ಕುಮಟಾ : ಇಬ್ಬರು ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದು ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹೆಡ್‌ಬಂದರ್ ಬಳಿ ಸಮುದ್ರಕ್ಕೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಕುಮಟಾ ತಾಲೂಕಿನ ಸಾಂತಗಲ್ ನಿವಾಸಿ ನಿವೇದಿತಾ ನಾಗರಾಜ ಭಂಡಾರಿ (46) ಎಂದು ಗುರುತಿಸಲಾಗಿದೆ. ಸಾಂತಗಲ್ ನಿವಾಸಿ ಯಾಗಿದ್ದ ಮಹಿಳೆ ನಿವೇದಿತಾ ಊರಿನಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದರು … Continued

ಯಲ್ಲಾಪುರ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

ಯಲ್ಲಾಪುರ: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ತಟಗಾರ ಕ್ರಾಸ್ ಬಳಿ ಭಾನುವಾರ ಸಂಜೆ ನಡೆದಿದೆ. ಗಾಯಾಳುವನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಮೃತರನ್ನು ಮೃತರನ್ನು ತಾಲೂಕಿನ ಹುಣಸೆಕೊಪ್ಪದ ರಾಜು (16) ಮತ್ತು ರಾಮನಕೊಪ್ಪದ ದರ್ಶನ (16) ಎಂದು ಗುರುತಿಸಲಾಗಿದೆ. ಜಬೀರ್ (18) ಗಂಭೀರವಾಗಿ … Continued

ಗೋಕರ್ಣ : ಸಮುದ್ರದಲ್ಲಿ ಮುಳುಗುತ್ತಿದ್ದ 8 ಜನರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಮುಳುಗುತ್ತಿದ್ದ ಒಂದೇ ಕುಟುಂಬದ 7 ಜನ ಸೇರಿದಂತೆ ಒಟ್ಟು 8 ಜನ ಪ್ರವಾಸಿಗರನ್ನು ಜೀವ ರಕ್ಷಕ ಪಡೆ ಸಿಬ್ಬಂದಿ ರಕ್ಷಣೆ ಮಾಡಿದ ವಿದ್ಯಮಾನ ಉತ್ತರಕನ್ನಡ ಜಿಲ್ಲೆಯ ಗೋಕರ್ಣ(Gokarna)ದ ಮುಖ್ಯ ಕಡಲ ತೀರದಲ್ಲಿ ನಡೆದಿದೆ. ಪ್ರವಾಸಕ್ಕೆ ಬಂದ ವೇಳೆ ಒಂದೇ ಕುಟುಂಬದ ಏಳು ಪ್ರವಾಸಿಗರು ನೀರಿನಲ್ಲಿ ಇಳಿದಿದ್ದು, ಈ ವೇಳೆ ಕೊಚ್ಚಿ ಹೋಗುವ ಅಪಾಯದಲ್ಲಿದ್ದರು. … Continued

ಗೋಕರ್ಣದಲ್ಲಿ ಪಿತೃಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬ…!

ಕಾರವಾರ : ಧಾರವಾಡದ ಮುಸ್ಲಿಂ ಕುಟುಂಬವು ಹಿಂದೂ ಧರ್ಮದ ಸಂಪ್ರದಾಯದಂತೆ ಗೋಕರ್ಣದಲ್ಲಿ ಪಿತೃಕಾರ್ಯ ಮಾಡಿರುವುದು ವರದಿಯಾಗಿದೆ. ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕೋಟಿ ತೀರ್ಥದಲ್ಲಿ ಪಿತೃಪಕ್ಷದಲ್ಲಿ ಈ ಕುಟುಂಬವು ಪಿತೃಕಾರ್ಯ ನೆರವೇರಿಸಿದ್ದಾರೆ. ಮರಗೆಲಸ ಮಾಡುವ ಮಾಡುವ ಕುಟುಂಬವು ಧಾರವಾಡದ ಜ್ಯೋತಿಷಿ ಬಳಿ ಹೋದಾಗ ಅವರು ನೀಡಿದ ಸಲಹೆ ಮೇರೆಗೆ … Continued

ಕುಮಟಾ: ರಾಷ್ಟ್ರಧ್ವಜದಂತೆ ಕಾಣುವ ಧ್ವಜದಲ್ಲಿ ಬೇರೆ ಚಿಹ್ನೆ, ಗುರುತು ಬಳಸಿ ಈದ್ ಮಿಲಾದ್ ಮೆರವಣಿಗೆ, ಪ್ರಕರಣ ದಾಖಲು

 ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್‌ ಸಮೀಪ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿದ ಶಂಕೆ ವ್ಯಕ್ತವಾಗಿದ್ದು ಈ ಕುರಿತು ಎಫ್‌ಐಆರ್‌ ದಾಖಲಾಗಿದೆ. ಈದ್‌ ಮಿಲಾದ್‌ ದಿನ ಕುಮಟಾ ತಾಲೂಕಿನ ಮಿರ್ಜಾನ್‌ ಸಮೀಪ ರಾಷ್ಟ್ರ ಧ್ವಜದಂತೆ ಹೋಲುತ್ತಿರುವ ರೀತಿಯ ಧ್ವಜದ ಮೇಲೆ ಅರ್ಧ ಚಂದ್ರ, ಸ್ಟಾರ್, ಇತ್ಯಾದಿ ಗುರುತನ್ನು ಪ್ರದರ್ಶಿಸಲಾಗಿತ್ತು. ಈ ಘಟನೆ … Continued

ಸಿದ್ದಾಪುರ: ಯಕ್ಷಗಾನದ ಭಾಗವತ ಕೆ.ಪಿ.ಹೆಗಡೆಗೆ ‘ಅನಂತ ಶ್ರೀ’ ಪ್ರಶಸ್ತಿ ಪ್ರದಾನ

ಸಿದ್ದಾಪುರ: ಓರ್ವ ನಿಗರ್ವಿ ಕಲಾವಿದ‌ನ ಹೆಸರಿನಲ್ಲಿ ನೀಡುವ, ಒಡನಾಡಿ ಹೆಸರಿನ ಪ್ರಶಸ್ತಿ ಸಿಕ್ಕಿದ್ದನ್ನು ಅನಂತ ಪ್ರೀತಿಯಿಂದ ಸ್ವೀಕರಿಸಿದ್ದೇನೆ ಎಂದು ಪ್ರಸಿದ್ಧ ಯಕ್ಷಗಾನ ಭಾಗವತ ಹಾಗೂ ಪ್ರಾಚಾರ್ಯ ಕೆ.ಪಿ.ಹೆಗಡೆ ಗೋಳಗೋಡ ಹೇಳಿದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೇರೂರಿನ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಹಿರಿಯ ಯಕ್ಷಗಾನ ಕಲಾವಿದ ಕೊಳಗಿ ಅನಂತ ಹೆಗಡೆ ಅವರ ಹೆಸರಿನಲ್ಲಿ … Continued

ಹೊನ್ನಾವರ: ಮತ್ತೊಂದು ಬೃಹತ್‌ ಮೀನಿನ ಕಳೆಬರ ಪತ್ತೆ.. ಇದು ಡಾಲ್ಫಿನ್‌ ಮೀನು…!

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದ ಸಮುದ್ರ ದಂಡೆಯಲ್ಲಿ ಅಳವಿನಂಚಿನಲ್ಲಿರುವ ಮತ್ತೊಂದು ಮೀನಿನ ಕಳೆಬರ ಭಾನುವಾರ ಪತ್ತೆಯಾಗಿದೆ. ಈ ಬಾರಿ ತಿಮಿಂಗಿಲವಲ್ಲ, ಬದಲಿಗೆ ಅಳಿವಿನಂಚಿನಲ್ಲಿರುವ  ಡಾಲ್ಫಿನ್‌ನ ಮೃತ ದೇಹ ಭಾನುವಾರ ಪತ್ತೆಯಾಗಿದೆ. ಡಾಲ್ಫಿನ್‌ ಮೀನು ಸುಮಾರು ಮೂರು ಮೀಟರ್ ಗಳಷ್ಟು ಉದ್ದವಿದ್ದು 75-80 ಕೆ.ಜಿ.ಯಷ್ಟು ತೂಕವಿರಬಹುದೆಂದು ಅಂದಾಜಿಸಲಾಗಿದೆ. ಮರಣೋತ್ತರ ಪರೀಕ್ಷೆ ಸೋಮವಾರ … Continued

ಹೊನ್ನಾವರ : ಕಾಸರಕೋಡ ಕಡಲತೀರದಲ್ಲಿ ಸುಮಾರು 60 ಅಡಿ ಉದ್ದದ ಬೃಹತ್‌ ತಿಮಿಂಗಿಲದ ಕಳೆಬರ ಪತ್ತೆ, ವಾರದಲ್ಲಿ ಇದು ಎರಡನೇ ಘಟನೆ | ವೀಡಿಯೊ ವೀಕ್ಷಿಸಿ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕ ಪ್ರದೇಶದ ಅರಬ್ಬೀ ಸಮುದ್ರದ ತೀರದಲ್ಲಿ ಶನಿವಾರ ಬೆಳಿಗ್ಗೆ ಶನಿವಾರ ಭಾರೀ ಗಾತ್ರದ ತಿಮಿಂಗಿಲದ ಮೃತದೇಹ ಪತ್ತೆಯಾಗಿದೆ. ಇದು ಸುಮಾರು ಮೂರು ವರ್ಷದ ಹೆಣ್ಣು ತಿಮಿಂಗಲ ಎಂದು ಹೇಳಲಾಗಿದೆ. ಹಾಗೂ 16ರಿಂದ 18 ಮೀಟರ್ ಉದ್ದವಿದೆ. ದೇಹದ ಭಾಗಗಳು ಕೊಳೆತು ಹೋಗಿದ್ದು, ಭಾರೀ ಗಾತ್ರ ಹೊಂದಿದೆ. … Continued

ಹೊನ್ನಾವರ: ಬೃಹತ್‌ ತಿಮಿಂಗಿಲದ  ಮೃತದೇಹ ಪತ್ತೆ | ವೀಡಿಯೊ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿಯ ಅರಬ್ಬಿ ಸಮುದ್ರದ ದಡದಲ್ಲಿ ಅಳಿವಿನಂಚಿನಲ್ಲಿರುವ ಬೃಹತ್‌ ಗಾತ್ರದ ಬಲೀನ್ ತಿಮಿಂಗಿಲದ ಕಳೇಬರ ಶನಿವಾರ ಪತ್ತೆಯಾಗಿದೆ. ದೇಹದ ಭಾಗಗಳು ಕೊಳೆತು ಹೋಗಿದ್ದು ಮೀನು ಕಳೇಬರ 15-16 ಮೀಟರ್ ಗಳಷ್ಟು ಉದ್ದವಿದೆ. ಸಮುದ್ರದ ದಡದಲ್ಲಿ ಬಿದ್ದಿರುವ ಭಾರೀ ಗಾತ್ರದ ಮೀನಿನ ದೇಹವನ್ನು ಕಂಡ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ … Continued

ಕುಮಟಾ: ಹೆಗಡೆಯಲ್ಲಿ ಅತಿ ದೊಡ್ಡ ಬಿಳಿ ಹೆಬ್ಬಾವು ಪ್ರತ್ಯಕ್ಷ – ರಕ್ಷಣೆ

ಕುಮಟಾ : ಸಮೀಪದ ಹೆಗಡೆ ಗ್ರಾಮದ ಗಾಂಧಿ ನಗರದ ಮನೆಯಂಗಳದಲ್ಲಿ ಬಿಳಿ ಹೆಬ್ಬಾವು ಕಾಣಿಸಿಕೊಂಡಿದ್ದು, ಅದನ್ನು ರಕ್ಷಣೆ ಮಾಡಲಾಗಿದೆ. ಆರ್ ಟಿ ಒ ಕಚೇರಿ ಹೋಮ್ ಗಾರ್ಡ್ ಗಣೇಶ ಮುಕ್ರಿ ಅವರ ಮನೆಯ ಅಂಗಳದಲ್ಲಿ ಕಾಣಿಸಕೊಂಡ ಹೆಬ್ಬಾವನ್ನು ಪವನ್ ನಾಯ್ಕ ರಕ್ಷಣೆ ಮಾಡಿದ್ದಾರೆ. ಗಣೇಶ ಮುಕ್ರಿ ಅವರು ಉರಗ ತಜ್ಞ ಪವನ್‌ ನಾಯ್ಕ ಅವರಿಗೆ ಮಾಹಿತಿ … Continued