ವಿಶ್ವಕಪ್ 2023: ಬ್ಯಾಟರ್‌ ಶುಭಮನ್ ಗಿಲ್ ಆಸ್ಪತ್ರೆಗೆ ದಾಖಲು

ಚೆನ್ನೈ: ಭಾರತದ ತಂಡದ ಆರಂಭಿಕ ಆಟಗಾರ  ಶುಭಮನ್ ಗಿಲ್ ಅವರನ್ನು ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತವು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ದೆಹಲಿಗೆ ಹೊರಡುವ ಮುನ್ನ ಗಿಲ್ ಅವರ ಪ್ಲೇಟ್‌ಲೆಟ್ ಎಣಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಶುಭಮನ್ ಗಿಲ್ ಅವರನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ವಿಶ್ವಕಪ್‌-2023 ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ … Continued

ಹರ್ದೀಪ್ ನಿಜ್ಜರ್ ಹತ್ಯೆ ಹಿಂದೆ ಚೀನಾ ? ಇದು ಚೀನಾದ ದೊಡ್ಡ ಪಿತೂರಿ ಎಂದು ಆರೋಪಿಸಿದ ಬ್ಲಾಗರ್

ಸ್ವತಂತ್ರ ಬ್ಲಾಗರ್ ಆಗಿರುವ ಜೆನ್ನಿಫರ್ ಜೆಂಗ್ ಅವರು ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷ (ಸಿಸಿಪಿ) ಪಾತ್ರವಿದೆ ಎಂದು ಸೂಚಿಸುವ ಆರೋಪವನ್ನು ಮುಂದಿಟ್ಟಿದ್ದಾರೆ. “ಭಾರತ ಮತ್ತು ಪಶ್ಚಿಮದ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸಿ ಭಾರತವನ್ನು ದೂಷಿಸುವಂತೆ ಮಾಡುವುದು ಚೀನಾದ ಉದ್ದೇಶವಾಗಿದೆ” ಎಂದು ಝೆಂಗ್ ಆರೋಪಿಸಿದ್ದಾರೆ. ತೈವಾನ್‌ಗೆ ಸಂಬಂಧಿಸಿದಂತೆ ಕ್ಸಿ ಜಿನ್‌ಪಿಂಗ್ … Continued

ಭಾರತ ‘ಗಡುವು’ ನೀಡಿದ ನಂತರ ಭಾರತದಿಂದ ಅನೇಕ ರಾಜತಾಂತ್ರಿಕರನ್ನು ಸ್ಥಳಾಂತರಿಸಿದ ಕೆನಡಾ : ವರದಿ

ಟೊರೊಂಟೊ : ಕೆನಡಾ ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿಮೆ ಮಾಡುವಂತೆ ಸೂಚಿಸಿ ಅಕ್ಟೋಬರ್ 10ರ ಗಡುವು ನೀಡಿದ ನಂತರ ಕೆನಡಾವು ದೆಹಲಿಯ ಹೊರಗೆ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ರಾಜತಾಂತ್ರಿಕರಲ್ಲಿ ಹೆಚ್ಚಿನವರನ್ನು ಕೌಲಾಲಂಪುರ ಅಥವಾ ಸಿಂಗಾಪುರಕ್ಕೆ ಸ್ಥಳಾಂತರಿಸಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ … Continued

‘ಅವರು ಬಹಳ ಬುದ್ಧಿವಂತ ವ್ಯಕ್ತಿ’: ಪ್ರಧಾನಿ ಮೋದಿ ನಾಯಕತ್ವ ಹೊಗಳಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ ಹಾಗೂ ಪ್ರಧಾನಿ ಮೋದಿ ಅವರನ್ನು “ಅತ್ಯಂತ ಬುದ್ಧಿವಂತ ವ್ಯಕ್ತಿ” ಎಂದು ಬಣ್ಣಿಸಿದ್ದಾರೆ. ರಷ್ಯಾದ ಸುದ್ದಿ ಪ್ಲಾಟ್‌ಫಾರ್ಮ್, ಆರ್‌ಟಿ ನ್ಯೂಸ್ ಹಂಚಿಕೊಂಡ ವೀಡಿಯೊದಲ್ಲಿ, ಪ್ರಧಾನಿ ಮೋದಿಯವರ “ಮಾರ್ಗದರ್ಶನ” ಅಡಿಯಲ್ಲಿ ಭಾರತವು ಮಾಡಿದ ಮಹತ್ವದ ಪ್ರಗತಿಯ ಬಗ್ಗೆ ಪುತಿನ್ ಮಾತನಾಡಿದ್ದಾರೆ. ಸೋಚಿಯಲ್ಲಿ … Continued

‘ಭಾರತದ ಜೊತೆ ಕೆನಡಾ ಖಾಸಗಿಯಾಗಿ ಮಾತನಾಡಲು ಬಯಸುತ್ತದೆ…’: ತನ್ನ ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳುವಂತೆ ಭಾರತ ಸೂಚಿಸಿದೆ ಎಂಬ ವರದಿ ನಂತರ ಕೆನಡಾ ಹೇಳಿಕೆ

ಒಟ್ಟಾವಾ : ಭಾರತದಿಂದ ತನ್ನ 41 ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳುವಂತೆ ಭಾರತವು ಕೆನಡಾಕ್ಕೆ ಸೂಚಿಸಿದೆ ಎಂಬ ವರದಿಯ ನಂತರ, ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು, ರಾಜತಾಂತ್ರಿಕ ಬಿಕ್ಕಟ್ಟನ್ನು ಪರಿಹರಿಸಲು ಕೆನಡಾವು ಭಾರತದೊಂದಿಗೆ ಖಾಸಗಿ ಮಾತುಕತೆಗಳನ್ನು ಬಯಸುತ್ತದೆ ಎಂದು ಹೇಳಿದ್ದಾರೆ. ಒಟ್ಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು, ಕೆನಡಾ … Continued

ಭಾರತ ಸಂಬಂಧ ಕೊನೆಗೊಳಿಸಿದರೆ ಕೆನಡಾಕ್ಕೇ ಆರ್ಥಿಕ ಹೊಡೆತ..? : ಕೆನಡಾದಲ್ಲಿ ಪಂಜಾಬ್ ವಿದ್ಯಾರ್ಥಿಗಳ ವಾರ್ಷಿಕ ಶೈಕ್ಷಣಿಕ ಹೂಡಿಕೆಯೇ 68,000 ಕೋಟಿ ರೂ…!

ಚಂಡೀಗಢ (ಪಂಜಾಬ್) : ಭಾರತದ ವಿರುದ್ಧ ಪ್ರಧಾನಿ ಜಸ್ಟಿನ್ ಟ್ರುಡೊ ಅವರ “ಅಸಂಬದ್ಧ” ಆರೋಪದ ನಂತರ ಭಾರತ-ಕೆನಡಾ ಸಂಬಂಧಗಳು ಹಳಸಿದವು. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಆರೋಪಿಸಿದ್ದಾರೆ. ಹೆಚ್ಚುತ್ತಿರುವ ರಾಜತಾಂತ್ರಿಕ ಉದ್ವಿಗ್ನತೆಯು ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರದ ಬಗ್ಗೆ ಕಳವಳಕ್ಕೆ ಕಾರಣವಾಗಿದೆ. ಭಾರತೀಯ ವಿದ್ಯಾರ್ಥಿಗಳು ಕೆನಡಾದಿಂದ … Continued

ಜಿ20 ಸಮಯದಲ್ಲಿ ಭಾರತ ನೀಡಿದ ಅಧ್ಯಕ್ಷೀಯ ಸೂಟ್‌ನಲ್ಲಿ ಉಳಿಯಲು ನಿರಾಕರಿಸಿದ್ದ ಕೆನಡಾದ ಪ್ರಧಾನಿ ಟ್ರುಡೊ : ವರದಿ…!

ನವದೆಹಲಿ: ಭಾರತದಲ್ಲಿ G20 ಶೃಂಗಸಭೆಯ ಸಂದರ್ಭದಲ್ಲಿ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ನವದೆಹಲಿಯ ದಿ ಲಲಿತ್ ಹೋಟೆಲ್‌ನಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ಅಧ್ಯಕ್ಷೀಯ ಸೂಟ್‌ (ರೂಂ)ನಲ್ಲಿ ಉಳಿಯಲು ನಿರಾಕರಿಸಿದ್ದರು. ಇದು ಹೀಗಾಗಿ ಭಾರತೀಯ ಗುಪ್ತಚರ ಅಧಿಕಾರಿಗಳಲ್ಲಿ ಕಳವಳಕ್ಕೆ ಕಾರಣವಾಗಿತ್ತು ಎಂದು ವರದಿಯೊಂದು ತಿಳಿಸಿದೆ. ಮೂಲಗಳ ಪ್ರಕಾರ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ನವದೆಹಲಿಯ … Continued

ಮತ್ತೊಂದು ಗೇಮ್ ಚೇಂಜರ್…: ಕಾರ್ಡ್‌ ಇಲ್ಲದೆ ಯುಪಿಐ ಬಳಸಿ ಎಟಿಎಂನಿಂದ ಹಣ ಪಡೆಯುವ ಭಾರತದ ಮೊದಲ ಯುಪಿಐ-ಎಟಿಎಂ ಅನಾವರಣ | ವೀಕ್ಷಿಸಿ

ಮೊಬೈಲ್ ಸಾಧನಗಳ ಮೂಲಕ ತಕ್ಷಣದ ಹಣ ವರ್ಗಾವಣೆಗಾಗಿ ಬಳಸಲಾಗುವ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI), ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಪಾವತಿ ವಿಧಾನವಾಗಿದೆ. ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಮಂಗಳವಾರ, ಕಾರ್ಡ್‌ಲೆಸ್ ನಗದು ವಿತ್‌ ಡ್ರಾ ಮಾಡುವ ಯುಪಿಐ ಎಟಿಎಂ (UPI ATM) ಅನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ‘ಭಾರತದ ಮೊದಲ ಯುಪಿಐ ಎಟಿಎಂ (UPI … Continued

‘ಇಂಡಿಯಾ, ಅದು ಭಾರತ’ ಎಂದು ಸಂವಿಧಾನದಲ್ಲಿದೆ : ಜಿ20 ಆಮಂತ್ರಣ ಪತ್ರದ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಾಂಪ್ರದಾಯಿಕ ‘ಪ್ರೆಸಿಡೆಂಟ್‌ ಆಫ್‌ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್‌ ಆಫ್‌ ಭಾರತʼ ಎಂದು ಬಣ್ಣಿಸುವ ಜಿ20 ಶೃಂಗಸಭೆಯ ಆಮಂತ್ರಣ ಪತ್ರಗಳ ಕುರಿತು ಬುಧವಾರ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ ಅವರು, ಸಂವಿಧಾನವನ್ನು ಓದಲು ಪ್ರತಿಯೊಬ್ಬರನ್ನು ಆಹ್ವಾನಿಸುವುದಾಗಿ ಹೇಳಿದ್ದಾರೆ. ಸಂವಿಧಾನದಲ್ಲಿ ‘ಇಂಡಿಯಾ, ಅದು ಭಾರತ’ ಎಂದು ಇದೆ ಎಂದು ಅವರು … Continued

‘ನಾನು ನಿರಾಸೆಗೊಂಡಿದ್ದೇನೆ, ಆದರೆ…”: ದೆಹಲಿಯ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅನುಪಸ್ಥಿತಿ ಬಗ್ಗೆ ಅಮೆರಿಕ ಅಧ್ಯಕ್ಷ ಬೈಡನ್‌

ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಈ ವಾರ ಭಾರತ ಭೇಟಿಯನ್ನು ಎದುರು ನೋಡುತ್ತಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪಾಲ್ಗೊಳ್ಳದಿರುವ ಬಗ್ಗೆ ಅವರು ನಿರಾಸೆ ವ್ಯಕ್ತಪಡಿಸಿದ್ದಾರೆ. ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಬೈಡನ್‌ ಸೆಪ್ಟೆಂಬರ್ 7 ರಂದು ಭಾರತಕ್ಕೆ ಪ್ರಯಾಣಿಸಲಿದ್ದಾರೆ ಎಂದು ಶ್ವೇತಭವನವು … Continued