ವೈಮಾನಿಕ ದಾಳಿಯ ನಂತರ ಇರಾನ್ ರಾಯಭಾರಿಯನ್ನು ಉಚ್ಚಾಟಿಸಿದ ಪಾಕಿಸ್ತಾನ : ಟೆಹ್ರಾನ್‌ನಿಂದ ಪಾಕಿಸ್ತಾನದ ರಾಯಭಾರಿ ವಾಪಸ್

ನವದೆಹಲಿ: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಮಂಗಳವಾರ ಇರಾನ್ ವೈಮಾನಿಕ ದಾಳಿ ನಡೆಸಿದ ನಂತರ ಎರಡು ದೇಶಗಳ ನಡುವೆ ಉದ್ವಿಗ್ನತೆ ಉಲ್ಬಣಗೊಂಡಿದ್ದು, ಪಾಕಿಸ್ತಾನವು ಬುಧವಾರ ಇರಾನ್‌ ರಾಜತಾಂತ್ರಿಕರನ್ನು ತನ್ನ ದೇಶದಿಂದ ಹೊರಹಾಕಿದೆ ಹಾಗೂ ತನ್ನ ಉನ್ನತ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿದೆ. ಅಲ್ಲದೆ, ಎಲ್ಲ ಉನ್ನತ ಮಟ್ಟದ ಭೇಟಿಗಳನ್ನು ಸ್ಥಗಿತಗೊಳಿಸಿದೆ. ವಿದೇಶಾಂಗ ಕಚೇರಿಯ ವಕ್ತಾರರು ಮಾಧ್ಯಮವದರಿಗೆ ಮಾತನಾಡಿ, ಇಸ್ಲಾಮಾಬಾದ್ ಇರಾನ್‌ನಿಂದ … Continued

ವೀಡಿಯೊ..| ಇರಾಕಿನಲ್ಲಿರುವ ಇಸ್ರೇಲಿ “ಪತ್ತೇದಾರಿ ಕೇಂದ್ರ”ದ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್ : ಮಧ್ಯಪ್ರಾಚ್ಯದ ಉದ್ವಿಗ್ನತೆ ಹೆಚ್ಚಳ

ದುಬೈ/ಬಾಗ್ದಾದ್: ಇರಾಕ್‌ನ ಅರೆ ಸ್ವಾಯತ್ತ ಪ್ರದೇಶವಾದ ಕುರ್ದಿಸ್ತಾನ್ ಪ್ರದೇಶದಲ್ಲಿ ಇಸ್ರೇಲ್‌ನ “ಪತ್ತೇದಾರಿ ಕೇಂದ್ರ”(spy headquarters)ದ ಮೇಲೆ ದಾಳಿ ನಡೆಸಿರುವುದಾಗಿ ಇರಾನ್‌ನ ʼರೆವಲ್ಯುಶ್ನರಿ ಗಾರ್ಡ್‌ʼಗಳು ಸೋಮವಾರ ತಡರಾತ್ರಿ ವರದಿ ಮಾಡಿವೆ ಎಂದು ಸರ್ಕಾರಿ ಮಾಧ್ಯಮ ಸೋಮವಾರ ತಡರಾತ್ರಿ ವರದಿ ಮಾಡಿದೆ. ಆದರೆ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಸಿರಿಯಾದಲ್ಲಿಯೂ ದಾಳಿ ಮಾಡಿದೆ ಎಂದು ಇರಾನ್‌ ಪಡೆ ಹೇಳಿದೆ. ಇರಾನ್‌ನ … Continued

ಆಪಾದಿತ ಇಸ್ರೇಲಿ ದಾಳಿಯಲ್ಲಿ ಹತನಾದ ಪ್ರಮುಖ ಹಿಜ್ಬುಲ್ಲಾ ಕಮಾಂಡರ್ ವಿಸ್ಸಾಮ್ ಅಲ್-ತವಿಲ್

ಸೋಮವಾರ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಪ್ರಮುಖ ಹಿಜ್ಬುಲ್ಲಾ ಕಮಾಂಡರ್ ಹತನಾಗಿದ್ದಾನೆ. ಎಸ್‌ಯುವಿ (SUV)ಯ ಮೇಲಿನ ದಾಳಿಯಲ್ಲಿ ಗಡಿಯುದ್ದಕ್ಕೂ ಕಾರ್ಯನಿರ್ವಹಿಸುವ ರಹಸ್ಯ ಹೆಜ್ಬೊಲ್ಲಾ ಪಡೆಗಳ ಕಮಾಂಡರ್ ಒಬ್ಬರನ್ನು ಕೊಂದಿತು ಎಂದು ಲೆಬನಾನಿನ ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ನೀಡದೆಯೇ ಹತ್ಯೆಗೀಡಾದ ಹೋರಾಟಗಾರನನ್ನು ವಿಸ್ಸಾಮ್ ಅಲ್-ತಾವಿಲ್ ಎಂದು ಹೆಜ್ಬುಲ್ಲಾ ಗುರುತಿಸಿದೆ. ದಕ್ಷಿಣ ಇಸ್ರೇಲ್‌ ಮೇಲೆ … Continued

ಇರಾನಿನ ಸಮಾರಂಭದಲ್ಲಿ 100ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಅವಳಿ ಸ್ಫೋಟದ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್

ಇರಾನ್‌ನಲ್ಲಿ ನಡೆದ ಎರಡು ಸೋಟದಲ್ಲಿ ಕನಿಷ್ಠ 100ಕ್ಕೂ ಹೆಚ್ಚು ಜನರು ಸಾವಿಗೀಡಾದ ಘಟನೆಯ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಗುರುವಾರ ಹೊತ್ತುಕೊಂಡಿದೆ. 2020 ರಲ್ಲಿ ಅಮೆರಿಕದ ಡ್ರೋನ್‌ನಿಂದ ಕೊಲ್ಲಲ್ಪಟ್ಟ ಕಮಾಂಡರ್ ಖಾಸೆಮ್ ಸೊಲೈಮಾನಿಯನ್ನು ಸ್ಮರಣಾರ್ಥ ಇರಾನ್‌ನ ಕೆರ್ಮನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡು ಬಾಂಬ್‌ಗಳು ಅನುಕ್ರಮವಾಗಿ ಸ್ಫೋಟಗೊಂಡವು. ಸುದ್ದಿ ಸಂಸ್ಥೆ ರಾಯಿಟರ್ಸ್‌ನ ವರದಿಯ ಪ್ರಕಾರ, ಇಸ್ಲಾಮಿಕ್ … Continued

ಇರಾನ್ ಟಾಪ್ ಜನರಲ್ ಖಾಸೆಮ್ ಸೊಲೈಮಾನಿ ಸಮಾಧಿ ಬಳಿ ಅವಳಿ ಸ್ಫೋಟ : 100 ಕ್ಕೂ ಹೆಚ್ಚು ಜನರು ಸಾವು

ದುಬೈ: 2020 ರಲ್ಲಿ ಅಮೆರಿಕದಿಂದ ಡ್ರೋನ್‌ನಿಂದ ಕೊಲ್ಲಲ್ಪಟ್ಟ ಟಾಪ್ ಕಮಾಂಡರ್ ಖಾಸೆಮ್ ಸೊಲೈಮಾನಿ ಸ್ಮರಣಾರ್ಥ ಇರಾನ್‌ನಲ್ಲಿ ನಡೆದ ಸಮಾರಂಭದಲ್ಲಿ ‘ಭಯೋತ್ಪಾದಕ ದಾಳಿ’ಯಿಂದ ಉಂಟಾದ ಎರಡು ಸ್ಫೋಟಗಳಲ್ಲಿ 100 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಜನಸಮೂಹದ ಮೇಲೆ ನಡೆದ ಬಾಂಬ್‌ ದಾಳಿಯಲ್ಲಿ ಕನಿಷ್ಠ 103 … Continued

ಜೈಲಿನಲ್ಲಿರುವ ಇರಾನ್ ಮಾನವ ಹಕ್ಕು ಕಾರ್ಯಕರ್ತೆ ನರ್ಗೆಸ್ ಮೊಹಮ್ಮದಿಗೆ ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಪ್ರಕಟ

ಸ್ಟಾಕ್‌ಹೋಂ : ಜೈಲಿನಲ್ಲಿರುವ ಇರಾನಿನ ಮಾನವ ಹಕ್ಕುಗಳ ಕಾರ್ಯಕರ್ತೆ ನರ್ಗೆಸ್ ಮೊಹಮ್ಮದಿ ಅವರಿಗೆ 2023 ರ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟಿಸಲಾಗಿದೆ. ತನ್ನ ದೇಶದಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆಯ ವಿರುದ್ಧ ಹೋರಾಟ ಮತ್ತು “ಎಲ್ಲರಿಗೂ ಸಮಾನ ಸ್ವಾತಂತ್ರ್ಯ ಉತ್ತೇಜಿಸುವುದಕ್ಕಾಗಿ” 2023 ರ ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಪಡೆದಿದ್ದಾರೆ. ನೊಬೆಲ್ ಪ್ರಶಸ್ತಿ ಸಮಿತಿಯ ಪ್ರಕಾರ, … Continued

ಇದು ಎಂಥ ಲೋಕವಯ್ಯಾ…: ಇರಾನ್‌ನಲ್ಲಿ ಹುಡುಗಿಯರು ಶಾಲೆಗೆ ಹೋಗುವುದನ್ನು ತಡೆಯಲು ನೂರಾರು ಹೆಣ್ಣುಮಕ್ಕಳಿಗೆ ವಿಷಪ್ರಾಶನ..!

ಟೆಹ್ರಾನ್: ಹೆಣ್ಣುಮಕ್ಕಳ ಶಿಕ್ಷಣವನ್ನು ಸ್ಥಗಿತಗೊಳಿಸುವ ಉದ್ದೇಶದಿಂದ ಪವಿತ್ರ ನಗರವಾದ ಕೋಮ್‌ ನಗರದಲ್ಲಿ “ಕೆಲವರು” ಶಾಲಾ ಬಾಲಕಿಯರಿಗೆ ವಿಷ ಉಣಿಸುತ್ತಿದ್ದಾರೆ ಎಂದು ಇರಾನ್ ಉಪಮಂತ್ರಿಯೊಬ್ಬರು ಭಾನುವಾರ ಹೇಳಿದ್ದಾರೆ ಎಂದು ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ನವೆಂಬರ್ ಅಂತ್ಯದಿಂದ, ಟೆಹ್ರಾನ್‌ನ ದಕ್ಷಿಣದ ಕೋಮ್‌ನಲ್ಲಿ ಶಾಲಾಮಕ್ಕಳಲ್ಲಿ ನೂರಾರು ಉಸಿರಾಟದ ತೊಂದರೆ ಕಂಡುಬಂದ ವಿಷ ಪ್ರಾಷನದ ಪ್ರಕರಣಗಳು ವರದಿಯಾಗಿವೆ. ಕೆಲವರಿಗೆ ಆಸ್ಪತ್ರೆಯ … Continued

ಇರಾನ್‌ನ ಮೊದಲನೇ ಸರ್ವೋಚ್ಚ ನಾಯಕ ಖೊಮೇನಿ ಮನೆಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು: ವರದಿ | ವೀಕ್ಷಿಸಿ

ಟೆಹ್ರಾನ್‌: ಇರಾನ್‌ನಲ್ಲಿ ಪ್ರತಿಭಟನಾಕಾರ ಗುಂಪು ಇರಾನ್‌ನ ಹಿಂದಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖೊಮೇನಿ ಅವರ ಪೂರ್ವಜರ ಮನೆಗೆ ಬೆಂಕಿ ಹಚ್ಚಿದೆ. ಮಹ್ಸಾ ಅಮಿನಿಯ ಸಾವಿನ ಬಗ್ಗೆ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಎರಡನೇ ತಿಂಗಳಿಗೆ ಪ್ರವೇಶಿಸುತ್ತಿರುವ ವೇಳೆ ಇರಾನ್‌ನ ಸರ್ವೋಚ್ಚ ನಾಯಕನ ಪೂರ್ವಜರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಸಾಮಾಜಿಕ … Continued

ಇರಾನ್‌ನಲ್ಲಿ ಸರ್ಕಾರಿ ಲೈವ್ ಟಿವಿ ಹ್ಯಾಕ್‌ ಮಾಡಿದ ಹಿಜಾಬ್ ವಿರೋಧಿ ಪ್ರತಿಭಟನಾಕಾರರು…!

ಇರಾನ್‌ನ ಸರ್ಕಾರಿ ಪ್ರಸಾರಕರು ನಡೆಸುತ್ತಿರುವ ಸುದ್ದಿ ಬುಲೆಟಿನ್ ಅನ್ನು ದೇಶದ ಹಿಜಾಬ್ ವಿರೋಧಿ ಪ್ರತಿಭಟನಾಕಾರರು ಶನಿವಾರ ಹ್ಯಾಕ್ ಮಾಡಿದ್ದಾರೆ ಎಂದು ವರದಿಯಾಗಿದೆ. ಅವರು ತಮ್ಮನ್ನು “ಅದಾಲತ್ ಅಲಿ” ಅಥವಾ ಇಸ್ಲಾಮಿಕ್ ರಿಪಬ್ಲಿಕ್‌ನ ಸರ್ವೋಚ್ಚ ಅಧಿಕಾರದ ವಿರುದ್ಧ ದಂಗೆ ಏಳುವ ಅಲಿʼಸ್‌ ಜಸ್ಟೀಸ್‌ ಎಂದು ಗುರುತಿಸಿಕೊಂಡಿದ್ದಾರೆ. ಸುದ್ದಿ ವಿಭಾಗವು ವ್ಯಕ್ತಿಯ ಮುಖವಾಡದ ವೀಡಿಯೊವನ್ನು ಪ್ರಸಾರ ಮಾಡಿದೆ, ಅದರ … Continued

ಅಣ್ವಸ್ತ್ರ ಪರಿಶೀಲನೆ: ವಿಶ್ವಸಂಸ್ಥೆ ಕ್ರಮಕ್ಕೆ ಇರಾನ್‌‌ ನಿರ್ಬಂಧ

ದೇಶ ಹೊಂದಿರುವ ಅಣ್ವಸ್ತ್ರಗಳನ್ನು ಪರಿಶೀಲನೆ ನಡೆಸಲು ಮುಂದಾದ ವಿಶ್ವಸಂಸ್ಥೆಯ ಕ್ರಮಕ್ಕೆ ಇರಾನ್‌ ಕೆಲ ನಿರ್ಬಂಧಗಳನ್ನು ಹೇರಿದೆ. ಅಮೆರಿಕ ಹಾಗೂ ಕೆಲವು ಯುರೋಪ್‌ ದೇಶಗಳು ತನ್ನ ವಿರುದ್ಧ ಜಾರಿಗೊಳಿಸಿರುವ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಒತ್ತಡ ಹೇರುವ ಉದ್ದೇಶದಿಂದ ನಿರ್ಬಂಧ ಹೇರಿದೆ. ಅಣ್ವಸ್ತ್ರಗಳ ಪರಿಶೀಲನೆಗೆ ಬರುವ ಇಂಟರ್‌ನ್ಯಾಷನಲ್‌ ಅಟೋಮಿಕ್‌ ಎನರ್ಜಿ ಏಜೆನ್ಸಿಗೆ (ಐಎಇಎ) ಸೀಮಿತ ಅನುಮತಿ ನೀಡುವುದಾಗಿ ತಿಳಿಸಿದೆ. … Continued