ಉದ್ಧವ್‌ ಠಾಕ್ರೆ ಸ್ವಾರ್ಥ ಸಾಧನೆಗಾಗಿ ಹಮಾಸ್ ಜೊತೆಯೂ ಕೈಜೋಡಿಸಬಹುದು : ದಸರಾ ಸಮಾವೇಶದಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ವಾಗ್ದಾಳಿ

ಮುಂಬೈ : ಉದ್ಧವ್ ಠಾಕ್ರೆ ಮತ್ತು ಅವರ ಶಿವಸೇನೆ ಬಣವು ತಮ್ಮ ಸ್ವಾರ್ಥ ಸಾಧಿಸಲು ಭಯೋತ್ಪಾದಕ ಗುಂಪುಗಳಾದ ಹಮಾಸ್ ಮತ್ತು ಲಷ್ಕರ್-ಎ-ತೊಯ್ಬಾ ಜೊತೆಯೂ ಕೈಜೋಡಿಸಬಹುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ. ಆಜಾದ್ ಮೈದಾನದಲ್ಲಿ ಮಂಗಳವಾರ ನಡೆದ ದಸರಾ ರ್ಯಾಲಿಯಲ್ಲಿ ಮಾತನಾಡಿದ ಶಿಂಧೆ, “ತಮ್ಮ ಸ್ವಾರ್ಥಕ್ಕಾಗಿ ಅವರು ಹಮಾಸ್ ಮತ್ತು ಲಷ್ಕರ್-ಎ-ತೊಯ್ಬಾದೊಂದಿಗೂ … Continued

ಮುಂಬೈ-ಗೋವಾ ಹೆದ್ದಾರಿಯಲ್ಲಿ ಕುಸಿದು ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆ | ವೀಡಿಯೊ

ಮುಂಬೈ-ಗೋವಾ ಚತುಷ್ಪಥ ಹೆದ್ದಾರಿಯ ನಿರ್ಮಾಣ ಹಂತದಲ್ಲಿದ್ದ ಪಿಲ್ಲರ್ ಸೋಮವಾರ ಚಿಪ್ಲುನ್‌ನಲ್ಲಿ ಕುಸಿದು ಬಿದ್ದಿದೆ. ಪಿಲ್ಲರ್ ಕುಸಿದ ಕೆಲವೇ ಕ್ಷಣಗಳಲ್ಲಿ ಮೇಲ್ಸೇತುವೆಯ ಒಂದು ಭಾಗವೂ ಕುಸಿದು ಬಿದ್ದಿದ್ದು, ನಿರ್ಮಾಣ ಸ್ಥಳದಲ್ಲಿ ಬಳಸುತ್ತಿದ್ದ ಕ್ರೇನ್ ಯಂತ್ರಕ್ಕೆ ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಪ್ಲುನ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು … Continued

ಕಂಟೈನರ್‌ ಗೆ ಮಿನಿ ಬಸ್ ಡಿಕ್ಕಿ : 12 ಮಂದಿ ಸಾವು, 23 ಮಂದಿಗೆ ಗಾಯ

ಮುಂಬೈ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ಭಾನುವಾರ ಮುಂಜಾನೆ ಮಿನಿ ಬಸ್ ಕಂಟೈನರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 12 ಜನರು ಸಾವಿಗೀಡಾಗಿದ್ದಾರೆ ಮತ್ತು 23 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಖಾಸಗಿ ಬಸ್‌ನಲ್ಲಿ 35 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈನಿಂದ ಸುಮಾರು 350 ಕಿಮೀ ದೂರದಲ್ಲಿರುವ ಜಿಲ್ಲೆಯ … Continued

ಬೀದರ : ಎಮ್ಮೆ ಕದ್ದು ಪರಾರಿಯಾಗಿದ್ದ ಆರೋಪಿ ಬರೋಬ್ಬರಿ 58 ವರ್ಷಗಳ ನಂತರ ಸಿಕ್ಕಿಬಿದ್ದ….!

ಬೀದರ: ಬರೋಬ್ಬರಿ 58 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎಮ್ಮೆ ಕಳವು ಪ್ರಕರಣದ ಆರೋಪಿಯನ್ನು ಪೊಲೀಸರು ಕೊನೆಗು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 58 ವರ್ಷಗಳ ಹಿಂದೆ ಎಮ್ಮೆ ಕಳುವು ಮಾಡಿದ್ದ ಆರೋಪಿ ಗಣಪತಿ ವಿಠ್ಠಲ ವಾಗ್ದಾರೆ(77) ಎಂಬಾತನನ್ನು ಮೆಹಕರ್‌ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. 1965ರ ಏಪ್ರಿಲ್ 25ರಂದು ಬೀದರಿನ ಮೆಹಕರ್‌ ಪೊಲೀಸ್‌ ಠಾಣೆಯಲ್ಲಿ 2 ಎಮ್ಮೆ 1 … Continued

ಇದೆಂಥ ತರಬೇತಿ..? ತರಬೇತಿ ಹೆಸರಲ್ಲಿ ವಿದ್ಯಾರ್ಥಿಗಳನ್ನು ದೊಣ್ಣೆಯಿಂದ ಅಮಾನುಷವಾಗಿ ಥಳಿಸಿದ ಸೀನಿಯರ್‌ ಎನ್‌ಸಿಸಿ ಕೆಡೆಟ್ : ವೀಡಿಯೊ ವೈರಲ್‌

ಮುಂಬೈ: ಶಾಲಾ-ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಯ ಭಾಗವಾಗಿರುವ ನ್ಯಾಷನಲ್ ಕೆಡೆಟ್ ಕಾರ್ಪ್ಸ್‌(ಎನ್‌ಸಿಸಿ)ನ ಸೀನಿಯರ್ ವಿದ್ಯಾರ್ಥಿಯೊಬ್ಬ ಜೂನಿಯರ್‌ಗಳಿಗೆ ಮನಬಂದಂತೆ ಬಡಿಗೆಯಿಂದ ಥಳಿಸಿದ ಘಟನೆಯ ವೀಡಿಯೊ ವೈರಲ್ ಆಗಿದೆ. ಮುಂಬೈ ಸಮೀಪದ ಥಾಣೆಯ ಬಂದೋಡ್ಕರ ಕಾಲೇಜಿನಲ್ಲಿನ ಎನ್‌ಸಿಸಿ ತರಬೇತಿಯ ವೇಳೆ ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗಿದ್ದು, ಘಟನೆಯನ್ನು ದೂರದಿಂದ ನೋಡುತ್ತಿದ್ದ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ವೈರಲ್​ ಆಗಿರುವ … Continued

ಭಾರೀ ಮಳೆಗೆ ರಾಯಗಢ ಜಿಲ್ಲೆಯಲ್ಲಿ ಭೂಕುಸಿತ : 13 ಮಂದಿ ಸಾವು

ಮುಂಬೈ: ಗುರುವಾರ ಮುಂಜಾನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದಾರೆ ಮತ್ತು ಹಲವರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸುಮಾರು 48 ಕುಟುಂಬಗಳ ಮೇಲೆ ಇದು ಪರಿಣಾಮ ಬೀರಿವೆ. ಮುಂಬೈನಿಂದ 80 ಕಿಮೀ ದೂರದಲ್ಲಿರುವ ಖಲಾಪುರ್ ತಹಸಿಲ್‌ನ ಇರ್ಶಲ್ವಾಡಿ ಗ್ರಾಮದಲ್ಲಿ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ ಎಂದು … Continued

ಮಹಾರಾಷ್ಟ್ರ | ಸಿಎಂ ಶಿಂಧೆ ಸಂಪುಟ ಪುನರ್ರಚನೆ ; ಹಣಕಾಸು ಖಾತೆ ಸೇರಿ ಅಜಿತ್‌ ಪವಾರ್‌ ಬಣಕ್ಕೆ ಪ್ರಮುಖ ಖಾತೆಗಳು

ಮುಂಬೈ: ಎನ್‌ಸಿಪಿ ಬಂಡಾಯ ಶಾಸಕರು ಮಹಾರಾಷ್ಟ್ರ ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದ ನಂತರ ಸಂಪುಟ ಪುನರ್ರರಚನೆ ಮಾಡಲಾಗಿದೆ. ಉಪಮುಖ್ಯಮಂತ್ರಿ ಅಜಿತ ಪವಾರ್‌ ಅವರಿಗೆ ಹಣಕಾಸು ಮತ್ತು ಯೋಜನೆ ಹಾಗೂ ಛಗನ್‌ ಭುಜಬುಲ್‌ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ನೀಡಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣದ ಕೆಲ ಶಾಸಕರ ವಿರೋಧದ … Continued

ಮಹಾರಾಷ್ಟ್ರದಲ್ಲಿ ವಾರ್ಕರಿ ಯಾತ್ರಿಕರ ಮೇಲೆ ಪೊಲೀಸರಿಂದ ಲಾಠಿಚಾರ್ಜ್ : ವಿಪಕ್ಷಗಳ ಆರೋಪ ; ಆರೋಪ ತಳ್ಳಿಹಾಕಿದ ಫಡ್ನವಿಸ್

ಮುಂಬೈ: ಪಂಢರಪುರದ ದೇವಸ್ಥಾನಕ್ಕೆ ತೆರಳುತ್ತಿದ್ದ ವಾರಕರಿ ಭಕ್ತರ ಮೇಲೆ ಮಹಾರಾಷ್ಟ್ರ ಪೊಲೀಸರು ಭಾನುವಾರ ಪುಣೆ ಜಿಲ್ಲೆಯಲ್ಲಿ ಲಾಠಿ ಚಾರ್ಜ್ ಮಾಡಿದ್ದಾರೆ. ಮೆರವಣಿಗೆ ವೇಳೆ ಭಕ್ತರು ಪೊಲೀಸರೊಂದಿಗೆ ವಾಗ್ವಾದ ನಡೆಯಿತು ಎಂದು ಮೂಲಗಳು ತಿಳಿಸಿವೆ. ಅಳಂಡಿಯ ಶ್ರೀ ಕ್ಷೇತ್ರ ದೇವಸ್ಥಾನಕ್ಕೆ ಸಮಾರಂಭವೊಂದಕ್ಕೆ ಪ್ರವೇಶ ಮಾಡುವ ವೇಳೆ ವಾಗ್ವಾದ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರ ಪ್ರಕಾರ, … Continued

ತೀವ್ರ ಚಂಡಮಾರುತವಾಗಿ ರೂಪುಗೊಂಡ ‘ಬಿಪರ್‌ಜೋಯ್’ ಚಂಡಮಾರುತ ; ಕರ್ನಾಟಕ, ಮಹಾರಾಷ್ಟ್ರ ಸೇರಿ ನಾಲ್ಕು ರಾಜ್ಯಗಳಲ್ಲಿ ಪರಿಣಾಮ: ಐಎಂಡಿ

ನವದೆಹಲಿ: ಕಳೆದ 6 ಗಂಟೆಗಳಲ್ಲಿ 2 ಕಿಮೀ ವೇಗದಲ್ಲಿ ಉತ್ತರಾಭಿಮುಖವಾಗಿ ಚಲಿಸಿದ ‘ಬಿಪರ್‌ಜೋಯ್’ ಹೆಸರಿನ ಚಂಡಮಾರುತವು ತೀವ್ರ ಚಂಡಮಾರುತವಾಗಿ ಪರಿವರ್ತನೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬುಧವಾರ ತಿಳಿಸಿದೆ. ಐಎಂಡಿ (IMD)ಯು ಬುಧವಾರ ಬೆಳಿಗ್ಗೆ 9ಕ್ಕೆ ನವೀಕರಿಸಲಾದ ಇತ್ತೀಚಿನ ಬುಲೆಟಿನ್‌ನಲ್ಲಿ ತನ್ನ ತೀವ್ರತೆಯನ್ನು ಉಳಿಸಿಕೊಂಡು ಮುಂದಿನ 24 ಗಂಟೆಗಳಲ್ಲಿ ಸುಮಾರು ಉತ್ತರದ ಕಡೆಗೆ ಚಲಿಸುವ … Continued

ಮೈಯಲ್ಲಿ ಹೊಕ್ಕ ‘ಭೂತʼ ಓಡಿಸಲು ಮಾಂತ್ರಿಕನಿಂದ ಬಾಲಕನಿಗೆ ಥಳಿತ : ಗಾಯಗಳಿಂದ ಬಾಲಕ ಸಾವು

ಮುಂಬೈ,: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ 14 ವರ್ಷದ ಅಸ್ವಸ್ಥ ಬಾಲಕನೊಬ್ಬನಿಗೆ ಮೈಯಲ್ಲಿ ಹೊಕ್ಕಿರುವ ಭೂತ ಬಿಡಿಸುವುದಾಗಿ ಹೇಳಿ ಮಾಂತ್ರಿಕರೊಬ್ಬರು ತೀವ್ರವಾಗಿ ಥಳಿಸಿದ ನಂತರ ಆತ ಸಾವಿಗೀಡಾಗಿದ್ದಾನೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಜಿಲ್ಲೆಯ ಕವಠೆ ಮಹಾಂಕಲ್‌ನಲ್ಲಿ ವಾಸವಿದ್ದ ಆರ್ಯನ್ ದೀಪಕ್ ಲಾಂಜೆ ಎಂಬ ಹದಹರೆಯದ ಬಾಲಕ ಮೇ 20 ರಂದು ಗಾಯಗೊಂಡು ಮೃತಪಟ್ಟಿದ್ದಾನೆ. ಆದರೆ ಮೂಢನಂಬಿಕೆ … Continued