ಅವರನ್ನು ಶೀಘ್ರದಲ್ಲೇ ಗಡಿಪಾರು ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಶ್ರಿ ಅವರು, ಗಡಿಪಾರು ಮಾಡಲಿರುವ “487 ಭಾರತೀಯ ಪ್ರಜೆಗಳ” ಬಗ್ಗೆ ಅಮೆರಿಕವು ನವದೆಹಲಿಗೆ ಸೂಚನೆ ನೀಡಿದೆ ಎಂದು ಹೇಳಿದರು. ಹೆಚ್ಚಿನ … Continued

ಕಾಶ್ಮೀರ ; ಪಾಕಿಸ್ತಾನದ 7 ನುಸುಳುಕೋರರ ಹತ್ಯೆ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಶುಕ್ರವಾರ ಏಳು ಪಾಕಿಸ್ತಾನಿ ನುಸುಳುಕೋರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಕೃಷ್ಣ ಘಾಟಿ ಪ್ರದೇಶದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ನುಸುಳುಕೋರರು ಹತರಾಗಿದ್ದಾರೆ ಎಂದು ವರದಿಯಾಗಿದೆ. ಅಲ್-ಬದ್ರ್ ಉಗ್ರಗಾಮಿಗಳು ಮತ್ತು ಪಾಕಿಸ್ತಾನಿ ಸೇನಾ ಸಿಬ್ಬಂದಿ ಸೇರಿದಂತೆ ಏಳು ಪಾಕಿಸ್ತಾನಿ ನುಸುಳುಕೋರರು ಕೊಲ್ಲಲ್ಪಟ್ಟರು. ಫೆಬ್ರವರಿ 4 ಮತ್ತು … Continued

ವೀಡಿಯೊ..| ಸರಪಳಿ ಹಾಕಿರುವ ಭಾರತೀಯ ವಲಸಿಗರ ವೀಡಿಯೊ ಹಂಚಿಕೊಂಡ ಅಮೆರಿಕ : ಏಲಿಯನ್‌ ಗಳನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದ ಅಧಿಕಾರಿ

ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಮುಖ್ಯಸ್ಥ ಮೈಕೆಲ್ ಡಬ್ಲ್ಯೂ ಬ್ಯಾಂಕ್ಸ್ ಗುರುವಾರ ತಮ್ಮ ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ 104 ಭಾರತೀಯರನ್ನು ಗಡೀಪಾರು ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಭಾರತದ ವಿವಿಧ ರಾಜ್ಯಗಳಿಂದ 104 ಅಕ್ರಮ ವಲಸಿಗರನ್ನು ಬುಧವಾರ ಅಮೆರಿಕ ಮಿಲಿಟರಿ ವಿಮಾನದಲ್ಲಿ ಕರೆತರಲಾಯಿತು. ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರವು ಅಕ್ರಮ ವಲಸಿಗರ ವಿರುದ್ಧ ದಮನ ಕಾರ್ಯಾಚರಣೆಯ … Continued

ಅಮೆರಿಕದಿಂದ ಭಾರತೀಯ ಅಕ್ರಮ ವಲಸಿಗರ ಗಡಿಪಾರು : ಕೈಗೆ ಕೋಳ, ಕಾಲಿಗೆ ಬೇಡಿ…!

ಚಂಡೀಗಢ: ಅಮೆರಿಕಾದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯ ವಲಸಿಗರ ಗಡೀಪಾರು ಪ್ರಕ್ರಿಯೆಯ ಭರದಿಂದ ಸಾಗಿದ್ದು. ಬುಧವಾರ ಅಮೆರಿಕಾದಿಂದ 104 ಮಂದಿ ಭಾರತೀಯ ವಲಸಿಗರನ್ನು ಭಾರತಕ್ಕೆ ವಾಪಸ್ ಕಳುಹಿಸಿ ಕೊಡಲಾಗಿದೆ. ಅಮೆರಿಕಾ ಸೇನೆಯು ಅಕ್ರಮ ವಲಸಿಗರ ಕೈಗೆ ಕೋಳ, ಕಾಲಿಗೆ ಬೇಡಿ ಹಾಕಿ ಸಿ-17 ಗ್ಲೋಬ್ ಮಾಸ್ಟರ್ ವಿಮಾನದಲ್ಲಿ ಭಾರತಕ್ಕೆ ಕಳುಹಿಸಲಾಗಿದೆ. ಅಮೆರಿಕಾದ ಸೇನಾ ವಿಮಾನ ಬುಧವಾರ ಅಮೃತಸರದಲ್ಲಿ … Continued

ಅಮೆರಿಕದಿಂದ ಗಡೀಪಾರು: ಅಮೆರಿಕ ಮಿಲಿಟರಿ ವಿಮಾನದಲ್ಲಿ ಅಮೃತಸರಕ್ಕೆ ಬಂದಿಳಿದ ಭಾರತೀಯರು

ಅಮೃತಸರ: ಅಕ್ರಮ ವಲಸಿಗರ ವಿರುದ್ಧದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಭಿಯಾನದ ಭಾಗವಾಗಿ ಗಡೀಪಾರು ಮಾಡಲಾದ 104 ಭಾರತೀಯರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನವು ಅಮೃತಸರಕ್ಕೆ ಬಂದಿಳಿದಿದೆ. C-17 ಮಿಲಿಟರಿ ವಿಮಾನವು ಮಂಗಳವಾರ ಟೆಕ್ಸಾಸ್‌ನ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. ವಿಮಾನದಲ್ಲಿ ಗಡೀಪಾರು ಮಾಡಿದ ಪ್ರತಿಯೊಬ್ಬ ಭಾರತೀಯ ಪ್ರಜೆಯನ್ನು “ಪರಿಶೀಲಿಸಲಾಗಿದೆ” ಎಂದು ಮೂಲಗಳು ತಿಳಿಸಿವೆ. … Continued