ಅಮೆರಿಕ ದಾಳಿಯಲ್ಲಿ ತನ್ನ ಪರಮಾಣು ಕೇಂದ್ರಗಳು “ತೀವ್ರವಾಗಿ ಹಾನಿಗೊಳಗಾಗಿವೆ” ಎಂದು ಒಪ್ಪಿಕೊಂಡ ಇರಾನ್‌

ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಅವರು ಬುಧವಾರ, ಅಮೆರಿಕದ ದಾಳಿಯಿಂದ ದೇಶದ ಪರಮಾಣು ಕೇಂದ್ರಗಳು “ತೀವ್ರವಾಗಿ ಹಾನಿಗೊಳಗಾಗಿವೆ” ಎಂದು ದೃಢಪಡಿಸಿದ್ದಾರೆ. ಅಲ್ ಜಜೀರಾ ಟಿವಿ ಜೊತೆ ಮಾತನಾಡಿದ ಬಘೈ ಅವರು, ಈ ಬಗ್ಗೆ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಆದರೆ ಬಂಕರ್ ಬಸ್ಟರ್ ಬಾಂಬ್‌ಗಳನ್ನು ಬಳಸಿಕೊಂಡು ಅಮೆರಿಕದ ಬಿ -2 ಬಾಂಬರ್‌ಗಳು ಭಾನುವಾರ ನಡೆಸಿದ … Continued

ಇರಾನಿನ 400 ಕೆಜಿ ಯುರೇನಿಯಂ ಕಾಣೆಯಾದ ಬಗ್ಗೆ ಅಮೆರಿಕಕ್ಕೆ ಭಯ ? ಯಾಕಂದ್ರೆ ಇದ್ರಿಂದ 10 ಪರಮಾಣು ಬಾಂಬ್‌ ತಯಾರಿಸಬಹುದಂತೆ…

ನಾಲ್ಕು ದಿನಗಳ ಹಿಂದೆ ಇರಾನಿನ ಮೂರು ಕೇಂದ್ರ ಪರಮಾಣು ಕೇಂದ್ರಗಳ ಮೇಲೆ ಅಮೆರಿಕದ “ಬಂಕರ್ ಬಸ್ಟರ್” ಬಾಂಬ್‌ ದಾಳಿಯ ನಂತರ, ಗರಿಷ್ಠ 10 ಪರಮಾಣು ಬಾಂಬ್‌ಗಳನ್ನು ನಿರ್ಮಿಸಲು ಸಾಕಾಗುವಷ್ಟು, ಶೇಕಡಾ 60 ರಷ್ಟು ಪುಷ್ಟೀಕರಿಸಿದ ಯುರೇನಿಯಂನ 400 ಕಿಲೋಗ್ರಾಂಗಳಷ್ಟು ಸಂಗ್ರಹವು ಕಾಣೆಯಾಗಿದೆ. ಕಾಣೆಯಾದ ಯುರೇನಿಯಂ ಇನ್ನೂ ಇದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅಮೆರಿಕದ … Continued

ವೀಡಿಯೊ…| ಹಾಸಿಗೆ, ಶೌಚಾಲಯ, ಮೈಕ್ರೋವೇವ್ ಒಲೆ, ಆಹಾರ ತಯಾರಿಕೆ…: ಅಮೆರಿಕದ ಬಿ-2 ಬಾಂಬರ್ ಯುದ್ಧ ವಿಮಾನ ಹಾರುವ ಹೋಟೆಲ್ ಕೂಡ ಹೌದು..!

ಅಮೆರಿಕದ ವಾಯು ಪ್ರಾಬಲ್ಯದ ಸಂಕೇತವಾದ B-2 ಬಾಂಬರ್, ಇರಾನಿನ ಪರಮಾಣು ತಾಣಗಳನ್ನು ನಾಶಮಾಡಲು ಮತ್ತೊಮ್ಮೆ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಇವುಗಳು ಅಮೆರಿಕದ ಮಿಸೌರಿಯಲ್ಲಿರುವ ವೈಟ್‌ಮ್ಯಾನ್ ವಾಯುಪಡೆಯ ನೆಲೆಯಿಂದ ಹಾರಿದವು, ಆಕಾಶದಲ್ಲಿ ಹಲವಾರು ಬಾರಿ ಇಂಧನ ತುಂಬಿಸಿಕೊಂಡವು, ಪತ್ತೆಯಾಗದ ಗುರುಗಳ ಮೇಲೆ ನಿಖರವಾಗಿ ದಾಳಿ ನಡೆಸಿದವು. ಆಪರೇಷನ್ ಮಿಡ್‌ನೈಟ್ ಹ್ಯಾಮರ್ B-2 ಸ್ಪಿರಿಟ್‌ 2001 ರಿಂದ ಹಾರಿದ … Continued

ಅಮೆರಿಕ ವಾಯು ನೆಲೆ ಮೇಲೆ ಇರಾನ್‌ ಕ್ಷಿಪಣಿ ದಾಳಿ ; ವಾಯ ಪ್ರದೇಶ ಮುಚ್ಚಿದ ಕತಾರ್, ಯುಎಇ, ಬಹ್ರೇನ್

ಇರಾನ್‌ ಪ್ರತೀಕಾರದ ದಾಳಿಯಲ್ಲಿ ಕತಾರ್‌ ಹಾಗೂ ಇರಾಕಿನಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ದಾಳಿ ಮಾಡಿದ ನಂತರ ಕತಾರ್, ಯುಎಇ ಮತ್ತು ಬಹ್ರೇನ್ ಮೇಲಿನ ವಾಯುಪ್ರದೇಶವನ್ನು ಹಠಾತ್ತನೆ ಮುಚ್ಚಲಾಗಿದೆ. ಹೀಗಾಗಿ ಸೋಮವಾರ ರಾತ್ರಿ ಹಲವಾರು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವು ವ್ಯತ್ಯಯಗೊಂಡವು. ಇರಾನ್ ತನ್ನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ … Continued

ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

ಇಸ್ರೇಲ್ ರಕ್ಷಣಾ ಪಡೆಗಳು (IDF) ಇರಾನಿನ ಪಶ್ಚಿಮ, ಪೂರ್ವ ಮತ್ತು ಮಧ್ಯ ಭಾಗದಲ್ಲಿರುವ ಆರು ವಿಮಾನ ನಿಲ್ದಾಣಗಳ ಮೇಲೆ ಸಂಘಟಿತ ವಾಯುದಾಳಿ ನಡೆಸಿದ್ದು, 15 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಾಶಪಡಿಸಲಾಗಿದೆ ಎಂದು ಹೇಳಿದೆ. ದೂರದಿಂದಲೇ ಮಾನವಸಹಿತ ವಿಮಾನಗಳು, ರನ್‌ವೇಗಳು, ಭೂಗತ ಬಂಕರ್‌ಗಳು ಮತ್ತು F-14s, F-5s, AH-1 ಹೆಲಿಕಾಪ್ಟರ್‌ಗಳು ಮತ್ತು ಇಂಧನ ತುಂಬುವ ವಿಮಾನ ಸೇರಿದಂತೆ … Continued

ವೀಡಿಯೊಗಳು..| ಅಮೆರಿಕ ದಾಳಿಗೆ ಪ್ರತಿ ದಾಳಿ : ಕತಾರ್, ಇರಾಕಿನಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್‌

ಮಧ್ಯಪ್ರಾಚ್ಯ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಇರಾನ್ ಸೋಮವಾರ ತನ್ನ ಪರಮಾಣು ಸೌಲಭ್ಯಗಳ ಮೇಲಿನ ಅಮೆರಿಕದ ವಾಯುದಾಳಿಗೆ ಪ್ರತೀಕಾರವಾಗಿ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ ಸೋಮವಾರ ಕತಾರ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ. ಇರಾನ್ ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಆರು ಕ್ಷಿಪಣಿಗಳನ್ನು ಹಾರಿಸಿತು ಎಂದು ಇಸ್ರೇಲಿ … Continued

ವೀಡಿಯೊ..| ಇರಾನ್ ಮೇಲೆ ದಾಳಿ ಮಾಡಿ ವಾಪಸ್‌ ಆಗುತ್ತಿರುವ ಬಿ -2 ಬಾಂಬರ್‌ ವೀಡಿಯೊ ಹಂಚಿಕೊಂಡ ಅಮೆರಿಕ

ಅಮೆರಿಕವು ಇರಾನಿನ ಮೂರು ಪರಮಾಣು ಕೇಂದ್ರಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಮೇಲೆ ಬಾಂಬ್ ದಾಳಿ ನಡೆಸಿದ ನಂತರ ಬಿ -2 ಬಾಂಬರ್‌ಗಳು ಮಿಸೌರಿಯ ವೈಟ್‌ಮ್ಯಾನ್ ವಾಯುಪಡೆ ನೆಲೆಗೆ ಹಿಂತಿರುಗುತ್ತಿರುವ ವೀಡಿಯೊವನ್ನು ಸೋಮವಾರ ಅಮೆರಿಕದ ಶ್ವೇತಭವನ ಹಂಚಿಕೊಂಡಿದೆ. ಒಂದು ನಿಮಿಷದ ದೃಶ್ಯಾವಳಿಯು ಅಮೆರಿಕದ ಅತ್ಯಂತ ಮುಂದುವರಿದ ಕಾರ್ಯತಂತ್ರದ ಶಸ್ತ್ರಾಸ್ತ್ರಗಳ ಸಂಗ್ರಹದಲ್ಲಿ ಒಂದಾದ ಬಿ -2 ಬಾಂಬರ್ … Continued

ಇರಾನ್‌ ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ ನಂತರ ಇರಾನ್ ಅಧ್ಯಕ್ಷರ ಜೊತೆ ಮಾತನಾಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು, ಭಾನುವಾರ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿ, ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಇತ್ತೀಚೆಗೆ ಉಂಟಾಗಿರುವ ಉಲ್ಬಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇರಾನ್‌ನ ಮೂರು ಸ್ಥಳಗಳಾದ ನಟಾಂಜ್, ಇಸ್ಫಹಾನ್ ಮತ್ತು ಪರ್ವತಗಳಿಂದ ಕೂಡಿದ ಫೋರ್ಡೊ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕ ಇಂದು ಸಂಘರ್ಷಕ್ಕೆ ಪ್ರವೇಶಿಸಿದೆ. ಇರಾನ್‌ ತನ್ನ ಪರಮಾಣು … Continued

ವೀಡಿಯೊ…| ಇರಾನಿನ ಎರಡು F-5 ಯುದ್ಧ ವಿಮಾನ, 8 ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣಾ ವಾಹನ ನಾಶಪಡಿಸಿದ ಇಸ್ರೇಲ್‌

ಇರಾನ್‌ನಾದ್ಯಂತ ಡಜನ್ಗಟ್ಟಲೆ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ರಾತ್ರಿಯಿಡೀ ನಡೆಸಿದ ವ್ಯಾಪಕ ಕಾರ್ಯಾಚರಣೆಯಲ್ಲಿ ಇರಾನಿನ ಎರಡು ಯುದ್ಧ ವಿಮಾನಗಳು ಮತ್ತು ಎಂಟು ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣಾ ವಾಹನಗಳನ್ನು ನಾಶಪಡಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (IDF) ಭಾನುವಾರ ತಿಳಿಸಿವೆ. 20 ಇಸ್ರೇಲಿ ಯುದ್ಧ ವಿಮಾನಗಳು ನಡೆಸಿದ ಈ ದಾಳಿಗಳು ಡೆಜ್‌ಫುಲ್ ಮತ್ತು ಇಸ್ಫಹಾನ್ ವಿಮಾನ ನಿಲ್ದಾಣಗಳು ಸೇರಿದಂತೆ … Continued

ಬಿ-2 ಸ್ಟೆಲ್ತ್ ಬಾಂಬರ್‌ ಗಳು, ಬಂಕರ್-ಬಸ್ಟರ್ ಬಾಂಬ್ ಎಂದರೇನು ? ಇರಾನ್‌ ಪರಮಾಣು ಕೇಂದ್ರಗಳ ಮೇಲಿನ ದಾಳಿಗೆ ಅಮೆರಿಕ ಇದನ್ನೇ ಬಳಸಿದ್ದು ಯಾಕೆ..?

ವಾಷಿಂಗ್ಟನ್ : ಇಸ್ರೇಲ್ ಮತ್ತು ಇರಾನ್ ನಡುವಿನ ನಡೆಯುತ್ತಿರುವ ಸೇನಾ ಸಂಘರ್ಷದ ನಡುವೆ ಒಂದು ಅಭೂತಪೂರ್ವ ಕ್ರಮದಲ್ಲಿ, ಅಮೆರಿಕವು ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದನ್ನು ಪ್ರಕಟಿಸಿದ್ದು, ಅವರು ಈ ಕಾರ್ಯಾಚರಣೆಯನ್ನು “ಅದ್ಭುತ ಮಿಲಿಟರಿ ಯಶಸ್ಸು” … Continued