ಸಿದ್ದಾಪುರ :ಖ್ಯಾತ ಯಕ್ಷಗಾನ ಭಾಗವತ ಕೆ.ಪಿ.ಹೆಗಡೆಗೆ ʼಅನಂತಶ್ರೀʼ ಪ್ರಶಸ್ತಿ

ಸಿದ್ದಾಪುರ : ಪ್ರಸಿದ್ಧ ಯಕ್ಷಗಾನ ಗುರು, ಹೆಸರಾಂತ ಭಾಗವತರಾದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೋಳಗೋಡಿನ ಕೆ.ಪಿ.ಹೆಗಡೆ ಅವರಿಗೆ ಯಕ್ಷಗಾನದ ಖ್ಯಾತ ಕಲಾವಿದರಾಗಿದ್ದ ಕೊಳಗಿ ಅನಂತ ಹೆಗಡೆ ಅವರ ಹೆಸರಿನಲ್ಲಿ‌ ನೀಡಲಾಗುವ ‘ಅನಂತಶ್ರೀ’ ಪ್ರಶಸ್ತಿ ಪ್ರಕಟಿಸಲಾಗಿದೆ. ಈ ವಿಷಯ ತಿಳಿಸಿದ ಶ್ರೀ ಅನಂತ‌ ಯಕ್ಷ ಕಲಾ ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಸಿದ್ದಾಪುರ ಅವರು, ಕಳೆದ … Continued

ಕಾರವಾರ: ಜನರ ಜೊತೆ ಬೆರೆಯುತ್ತಿದ್ದ ಕಾಡು ಹಂದಿಗೆ ಆಹಾರದಲ್ಲಿ ಸ್ಫೋಟಕ ಇಟ್ಟು ಸಾಯಿಸಿದ ದುಷ್ಕರ್ಮಿಗಳು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಚಂಡಿಯಾ ಗ್ರಾಮದಲ್ಲಿ ಜನರೊಂದಿಗೆ ಸ್ನೇಹದಿಂದ ಇದ್ದು ಅವರು ಕೊಟ್ಟ ಆಹಾರ ತಿಂದು ಬದುಕಿದ್ದ ಕಾಡುಹಂದಿಯನ್ನು ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ವರದಿ ಪ್ರಕಾರ, ಈ ಹಂದಿ ಊರಿನಲ್ಲಿ ಜನರು ನೀಡಿದ ಆಹಾರವನ್ನ ಸೇವಿಸುತ್ತ ಜನರ ಪ್ರೀತಿ ಗಳಿಸಿತ್ತು. ಕಾಂತಾರ ಸಿನೆಮಾ … Continued

ಹೊನ್ನಾವರ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಮವೇದ ವಿದ್ವಾಂಸ ಶಿವರಾಮ ಭಟ್ಟ ಅಲೇಖ ಇನ್ನಿಲ್ಲ

ಹೊನ್ನಾವರ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವೇದ ವಿದ್ವಾಂಸರಾದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿಯ ಶಿವರಾಮ ಭಟ್ಟ ಅಲೇಖ (೮೮) ಸೋಮವಾರ ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಾಮವೇದದ ರಾಣಾಯನಿ ಶಾಖೆಯ ಕುರಿತು ವಿಶೇಷ ಅಧ್ಯಯನ ನಡೆಸಿದ್ದಕ್ಕಾಗಿ ಅವರಿಗೆ ರಾಷ್ಟ್ರಪತಿ ಪುರಸ್ಕಾರ ದೊರೆತಿದೆ. ಆಗಿನ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು. … Continued

ಬೆಂಕಿ ಅನಾಹುತ : ಏಳು ಗೋವುಗಳು ಸಜೀವ ದಹನ

ಮುಂಡಗೋಡ: ದನದ ಕೊಟ್ಟಿಗೆಗೆ ಹೊತ್ತಿಕೊಂಡ ಬೆಂಕಿಯಿಂದ ಏಳು ಆಕಳುಗಳು ಸಜೀವ ದಹನವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಹಳೂರ ಓಣಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟಿನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಹಳೂರ ಓಣಿಯ ಮಂಜುನಾಥ ನಾಗೇಶ ಶೇಟ್ ಎಂಬವರ ಸೇರಿದ ದನಗಳು ಸಜೀವ ದಹನವಾಗಿವೆ. ಮನೆಯ ಪಕ್ಕದಲ್ಲೇ ದನದಕೊಟ್ಟಿಯಲ್ಲಿ … Continued

ಅಂಕೋಲಾ: ಹಿರಿಯ ಯಕ್ಷಗಾನ ಕಲಾವಿದ ವಿಠೋಬ ನಾಯಕ ನಿಧನ

ಅಂಕೋಲಾ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದರಾದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಿಠೋಬ ನಾಯಕ ವಂದಿಗೆ (88) ಅವರು ಗುರುವಾರ ನಿಧನರಾಗಿದ್ದಾರೆ. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಸುಮಾರು 50 ವರ್ಷಗಳಿಗೂ ಹೆಚ್ಚಿನ ಕಾಲ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವಾರು ಪಾತ್ರಗಳಿಗೆ ಜೀವಂತಿಕೆ ತುಂಬಿದ್ದರು. ಅವರು ತಮ್ಮ ಗಂಭೀರ ಪಾತ್ರನಿರ್ವಹಣೆ, … Continued

ರಾಜ್ಯದಲ್ಲಿ ಮಹಾ ಮಳೆಗೆ 20 ಸಾವು : ಸಚಿವ ಕೃಷ್ಣ ಭೈರೇಗೌಡ

ಕುಮಟಾ : ರಾಜ್ಯದಲ್ಲಿ ಮಳೆಗೆ 20 ಜನರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು. ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಕೊಚ್ಚಿ ಹೋಗಿ ಇಬ್ಬರು ಮೃತಪಟ್ಟ ಸಂಬಂಧ ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ … Continued

ಶಿರಸಿ: ಆನ್​ಲೈನ್​​ ಗೇಮ್​​ನಲ್ಲಿ ಸುಮಾರು 65 ಲಕ್ಷ ರೂ. ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ

ಶಿರಸಿ: ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದ ಯುವಕನೊಬ್ಬ ಲಕ್ಷಾಂತರ ರೂ. ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕುಳವೆ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ. ಶಿರಸಿ ತಾಲೂಕಿನ ಬಾಳೆತೋಟ ನಿವಾಸಿ ವಿಜೇತ ಶಾಂತಾರಾಮ ಹೆಗಡೆ (37) ಆತ್ಮಹತ್ಯೆಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಈತ ಆನ್ … Continued

ಕಾರವಾರ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು

ಕಾರವಾರ: ತಾಲೂಕಿನ ಗೋಪಶಿಟ್ಟಾದ ಮೂಲದ ಉದ್ಯಮಿಯೊಬ್ಬರ ಕುಟುಂಬದ ಮೂವರು ಸದಸ್ಯರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಮೂಲತಃ ಗೋಪಶಿಟ್ಟಾದ ನಿವಾಸಿ ಹಾಗೂ ಹಾಲಿ ಗೋವಾದಲ್ಲಿ ವಾಸವಾಗಿದ್ದ ಶ್ಯಾಮ ಪಾಟೀಲ(45), ಅವರ ಪತ್ನಿ ಜ್ಯೋತಿ ಪಾಟೀಲ(38) ಹಾಗೂ ಮಗ ದಕ್ಷ (12) ಎಂದು ಗುರುತಿಸಲಾಗಿದೆ. ಜ್ಯೋತಿ ಹಾಗೂ ದಕ್ಷ ಅವರ ಮೃತದೇಹ ಕಾರವಾರದ ದೇವಭಾಗ … Continued

ಕುಮಟಾ: ತಂಡ್ರಕುಳಿಯ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಗುಡ್ಡ ಕುಸಿತ: ಮನೆಗೆ ಹಾನಿ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ 10 ಕಿಮೀ ದೂರದ ತಂಡ್ರಕುಳೀಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಹೆದ್ದಾರಿ ಪಕ್ಕದ ಗುಡ್ಡ ಕುಸಿದಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಗುಡ್ಡ ಕುಸಿದು ಬೃಹತ್‌ ಬಂಡೆಗಲ್ಲು ರಾಷ್ಟ್ರೀಯ ಹೆದ್ದಾರಿಯ ಕೆಳಗೇ ಇರುವ ಗಣೇಶ ತುಳಸು ಅಂಬಿಗ ಎಂಬವರ ಮನೆಗೆ … Continued

ಹೊನ್ನಾವರ : ಆಟೊರಿಕ್ಷಾ ಮೇಲೆ ಬಿದ್ದ ಬೃಹತ್ ಮರ, ಕೂದಲೆಳೆ ಅಂತರದಲ್ಲಿ ಚಾಲಕ ಪಾರು

ಹೊನ್ನಾವರ : ಹೋಗುತ್ತಿದ್ದ ಆಟೊ ರಿಕ್ಷಾ ಮೇಲೆ ಬೃಹತ್‌ ಮರವೊಂದು ಬಿದ್ದಿದ್ದು ಅದೃಷ್ಟವಶಾತ್‌ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮ ಪಂಚಾಯತದ ವ್ಯಾಪ್ತಿಯ ಕಣ್ಣಿಮನೆಯ ಸಮೀಪದ ರಸ್ತೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಹಳಗೇರಿಯ ಶ್ರೀನಾಥ ಗೌಡ ಎಂಬವರು ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಈ ಘಟನೆ … Continued