ಬೆಳಗಾವಿ : ನಿಂತಿದ್ದ ಲಾರಿಗೆ ಗುದ್ದಿದ ಕಾರು, ಯುವ ವೈದ್ಯ ಸಾವು, ಇಬ್ಬರಿಗೆ ಗಾಯ

ಬೆಳಗಾವಿ : ರಸ್ತೆ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಯುವ ವೈದ್ಯ ಮೃತಪಟ್ಟಿದ್ದು, ಇಬ್ಬರು ಎಂಬಿಎ ಪದವೀಧರರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಬೆಳಗಾವಿಯಲ್ಲಿ ನಡೆದಿದೆ. ನಗರದ ಯಡಿಯೂರಪ್ಪ ಮಾರ್ಗದಲ್ಲಿ ಈ ದುರ್ಘಟನೆ ನಡೆದಿದ್ದು, ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಯುವ ವೈದ್ಯ ಸೌರಭ ಕಾಂಬಳೆ (25)ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜಮಖಂಡಿಯ ಗಿರೀಶ ಕರೆಮ್ಮನವರ(25) … Continued

ಆಘಾತಕಾರಿ ವೀಡಿಯೊ | ನೋಯ್ಡಾದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಪಿಚ್‌ ಮೇಲೆಯೇ ಹೃದಯಾಘಾತದಿಂದ ಕುಸಿದುಬಿದ್ದು ಇಂಜಿನಿಯರ್ ಸಾವು

ನೋಯ್ಡಾ: ಕ್ರಿಕೆಟ್ ಆಡುತ್ತಿದ್ದ ವೇಳೆ ಇಂಜಿನಿಯರ್ ಒಬ್ಬರು ಪಿಚ್ ಮೇಲೆ ಕುಸಿದು ಬಿದ್ದು ಹೃದಯಾಘಾತದಿಂದ ಸಾವಿಗೀಡಾದ ಘಟನೆ ನೋಯ್ಡಾದಲ್ಲಿ ನಡೆದಿದೆ. ಇದರ ವೀಡಿಯೊ ಹೊರಬಿದ್ದಿದ್ದು, ಇಂಜಿನಿಯರ್ ವಿಕಾಸ್ ನೇಗಿ ಎಂಬವರು ರನ್ ತೆಗೆದುಕೊಳ್ಳಲು ಪಿಚ್‌ನ ಇನ್ನೊಂದು ಬದಿಗೆ ಓಡಿದರು ಆದರೆ ಮಧ್ಯದಲ್ಲಿ ಕುಸಿದರು. ಅವರು ಕುಸಿದು ಬೀಳುವುದನ್ನು ನೋಡಿದ ವಿಕೆಟ್ ಕೀಪರ್ ತಕ್ಷಣವೇ ಓಡಿ ಬರುತ್ತಿರುವುದು … Continued

ಕಾಸರಗೋಡು : ಎದೆಹಾಲು ಗಂಟಲಲ್ಲಿ ಸಿಲುಕಿ ಹಸುಳೆ ಸಾವು

ಕಾಸರಗೋಡು : ತಾಯಿಯ ಎದೆಹಾಲು ಕುಡಿಯುವ ವೇಳೆ ಹಾಲು ಗಂಟಲಲ್ಲಿ ಸಿಲುಕಿ ಮೂರು ತಿಂಗಳ ಮಗು ಮೃತಪಟ್ಟ ಘಟನೆ  ಕೇರಳ ಕಾಸರಗೋಡು ಜಿಲ್ಲೆಯ ಗಡಿಭಾಗವಾದ ಕುಂಬಳೆ ಸಮೀಪದ ಬಂಬ್ರಾಣ ಎಂಬಲ್ಲಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಅಬ್ದುಲ್ ಅಜೀಜ್ – ಖದೀಜಾ ದಂಪತಿ ಪುತ್ರಿ ಸುಮಾರು ಮೂರು ತಿಂಗಳ ಮಗು ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. … Continued

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಳಿಕ ತನ್ನ 30 ವರ್ಷಗಳ ʼಮೌನವ್ರತʼ ಮುಕ್ತಾಯಗೊಳಿಸ್ತಾರಂತೆ 85 ವರ್ಷದ ಈ ಮಹಿಳೆ…!

ಧನ್ಬಾದ್ (ಜಾರ್ಖಂಡ್): ಜನವರಿ 22 ರಂದು ಅಯೋಧ್ಯೆಯಲ್ಲಿ ಭಗವಾನ್‌ ಶ್ರೀರಾಮನ ಮಂದಿರದ ಉದ್ಘಾಟನೆಯೊಂದಿಗೆ ತನ್ನ ಕನಸು ನನಸಾದ ನಂತರ ಜಾರ್ಖಂಡ್‌ನ 85 ವರ್ಷದ ಮಹಿಳೆಯೊಬ್ಬರು ತಮ್ಮ ೩೧ ವರ್ಷಗಳ ‘ಮೌನ ವ್ರತ’ವನ್ನು ಕೊನೆಗೊಳಿಸಲಿದ್ದಾರೆ…! 1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ದಿನವೇ ಸರಸ್ವತಿ ದೇವಿ ತಮ್ಮ ʼಮೌನವ್ರತʼದ ಪ್ರತಿಜ್ಞೆ ಆರಂಭಿಸಿದ್ದು, ರಾಮಮಂದಿರ ಉದ್ಘಾಟನೆ ವೇಳೆಯೇ ಅದನ್ನು ಮುರಿಯುವುದಾಗಿ … Continued

ಭಾರತದ ಜೊತೆ ವಿವಾದದಿಂದ ಹಿನ್ನಡೆ: ಹೆಚ್ಚಿನ ಪ್ರವಾಸಿಗರನ್ನು ಕಳುಹಿಸುವಂತೆ ಚೀನಾಕ್ಕೆ ಮನವಿ ಮಾಡಿದ ಮಾಲ್ಡೀವ್ಸ್ ಅಧ್ಯಕ್ಷ

ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆಯ ನಂತರ ಎರಡು ದೇಶಗಳ ನಡುವೆ ರಾಜತಾಂತ್ರಿಕ ಕಲಹ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಬುಕ್ಕಿಂಗ್ ರದ್ದುಗೊಳಿಸಿದ್ದರಿಂದ ವಿಚಲಿತರಾಗಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ತಮ್ಮ ದೇಶಕ್ಕೆ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸುವ ಪ್ರಯತ್ನಗಳನ್ನು ‘ಚುರುಕುಗೊಳಿಸಬೇಕು’ ಎಂದು ಚೀನಾಕ್ಕೆ ಮನವಿ ಮಾಡಿದ್ದಾರೆ. ಭಾರತ-ಮಾಲ್ಡೀವ್ಸ್ … Continued

ವಿದ್ಯಾಪೀಠದ ದೈನಂದಿನ ವ್ಯವಹಾರದ ಹೊರತಾದ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ: ಮುರುಘಾ ಶರಣರಿಗೆ ಹೈಕೋರ್ಟ್‌ ಸೂಚನೆ

ಬೆಂಗಳೂರು : ಚಿತ್ರದುರ್ಗದ ಎಸ್‌ಜೆಎಂ ವಿದ್ಯಾಪೀಠದ ದೈನಂದಿನ ವ್ಯವಹಾರಗಳನ್ನು ಹೊರತುಪಡಿಸಿ ಯಾವುದೇ ನೀತಿ-ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ವಿದ್ಯಾಪೀಠದ ಅಧ್ಯಕ್ಷರಾಗಿರುವ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮೌಖಿಕವಾಗಿ ಸೂಚಿಸಿದೆ. ಪೋಕ್ಸೊ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ ಮಠದ ಎಸ್‌ಜೆ‌ಎಂ … Continued

ಫ್ರಾನ್ಸ್‌ನ ಕಿರಿಯ-ಮೊದಲ ಸಲಿಂಗಿ ಪ್ರಧಾನಿಯಾಗಿ ಗೇಬ್ರಿಯಲ್ ಅಟ್ಟಲ್ ನೇಮಕ

ಪ್ಯಾರಿಸ್‌ : ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮಂಗಳವಾರ ಗೇಬ್ರಿಯಲ್ ಅಟ್ಟಲ್ ಅವರನ್ನು ನೂತನ ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ಹೊಸ ವೇಗವನ್ನು ನೀಡುವ ಪ್ರಯತ್ನದಲ್ಲಿ ಮ್ಯಾಕ್ರನ್‌ ಅವರು, 34 ವರ್ಷ ವಯಸ್ಸಿನವರು ಫ್ರಾನ್ಸ್‌ನ ಕಿರಿಯ ಮತ್ತು ಮೊದಲ ಬಹಿರಂಗ ಸಲಿಂಗಕಾಮಿ ಅವರನ್ನು ಪ್ರಧಾನಿಯಾಗಿ ನೇಮಿಸಿದ್ದಾರೆ. ಊಹಾಪೋಹಗಳ ನಂತರ, … Continued

ಭಾರತ-ಮಾಲ್ಡೀವ್ಸ್ ವಿವಾದ : ಟಾಟಾ ಸಮೂಹದಿಂದ ಲಕ್ಷದ್ವೀಪದಲ್ಲಿ 2 ತಾಜ್ ಬ್ರಾಂಡ್ ರೆಸಾರ್ಟ್‌ ನಿರ್ಮಾಣ…!

ಟಾಟಾ ಗ್ರೂಪ್‌ನ ಎರಡು ರೆಸಾರ್ಟ್‌ಗಳನ್ನು 2026 ರಲ್ಲಿ ಭಾರತದ ದ್ವೀಪಸಮೂಹವಾದ ಲಕ್ಷದ್ವೀಪದ ಸುಹೇಲಿ ಮತ್ತು ಕದ್ಮತ್ ದ್ವೀಪಗಳಲ್ಲಿ ತೆರೆಯಲು ನಿರ್ಧರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಮತ್ತು ನಂತರದ ಮಾಲ್ಡೀವ್ಸ್‌ನೊಂದಿಗಿನ ಉದ್ವಿಗ್ನತೆಯ ನಂತರ ಇದು ಗಮನ ಸೆಳೆದಿದೆ. ಕಳೆದ ವರ್ಷ ಜನವರಿಯಲ್ಲಿ, ಟಾಟಾ ಗ್ರೂಪ್‌ನ ಅಂಗ ಸಂಸ್ಥೆಯಾದ ಇಂಡಿಯನ್ ಹೋಟೆಲ್ಸ್ ಕಂಪನಿಯು ಲಕ್ಷದ್ವೀಪದಲ್ಲಿ ಎರಡು … Continued

ಅಯೋಧ್ಯೆ ರಾಮಮಂದಿರ ಸಮಾರಂಭ : ಜನವರಿ 22 ರಂದು ಉತ್ತರ ಪ್ರದೇಶದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಲಕ್ನೋ: ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಜನವರಿ 22 ರಂದು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವುದರ ಜೊತೆಗೆ ಉದ್ಘಾಟನಾ ಸಮಾರಂಭದ ದಿನದಂದು ರಾಜ್ಯಾದ್ಯಂತ ಮದ್ಯ ಮಾರಾಟ ಮಾಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಆದಿತ್ಯನಾಥ ಅವರು ಜನವರಿ 22 ರಂದು ಎಲ್ಲಾ … Continued

ಹೈಕಮಾಂಡ್ ಮುಂದೆ ಮೂವರು ಡಿಸಿಎಂ ಪ್ರಸ್ತಾಪವಿಲ್ಲ; ಇವೆಲ್ಲ ಕೇವಲ ಊಹಾಪೋಹ : ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

ಕಲಬುರಗಿ: ಕರ್ನಾಟಕದಲ್ಲಿ ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಮಾತು ಕೇವಲ ಊಹಾಪೋಹ, ಹೈಕಮಾಂಡ್ ಮುಂದೆ ಅಂತಹ ಯಾವುದೇ ಪ್ರಸ್ತಾವನೆಯಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹೈಕಮಾಂಡ್ ಎದುರು ಇಂತಹ ಯಾವುದೇ ಪ್ರಸ್ತಾವನೆ ಇಲ್ಲ. ಇದಕ್ಕಿಂತಲೂ ಹೆಚ್ಚಿನ ಸ್ಪಷ್ಟನೆ ಬೇಕಿದ್ದರೆ … Continued