ವೆನೆಜುವೆಲಾದಲ್ಲಿ ಮೃತಪಟ್ಟ ಭಾರತದ ನಾವಿಕನ ಶವದ ಮೆದುಳು, ಹೃದಯ, ಶ್ವಾಸಕೋಶ ಸೇರಿ ಎಲ್ಲ ಪ್ರಮುಖ ಅಂಗಗಳು ನಾಪತ್ತೆ !

ನವದೆಹಲಿ: ವೆನೆಜುವೆಲಾದಲ್ಲಿ ಕಳೆದ ಮೇ ತಿಂಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾದ ಭಾರತೀಯ ನಾವಿಕನ ಸಾವಿನ ಪ್ರಕರಣ ಇದೀಗ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ವೆನೆಜುವೆಲಾದಿಂದ ಭಾರತಕ್ಕೆ ಮೃತದೇಹವನ್ನು ತಂದ ಬಳಿಕ, ಮೃತನ ದೇಹದಲ್ಲಿ ಮೆದುಳು, ಹೃದಯ, ಶ್ವಾಸಕೋಶ ಸೇರಿದಂತೆ ಬಹುತೇಕ ಎಲ್ಲಾ ಆಂತರಿಕ ಅಂಗಗಳು ಕಾಣೆಯಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಇದರಿಂದ ಈ ಸಾವಿನ … Continued

ವೆನೆಜುವೆಲಾ ಅವಳಿ ಭೂಕಂಪ: 589ಕ್ಕೇರಿದ ಸಾವಿನ ಸಂಖ್ಯೆ; 2,980 ಜನರಿಗೆ ಗಾಯ ; ನವಜಾತ ಶಿಶುವಿನ ರಕ್ಷಣೆ

ಕಾರಕಾಸ್: ವೆನೆಜುವೆಲಾದಲ್ಲಿ ಸಂಭವಿಸಿದ ವಿನಾಶಕಾರಿ ಅವಳಿ ಭೂಕಂಪದ ಸಾವಿನ ಸಂಖ್ಯೆ 589ಕ್ಕೆ ಏರಿಕೆಯಾಗಿದ್ದು, ಇಡೀ ದೇಶವೇ ಕಣ್ಣೀರಲ್ಲಿ ಮುಳುಗಿದೆ. ಕೇವಲ ಒಂದು ದಿನದ ಅವಧಿಯಲ್ಲಿ ಮೃತರ ಸಂಖ್ಯೆ ದುಪ್ಪಟ್ಟಾಗಿದ್ದು, ಗಾಯಗೊಂಡವರ ಸಂಖ್ಯೆ 2,980ಕ್ಕೆ ತಲುಪಿದೆ ಎಂದು ದೇಶದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಶುಕ್ರವಾರ ಮಧ್ಯಾಹ್ನ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಗುರುವಾರ ರಾತ್ರಿಯ ವೇಳೆಗೆ ಸಾವಿನ ಸಂಖ್ಯೆ … Continued

ವೆನೆಜುಲಾದಲ್ಲಿ ಭೀಕರ ಅವಳಿ ಭೂಕಂಪ : 32 ಸಾವು, 700ಕ್ಕೂ ಹೆಚ್ಚು ಮಂದಿಗೆ ಗಾಯ

ವೆನೆಜುಲಾದಲ್ಲಿ ಬುಧವಾರ ಸಂಜೆ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಕಟ್ಟಡಗಳು ಕುಸಿಯಲಾರಂಭಿಸಿದವು, ವಿದ್ಯುತ್ ಸಂಪರ್ಕ ಕಡಿತಗೊಳ್ಳಲು ಶುರುವಾಯಿತು. ಏನಾಗುತ್ತಿದೆ ಎಂದು ಜನರು ಗ್ರಹಿಸಿ ಸುರಕ್ಷಿತ ಸ್ಥಳಗಳಿಗೆ ಓಡುವ ಮುನ್ನವೇ, ರಾಜಧಾನಿಯಲ್ಲಿ 7.5 ತೀವ್ರತೆಯ ಮತ್ತೊಂದು ಶಕ್ತಿಶಾಲಿ ಭೂಕಂಪ ಸಂಭವಿಸಿತು. ಕೇವಲ 39 ಸೆಕೆಂಡುಗಳ ಅಂತರದಲ್ಲಿ ಸಂಭವಿಸಿದ ಈ ಅವಳಿ ಭೂಕಂಪಗಳು ಕಾರಕಾಸ್‌ನಲ್ಲಿ ತೀವ್ರ ಆತಂಕ … Continued

ವೆನೆಜುವೆಲಾದ ‘ಕಾರ್ಯಕಾರಿ ಅಧ್ಯಕ್ಷ’ ಎಂದು ಘೋಷಿಸಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮನ್ನು “ವೆನೆಜುವೆಲಾದ ಕಾರ್ಯಕಾರಿ ಅಧ್ಯಕ್ಷ” ಎಂದು ಘೋಷಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರವೊಂದರಲ್ಲಿ, ವಿಕಿಪೀಡಿಯಾ ಪುಟದ ಮಾದರಿಯಲ್ಲಿ ಟ್ರಂಪ್ ಅವರ ಅಧಿಕೃತ ಭಾವಚಿತ್ರವಿದ್ದು, ಅದರಲ್ಲಿ ಅವರನ್ನು “ವೆನೆಜುವೆಲಾದ ಕಾರ್ಯಕಾರಿ ಅಧ್ಯಕ್ಷ, ಜನವರಿ 2026 ರಿಂದ ಅನ್ವಯ” ಎಂದು ಉಲ್ಲೇಖಿಸಲಾಗಿದೆ. ಆದಾಗ್ಯೂ, ಅಧಿಕೃತ ವಿಕಿಪೀಡಿಯಾ ಪುಟದಲ್ಲಿ ಅಂತಹ ಯಾವುದೇ … Continued

ಅಮೆರಿಕದಿಂದ ‘ಸೆರೆಹಿಡಿಯಲ್ಪಟ್ಟ’ ವೆನೆಜುವೆಲಾ ಅಧ್ಯಕ್ಷರ ಮೊದಲ ಚಿತ್ರ ಹಂಚಿಕೊಂಡ ಟ್ರಂಪ್-ವೀಡಿಯೊ

ಸುರಕ್ಷಿತ ಮತ್ತು ವಿವೇಚನಾಯುಕ್ತ ಪರಿವರ್ತನೆ ನಡೆಯುವವರೆಗೆ ಅಮೆರಿಕವು ವೆನೆಜುವೆಲಾವನ್ನು ಮುನ್ನಡೆಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ. ಮಿಲಿಟರಿ ಕಾರ್ಯಾಚರಣೆಯಲ್ಲಿ ಅಮೆರಿಕದ ಪಡೆಗಳು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದ ನಂತರ ಅವರ ಚಿತ್ರವನ್ನು ಅಮೆರಿಕ ಅಧ್ಯಕ್ಷರು ಹಂಚಿಕೊಂಡ ಬಳಿಕ ಈ ಹೇಳಿಕೆ ಬಂದಿದೆ. ಚಿತ್ರದಲ್ಲಿ ವೆನೆಜುವೆಲಾದ ಅಧ್ಯಕ್ಷರಿಗೆ ಕೈಕೋಳ ಹಾಕಿರುವುದು … Continued

ವೀಡಿಯೊ..| ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಕೆಳಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡು ಉರಿದ ವಿಮಾನ

ವೆನೆಜುವೆಲಾದ ಟಾಚಿರಾ ರಾಜ್ಯದಲ್ಲಿರುವ ಪಾರಾಮಿಲೊ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಟೇಕ್-ಆಫ್ (ಟೇಕಾಫ್) ಆಗುವಾಗ ಪತನಗೊಂಡಿದ್ದು, ಇಬ್ಬರು ಸಿಬ್ಬಂದಿ (ಕ್ರ್ಯೂ ಮೆಂಬರ್ಸ್) ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೈಪರ್ ಪಿಎ-31ಟಿ1 (Piper PA-31T1) ಎಂಬ ಎರಡು ಇಂಜಿನ್​ಗಳ ಈ ವಿಮಾನವು ಟೇಕಾಫ್ ಆದ ತಕ್ಷಣ ನಿಯಂತ್ರಣ ಕಳೆದುಕೊಂಡು ರನ್‌ವೇ ಮೇಲೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿತು. ಇಬ್ಬರು ಮೃತಪಟ್ಟಿದ್ದನ್ನು … Continued

ವೆನೆಜುವೆಲಾದ ಮರಿಯಾ ಕೊರಿನಾ ಮಚಾಡೊಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ; ಅಮೆರಿಕ ಅಧ್ಯಕ್ಷ ಟ್ರಂಪ್‌ ಗೆ ನಿರಾಸೆ

ವೆನೆಜುಯೆಲಾದ ಪ್ರಜಾಪ್ರಭುತ್ವದ ಪ್ರತಿಪಾದಕಿ ಹಾಗೂ ಸರ್ವಾಧಿಕಾರಿ ವಿರೋಧಿ ಹೋರಾಟಗಾರ್ತಿ ಮತ್ತು ವಿಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾಡೋ ಅವರಿಗೆ 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ. ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟಣೆಗೆ ಮುನ್ನ, ಈ ಬಾರಿಯ ಶಾಂತಿ ನೊಬೆಲ್ ಬಹುಮಾನ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ತಾನು ಎಂಟು … Continued