ಪಾಕಿಸ್ತಾನದ ಇತಿಹಾಸದಲ್ಲೇ ಮೊದಲ ಬಾರಿಗೆ 300 ರೂ. ದಾಟಿದ ಪೆಟ್ರೋಲ್, ಡೀಸೆಲ್ ಬೆಲೆ

ಇಸ್ಲಾಮಾಬಾದ್‌ : ಪಾಕಿಸ್ತಾನದಲ್ಲಿ ಗಗನಕ್ಕೇರುತ್ತಿರುವ ವಿದ್ಯುತ್ ಶುಲ್ಕದ ಆಕ್ರೋಶದ ನಡುವೆ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇತಿಹಾಸದಲ್ಲಿ ಮೊದಲ ಬಾರಿಗೆ 300 ರೂಪಾಯಿಗಳ ಗಡಿ ದಾಟಿದೆ. ಇದು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಜನರಿಗೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಪ್ರಧಾನ ಮಂತ್ರಿ ಅನ್ವರುಲ್ ಹಕ್ ಕಾಕರ್ ನೇತೃತ್ವದ ಉಸ್ತುವಾರಿ ಸರ್ಕಾರವು ಗುರುವಾರ ಪೆಟ್ರೋಲ್ ಮತ್ತು ಹೈಸ್ಪೀಡ್ … Continued

ಇನ್ನು ಆಡಿಯೋ-ವೀಡಿಯೊ ಕಾಲ್‌ ಮಾಡಲು ಫೋನ್ ನಂಬರ್ ಬೇಕಿಲ್ಲ : ‘ಎಕ್ಸ್‌’ (ಟ್ವಿಟರ್‌)ನಲ್ಲಿ ಬರಲಿದೆ ಹೊಸ ವೈಶಿಷ್ಟ್ಯ

ಫೋನ್ ಕರೆ ಮಾಡಲು ಫೋನ್ ನಂಬರ್ ಇಲ್ಲದೇ ಕರೆ ಮಾಡಬಹುದು..! ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. ಏನೆಂದರೆ, ನೀವು ಎಕ್ಸ್ (ಟ್ವಿಟರ್‌) ವೇದಿಕೆಯಲ್ಲಿ ಖಾತೆ ಹೊಂದಿರಬೇಕಾಗುತ್ತದೆ. ಎಕ್ಸ್‌ ಮಾಲೀಕ ಎಲಾನ್ ಮಸ್ಕ್ ಅವರು, ತಮ್ಮ ಎಕ್ಸ್ ವೇದಿಕೆಯಲ್ಲಿ ಶೀಘ್ರವೇ ವಿಡಿಯೋ ಮತ್ತು ಆಡಿಯೋ ಕಾಲ್ ಫೀಚರ್ ಒದಗಿಸುವುದಾಗಿ ಪ್ರಕಟಿಸಿದ್ದಾರೆ. ಎಲಾನ್ ಮಾಸ್ಕ್ ತಮ್ಮ ಮಾಲೀಕತ್ವದ ಟ್ವಿಟ್ಟರ್ … Continued

ಕ್ಯಾನ್ಸರ್‌ ತಜ್ಞ ಡಾ. ರವಿ ಕಣ್ಣನ್ ಗೆ 2023ರ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರಕಟ

ನವದೆಹಲಿ: ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪುರಸ್ಕೃತರು ಮತ್ತು ಅಸ್ಸಾಂನ ಕ್ಯಾಚಾರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ (CCHRC) ನಿರ್ದೇಶಕರಾದ ಕ್ಯಾನ್ಸರ್‌ ವೈದ್ಯ ಡಾ. ರವಿ ಕಣ್ಣನ್ ಅವರಿಗೆ ಏಷ್ಯಾದ ನೊಬೆಲ್‌ ಎಂದೇ ಕರೆಯಲ್ಪಡುವ 2023 ರ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಟ್ಟು ನಾಲ್ವರು ಪುರಸ್ಕೃತರದಲ್ಲಿ ಡಾ.ರವಿ ಕಣ್ಣನ್‌ ಅವರು … Continued

ಜಾತಿ ಗಣತಿ ವಿಚಾರದಲ್ಲಿ ವಿಪಕ್ಷಗಳ ಒಕ್ಕೂಟದಲ್ಲಿ ಭಿನ್ನಾಭಿಪ್ರಾಯ; ರಾಜಕೀಯ ನಿರ್ಣಯ ಕೈಬಿಟ್ಟರು-ವರದಿ

ಮುಂಬೈ: ವಿಪಕ್ಷಗಳ ಮೈತ್ರಿಕೂಟ-ಇಂಡಿಯಾದ ಮೂರನೇ ಸಭೆಯು ಜೂನ್‌ನಲ್ಲಿ ಒಟ್ಟಾಗಿ ಬ್ಯಾಂಡ್ ಮಾಡಲು ನಿರ್ಧರಿಸಿದ ನಂತರ ವಿರೋಧ ಪಕ್ಷಗಳ ನಡುವೆ ಮೊದಲ ಪ್ರಮುಖ ಭಿನ್ನಾಭಿಪ್ರಾಯಗಳು ಹೊರಹೊಮ್ಮಿದವು. ಮುಂಬೈ ಸಭೆಯಲ್ಲಿ ಚುನಾವಣಾ ನಿರ್ಣಯವನ್ನು ಅಂಗೀಕರಿಸಲಾಯಿತು, ಆದರೆ ಜಾತಿ ಗಣತಿ ಬೇಡಿಕೆಯನ್ನು ಸೇರಿಸುವ ಬಗ್ಗೆ ಭಿನ್ನಾಭಿಪ್ರಾಯ ಹೊರಹೊಮ್ಮಿದ ನಂತರ ರಾಜಕೀಯ ನಿರ್ಣಯವನ್ನು ಕೈಬಿಡಬೇಕಾಯಿತು ಎಂದು ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ … Continued

ಬ್ಯಾಂಕುಗಳಿಗೆ ಮರಳಿದ 93% ರಷ್ಟು 2000 ರೂ. ನೋಟುಗಳು : ಆರ್‌ಬಿಐ

ನವದೆಹಲಿ: ಆಗಸ್ಟ್ 31ರ ಹೊತ್ತಿಗೆ ಬ್ಯಾಂಕುಗಳಿಗೆ ಹಿಂದಿರುಗಿದ 2,000 ರೂಪಾಯಿಗಳ ನೋಟುಗಳ ಒಟ್ಟು ಮೌಲ್ಯವು 3.32 ಲಕ್ಷ ಕೋಟಿ ರೂಪಾಯಿಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ಹೇಳಿದೆ. ಬ್ಯಾಂಕ್‌ಗಳಿಂದ ಸ್ವೀಕರಿಸಿದ ಮಾಹಿತಿಯ ಪ್ರಕಾರ, ಚಲಾವಣೆಯಿಂದ ಮರಳಿ ಪಡೆದ 2,000 ರೂಪಾಯಿಗಳ ನೋಟುಗಳ ಒಟ್ಟು ಮೌಲ್ಯವು ಆಗಸ್ಟ್ 31, 2023 ರವರೆಗೆ 3.32 … Continued

ಆದಿತ್ಯ ಎಲ್‌1 ಉಡಾವಣೆ : ತಿರುಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಇಸ್ರೋ ವಿಜ್ಞಾನಿಗಳು

ತಿರುಪತಿ: ಸೂರ್ಯನ ಕುರಿತಾದ ಅಧ್ಯಯನ ನಡೆಸಲು ರವಾನಿಸಲಿರುವ ಆದಿತ್ಯ ಎಲ್‌1 ಮಿಷನ್‌ನ ಉಡಾವಣೆಗೆ (ಸೆಪ್ಟೆಂಬರ್ 2)ಮುನ್ನಾದಿನವಾದ ಶುಕ್ರವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಿರುಮಲ ಬೆಟ್ಟದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಶುಕ್ರವಾರ ಬೆಳಿಗ್ಗೆ ತೆರಳಿದ ವಿಜ್ಞಾನಿಗಳ ತಂಡ, ದೇವರ ಆಶೀರ್ವಾದ ಪಡೆದುಕೊಂಡಿತು. ಚಂದ್ರಯಾನ- … Continued

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಆಯ್ಕೆ ಅಸಿಂಧು : ಹೈಕೋರ್ಟ್‌ ಆದೇಶ

ಬೆಂಗಳೂರು : ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎಂದು ಪ್ರಜ್ವಲ್‌ ರೇವಣ್ಣ ಆಯ್ಕೆಯನ್ನು ಹೈಕೋರ್ಟ್‌ ಅಸಿಂಧುಗೊಳಿಸಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಮೊಮ್ಮಗ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರ ಸದಸ್ಯತ್ವವನ್ನು ಅಸಿಂಧುಗೊಳಿಸಿ ಶುಕ್ರವಾರ ಕರ್ನಾಟಕ ಹೈಕೋರ್ಟ್‌  ಆದೇಶ ಮಾಡಿದೆ ಎಂದು ಬಾರ್‌ & ಬೆಂಚ್‌ ವರದಿ … Continued

ಇಂದು ಭಾರತದ ಮೊದಲ ಸೂರ್ಯಯಾನ ಬಾಹ್ಯಾಕಾಶ ನೌಕೆ ಉಡಾವಣೆ : ಸಮಯ, ನೇರ ಪ್ರಸಾರ ಎಲ್ಲಿ ವೀಕ್ಷಿಸಬಹುದು ಎಂಬ ಮಾಹಿತಿ ಇಲ್ಲಿದೆ..

ನವದೆಹಲಿ: ಭಾರತದ ಮೊದಲ ಸೂರ್ಯನ ಮಿಷನ್ ಆದಿತ್ಯ L1 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ಚಂದ್ರಯಾನ-3 ಐತಿಹಾಸಿಕ ಲ್ಯಾಂಡಿಂಗ್ ನಂತರ, ದೇಶ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಎರಡೂ ಆದಿತ್ಯ L1 ಮಿಷನ್‌ನಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿವೆ. ಆದಿತ್ಯ L1 (PSLV-C57) ಅನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ … Continued

ವಿಪಕ್ಷಗಳ ಒಕ್ಕೂಟ-ಇಂಡಿಯಾ ಸಭೆಗೆ ಕಾಂಗ್ರೆಸ್ ಮಾಜಿ ನಾಯಕ ಕಪಿಲ್ ಸಿಬಲ್ ಉಪಸ್ಥಿತಿ ಬಗ್ಗೆ ಅಸಮಾಧಾನ: ರಾಹುಲ್ ಗಾಂಧಿ ಹೇಳಿದ್ದೇನು..?

ಮುಂಬೈ: ಮುಂಬೈನಲ್ಲಿ ನಡೆದ ಎರಡು ದಿನಗಳ ವಿಪಕ್ಷಗಳ ಮೈತ್ರಿಕಾಟ-ಇಂಡಿಯಾ ಬ್ಲಾಕ್‌ ಸಭೆಯಲ್ಲಿ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರ ಅನಿರೀಕ್ಷಿತ ಪ್ರವೇಶವು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಕಪಿಲ್‌ ಸಿಬಲ್ ಸಭೆಗೆ ಅಧಿಕೃತ ಆಹ್ವಾನಿತರಾಗಿರಲಿಲ್ಲ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರು ಇಂಡಿಯಾ ಬ್ಲಾಕ್‌ ಸಭೆಯ ಭಾಗವಾಗಿರುವ ಮಹಾರಾಷ್ಟ್ರದ … Continued

ಬೈಲಹೊಂಗಲ : ವಿದ್ಯುತ್‌ ಅವಘಡ ; ತಂದೆ-ಮಗ ಸಾವು

ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ತಾಲೂಕು ಉಡಿಕೇರಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ತಂದೆ-ಮಗ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಪ್ರಭಾಕರ ಹುಂಬಿ (71) ಮತ್ತು ಮಂಜುನಾಥ ಹುಂಬಿ(31)ಮೃತಪಟ್ಟವರು ಎಂದು ಗುರುತಿಸಲಾಗಿದೆ. ಪ್ರಭಾಕರ ಅವರು ಶುಕ್ರವಾರ ಬೆಳಗ್ಗೆ ದನದ ಕೊಟ್ಟಿಗೆಗೆ ಹೋಗಿ ಆಕಳಿಗೆ ಅಹಾರ ನೀಡಿದ್ದಾರೆ. ನಂತರ ಹೊರಗೆ ವಿದ್ಯುತ್ ಕಂಬ ಸ್ಪರ್ಷವಾಗಿದೆ. ಆಗ ಅವರಿಗೆ ವಿದ್ಯುತ್ … Continued