ವೀಡಿಯೊ…| ಲಡಾಖ್‌ ನಿಂದ ಭೂಮಿ ತಿರುಗುವಿಕೆಯ ಅತ್ಯದ್ಭುತ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿದ ಭಾರತೀಯ ಖಗೋಳಶಾಸ್ತ್ರಜ್ಞ

ಭಾರತೀಯ ಖಗೋಳಶಾಸ್ತ್ರಜ್ಞ ಡೋರ್ಜೆ ಆಂಗ್ಚುಕ್ ಅವರು ಲಡಾಖಿನ ಭೂದೃಶ್ಯದ ವಿರುದ್ಧ ಭೂಮಿಯ ತಿರುಗುವಿಕೆಯನ್ನು ತೋರಿಸುವ ಅದ್ಭುತ ದೃಶ್ಯವನ್ನು ವೀಡಿಯೊದಲ್ಲಿ ಸೆರೆಹಿಡಿದಿದ್ದಾರೆ. ಹಾನ್ಲೆಯಲ್ಲಿರುವ ಭಾರತೀಯ ಖಗೋಳ ವೀಕ್ಷಣಾಲಯದಿಂದ ಇದನ್ನು ಚಿತ್ರೀಕರಿಸಲಾಗಿದೆ. ವೀಡಿಯೊ ತುಣುಕು ಭೂಮಿಯ ಚಲನೆಯ ವಿಶಿಷ್ಟ ದೃಶ್ಯವನ್ನು ತೋರಿಸುತ್ತದೆ. ಕ್ಷೀರಪಥ(Milky Way)ವು ರಾತ್ರಿಯ ಆಕಾಶದಲ್ಲಿ ಸ್ಥಿರವಾಗಿ ಗೋಚರಿಸುತ್ತದೆ. ವೀಕ್ಷಣಾಲಯದಲ್ಲಿ ಇಂಜಿನಿಯರ್-ಇನ್-ಚಾರ್ಜ್ ಆಗಿರುವ ಆಂಗ್ಚುಕ್ ತನ್ನ ಯೋಜನೆಯನ್ನು … Continued

“ಕ್ಷಮಿಸಿ, ಅದು…” : ಅರುಣಾಚಲ ಪ್ರದೇಶ, ಈಶಾನ್ಯ ರಾಜ್ಯಗಳ ಕುರಿತ ಪ್ರಶ್ನೆಗೆ ಉತ್ತರಿಸದೆ ನುಣುಚಿಕೊಂಡ ಚೀನಾದ ಡೀಪ್‌ ಸೀಕ್ ಎಐ

ಆರಿಟಿಫಿಶಿಯಲ್‌ ಇಂಟೆಲಿಜೆನ್ಸ್‌ ಚೀನಾದ ಡೀಪ್‌ಸೀಕ್‌ ಎಐ (DeepsSeek AI) ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಚಾಟ್‌ ಜಿಪಿಟಿ (GPT) ಯಂತಹ AI ಚಾಟ್‌ಬಾಟ್ ದೈತ್ಯರ ವಿರುದ್ಧ ಇದು ಸ್ಪರ್ಧೆಗೆ ಇಳಿದಿದೆ. ಓಪನ್​ ಎಐ, ಗೂಗಲ್, ಮೈಕ್ರೋಸಾಫ್ಟ್ ಮೊದಲಾದ ಸಂಸ್ಥೆಗಳು ಹೊಸ ಸ್ಪರ್ಧೆಗೆ ಸಜ್ಜಾಗಬೇಕಿದೆ. ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಅದು ಕಡಿಮೆ ಬೆಲೆಯ ಕಾರಣಕ್ಕೆ ಜನಪ್ರಿಯವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ … Continued

ವೀಡಿಯೊ..| ಹಿಂದಿ ಸಿನೆಮಾದ ಕುಛ್‌ ಕುಛ್‌ ಹೋತಾ ಹೈ ಹಾಡನ್ನು ವಾದ್ಯ ಸಮೇತ ಹಾಡಿ ಸಂಭ್ರಮಿಸಿದ ಇಂಡೋನೇಷ್ಯಾದ ಅಧಿಕಾರಿಗಳ ನಿಯೋಗ…!

ನವದೆಹಲಿ: ಇಂದು (ಜನವರಿ 26) ದೇಶದೆಲ್ಲೆಡೆ ಗಣರಾಜ್ಯೋತ್ಸವದ ಸಂಭ್ರಮಾಚರಣೆ ನಡೆದಿದೆ. ಈ ಬಾರಿ ಗಣರಾಜ್ಯೋತ್ಸವ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋ ಸುಬಿಯಂತೋ(Prabowo Subianto) ಆಗಮಿಸಿದ್ದಾರೆ. ಪ್ರಬೋ ಸುಬಿಯಂತೋ ಮತ್ತು ಅವರ ಜೊತೆಗಿದ್ದ ಅಧಿಕಾರಿಗಳ ನಿಯೋಗಕ್ಕೆ ರಾಷ್ಟ್ರಪತಿ ಭವನದಲ್ಲಿ ಶನಿವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಅಧಿಕಾರಿಗಳ ತಂಡ ಬಾಲಿವುಡ್‌ನ ಜನಪ್ರಿಯ ಸಿನಿಮಾದ ಹಾಡೊಂದನ್ನು ಹಾಡಿದ್ದು, … Continued

ಭಾರತಕ್ಕೆ ದೊಡ್ಡ ಗೆಲುವು ; ಮುಂಬೈ ದಾಳಿ ರೂವಾರಿ ತಹವ್ವೂರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಕೋರ್ಟ್ ಒಪ್ಪಿಗೆ

ವಾಷಿಂಗ್ಟನ್: ಮುಂಬೈ ದಾಳಿಯ ಅಪರಾಧಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತೆರವುಗೊಳಿಸಿದ್ದು, ಹಸ್ತಾಂತರದ ವಿರುದ್ಧದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ. 2008 ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಪಾಕಿಸ್ತಾನಿ ಮೂಲದ ಕೆನಡಾದ ಪ್ರಜೆ ರಾಣಾನನ್ನು ಹಸ್ತಾಂತರಿಸುವಂತೆ ಭಾರತ ಕೋರಿದೆ. ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ರಾಣಾಗೆ ಇದು ಕೊನೆಯ ಕಾನೂನು ಅವಕಾಶವಾಗಿತ್ತು. … Continued

ಕ್ರಿಕೆಟ್‌ | ಚಾಂಪಿಯನ್ಸ್ ಟ್ರೋಫಿಗೆ ಭಾರತದ ತಂಡ ಪ್ರಕಟ

ನವದೆಹಲಿ: ಫೆಬ್ರವರಿ 19 ರಿಂದ ಪ್ರಾರಂಭವಾಗುವ 2025 ರ ಚಾಂಪಿಯನ್ಸ್ ಟ್ರೋಫಿ ಮತ್ತು ಅದಕ್ಕಿಂತ ಮೊದಲಲು ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಪಂದ್ಯಗಳ (ODI) ಸರಣಿಗಾಗಿ ಭಾರತವು ತನ್ನ ತಂಡವನ್ನು ಪ್ರಕಟಿಸಿದೆ. ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತದ ತಂಡವು ಬಾಂಗ್ಲಾದೇಶದ ವಿರುದ್ಧ ತನ್ನ ಮೊದಲ ಪಂದ್ಯದೊಂದಿಗೆ ತನ್ನ ಅಭಿಯಾನ ಪ್ರಾರಂಭಿಸಲಿದೆ. ಫೆಬ್ರವರಿ 23 ರಂದು ದುಬೈನಲ್ಲಿ … Continued

ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆ ಪ್ರಯೋಗದಲ್ಲಿ ಯಶಸ್ವಿಯಾದ ಇಸ್ರೋ ; ಡಾಕಿಂಗ್ ನಲ್ಲಿ ಯಶಸ್ವಿಯಾದ 4ನೇ ದೇಶ ಭಾರತ

ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಬಾಹ್ಯಾಕಾಶದಲ್ಲಿ ಉಪಗ್ರಹ ಕುಶಲತೆಯ ಉಪಗ್ರಹ ಜೋಡಣೆ ಪ್ರಕ್ರಿಯೆ(docking process)ಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಬೆಳವಣಿಗೆಯೊಂದಿಗೆ ಭಾರತವು ತನ್ನ ಭವಿಷ್ಯದ ಕಾರ್ಯಾಚರಣೆಗಳಿಗೆ ನಿರ್ಣಾಯಕವಾದ ಸಂಕೀರ್ಣ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಜಗತ್ತಿನ ನಾಲ್ಕನೇ ದೇಶವಾಗಿದೆ. ಈ ಉಪಗ್ರಹ ಜೋಡಣಾ ಪ್ರಕ್ರಿಯೆ ಭಾರತೀಯ ಅಂತರಿಕ್ಷ ನಿಲ್ದಾಣ ಮತ್ತು ಚಂದ್ರನ … Continued

ಕುಂಭಮೇಳಕ್ಕೆ ಭೇಟಿ ನೀಡುವ ಪ್ಲಾನ್‌ ಬಗ್ಗೆ 50 ವರ್ಷಗಳ ಹಿಂದೆ ಸ್ಟೀವ್ ಜಾಬ್ಸ್ ಬರೆದ ಪತ್ರ ಈಗ 4.32 ಕೋಟಿ ರೂ.ಗೆ ಮಾರಾಟ…! ಜಾಬ್ಸ್‌ ಆಸೆ ಪೂರೈಸಿದ ಪತ್ನಿ..

ದಿವಂಗತ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಅವರು ಪ್ರಸ್ತುತ ಮಹಾ ಕುಂಭಮೇಳ 2025ರಲ್ಲಿ ಪಾಲ್ಗೊಳ್ಳಲು ಭಾರತದಲ್ಲಿದ್ದಾರೆ. ಕುಂಭಮೇಳದಲ್ಲಿ ಅವರಿಗೆ “ಕಮಲಾ” ಎಂಬ ಹಿಂದೂ ಹೆಸರನ್ನು ನೀಡಲಾಗಿದೆ. ಏತನ್ಮಧ್ಯೆ, ದಿವಂಗತ ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಬರೆದ ಕೈಬರಹದ ಪತ್ರವು ಅವರು ಬರೆದ 50 ವರ್ಷಗಳ ನಂತರ ಈಗ ಸುದ್ದಿ ಮಾಡುತ್ತಿದೆ. 1974 … Continued

SpaDeX : ಉಪಗ್ರಹ ಜೋಡಣೆ ಪ್ರಯೋಗದಲ್ಲಿ ಎರಡು ಉಪಗ್ರಹಗಳನ್ನು 3 ಮೀಟರ್‌ ಸಮೀಪಕ್ಕೆ ತಂದ ಇಸ್ರೋ…!

ಬೆಂಗಳೂರು: ಬಾಹ್ಯಾಕಾಶ ಡಾಕಿಂಗ್‌ಗಾಗಿ ಪ್ರಾಯೋಗಿಕ ಪ್ರಯತ್ನದಲ್ಲಿ ಭಾರತದ ಉಪಗ್ರಹಗಳನ್ನು ಮೂರು ಮೀಟರ್‌ಗಳಷ್ಟು ಹತ್ತಿರಕ್ಕೆ ತರಲಾಯಿತು. ಮತ್ತು ಈಗ ಹಿಂದಕ್ಕೆ ಚಲಿಸುತ್ತಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಇಂದು, ಭಾನುವಾರ ಬೆಳಿಗ್ಗೆ ತಿಳಿಸಿದೆ. ನಂತರ ಉಪಗ್ರಹಗಳು ಪ್ರತಿ ಸೆಕೆಂಡಿಗೆ 10 ಮಿಲಿಮೀಟರ್ ವೇಗದಲ್ಲಿ ಪರಸ್ಪರ ಹತ್ತಿರ ಚಲಿಸುತ್ತವೆ. “15 ಮೀ ಮತ್ತು ಇನ್ನೂ ಹತ್ತಿರವೆಂದರೆ 3 … Continued

ಭಯಾನಕ ವೀಡಿಯೊ…| ಉತ್ಸವದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತಿ ಒಗೆದ ಕೋಪಗೊಂಡ ಆನೆ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಉತ್ಸವದ ವೇಳೆ ಆನೆಯೊಂದು ಕೋಪಗೊಂಡ ನಂತರ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಸೇರಿದಂತೆ ಕನಿಷ್ಠ 17 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ತಿರುರ್‌ನ ಪುತಿಯಂಗಡಿ ಉತ್ಸವದಲ್ಲಿ ಈ ಘಟನೆ ಸಂಭವಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಕಾರ್ಯಕ್ರಮದ ದೃಶ್ಯಗಳು ಐದು ಆನೆಗಳು ಉತ್ಸವದಲ್ಲಿ ಪಾಲ್ಗೊಂಡಿರುವುದನ್ನು ತೋರಿಸುತ್ತವೆ. ಆನೆಗಳನ್ನು ಅಲಂಕರಿಸಲಾಗಿದೆ. ಉತ್ಸವದಲ್ಲಿ … Continued

ಭಾರತದ ಮತದಾರರ ಸಂಖ್ಯೆ ಶೀಘ್ರವೇ 100 ಕೋಟಿ ದಾಟಲಿದೆ; ಚುನಾವಣಾ ಆಯೋಗ

ನವದೆಹಲಿ: ಭಾರತವು ಶೀಘ್ರದಲ್ಲೇ 100 ಕೋಟಿಗೂ ಹೆಚ್ಚು ಮತದಾರರಿಗೆ ಸಾಕ್ಷಿಯಾಗಲಿದ್ದು, ಹೊಸ ದಾಖಲೆ ಮಾಡಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವಕುಮಾರ ಮಂಗಳವಾರ ಹೇಳಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ (ಸಿಇಸಿ)ರು ದೆಹಲಿ ವಿಧಾನಸಭೆಗೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಲು ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 2024 ಜಾಗತಿಕವಾಗಿ ಚುನಾವಣೆಗಳ ವರ್ಷವಾಗಿದ್ದು, ಪ್ರಜಾಪ್ರಭುತ್ವದಲ್ಲಿ ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು … Continued