ಅಂಕೋಲಾ: ತೋಟದಲ್ಲಿ ಮೊಟ್ಟೆ ಇಟ್ಟಿದ್ದ ನವಿಲು ನುಂಗಿ ಬಂಧಿಯಾದ ಹೆಬ್ಬಾವು | ವೀಕ್ಷಿಸಿ

ಅಂಕೋಲಾ : ಬೃಹತ್ ಹೆಬ್ಬಾವೊಂದು ಪ್ರತಕ್ಷವಾಗಿ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಜಮಗೋಡ್‌ನಲ್ಲಿ ಎಂಬಲ್ಲಿ ನಡೆದಿದೆ. ಜಮಗೋಡದ ವಕೀಲ ಬೀರಣ್ಣ ನಾಯಕ ಎನ್ನುವವರ ಮನೆಯ ತೋಟದಲ್ಲಿ ನವಿಲು ಮೊಟ್ಟೆ ಇಟ್ಟು ಅದರಲ್ಲಿ ಕುಳಿತಿತ್ತು. ಅದನ್ನು ಕಂಡಿದ್ದ ಸುಮಾರು 14 ಅಡಿ ಉದ್ದದ ಹೆಬ್ಬಾವು, ನವಿಲನ್ನು ಬೇಟೆಯಾಡಿ ನುಂಗಿ ಹಾಕಿದೆ. … Continued

ಸಿದ್ದಾಪುರ: ಆಗಸ್ಟ್‌ 6ರಂದು ʼಮಾಸದ ನೆನಪುಗಳುʼ ಕೃತಿ ಬಿಡುಗಡೆ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಪತ್ರಕರ್ತ ಗಂಗಾಧರ ಕೊಳಗಿ ಅವರ ಮಾಸದ ನೆನಪುಗಳು ಕೃತಿ ಬಿಡುಗಡೆ ಸಮಾರಂಭ ಆಗಸ್ಟ್‌ 6 ರಂದು, ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಸಿದ್ದಾಪುರದ ಲಯನ್ಸ್‌ ಬಾಲಭವನದಲ್ಲಿ ನಡೆಯಲಿದೆ. ಸಾಹಿತಿಗಳು ಹಾಗೂ ವಿಮರ್ಷಕರಾದ ಬೆಳಗಾವಿ ಡಾ.ಮೈತ್ರೇಯಿಣಿ ಗದಿಗೆಪ್ಪ ಗೌಡ ಅವರು ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಉತ್ತರ … Continued

ಉತ್ತರ ಕನ್ನಡದಲ್ಲಿ ಶಂಕಿತ ಮಂಕಿ ಪಾಕ್ಸ್ ಪ್ರಕರಣ ಪತ್ತೆ…?

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೆಟ್‌ ಕ್ಯಾಂಪ್‌ನಲ್ಲಿ ಶಂಕಿತ ಮಂಕಿ ಪಾಕ್ಸ್ ಪ್ರಕರಣ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಬೆಲ್ಜಿಯಂನಿಂದ ವಾಪಸಾಗಿದ್ದ 9 ವರ್ಷದ ಬಾಲಕನಿಗೆ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಜುಲೈ 1ರಂದು ಬಾಲಕ ತಮ್ಮ ಪೋಷಕರೊಂದಿಗೆ ಬೆಲ್ಜಿಯಂನಿಂದ ದೆಹಲಿ, ಹಿಮಾಲಯ ಪ್ರದೇಶ ಹಾಗೂ ಮಹಾರಾಷ್ಟ್ರ ಮೂಲಕ ಭಾರತಕ್ಕೆ ವಾಪಸಾಗಿದ್ದ ಬಾಲಕ ಜು.27ರಂದು … Continued

ಪ್ರವಾಹ ಪೀಡಿತ ಭಟ್ಕಳಕ್ಕೆ ಇಂದು ಸಂಜೆ 4 ಗಂಟೆಗೆ ಸಿಎಂ ಬೊಮ್ಮಾಯಿ ಭೇಟಿ

ಕಾರವಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸಂಜೆ 4 ಗಂಟೆಗೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಭಟ್ಕಳ ತಾಲೂಕಿಗೆ ಇಂದು ಬುಧವಾರ ಭೇಟಿ ನೀಡಲಿದ್ದಾರೆ. ಬೆಂಗಳೂರಿನಿಂದ ವಿಮಾನದಲ್ಲಿ ಗೋವಾಕ್ಕೆ ಬಂದು ಅಲ್ಲಿಂದ ರಸ್ತೆ ಮೂಲಕ ಭಟ್ಕಳಕ್ಕೆ ಪ್ರಯಾಣಿಸಲಿದ್ದಾರೆ ಎಂದು ತಿಳಿಸಲಾಗಿದೆ. ಕಂದಾಯ ಸಚಿವ ಆರ್. ಅಶೋಕ ಅವರೂ ಅವರು ಜೊತೆಗೆ ಆಗಮಿಸಲಿದ್ದಾರೆ ಎಂದು … Continued

ಭಟ್ಕಳ: ಮುಟ್ಟಳ್ಳಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಸಾವು, ಮೃತದೇಹಗಳು ಹೊರಕ್ಕೆ

ಕಾರವಾರ: ಭಾರೀ ಮಳೆಗೆ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಮುಟ್ಟಳ್ಳಿಯಲ್ಲಿ ನಡೆದಿದೆ. ಸಿಬ್ಬಂದಿ ಹರ ಸಾಹಸ ಪಟ್ಟು ಮಣ್ಣಿನಡಿ ಸಿಲುಕಿದ್ದ ನಾಲ್ವರ ಶವ ಹೊರತೆಗೆದಿದ್ದಾರೆ. ಮೃತರನ್ನು ಲಕ್ಷ್ಮೀ ನಾರಾಯಣ ನಾಯ್ಕ (50), ಪುತ್ರಿ ಲಕ್ಷ್ಮೀ(33), ಅನಂತ (32), ಪ್ರವೀಣ್ ನಾಯ್ಕ(20) ಸೇರಿ ನಾಲ್ವರ ಮೃತದೇಹ … Continued

ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಹೊನ್ನಾವರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ, ಉಪವಾಸ ಸತ್ಯಾಗ್ರಹ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿ ಒಗ್ಗಟ್ಟಿಲ್ಲ. ಜಡತ್ವ ಕಾಡುತ್ತಿದೆ. ಜಡತ್ವ ತೊರೆದು ಜಿಲ್ಲೆಯ ಹಿತಕ್ಕಾಗಿ ಸುಸಜ್ಜಿತ ಆಸ್ಪತ್ರೆ ಬೇಕೆಂದು ಹೋರಾಟಕ್ಕಿಳಿದ ಜಿಲ್ಲೆಯ ಯುವಕರ ಬೆನ್ನು ತಟ್ಟಿ ಬೆಂಬಲಿಸಿ ಎಂದು ಸಾಹಿತಿ ಹಾಗೂ ವಿಶ್ರಾಂತ ಪ್ರಾಚಾರ್ಯ ಡಾ.| ಎನ್ ಆರ್ ನಾಯಕ್ ಕರೆ ನೀಡಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಕ್ತ ಸ್ಥಳದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ … Continued

ಉತ್ತರ ಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಜನರ ಹೋರಾಟಕ್ಕೆ ಸ್ವರ್ಣವಲ್ಲೀ ಶ್ರೀಗಳ ಬೆಂಬಲ, ಕ್ರಮ ಕೈಗೊಳ್ಳಲು ಸಿಎಂಗೆ ಆಗ್ರಹ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ವಿಚಾರವಾಗಿ ನಡೆಯುತ್ತಿರುವ ಹೋರಾಟಗಳಿಗೆ ಉತ್ತರ ಕನ್ನಡ ಜಿಲ್ಲೆಯ ಸೋಂದಾ ಸ್ವರ್ಣವಲ್ಲೀ ಮಠದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳು ತಮ್ಮ ಬೆಂಬಲ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಜುಲೈ 30ರಂದು ಆಯೋಜಿಸಿರುವ ಮೌನ ಪ್ರತಿಭಟನೆಯಲ್ಲಿ ಜಿಲ್ಲೆಯ ಜನರು ಪಾಲ್ಗೊಳ್ಳುವಂತೆ ಸೂಚಿಸಿದ್ದಾರೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉತ್ತರ ಕನ್ನಡ ಜಿಲ್ಲೆಗೆ … Continued

ಅಂಕೋಲಾ: ಲಾರಿ-ಬೈಕ್‌ ಡಿಕ್ಕಿ : ಇಬ್ಬರು ಬೈಕ್‌ ಸವಾರರು‌ ಸ್ಥಳದಲ್ಲೇ ಸಾವು

ಅಂಕೋಲಾ: ಬೈಕಿಗೆ ಲಾರಿ ಡಿಕ್ಕಿಯಾಗಿ ಬೈಕಿನಲ್ಲಿ ತೆರಳುತ್ತಿದ್ದ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕಂಚಿನಬಾಗಿಲ ಬೊಗ್ರಿಬೈಲ್ ಸಮೀಪ ಸಂಭವಿಸಿದ ಬಗ್ಗೆ ವರದಿಯಾಗಿದೆ. ಮೃತರನ್ನು ಅಗಸೂರಿನ ಬೊಮ್ಮಯ್ಯ ನಾಯಕ ಮತ್ತು ನಾರಾಯಣ ನಾಯಕ ಎಂದು ಗುರುತಿಸಲಾಗಿದೆ. ಬೈಕ್‌ ಗೆ ಡಿಕ್ಕಿಯಾದ ಲಾರಿಯು ಬೈಕ್ ಸವಾರರನ್ನು ಸುಮಾರು ಕೆಲವು ಮೀಟರುಗಳಷ್ಟು ಎಳೆದುಕೊಂಡು … Continued

ಕುಮಟಾ: ನಾಳೆ ಲಯನ್ಸ್ ರೇವಣಕರ್ ಕಣ್ಣಿನ ಆಸ್ಪತ್ರೆ ವಿಸ್ತೃತ ಕಟ್ಟಡ -ಆಧುನಿಕ ಸೌಲಭ್ಯಗಳ ಉದ್ಘಾಟನೆ, ಆರೋಗ್ಯ ಸಚಿವ ಡಾ.ಸುಧಾಕರ ಭಾಗಿ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಗ್ಗೋಣ ರಸ್ತೆ ವಿದ್ಯಾಗಿರಿಯಲ್ಲಿರುವ ಲಯನ್ಸ್ ರೇವಣಕರ ಚಾರಿಟೇಬಲ್ ಕಣ್ಣಿನ ಆಸ್ಪತ್ರೆ ವಿಸ್ತ್ರತ ಕಟ್ಟಡದ ಉದ್ಘಾಟನಾ ಸಮಾರಂಭ ಏಪ್ರಿಲ್‌ ೧೦ರಂದು ಸಂಜೆ ೪:೩೦ ಘಂಟೆಗೆ ನಡೆಯಲಿದ್ದು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ ಹಾಗೂ ಲಯನ್ಸ್ ಅಂತರಾಷ್ಟ್ರೀಯದ ಮಾಜಿ ನಿರ್ದೇಶಕರಾದ ಕೆ. ವಂಶೀಧರ ಬಾಬು ಉದ್ಘಾಟಿಸಲಿದ್ದಾರೆ. ಕುಮಟಾದ … Continued

ಯಲ್ಲಾಪುರ: ಬೇಟೆಗಾರರ ಗುಂಡಿಗೆ ಗರ್ಭಿಣಿ ಚಿರತೆ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬಿಸಗೋಡ ಗ್ರಾಮದ ಹೊರವಲಯದಲ್ಲಿ ಬೇಟೆಗಾರರ ಗುಂಡಿಗೆ ಗರ್ಭಿಣಿ ಚಿರತೆ ಸತ್ತಿರುವ ಘಟನೆ  ವರದಿಯಾಗಿದೆ. ಘಟನೆಯಲ್ಲಿ ಚಿರತೆಯ ಗರ್ಭದಲ್ಲಿದ್ದ ಎರಡು ಮರಿಗಳು ಕೂಡ ಸತ್ತಿವೆ. ಮಂಗಳವಾರ ಬೆಳಗ್ಗೆ ಚಿರತೆಯ ಮೃತದೇಹ ಸಾರ್ವಜನಿಕರಿಗೆ ಕಂಡಿದೆ. ತಕ್ಷಣವೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಮಂಗಳವಾರ ಬೆಳಗಿನ ಜಾವ ಮೂರು ಗಂಟೆಯ … Continued