ಶಿರಸಿ: ಖ್ಯಾತ ಆಯುರ್ವೇದ ವೈದ್ಯ ಡಾ.ಸಾಂಬಮೂರ್ತಿ ನಿಧನ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಹೆಸರಾಂತ ಆಯುರ್ವೇದ ವೈದ್ಯರಾಗಿದ್ದ ಹಾಗೂ ಶಿರಸಿಯ ಸಮೀಕ್ಷಾ ಆಯುರ್ವೇದ ಚಿಕಿತ್ಸಾಲಯದ ಸಂಸ್ಥಾಪಕರಾಗಿದ್ದ ಡಾ.ಸಾಂಬಮೂರ್ತಿ ಗಾಯತ್ರಿ (57) ಇಂದು, ಸೋಮವಾರ  ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರು, ಪ್ರಖ್ಯಾತ ಆಯುರ್ವೇದ ತಜ್ಞೆ ಪತ್ನಿ ಡಾ.ಸಾವಿತ್ರಿ, ಪುತ್ರ ಸಂಯಮ ಹಾಗೂ ಪುತ್ರಿ ಸಂಜ್ಞಾ ಅವರನ್ನು ಅಗಲಿದ್ದಾರೆ. ಮೂಲತಃ ಗೋಕರ್ಣದವರಾದ ಡಾ.ಸಾಂಬಮೂರ್ತಿಯವರು ಗುರು ಶಿಷ್ಯ ಪರಂಪರೆಯಡಿ ತಮ್ಮ … Continued

ಏಪ್ರಿಲ್‌ 15ರಂದು ಸ್ವರ್ಣವಲ್ಲೀ ಮಠದ ರಾಜಗೋಪುರ ಸಮರ್ಪಣೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಇನ್ನೊಂದು ದಾಖಲೆ ಕಾರ್ಯಕ್ಕೆ‌ ಸಾಕ್ಷಿಯಾಗಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳ‌ ಮೂಲಕ ಬಹು‌ ನಿರೀಕ್ಷಿತ ಗೋಪುರದ ಸಮರ್ಪಣೆ ಕಾರ್ಯಕ್ರಮ ಏಪ್ರಿಲ್‌ 15ರಂದು ನಡೆಯಲಿದೆ. ಸ್ವರ್ಣವಲ್ಲೀ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸಂಕಲ್ಪದಂತೆ ದ್ರಾವಿಡ ಶೈಲಿಯಲ್ಲಿ ಉತ್ತರ ದಿಕ್ಕಿನ ಏಳು ಅಂತಸ್ತಿನ ರಾಜಗೋಪುರ, ಮಹಾದ್ವಾರ … Continued

ಶಿರಸಿ: ಬಚ್ಚಲು ಮನೆಯಲ್ಲಿ ಅಡಗಿದ್ದ ದೈತ್ಯ ಕಾಳಿಂಗ ಸರ್ಪ…ಹಿಡಿಯಲು ಬಂದವನ ಮೇಲೆಯೇ ದಾಳಿ…ಸ್ವಲ್ಪದರಲ್ಲೇ ಅಪಾಯದಿಂದ ಪಾರು…ವೀಕ್ಷಿಸಿ

ಶಿರಸಿ: ಸ್ನಾನದ ಮನೆ ಸೇರಿಕೊಂಡಿದ್ದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡುವ ವೇಳೆ ಅದನ್ನು ಹಿಡಿಯಲು ಬಂದ ಉರಗ ಸಂರಕ್ಷಕನ ಮೇಲೆಯೇ ಕಾಳಿಂಗ ಸರ್ಪವು ದಾಳಿಗೆ ಯತ್ನಿಸಿದ್ದು, ಅವರು ಸ್ವಲ್ಪದರಲ್ಲೇ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ರಾಗಿಹೊಸಳ್ಳಿ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಹೆಚ್ಚಾಗಿ ತಂಪು ಪ್ರದೇಶದಲ್ಲಿ ವಾಸಿಸುವ ಕಾಳಿಂಗ ಸರ್ಪಗಳು ಬೇಸಿಗೆ … Continued

ಬಿಸಲಕೊಪ್ಪ, ಎಕ್ಕಂಬಿ ಪ್ರದೇಶದಲ್ಲಿ ಕಾಡಾನೆ ಹಿಂಡುಗಳ ಸುತ್ತಾಟ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ‌ ಬನವಾಸಿ ವಲಯ ಅರಣ್ಯ ವ್ಯಾಪ್ತಿಯ ಬಿಸಲಕೊಪ್ಪ ಗ್ರಾಮ ಪಂಚಾಯತದ ಬಿಸಲಕೊಪ್ಪ, ಎಕ್ಕಂಬಿ ಭಾಗಗಳಲ್ಲಿ ಆನೆಗಳ‌ ಹಿಂಡು ಪ್ರತ್ಯಕ್ಷವಾಗಿವೆ ಎಂದು ವರದಿಯಾಗಿದೆ. ಬಿಸಲಕೊಪ್ಪ ಸುತ್ತಲಿನ ಅರಣ್ಯ ಪ್ರದೇಶ ಹಾಗೂ ಗ್ರಾಮೀಣ ಭಾಗದಲ್ಲಿ ನಾಲ್ಕು ಆನೆಗಳ ಹಿಂಡು ಸುತ್ತಾಟ ನಡೆಸಿವೆ ಎನ್ನಲಾಗಿದೆ. ನಾಲ್ಕು ಆನೆಗಳಲ್ಲಿ‌ ಒಂದು‌ ಮರಿ, ಒಂದು ಗಂಡು … Continued

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದರೆ ಅತ್ಯಂತ ಸಂತೋಷದ ಸಂಗತಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಶಿರಸಿ: ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದರೆ ಅತ್ಯಂತ ಸಂತೋಷದ ಸಂಗತಿ. ಪ್ರಸ್ತಾಪವಿದ್ದರೆ ಅದ‌ನ್ನು ಸ್ವಾಗತಿಸುವುದಾಗಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಶಿರಸಿ ಮಾರಿಕಾಂಬಾ ದೇವಿ ಜಾತ್ರಾ ಸಮಯದಲ್ಲಿ ದೇವಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಗವದ್ಗೀತೆ ಪಠ್ಯದಲ್ಲಿ ಅಳವಡಿಸುವುದನ್ನು ಯಾವ ರೀತಿ ಮಾಡಬೇಕು ಎಂದು ಶಿಕ್ಷಣ … Continued

ಶಿರಸಿ ಮಾರಿಕಾಂಬಾ ಜಾತ್ರೆ: ನಿನ್ನೆ ಗಾಳಿ ಮಳೆಗೆ ಜಾತ್ರೆಪೇಟೆ ಅಸ್ತವ್ಯಸ್ಥ…ಇಂದು ಕಾಲಿಡಲಾಗದಷ್ಟು ಜನ..!

ಶಿರಸಿ: ನಿನ್ನೆ, ಶುಕ್ರವಾರ ಗಾಳಿಮಳೆಯಿಂದ ಅಸ್ತವ್ಯಸ್ಥವಾಗಿದ್ದ ರಾಜ್ಯದ ಅತಿದೊಡ್ಡ ಜಾತ್ರೆಯಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆಗೆ ಶನಿವಾರ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ದೇವಿ ದರ್ಶನಕ್ಕೆ ಭಾರೀ ಸರತಿ ಸಾಲು ನಿರ್ಮಾಣವಾಗಿತ್ತು.ಇಲ್ಲಿನ ಬಿಡಕಿ ಬೈಲಿನ ದೇವಿ ಗದ್ದುಗೆ ಬಳಿ ಬೆಳ್ಳಂಬೆಳಗ್ಗೆಯೇ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. … Continued

ಶಿರಸಿ: ಯಕ್ಷಗಾನ ಪ್ರಸಂಗಕರ್ತೃ ಡಿ.ಎಸ್. ಶ್ರೀಧರರಿಗೆ ಪಾರ್ತಿಸುಬ್ಬ ಪ್ರಶಸ್ತಿ-ಹಲವು ಸಾಧಕರಿಗೆ ಯಕ್ಷಸಿರಿ ಪ್ರಶಸ್ತಿ ಪ್ರದಾನ

ಶಿರಸಿ: ಇಲ್ಲಿನ ಟಿ.ಆರ್.ಸಿ. ಸಭಾಂಗಣದಲ್ಲಿ ರಾಜ್ಯ ಯಕ್ಷಗಾನ ಅಕಾಡೆಮಿಯು ಭಾನುವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ 2020ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ, ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ, ಯಕ್ಷ ಸಿರಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಯಕ್ಷಗಾನದ ಅರ್ಥಧಾರಿ ಹಾಗೂ ಪ್ರಸಂಗಕರ್ತೃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ದರೇಮನೆಯ ನಿಟ್ಟೂರಿನ ಡಿ.ಎಸ್.ಶ್ರೀಧರ ಅವರು … Continued

ಶಿರಸಿ: ಉಪನ್ಯಾಸಕನ ಹುದ್ದೆ ಕೊಡಿಸುವುದಾಗಿ ನಂಬಿಸಿ ಬಲವಂತವಾಗಿ ಮಹಿಳೆ ಜೊತೆ ಅಶ್ಲೀಲ ಫೋಟೋ ತೆಗೆದು ಬ್ಲ್ಯಾಕ್‌ ಮೇಲ್ – ಮೂವರ ಬಂಧನ

ಶಿರಸಿ: ಉದ್ಯೋಗ ಕೊಡಿಸುವುದಾಗಿ ಹೇಳಿ ಬ್ಲ್ಯಾಕ್‌ ಮೇಲ್‌ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರನ್ನು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಶಿರಸಿ ಉಂಚಳ್ಳಿ  ಕೆರೆಜಡ್ಡಿಯ ಅಜಿತ ಶ್ರೀಕಾಂತ್ ನಾಡಿಗ (25), ಬನವಾಸಿಯ ಧನುಶ್ಯ ಕುಮಾರ್ ಅಲಿಯಾಸ್‌ ದಿಲೀಪ್ ಕುಮಾರ್ ಶೆಟ್ಟಿ (25) ಮತ್ತು ಶಿವಮೊಗ್ಗ ನಗರದ … Continued

ಶಿರಸಿಯಲ್ಲಿ 5 ಕೋಟಿ ಮೌಲ್ಯದ ಅಂಬರ್ ಗ್ರೀಸ್ (ತಿಮಿಂಗಿಲದ ವಾಂತಿ) ವಶ : ಇಬ್ಬರ ಬಂಧನ

ಶಿರಸಿ: ಸುಮಾರು ಐದು ಕೋಟಿ ರೂ. ಮೌಲ್ಯದ ನಿಷೇಧಿತ ಅಂಬರ್ ಗ್ರೀಸ್ (ತಿಮಿಂಗಿಲದ ವಾಂತಿ) ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಬೆಳಗಾವಿ ಮೂಲದ ಸಂತೋಷ್ ಕಾಮತ್, ಶಿರಸಿಯ ಮರಾಠಿಕೊಪ್ಪದ  ರಾಜೇಶ  ಬಂಧಿತ ಆರೋಪಿಗಳಾಗಿದ್ದು, ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಚಿತ ಮಾಹಿತಿ … Continued

ಯಕ್ಷರಂಗದ ಗೋಡೆ, ನಾರಾಯಣ ಹೆಗಡೆಗೆ ಅನಂತ ಶ್ರೀ ಪ್ರಶಸ್ತಿ ಪ್ರಕಟ

ಶಿರಸಿ: ಬಡಗುತಿಟ್ಟು ಯಕ್ಷಗಾನದ ಮೇರು‌ ಕಲಾವಿದ ಯಕ್ಷರಂಗದ ಗೋಡೆ ಎಂದೇ ಖ್ಯಾತರಾದ ಗೋಡೆ ನಾರಾಯಣ ಹೆಗಡೆ ಅವರಿಗೆ‌ ಪ್ರತಿಷ್ಠಿತ ಅನಂತ ಶ್ರೀ ಪ್ರಶಸ್ತಿ ಪ್ರಕಟವಾಗಿದೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಯಕ್ಷಗಾನದ ಖ್ಯಾತ ಭಾಗ್ವತ ಕೇಶವ ಹೆಗಡೆ ಕೊಳಗಿ, ಖ್ಯಾತ ತಾಳಮದ್ದಳೆ ಅರ್ಥಧಾರಿ ಉಮಾಕಾಂತ ಭಟ್ಟ ಕೆರೇಕೈ … Continued