ಭವಿಷ್ಯದ ಮಾನವ ಸಹಿತ ಗಗನಯಾನ ಕಾರ್ಯಾಚರಣೆಗೆ ಮಹಿಳಾ ಪೈಲಟ್‌ಗಳು, ಮಹಿಳಾ ವಿಜ್ಞಾನಿಗಳಿಗೆ ಇಸ್ರೋ ಆದ್ಯತೆ: ಸೋಮನಾಥ

ತಿರುವನಂತಪುರಂ: ಮಾನವಸಹಿತ ಬಾಹ್ಯಾಕಾಶ ಯೋಜನೆ ‘ಗಗನಯಾನ’ ಮಿಷನ್‌ನಲ್ಲಿ, ಯುದ್ಧ ವಿಮಾನ ಚಲಾಯಿಸುವ ಮಹಿಳಾ ಪೈಲಟ್ ಅಥವಾ ಮಹಿಳಾ ವಿಜ್ಞಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಉದ್ದೇಶ ಇದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್. ಸೋಮನಾಥ ಭಾನುವಾರ (ಅಕ್ಟೋಬರ್ 22) ತಿಳಿಸಿದ್ದಾರೆ. ಇಸ್ರೋ 2024 ರ ತನ್ನ ಗಗನಯಾನ ಬಾಹ್ಯಾಕಾಶ ನೌಕೆಯಲ್ಲಿ ಮಹಿಳೆಯನ್ನು ಹೋಲುವ … Continued

ವೀಡಿಯೊ.. | ಗಗನಯಾನ​ದ ಪರೀಕ್ಷಾ ಹಾರಾಟ ಯಶಸ್ವಿ : ಸಮುದ್ರದಲ್ಲಿ ಇಳಿದ ಸಿಬ್ಬಂದಿ ʼಎಸ್ಕೇಪ್ ಮಾಡ್ಯೂಲ್ ʼ

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯಾತ್ರೆಯ ಮೊದಲ ಹೆಗ್ಗುರುತಾಗಿ ಶ್ರೀಹರಿಕೋಟಾದಿಂದ ಇಸ್ರೋ ತನ್ನ ಮೊದಲ ಮಾನವ ಬಾಹ್ಯಾಕಾಶ ಯಾನ ‘ಗಗನಯಾನʼಕ್ಕಾಗಿ ಮಾನವರಹಿತ ಪರೀಕ್ಷಾ ಹಾರಾಟವನ್ನು ಇಂದು, ಶನಿವಾರ ಯಶಸ್ವಿಯಾಗಿ ನಡೆಸಿದೆ. ಬಾಹ್ಯಾಕಾಶ ವಾಹನದ ಸಿಬ್ಬಂದಿ ತಪ್ಪಿಸಿಕೊಳ್ಳುವ ವ್ಯವಸ್ಥೆಯ ದಕ್ಷತೆಯನ್ನು ಪರೀಕ್ಷಿಸಲು ಈ ʼಫ್ಲೈಟ್ ಅಬಾರ್ಟ್ʼ ಪರೀಕ್ಷೆಯನ್ನು ನಡೆಸಲಾಯಿತು, ತುರ್ತು ಸಂದರ್ಭದಲ್ಲಿ ಗಗನಯಾತ್ರಿಗಳು ವಾಹನದಿಂದ ಹೊರಹೋಗಬೇಕಾದ ಸಂದರ್ಭದಲ್ಲಿ … Continued

ಅಕ್ಟೋಬರ್ 21ಕ್ಕೆ ಇಸ್ರೋದ ಗಗನಯಾನದ ಮೊದಲ ಪರೀಕ್ಷಾರ್ಥ ಹಾರಾಟ : ಸಚಿವರು

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ʼಗಗನಯಾನʼಕ್ಕೂ ಮುನ್ನ ಉದ್ದೇಶಿಸಿರುವ ಮೊದಲ ಪರೀಕ್ಷಾ ಹಾರಾಟವನ್ನು ಅಕ್ಟೋಬರ್ 21 ರಂದು ನಡೆಸಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ಹೇಳಿದ್ದಾರೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮುಂದಿನ ವರ್ಷದ ಕೊನೆಯಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನದ ಸಮಯದಲ್ಲಿ ಭಾರತೀಯ … Continued

ಚಂದ್ರಯಾನ-3 : ವಿಕ್ರಂ ಲ್ಯಾಂಡರ್-ಪ್ರಜ್ಞಾನ ರೋವರ್ ಪುನಶ್ಚೇತನದ ಬಗ್ಗೆ ಇಸ್ರೋ ಹೇಳುವುದೇನು..?

ಬೆಂಗಳೂರು : ಚಂದ್ರನ ದಕ್ಷಿಣ ಧ್ರುವದಲ್ಲಿರುವ ಚಂದ್ರಯಾನ-3 ಮಿಷನ್ ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ ರೋವರ್ ಪುನಶ್ಚೇತನ ನೀಡುವ ಪ್ರಯತ್ನವನ್ನು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಕ್ಟೋಬರ್ 6ರ ವರೆಗೂ ಮುಂದುವರಿಸಲಿದೆ. ಚಂದ್ರನ ಮೇಲ್ಮೈ ಮೇಲೆ ವಿಕ್ರಂ ಲ್ಯಾಂಡರ್‌ ಇಳಿದು ನಂತರ 14 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಸದ್ಯ ಆಫ್‌ ಮೋಡ್‌ ನಲ್ಲಿರುವ … Continued

ಚಂದ್ರಯಾನ-3 : ಚಂದ್ರನ ಮೇಲೆ ಬೆಳಗಾಗುತ್ತಿದ್ದಂತೆ ಪ್ರಗ್ಯಾನ್ ರೋವರ್, ವಿಕ್ರಂ ಲ್ಯಾಂಡರ್ ಪುನಶ್ಚೇತನಗೊಳಿಸಲು ಇಸ್ರೋ ಸಿದ್ಧತೆ

ನವದೆಹಲಿ : ಚಂದ್ರನ ದಕ್ಷಿಣ ಧ್ರುವದ ಮೇಲೆ ಬೆಳಕಾಗುತ್ತಿದ್ದಂತೆ, ಇಸ್ರೋ ಈಗ ತನ್ನ ಚಂದ್ರಯಾನ-3 ರ ಸೌರಶಕ್ತಿ ಚಾಲಿತ ಲ್ಯಾಂಡರ್ ವಿಕ್ರಂ ಮತ್ತು ರೋವರ್ ಪ್ರಗ್ಯಾನ್‌ನೊಂದಿಗೆ ಸಂವಹನವನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿದೆ. ಅವುಗಳನ್ನು ಪುನರುಜ್ಜೀವನಗೊಳಿಸಿದರೆ ವೈಜ್ಞಾನಿಕ ಪ್ರಯೋಗಗಳನ್ನು ಮುಂದುವರಿಸಬಹುದಾಗಿದೆ. ಲ್ಯಾಂಡರ್ ಮತ್ತು ರೋವರ್ ಎರಡನ್ನೂ ಈ ತಿಂಗಳ ಆರಂಭದಲ್ಲಿ ಚಂದ್ರನಲ್ಲಿ ರಾತ್ರಿಯಾಗುವ ಮೊದಲು ಕ್ರಮವಾಗಿ ಸೆಪ್ಟೆಂಬರ್ 4 … Continued

ಸುದೀರ್ಘ ಚಂದ್ರನ ರಾತ್ರಿಯ ನಂತರ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್-ಪ್ರಗ್ಯಾನ್‌ ರೋವರ್ ಸೆಪ್ಟೆಂಬರ್ 22 ರಂದು ಎಚ್ಚರಗೊಳ್ಳಲಿದೆ : ಅದಾಗದಿದ್ದರೆ…

ಬೆಂಗಳೂರು :ಚಂದ್ರಯಾನ-3 ರ ಲ್ಯಾಂಡರ್ ಮತ್ತು ರೋವರ್ ಎರಡು ವಾರಗಳ ಸುದೀರ್ಘ ಚಂದ್ರನ ರಾತ್ರಿಯ ನಂತರ ಎಚ್ಚರಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೆಪ್ಟೆಂಬರ್ 2 ರಂದು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಲ್ಯಾಂಡರ್ ವಿಕ್ರಂ ಮತ್ತು ರೋವರ್ ಪ್ರಗ್ಯಾನ್ ಅನ್ನು “ಸುರಕ್ಷಿತವಾಗಿ ನಿಲುಗಡೆಗೊಳಿಸಲಾಗಿದೆ” ಎಂದು ಪ್ರಕಟಿಸಿತು. ಅದರ … Continued

ಭಾರತದ ಸೂರ್ಯಯಾನ ಮಿಷನ್ : ಸೆಲ್ಫಿ ತೆಗೆದುಕೊಂಡ ಆದಿತ್ಯ-L1; ಭೂಮಿ, ಚಂದ್ರನ ಫೋಟೋ ಕ್ಲಿಕ್‌ ಮಾಡಿದ ಬಾಹ್ಯಾಕಾಶ ನೌಕೆ | ವೀಕ್ಷಿಸಿ

ನವದೆಹಲಿ : ಭೂಮಿಯಿಂದ 15 ಲಕ್ಷ ಕಿಮೀ ದೂರದಲ್ಲಿರುವ ತನ್ನ ಗಮ್ಯಸ್ಥಾನವಾದ ಲಗ್ರಾಂಜಿಯನ್ ಪಾಯಿಂಟ್ (ಎಲ್ 1) ಗೆ ಹೋಗುತ್ತಿರುವಾಗ ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ನೌಕೆ, ಆದಿತ್ಯ-ಎಲ್ 1 ತಾನು ತೆಗೆದ ಭೂಮಿಯ ಚಿತ್ರಗಳನ್ನು ಕಳುಹಿಸಿದೆ ಮತ್ತು ಚಂದ್ರನನ್ನೂ ಕ್ಲಿಕ್ಕಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವಿಟರ್‌ನಲ್ಲಿ ಆದಿತ್ಯ-ಎಲ್ 1 ಕ್ಲಿಕ್ ಮಾಡಿದ ಸೆಲ್ಫಿಯೊಂದಿಗೆ … Continued

ಆದಿತ್ಯ-ಎಲ್1 ಮಿಷನ್‌ ಕಾರ್ಯಗತಕ್ಕೆ ಅಡಿಪಾಯ ಹಾಕಿದ್ದ ಯು. ಆರ್. ರಾವ್ ಅವರನ್ನು ನೆನಪಿಸಿಕೊಂಡ ಇಸ್ರೋ

ಬೆಂಗಳೂರು : ಭಾರತದ ಮಹತ್ವಾಕಾಂಕ್ಷೆಯ ಸೌರ ಮಿಷನ್ ಆದಿತ್ಯ-ಎಲ್ 1 ರ ಯಶಸ್ವಿ ಉಡಾವಣೆಯೊಂದಿಗೆ, ಮಾಜಿ ಇಸ್ರೋ ಮುಖ್ಯಸ್ಥ ಪ್ರೊ ಯು ಆರ್ ರಾವ್ ಅವರ ಕನಸು ಮತ್ತು ಆರಂಭಿಕ ಹಂತಗಳಲ್ಲಿ ಅದರ ಸಾಕಾರಕ್ಕೆ ಅವರು ನೀಡಿದ ಕೊಡುಗೆಯನ್ನು ಇಸ್ರೋ ಸ್ಮರಿಸಲಾಯಿತು. ಇಸ್ರೋ ಪ್ರಕಾರ, ಭಾರತದ ಉಪಗ್ರಹ ಕಾರ್ಯಕ್ರಮದ ಪಿತಾಮಹ ಎಂದು ಪ್ರೀತಿಯಿಂದ ಕರೆಯಲಾಗುವ ಪ್ರೊ. … Continued

ಚಂದ್ರಯಾನ-3 : ಚಂದ್ರನ ಮೇಲೆ 100 ಮೀಟರ್‌ ಕ್ರಮಿಸಿದ ಪ್ರಗ್ಯಾನ್ ರೋವರ್

ನವದೆಹಲಿ : ಸೂರ್ಯನ ಅಧ್ಯಯನಕ್ಕೆ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯ ಉಡಾವಣೆಯಾದ ಸಂದರ್ಭದಲ್ಲಿಯೇ ಚಂದ್ರಯಾನ-3ರ ರೋವರ್ ಪ್ರಗ್ಯಾನ್ ಚಂದ್ರನ ಮೇಲೆ ಮತ್ತೊಂದು ಹೆಗ್ಗುರುತನ್ನು ಸ್ಥಾಪಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ರೋವರ್ 100 ಮೀಟರ್‌ಗಿಂತಲೂ ಹೆಚ್ಚು ದೂರ ಕ್ರಮಿಸಿದೆ ಮತ್ತು ಇನ್ನೂ ಪ್ರಬಲವಾಗಿದೆ ಎಂದು ಇಸ್ರೋ ಪ್ರಕಟಿಸಿದೆ. “ಪ್ರಗ್ಯಾನ್ 100*… ಏತನ್ಮಧ್ಯೆ, ಚಂದ್ರನ ಮೇಲೆ, ಪ್ರಗನ್ ರೋವರ್ … Continued

ಸೂರ್ಯಯಾನ ಮಿಷನ್‌ : ಸೂರ್ಯನತ್ತ ಮಹತ್ವಾಕಾಂಕ್ಷಿ ಆದಿತ್ಯ-L1 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

ಶ್ರೀಹರಿಕೋಟಾ: ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ ಏಕೈಕ ರಾಷ್ಟ್ರ ಎಂಬ ಇತಿಹಾಸ ಮಾಡಿದ ದಿನಗಳ ನಂತರ, ಭಾರತವು ಶನಿವಾರ ಆದಿತ್ಯ-ಎಲ್ 1 ಮಿಷನ್‌ನ ಉಡಾವಣೆಯೊಂದಿಗೆ ತನ್ನ ಬಾಹ್ಯಾಕಾಶ ಪರಿಶೋಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದೆ. ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಎಕ್ಸ್‌ಎಲ್‌ನಲ್ಲಿ … Continued