ವೀಡಿಯೊ | ʼವಾಪಸ್‌ ಹೋಗಿʼ : ಕೆನಡಾದ ಟೊರೊಂಟೊದಲ್ಲಿ ನಡೆದ ಭಾರತ ದಿನದ ಮೆರವಣಿಗೆಗೆ ಖಲಿಸ್ತಾನ್ ಪರ ಪ್ರತಿಭಟನಾಕಾರರ ಅಡ್ಡಿ

ಕೆನಡಾದ ಟೊರೊಂಟೊದಲ್ಲಿ ಭಾನುವಾರ ನಡೆದ ಭಾರತದ ಸ್ವಾಂತ್ರ್ಯ ದಿನದ ಪರೇಡ್‌ಗೆ ಹತ್ತಾರು ಖಲಿಸ್ತಾನ್ ಪರ ಪ್ರತಿಭಟನಾಕಾರರು ಅಡ್ಡಿಪಡಿಸಿದರು. ಭಾರತೀಯ ಡಯಾಸ್ಪೊರಾ ಆಯೋಜಿಸಿದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಇದು ಕೆಲಕಾಲ ಉದ್ವಿಗ್ನತೆಗೆ ಕಾರಣವಾಯಿತು. ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೈರಲ್ ವೀಡಿಯೊ, ದಲ್ಲಿ ಟೊರೊಂಟೊದ ನಾಥನ್ ಫಿಲಿಪ್ಸ್ ಸ್ಕ್ವೇರ್‌ನಲ್ಲಿ ಆಗಸ್ಟ್ 18 ರಂದು ಭಾರತದ … Continued

ವೀಡಿಯೊ…| ಪಶ್ಚಿಮ ಬಂಗಾಳದಲ್ಲಿ ‘ಬೀದಿ ನ್ಯಾಯʼದಲ್ಲಿ ನಡು ರಸ್ತೆಯಲ್ಲೇ ಮಹಿಳೆಗೆ ದೊಣ್ಣೆಯಿಂದ ಥಳಿತ ; ವಿಪಕ್ಷಗಳಿಂದ ಮಮತಾ ವಿರುದ್ಧ ವಾಗ್ದಾಳಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಅನಾಗರಿಕ ಘಟನೆಯಲ್ಲಿ ಜನಸಂದಣಿ ಮುಂದೆಯೇ ನಡು ರಸ್ತೆಯಲ್ಲಿಯೇ ವ್ಯಕ್ತಿಯೊಬ್ಬ ಮಹಿಳೆ ಸೇರಿದಂತೆ ಇಬ್ಬರನ್ನು ಥಳಿಸುತ್ತಿರುವ ದೃಶ್ಯದ ವೀಡಿಯೊ ವೈರಲ್‌ ಆಗಿದ್ದು, ಪಶ್ಚಿಮ ಬಂಗಾಳದ ಪ್ರತಿಪಕ್ಷಗಳು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ವಿಪಕ್ಷಗಳಾದ ಸಿಪಿಎಂ ಮತ್ತು ಬಿಜೆಪಿ ಈ ವೀಡಿಯೊ ಉತ್ತರ ಬಂಗಾಳದ ಉತ್ತರ ದಿನಾಜಪುರ … Continued

ನ್ಯಾಯಾಲಯ ಉದ್ದೇಶಿಸಿ ಮಾತು: ಕೇಜ್ರಿವಾಲ ವೀಡಿಯೊ ತೆಗೆದುಹಾಕಲು ಪತ್ನಿ, ಜಾಲತಾಣಗಳಿಗೆ ದೆಹಲಿ ಹೈಕೋರ್ಟ್ ತಾಕೀತು

ನವದೆಹಲಿ : ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ ಅವರು ನ್ಯಾಯಾಲಯ ಉದ್ದೇಶಿಸಿ ಆಡಿದ್ದ ಮಾತುಗಳ ವೀಡಿಯೊ ರೆಕಾರ್ಡಿಂಗ್‌ಗಳನ್ನು ಸಾಮಾಜಿಕ ಜಾಲತಾಣ ವೇದಿಕೆಗಳಿಂದ ತೆಗೆದು ಹಾಕುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರ ಪತ್ನಿ ಹಾಗೂ ಇತರೆ ಐವರಿಗೆ ದೆಹಲಿ ಹೈಕೋರ್ಟ್ ಶನಿವಾರ ಆದೇಶಿಸಿದೆ. .ಅಲ್ಲದೆ, ಈ ವಿಚಾರಣೆಯ ವೀಡಿಯೊಗಳಿರುವ ಇತರೆ … Continued

ವೀಡಿಯೊ: ಒಳನುಗ್ಗಿ ಹಮಾಸ್‌ ವಶದಲ್ಲಿದ್ದ ಮೂವರು ಒತ್ತೆಯಾಳುಗಳನ್ನು ರಕ್ಷಿಸಿದ ಕ್ಷಣದ ವೀಡಿಯೊ ಬಿಡುಗಡೆ ಮಾಡಿದ ಇಸ್ರೇಲ್

ಇಸ್ರೇಲಿ ಮಿಲಿಟರಿ ವಾರಾಂತ್ಯದಲ್ಲಿ “ಸಂಕೀರ್ಣ ಹಗಲಿನ ಕಾರ್ಯಾಚರಣೆ”ಯಲ್ಲಿ ಗಾಜಾದಲ್ಲಿ ಹಮಾಸ್ ಸೆರೆಯಿಂದ ನಾಲ್ಕು ಒತ್ತೆಯಾಳುಗಳನ್ನು ಪಾರು ಮಾಡಿದ್ದಾರೆ. ನಾಲ್ವರು ಒತ್ತೆಯಾಳುಗಳಲ್ಲಿ ಮೂವರನ್ನು – ಅಲ್ಮೋಗ್ ಮೀರ್ ಜಾನ್, ಆಂಡ್ರೆ ಕೊಜ್ಲೋವ್ ಮತ್ತು ಶ್ಲೋಮಿ ಝಿವ್ ಅವರನ್ನು ರಕ್ಷಿಸಿದ ಕ್ಷಣವನ್ನು ತೋರಿಸುವ ವೀಡಿಯೊವನ್ನು ಇಸ್ರೇಲ್ ಬಿಡುಗಡೆ ಮಾಡಿದೆ. ಗಾಜಾದಲ್ಲಿ ಹಮಾಸ್‌ನಿಂದ ಮೂವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಅಪಾರ್ಟ್‌ಮೆಂಟ್‌ಗೆ ಇಸ್ರೇಲಿ … Continued

ವೀಡಿಯೊ..| 27 ಮಂದಿ ಮೃತಪಟ್ಟ ರಾಜ​ಕೋಟ್​ ಗೇಮ್​ ಝೋನ್​ ದುರಂತ ; ವೆಲ್ಡಿಂಗ್‌ ಕಿಡಿಗಳಿಂದ ಬೆಂಕಿ ಹೊತ್ತಿಕೊಂಡಿದ್ದನ್ನು ತೋರಿಸಿದ ವೀಡಿಯೊ..

ಎರಡು ದಿನಗಳ ಹಿಂದೆ ಗುಜರಾತಿನ ರಾಜ್‌ಕೋಟದಲ್ಲಿರುವ ಅಮ್ಯೂಸ್‌ಮೆಂಟ್ ಪಾರ್ಕ್‌ನ ಗೇಮ್ ಝೋನ್‌ನಲ್ಲಿ 27 ಜನರು ಸಾವಿಗೆ ಕಾರಣವಾದ ಬೆಂಕಿ ಅವಘಡವು ವೆಲ್ಡಿಂಗ್ ಯಂತ್ರದ ಕಿಡಿಗಳಿಂದ ಸಂಭವಿಸಿದೆ ಎಂದು ವರದಿಯಾಗಿದೆ. ಅದು ಅಮ್ಯೂಸ್‌ಮೆಂಟ್ ಪಾರ್ಕ್‌ನ ಗೇಮ್ ಝೋನ್‌ನಲ್ಲಿ ಸಂಗ್ರಹಿಸಿಟ್ಟಿದ್ದ ದಹನಕಾರಿ ವಸ್ತುಗಳ “ರಾಶಿ” ಮೇಲೆ ಬೆಂಕಿ ಕಿಡಿ ಬಿದ್ದಿದೆ. ಮೇ 25ರ ಸಂಜೆ, ಬೇಸಿಗೆ ರಜೆಯ ವಿಹಾರವನ್ನು … Continued

ಶಾಕಿಂಗ್‌ ವೀಡಿಯೊ..| ಆಸ್ಪತ್ರೆ ಆವರಣದಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ದಂಪತಿ ಮೇಲೆ ಮರ ಬಿದ್ದು ಪತಿ ಸಾವು, ಪತ್ನಿಗೆ ಗಾಯ

ಹೈದರಾಬಾದ್: ಇಲ್ಲಿನ ಸಿಕಂದರಾಬಾದ್‌ನ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಹಳೆಯ ಮರವೊಂದು ಬಿದ್ದು ಪತಿ ಸಾವಿಗೀಡಾಗಿದ್ದು, ಪತ್ನಿ ಗಾಯಗೊಂಡ ದಾರುಣ ಘಟನೆ ನಡೆದಿದೆ. ದಂಪತಿ ಚಿಕಿತ್ಸೆಗೆಂದು ಬಂದಿದ್ದ ಸಿಕಂದರಾಬಾದ್‌ನ ಬೋಲಾರಂ ಕಂಟೋನ್ಮೆಂಟ್ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. ತುಮಕುಂಟಾ ನಿವಾಸಿಗಳಾದ ದಂಪತಿ ಚಿಕಿತ್ಸೆಗಾಗಿ ಸ್ಕೂಟರ್‌ನಲ್ಲಿ ಆಸ್ಪತ್ರೆಯ ಕಾಂಪೌಂಡ್‌ಗೆ ಪ್ರವೇಶಿಸಿದ ಕೂಡಲೇ ಹಳೆಯ ಮರ ಅವರ ಮೇಲೆ ಬಿದ್ದಿದೆ. … Continued

ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಹೊಸ ವೀಡಿಯೊ ಹೊರಬಿದ್ದಿದ್ದು, ಸ್ವಾತಿ ಮಲಿವಾಲ್ ಅವರನ್ನು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಹೊರಕ್ಕೆ ಕರೆದೊಯ್ದಿರುವುದು ಕಂಡುಬಂದಿದೆ. ಇದು ಸೋಮವಾರ ನಡೆದಿದ್ದು, ಅದೇ ದಿನ ಎಎಪಿ ಸಂಸದೆ ಸ್ವಾತಿ ಮಲಿವಾಲ್‌ ತಮ್ಮ ಮೇಲೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆಪ್ತ ಸಹಾಯಕ ಸಹಾಯಕ ವಿಭವಕುಮಾರ ಹಲ್ಲೆ ನಡೆಸಿದ್ದಾರೆ … Continued

ಸ್ಲೊವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಗುಂಡಿನ ದಾಳಿ: ಸ್ಥಿತಿ ಗಂಭೀರ

ಹ್ಯಾಂಡ್ಲೊವಾ: ಸ್ಲೊವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ (59) ಅವರ ಮೇಲೆ ಬುಧವಾರ ಗುಂಡಿನ ದಾಳಿ ನಡೆದಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಲ್ಲಿನ ಆಡಳಿತ ಹೇಳಿದೆ. ರಾಜಧಾನಿ ಬ್ರಟಿಸ್ಲಾವಾದಿಂದ ಉತ್ತರಕ್ಕಿರುವ ಹ್ಯಾಂಡ್ಲೊವಾದಲ್ಲಿ ಆಯೋಜನೆಗೊಂಡಿದ್ದ ಸರ್ಕಾರಿ ಸಭೆಯಲ್ಲಿ ಪಾಲ್ಗೊಂಡ ನಂತರ ಹೊರಬರುತ್ತಿದ್ದ ಅವರ ಮೇಲೆ ವ್ಯಕ್ತಿಯೊಬ್ಬ ಹಲವು ಬಾರಿ ಗುಂಡಿನ ದಾಳಿ ನಡೆಸಿದ್ದಾನೆ. ಫಿಕೊ ಅವರ … Continued

ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಅಯೋಧ್ಯಾ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಜನವರಿಯಲ್ಲಿ ಮಂದಿರ ಉದ್ಘಾಟನೆಯ ನಂತರ ಇದು ಅವರ ಮೊದಲ ಭೇಟಿಯಾಗಿದೆ. ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ಎರಡು ದಿನಗಳ ಮೊದಲು ದೂರದರ್ಶನದಲ್ಲಿ ಪ್ರಸಾರವಾದ ಸಮಾರಂಭದಲ್ಲಿ, ಪ್ರಧಾನಿ ಮೋದಿ ಅವರು ರಾಮಲಲ್ಲಾ ವಿಗ್ರಹಕ್ಕೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವುದು ಕಂಡುಬಂದಿದೆ. … Continued

ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

ಇಂಫಾಲ್ : 2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಮಣಿಪುರದ ಮತಗಟ್ಟೆಯೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಗುಂಡಿನ ಸದ್ದು ಕೇಳುತ್ತಿದ್ದಂತೆ ಮತಗಟ್ಟೆಯಲ್ಲಿದ್ದ ಮತದಾರರು ದಿಕ್ಕಾ ಪಾಲಾಗಿ ಓಡಿದ್ದಾರೆ. ಬಿಷ್ಣುಪುರ ಜಿಲ್ಲೆಯ ಥಮನ್‌ಪೋಕ್ಪಿ ಮತದಾನ ಕೇಂದ್ರದಲ್ಲಿ ಕೇಂದ್ರದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದ್ದ ವೇಳೆ ಮತಗಟ್ಟೆಯೊಂದರ ಮೇಲೆ ಗುಂಡಿನ ದಾಳಿ ನಡೆದಿದೆ. … Continued