ಬೇಡ್ತಿ-ಅಘನಾಶಿನಿ ನದಿ ಜೋಡಣೆ ಯೋಜನೆಗೆ ವಿರೋಧ ; ಸ್ವರ್ಣವಲ್ಲೀ ಶ್ರೀಗಳ ನೇತೃತ್ವದ ಹೋರಾಟಕ್ಕೆ ಸಂಪೂರ್ಣ ಬೆಂಬಲ ; ಶಾಸಕ ಭೀಮಣ್ಣ ನಾಯ್ಕ

ಶಿರಸಿ : ಬೇಡ್ತಿ ಹಾಗೂ ಅಘನಾಶಿನಿ ನದಿ ಜೋಡಣೆ ಯೋಜನೆಯನ್ನು ಸಾರ್ವಜನಿಕರೊಂದಿಗೆ ನಾವು ಒಕ್ಕೊರಲಿನಿಂದ ವಿರೋಧಿಸುತ್ತಿದ್ದೇವೆ. ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿನ‌ ಸಮಾವೇಶವನ್ನು ನಾವು ಬೆಂಬಲಿಸುತ್ತೇನೆ. ಸರ್ಕಾರ ಈ ಯೋಜನೆ ಕೈಬಿಡಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಒತ್ತಾಯಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಮಾತನಾಡಿದ ಅವರು, ಬೇಡ್ತಿ – ವರದಾ ಹಾಗೂ ಅಘನಾಶಿನಿ – … Continued

ಶಿರಸಿ-ಕುಮಟಾ ರಸ್ತೆಯಲ್ಲಿ ಡಿಸೆಂಬರ್‌ 30 ರಿಂದ ಬಸ್ ಸಂಚಾರ ; ಜಿಲ್ಲಾಧಿಕಾರಿ

ಕಾರವಾರ : ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ-766 ಇ ರಸ್ತೆಯಲ್ಲಿ ಡಿಸೆಂಬರ್‌ 30ರಿಂದ ಪುನಃ ಬಸ್ ಸಂಚಾರಕ್ಕೆ ಅನುವು ಮಾಡಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಪೊಲೀಸ್ ಅಧೀಕ್ಷಕರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ವರದಿ ಆಧಾರದ ಮೇಲೆ ಸದರಿ ರಸ್ತೆಯಲ್ಲಿ ಡಿಸೆಂಬರ್‌ 30 … Continued

ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೃಷ್ಣಮೂರ್ತಿ ಕೆರೆಗದ್ದೆ ಆಯ್ಕೆ

ಶಿರಸಿ: ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಮುಂದಿನ 3 ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ವಿಜಯ ಕರ್ನಾಟಕ ವರದಿಗಾರ ಕೃಷ್ಣಮೂರ್ತಿ ಕೆರೆಗದ್ದೆ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶನಿವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಚುನಾವಣೆಯಲ್ಲಿ ಕೃಷ್ಣಮೂರ್ತಿ ಕೆರೆಗದ್ದೆ 23 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ವಿಶ್ವವಾಣಿ ಜಿಲ್ಲಾ ವರದಿಗಾರ್ತಿ ವಿನುತಾ ಹೆಗಡೆ 6 ಮತಗಳನ್ನು ಪಡೆದರು. … Continued

ಶಿರಸಿ ; ಡ್ರೀಮ್‌ ಪಾರ್ಕ್‌ ದ್ವಿತೀಯ ವಾರ್ಷಿಕೋತ್ಸವ

 ಶಿರಸಿ: ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡು, ನಗರದ ಹೊರವಲಯದಲ್ಲಿ,  ಫೆಂಟಾಸಿಯಾ, ಗೋಕುಲ್, ಮಾರಿಗೋಲ್ಡ್, ಮತ್ತು ಮ್ಯಾಗ್ನೋಲಿಯಾ ಬಹುಮಹಡಿ ಕಟ್ಟಡ ಸಮುಚ್ಚಯಗಳು, ಹಿರಿಯ ನಾಗರಿಕರಿಗಾಗಿನ ವಾತ್ಸಲ್ಯಮನೆ, ನಿಸರ್ಗ ಚಿಕಿತ್ಸಾಲಯ ಮತ್ತು ಅನೇಕ ಖಾಸಗಿ ಮನೆ ಮತ್ತು ನಿವೇಶನಗಳನ್ನು ಹೊಂದಿರುವ ಡ್ರೀಮ್ ಪಾರ್ಕಿನ ನಿವಾಸಿಗಳ ಸಂಘದವರು ನ. 29ರಂದು ಏರ್ಪಡಿಸಿದ್ದ ದ್ವಿತೀಯ ವಾರ್ಷಿಕೋತ್ಸವವು ಅತ್ಯಂತ ಸಂಭ್ರಮದಿಂದ ನಡೆಯಿತು. ಮುಖ್ಯ ಅತಿಥಿಗಳಾಗಿ … Continued

ವೀಡಿಯೊ…: 14 ಅಡಿ ಉದ್ದದ ಬೃಹತ್‌ ಕಾಳಿಂಗ ಸರ್ಪದ ರಕ್ಷಣೆ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ರಾಗಿಹೊಸಳ್ಳಿಯ ಮನೆಯೊಂದರ ತೋಟದಲ್ಲಿ ಎರಡು ದಿನಗಳ ಹಿಂದೆ ಬೃಹತ್‌ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಕುಮಟಾದ ಪವನ್‌ ನಾಯ್ಕ ಸೆರೆ ಹಿಡಿದಿದ್ದಾರೆ. ರಾಗಿಹೊಸಳ್ಳಿಯ ಪ್ರಶಾಂತ ಹೆಗಡೆ ಎಂಬವರ ಮನೆಯ ತೋಟಕ್ಕೆ ಹಾಕಲಾಗಿದ್ದ ಬಲೆಯ ಬೇಲಿಯಲ್ಲಿ ಈ ಕಾಳಿಂಗ ಸರ್ಪ ಎರಡು ದಿನಗಳಿಂದ ಓಡಾಡುತ್ತಿತ್ತು. ಇದನ್ನು ಕಂಡ … Continued

ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರರಿಗೆ ಕಾಂತಾವರ ಕನ್ನಡ ಸಂಘದ ʼಯಕ್ಷಗಾನ ಸಾಹಿತ್ಯ ಸಂಶೋಧನಾ ಪ್ರಶಸ್ತಿʼ

ಉಡುಪಿ: ಕಾಂತಾವರ ಕನ್ನಡ ಸಂಘವು ಕೊಡಮಾಡುವ ಸಾಹಿತ್ಯ, ಸಂಶೋಧನೆ, ಪತ್ರಿಕೋದ್ಯಮ, ಶಿಕ್ಷಣ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಏಳು ಜನ ಸಾಧಕರಿಗೆ ಸಂಘದ ಪ್ರತಿಷ್ಠಿತ ದತ್ತಿ ನಿಧಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಅಲ್ಲದೆ ಓರ್ವರಿಗೆ ವಾರ್ಷಿಕ ಗೌರ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಇದನ್ನು ಡಿಸೆಂಬರ್‌ 28ರಂದು ನಡೆಯುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರ ಕನ್ನಡ ಸಂಘದ … Continued

ವೀಡಿಯೊ…| ಶಿರಸಿ : ಶಾಸಕರ ತೋಟದ ಮನೆಗೆ ಬಂದು ನಾಯಿ ಮರಿ ಹೊತ್ತೊಯ್ದ ಚಿರತೆ

ಶಿರಸಿ :ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರ ಶಿರಸಿ ತಾಲೂಕಿನ ಮಳಲಗಾಂವದ ತೋಟದ ಮನೆಗೆ ಚಿರತೆಯೊಂದು ಒಳಗೆ ಬಂದು ನಾಯಿ ಮರಿಯನ್ನು ಹೊತ್ತೊಯ್ದಿದೆ ಎಂದು ವರದಿಯಾಗಿದೆ. ಮಂಗಳವಾರ ಬೆಳಗಿನ ಜಾವ 1ರಿಂದ 1:30ರ ಸುಮಾರಿಗೆ ಚಿರತೆ  ಮನೆಯ ಆವರಣದೊಳಗೆ ಪ್ರವೇಶಿಸಿದೆ.  ಚಿರತೆ ಒಳಗೆ ಬಂದ ದೃಶ್ಯ ಸಿಸಿಟಿವಿಯಲ್ಲಿ … Continued

ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ : ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಶಿರಸಿ : ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ  ಚುನಾವಣೆಯಲ್ಲಿ ಅಧ್ಯಕ್ಷರಾಗಿ ನರಸಿಂಹ ಅಡಿ ಆಯ್ಕೆಯಾಗಿದ್ದಾರೆ. ಅವರು ಚಲಾವಣೆಯಾದ ಮತಗಳಲ್ಲಿ 59 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಪ್ರದೀಪ ರಾಮಚಂದ್ರ ಶೆಟ್ಟಿ 50 ಮತಗಳನ್ನು ಪಡೆದಿದ್ದಾರೆ. ನರಸಿಂಹ ಅಡಿ 9 ಮತಗಳಿಂದ ಜಯಗಳಿಸಿದ್ದಾರೆ. ಮೂವರು ಉಪಾಧ್ಯಕ್ಷ ಸ್ಥಾನಗಳಿಗೆ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದು, ಇವರಲ್ಲಿ ಮಾರುತಿ … Continued

ಶಿರಸಿ : ಅಡಕೆಗೆ ಎಲೆ ಚುಕ್ಕೆ ರೋಗ ನಿವಾರಣೆಗೆ ಶ್ರೀ ಕ್ಷೇತ್ರ ಮಂಜುಗುಣಿಯಲ್ಲಿ ವೃಕ್ಷೋತ್ಪಾತ ಶಾಂತಿ ಹವನ

ಶಿರಸಿ: ಅಡಕೆಗೆ ತಗುಲಿದ ಎಲೆಚುಕ್ಕೆ ರೋಗ ನಿವಾರಣೆ ಸಂಬಂಧ ವೃಕ್ಷೋತ್ಪಾತ ಶಾಂತಿ ಹವನವು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶ್ರೀಕ್ಷೇತ್ರ, ಕರ್ನಾಟಕದ ತಿರುಪತಿ ಮಂಜುಗುಣಿಯ ಶ್ರೀವೇಂಕಟರಮಣ ದೇವಸ್ಥಾನದಲ್ಲಿ ಸೋಮವಾರ ನೆರವೇರಿತು. ಶ್ರೀದೇವರ ಸನ್ನಿಧಾನದಲ್ಲಿ ಸ್ವರ್ಣಪಾದುಕೆ ಹಾಗೂ ಕ್ಷೀರಭಸ್ಮಕ್ಕೆ ಪೂಜೆಯ ಜೊತೆಗೆ ರೋಗ ನಿವಾರಣೆಗಾಗಿ ಸಾಮೂಹಿಕ ಪ್ರಾರ್ಥನೆಯನ್ನು ಶ್ರೀ ದೇವಸ್ಥಾನದ ಪ್ರಧಾನ ಅರ್ಚಕ ವೇ. ಮೂ. … Continued

ಉತ್ತರ ಕನ್ನಡ ಜಿಲ್ಲೆ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ

ಶಿರಸಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2025 – 28ನೇ ಸಾಲಿಗಾಗಿ ರಾಜ್ಯ ಮತ್ತು ರಾಜ್ಯದ ಎಲ್ಲ ಜಿಲ್ಲೆಗಳ ಘಟಕಗಳ ಪದಾಧಿಕಾರಿ ಹುದ್ದೆಗಳಿಗೆ ಚುನಾವಣೆ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮತ್ತು ಇತರ ಹುದ್ದೆಗಳಿಗೆ ನವೆಂಬರ 9 ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್‌ 13ರಂದು ಜಿಲ್ಲಾ ಪತ್ರಿಕಾ … Continued