ವೀಡಿಯೊ….| ರಾಮಲೀಲಾ ನಾಟಕದಲ್ಲಿ ʼಹನುಮಂತʼನ ಪಾತ್ರಧಾರಿ ವೇದಿಕೆಯಲ್ಲೇ ಕುಸಿದುಬಿದ್ದು ಸಾವು

ಹರಿಯಾಣದ ಭಿವಾನಿಯಲ್ಲಿ ಸೋಮವಾರ ‘ರಾಮಲೀಲಾ’ ನಾಟಕದಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ವೇದಿಕೆಯ ಮೇಲೆ ಕುದಿಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹರೀಶ ಮೆಹ್ತಾ ಎಂದು ಗುರುತಿಸಲಾದ ಹುನುಮಂತನ ಪಾತ್ರಧಾರಿ ತನ್ನ ಪ್ರದರ್ಶನದ ಸಮಯದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭಿವಾನಿಯ ಜವಾಹರ ಚೌಕ್ ಪ್ರದೇಶದಲ್ಲಿ ಭಗವಾನ್ ರಾಮನ ಗೌರವಾರ್ಥ “ರಾಜ ತಿಲಕ” ಎಂಬ ಕಾರ್ಯಕ್ರಮದಲ್ಲಿ ಈ ಘಟನೆ … Continued

ಮತ್ತೊಂದು ಸಾಧನೆ : ಹಾಂಗ್ ಕಾಂಗ್ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿದ ಭಾರತ

ನವದೆಹಲಿ : ಮತ್ತೊಂದು ಸಾಧನೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯು ಇದೇ ಮೊದಲ ಬಾರಿಗೆ ಹಾಂಗ್ ಕಾಂಗ್ ಅನ್ನು ಹಿಂದಿಕ್ಕಿ ಜಾಗತಿಕವಾಗಿ ನಾಲ್ಕನೇ ಅತಿ ದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಜಾಗತಿಕವಾಗಿ ಅಗ್ರ ಮೂರು ಷೇರು ಮಾರುಕಟ್ಟೆಗಳು ಅಮೆರಿಕ, ಚೀನಾ ಮತ್ತು ಜಪಾನ್ ಆಗಿದ್ದು, ಈಗ ಭಾರತದ ಷೇರು ಮಾರುಕಟ್ಟೆ ನಾಲ್ಕನೇ … Continued

ವೀಡಿಯೊ…| ‘ಪ್ರಾಣ ಪ್ರತಿಷ್ಠೆ’ಯ ನಂತರ ಅಯೋಧ್ಯೆಯ ರಾಮ ಮಂದಿರದಲ್ಲಿ ಭಾರೀ ಸಂಖ್ಯೆಯ ಭಕ್ತರ ನೂಕುನುಗ್ಗಲು

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿಯವರ ಯಜಮಾನತ್ವದಲ್ಲಿ ಮತ್ತು ಸಾಧು-ಸಂತರು, ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ವಿಧಿವತ್ತಾಗಿ ನಡೆದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಒಂದು ದಿನದ ನಂತರ ಅಯೋಧ್ಯೆಯ ರಾಮಮಂದಿರವನ್ನು ಇಂದು, ಮಂಗಳವಾರ ಬೆಳಿಗ್ಗೆ ಸಾರ್ವಜನಿಕರಿಗೆ ತೆರೆಯಲಾಗುತ್ತಿದೆ. ತೆರೆಯುವ ಮುನ್ನವೇ ದೇವಸ್ಥಾನದ ಮುಂಭಾಗದಲ್ಲಿ ಜನಸಾಗರವೇ ಕಂಡುಬಂತು. ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನದ … Continued

1528ರಿಂದ 2024ರ ರಾಮಮಂದಿರ ಉದ್ಘಾಟನೆವರೆಗೆ : 500 ವರ್ಷಗಳ ಕಾಯುವಿಕೆ, ಶತಮಾನದ ಕಾನೂನು ಸಂಘರ್ಷಗಳು ; ರಾಮಜನ್ಮಭೂಮಿ ಹೋರಾಟ ಸಾಗಿಬಂದ ಹಾದಿ…

ನವದೆಹಲಿ : ಅಯೋಧ್ಯೆಯಲ್ಲಿ ಸುಮಾರು 400 ಕಂಬಗಳು, 44 ಬಾಗಿಲುಗಳುಳ್ಳ ನೂತನ ರಾಮಂದಿರದ ನೂತನ ರಾಮನ ವಿಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರಾಣ ಪ್ರತಿಷ್ಠೆ ಮಾಡಿದರು. ನೂರಾರು ಧಾರ್ಮಿಕ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಯೋಧ್ಯಾ ನಗರದಲ್ಲಿ ನಡೆದ ಸಮಾರಂಭಕ್ಕೆ ದೇಶವು ಸಾಕ್ಷಿಯಾಯಿತು. ಅಯೋಧ್ಯೆಯಲ್ಲಿ ಈ ನೂತನ ರಾಮಮಂದಿರ ನಿರ್ಮಾಣ ಆಗುವ … Continued

ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ವಿಗ್ರಹದ ಮೇಲೆ ಯಾವೆಲ್ಲ ಆಭರಣಗಳಿವೆ…?

ಅಯೋಧ್ಯೆ: ರಾಮ ಮಂದಿರದಲ್ಲಿ ಭಗವಾನ್‌ ರಾಮ ಲಲ್ಲಾ ವಿಗ್ರಹ ‘ಪ್ರಾಣ ಪ್ರತಿಷ್ಠೆ’ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅದ್ಧೂರಿ ಸಮಾರಂಭದಲ್ಲಿ ನೆರವೇರಿಸಿದರು. ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ ಸಾವಿರಾರು ಸಂತರು, ಕಲಾವಿದರು, ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಏಳು ಸಾವಿರಕ್ಕೂ ಹೆಚ್ಚು ವಿಶೇಷ ಆಹ್ವಾನಿತರು ಭಾಗವಹಿಸಿದ್ದರು. ಜನವರಿ 23 ರಿಂದ ಭಕ್ತರಿಗಾಗಿ ದೇವಾಲಯವನ್ನು … Continued

ಮಥುರಾದಲ್ಲಿ ಭವ್ಯ ಕೃಷ್ಣ ದೇವಾಲಯ ನಿರ್ಮಾಣ ಆಗುವವರೆಗೆ ದಿನಕ್ಕೆ ಒಂದೇ ಊಟ ಮಾಡುವ ಪ್ರತಿಜ್ಞೆ ಮಾಡಿದ ರಾಜಸ್ಥಾನದ ಸಚಿವ…!

ನವದೆಹಲಿ : ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲಿ ಭವ್ಯ ಮಂದಿರ ನಿರ್ಮಾಣ ಆಗುವವರೆಗೆ ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಮಾಡುವುದಾಗಿ ರಾಜಸ್ಥಾನದ ಶಿಕ್ಷಣ ಸಚಿವ ಮದನ ದಿಲಾವರ್ ಸೋಮವಾರ ಪ್ರತಿಜ್ಞೆ ಮಾಡಿದ್ದಾರೆ. “ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸದಿದ್ದರೆ, ಇಂದಿನಿಂದ ನಾನು ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುತ್ತೇನೆ” ಎಂದು ದಿಲಾವರ್ ಕೋಟಾದ ತಮ್ಮ … Continued

ವೀಡಿಯೊ…| ರಾಮಮಂದಿರ ಉದ್ಘಾಟನೆ : ಅಯೋಧ್ಯೆಯಲ್ಲಿ ಪರಸ್ಪರ ಅಪ್ಪಿಕೊಂಡು ಆನಂದ ಭಾಷ್ಪ ಸುರಿಸಿದ ಸಾಧ್ವಿ ಋತಂಭರಾ-ಉಮಾಭಾರತಿ

ಅಯೋಧ್ಯೆ: ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಉಮಾಭಾರತಿ ಪಾಲ್ಗೊಂಡಿದ್ದಾರೆ. ಅವರು 32 ವರ್ಷ 46 ದಿನಗಳ ಹಿಂದೆ ಇದೇ ಪವಿತ್ರ ಪಟ್ಟಣದಲ್ಲಿದ್ದರು. ಅಂದು ಬಾಬರಿ ಮಸೀದಿಯನ್ನು ಹಿಂದೂ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಇಂದು, ಅದೇ ಸ್ಥಳದಲ್ಲಿ ಭವ್ಯವಾದ ರಾಮಮಂದಿರವೊಂದು ನಿರ್ಮಾಣವಾಗಿದ್ದು, ಕೋಟ್ಯಂತರ ಹಿಂದೂಗಳು ಭಗವಾನ್ ರಾಮನ ಜನ್ಮಸ್ಥಳವೆಂದು ನಂಬುತ್ತಾರೆ. ರಾಂ ಜನ್ಮಭೂಮಿ ಆಂದೋಲನದ ಮುಂಚೂಣಿಯಲ್ಲಿದ್ದ … Continued

ವೀಡಿಯೊ…| ನಾನು ನಾಸ್ತಿಕನಲ್ಲ-ಆಸ್ತಿಕ ; ʼಜೈ ಶ್ರೀರಾಮʼ ಘೋಷಣೆ ಕೂಗಿದ ಸಿದ್ದರಾಮಯ್ಯ

ಬೆಂಗಳೂರು: ನಾನು ನಾಸ್ತಿಕನಲ್ಲ, ನಾನು ಆಸ್ತಿಕ. ನಮ್ಮೂರಲ್ಲೂ ರಾಮನ ಗುಡಿ ಕಟ್ಟಿಸಿದ್ದೇನೆ. ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ರಾಮನ ಗುಡಿಗಳಿವೆ. ಪ್ರತಿಯೊಬ್ಬರೂ ಅವರವರ ನಂಬಿಕೆಯಂತೆ ರಾಮನನ್ನು ಪೂಜಿಸುತ್ತಾರೆ, ಗುಡಿ ಕಟ್ಟುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜೈ ಶ್ರೀರಾಮ ಎನ್ನುವುದು ಯಾರದ್ದೋ ಖಾಸಗಿ ಸ್ವತ್ತಲ್ಲ. ಅದು ಪ್ರತಿಯೊಬ್ಬ ಭಕ್ತರ ಸ್ವತ್ತು ಎಂದು ಹೇಳಿದ ಅವರು, ಜೈ ಶ್ರೀರಾಮ … Continued

“ನಾನು ಈ ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ”: ರಾಮಲಲ್ಲಾ ವಿಗ್ರಹ ಕೆತ್ತಿದ ಮೈಸೂರಿನ ಶಿಲ್ಪಿ

ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ರಾಮಲಲ್ಲಾ ವಿಗ್ರಹವನ್ನು ಕೆತ್ತಿದ ಕರ್ನಾಟಕದ ಮೈಸೂರಿನ ಶಿಲ್ಪಿ, ತನ್ನನ್ನು ತಾನು ಭೂಮಿಯ ಮೇಲಿನ “ಅದೃಷ್ಟಶಾಲಿ” ಎಂದು ಪರಿಗಣಿಸುತ್ತೇನೆ ಎಂದು ಹೇಳಿದ್ದಾರೆ. ಇಂದು, ಸೋಮವಾರ (ಜನವರಿ 22ರಂದು) ತಾನು ಕೆತ್ತಿದ ರಾಮಲಲ್ಲಾ ಮೂರ್ತಿಯ ‘ಪ್ರಾಣ ಪ್ರತಿಷ್ಠಾ’ ನಡೆದ ದಿನ ಅರುಣ ಯೋಗಿರಾಜ ಅವರು ಹಿಂದೆಂದೂ ಕಾಣದ ರೀತಿಯಲ್ಲಿ ಸಹಜವಾಗಿಯೇ ಪುಳಕಿತರಾಗಿದ್ದರು. … Continued

ಶಿವಮೊಗ್ಗ: ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದ ವೇಳೆ ‘ಅಲ್ಲಾಹು ಅಕ್ಬರ್’ ಕೂಗಿದ ಮಹಿಳೆ

ಶಿವಮೊಗ್ಗ: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ವೇಳೆ ಅಲ್ಲಿದ್ದವರು ‘ಜೈ ಶ್ರೀರಾಮ’ ಎಂದು ಘೋಷಣೆ ಕೂಗಿ ಸಂಬರಮಿಸುತ್ತಿದ್ದಾಗ ಅಲ್ಲಿದ್ದ ಮುಸ್ಲಿಂ ಮಹಿಳೆಯೊಬ್ಬರು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಘಟನೆ ನಡೆದ ವರದಿಯಾಗಿದೆ. ಇದು ಕೆಲಕಾಲ ಸ್ಥಳದಲ್ಲಿ ಗೊಂದಲಕ್ಕೆ ಕಾರಣವಾಯಿತು. ಘೋಷಣೆ ಕೂಗಿದ ಮಹಿಳೆಯನ್ನು … Continued