ಲೋಕಸಭೆ ಚುನಾವಣೆ ಸ್ಪರ್ಧಾ ಕಣಕ್ಕೆ ಪ್ರಿಯಾಂಕಾ ಗಾಂಧಿ ಎಂಟ್ರಿ..? ಮಗಳಿಗಾಗಿ ರಾಯ್ಬರೇಲಿ ಕ್ಷೇತ್ರ ಬಿಟ್ಕೊಟ್ಟು ರಾಜ್ಯಸಭೆಗೆ ಸ್ಪರ್ಧೆ ಮಾಡ್ತಾರಾ ಸೋನಿಯಾ ಗಾಂಧಿ..?!

ನವದೆಹಲಿ: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ, ಅವರು ರಾಯ್‌ಬರೇಲಿ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದಾರೆ. ಬಿಹಾರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜ್ಯಸಭಾ ಸಂಸದ ಅಖಿಲೇಶ್ ಪ್ರಸಾದ್ ಸಿಂಗ್ ನಾಮನಿರ್ದೇಶನಗೊಳ್ಳಬಹುದು. ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಕಣಕ್ಕಿಳಿಯುವ ಸಾಧ್ಯತೆಯಿರುವ ಇತರ ನಾಯಕರಲ್ಲಿ ಅಭಿಷೇಕ್ ಮನು ಸಿಂಘ್ವಿ ಮತ್ತು … Continued

ವೀಡಿಯೊ…| ಮೋದಿಪರ ಘೋಷಣೆ ಕೂಗುತ್ತಿದ್ದವರ ಜೊತೆ ಹಸ್ತಲಾಘವ ಮಾಡಿದ ರಾಹುಲ್ ಗಾಂಧಿ : ವೀಕ್ಷಿಸಿ

ಛತ್ತೀಸ್‌ಗಢ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗುತ್ತಿದ್ದ ಜನಸಮೂಹದತ್ತ ನಡೆದು ಅವರ ಕೈಕುಲುಕಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಪಕ್ಷವು “ಪ್ರೀತಿಯಲ್ಲಿ ದೊಡ್ಡ ಶಕ್ತಿ ಇದೆ” ಎಂದು ಹೇಳಿಕೆ ನೀಡಿದೆ. ಕಳೆದ ವಾರ ಒಡಿಶಾದ ಕೊರ್ಬಾದಿಂದ ಧೋಡಿಪಾರಾ ಮೂಲಕ ಕಟ್ಘೋರಾ ಮಾರ್ಗದಲ್ಲಿ ರಾಹುಲ್ ಗಾಂಧಿ … Continued

ಮಂಗಳೂರು : ಶ್ರೀರಾಮನಿಗೆ ಅವಹೇಳನ ಮಾಡಿದ ಆರೋಪ ; ಸಂತ ಜೆರೋಸಾ ಶಾಲಾ ಶಿಕ್ಷಕಿ ಅಮಾನತು

ಮಂಗಳೂರು: ಭಗವಾನ್‌ ಶ್ರೀರಾಮನಿಗೆ ಅವಹೇಳನ ಮಾಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ ಎಂದು ವರದಿಯಾಗಿದೆ. ಘಟನೆ ಖಂಡಿಸಿ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಇಂದು, ಸೋಮವಾರ ಪೋಷಕರು ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಆಡಳಿತ ಮಂಡಳಿ … Continued

ಬಿಹಾರ: ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸಿದ ನಿತೀಶಕುಮಾರ

ಪಟ್ನಾ: ಬಿಹಾರದಲ್ಲಿ ನಿತೀಶಕುಮಾರ ನೇತೃತ್ವದ ಎನ್‌ಡಿಎ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. 129 ಶಾಸಕರು ನಿತೀಶ್‌ ಕುಮಾರ್‌ ಅವರನ್ನು ಬೆಂಬಲಿಸಿದ್ದಾರೆ. ನಿತೀಶಕುಮಾರ ವಿಶ್ವಾಸಮತ ಸಾಬೀತುಪಡಿಸುತ್ತಿದಂತೆ ವಿರೋಧ ಪಕ್ಷ ಸದಸ್ಯರು ವಿಧಾನಸಭೆಯಿಂದ ಹೊರನಡೆದರು. 243 ಸದಸ್ಯಬಲದ ಬಿಹಾರ ವಿಧಾನಸಭೆಯಲ್ಲಿ ಜೆಡಿಯು 45 ಶಾಸಕರನ್ನು ಹೊಂದಿದೆ. ಬಿಜೆಪಿ ಮತ್ತು ಹಿಂದುಸ್ತಾನಿ ಅವಾಮ್ ಮೋರ್ಚಾ ಕ್ರಮವಾಗಿ … Continued

ವೀಡಿಯೊ..| ಆಘಾತಕಾರಿ ಘಟನೆ ; ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಾಗಲೇ ಸಿಡಿಲು ಬಡಿದು ಆಟಗಾರ ಸಾವು

ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಾಗಲೇ ಸಿಡಿಲು ಬಡಿದು ಆಟಗಾರ ಸಾವಿಗೀಡಾದ ಆಘಾತಕಾರಿ ಘಟನೆ ನಡೆದಿದೆ. ಇಂಡೋನೇಷ್ಯಾದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದ್ದು, ಕಳೆದ ಶನಿವಾರ ಮಧ್ಯಾಹ್ನ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಕ್ರೀಡಾಂಗಣದಲ್ಲೇ ಮೃತಪಟ್ಟಿದ್ದಾನೆ. ಇಂಡೋನೇಷ್ಯಾದ 2 FLO FC ಬಂಡಂಗ್ ಮತ್ತು FBI ಸುಬಾಂಗ್ ನಡುವಿನ ಫುಟ್ಬಾಲ್ ಪಂದ್ಯದ … Continued

ಬಜೆಟ್‌ ಅಧಿವೇಶನ : ಕೇಸರಿ ಶಾಲು ಧರಿಸಿ ಕಲಾಪದಲ್ಲಿ ಪಾಲ್ಗೊಂಡ ಬಿಜೆಪಿ ಸದಸ್ಯರು

ಬೆಂಗಳೂರು: ಸೋಮವಾರದಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗಿದ್ದು, ಅಧಿವೇಶನದ ಮೊದಲ ದಿನವೇ ಬಿಜೆಪಿ ಶಾಸಕರು ಕೇಸರಿ ಶಾಲು ಧರಿಸಿ ಆಗಮಿಸಿದ್ದು ವಿಶೇಷವಾಗಿತ್ತು. ಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ, ಉಪನಾಯಕ ಅರವಿಂದ ಬೆಲ್ಲದ ಸೇರಿದಂತೆ ಬಿಜೆಪಿಯ ಎಲ್ಲ ಶಾಸಕರು ಕೇಸರಿ ಶಾಲು ಹಾಕಿಕೊಂಡು ಸದನದಲ್ಲಿ ಕುಳಿತಿದ್ದರು. ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರವು ವಿಚಾರ ರಾಜ್ಯವ್ಯಾಪಿ ಚರ್ಚೆ … Continued

ಕಾಂಗ್ರೆಸ್ಸಿಗೆ ಮತ್ತೊಂದು ಆಘಾತ: ಪಕ್ಷಕ್ಕೆ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ ಚವಾಣ ರಾಜೀನಾಮೆ ; 10-12 ಶಾಸಕರೊಂದಿಗೆ ಬಿಜೆಪಿ ಸೇರುವ ಸಾಧ್ಯತೆ

ಮುಂಬೈ: ಲೋಕಸಭೆ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವನೆಗೆ ತಿಂಗಳುಗಳ ಮೊದಲು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಆಘಾತವಾಗಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಸಂಸದ ಅಶೋಕ ಚವಾಣ ಅವರು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಬಿಜೆಪಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ವರದಿಗಳ ನಡುವೆ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು, ಮೂಲಗಳ … Continued

ಪಾಕಿಸ್ತಾನಿಗಳು ‘ಭಾರತದ ದೊಡ್ಡ ಆಸ್ತಿ’ ಎಂದು ಕರೆದು ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕಾಂಗ್ರೆಸ್‌ ನಾಯಕ ಮಣಿಶಂಕರ ಅಯ್ಯರ್

ನವದೆಹಲಿ: ಕಾಂಗ್ರೆಸ್‌ ನಾಯಕ ಮಣಿಶಂಕರ ಅಯ್ಯರ್‌ ಅವರಿಗೆ ವಿವಾದ ಹೊಸದೇನಲ್ಲ, ಈಗ ಮಾಜಿ ಕೇಂದ್ರ ಸಚಿವರೂ ಆದ ಮಣಿಶಂಕರ ಅಯ್ಯರ್ ಅವರು ಭಾನುವಾರ ಪಾಕಿಸ್ತಾನಿ ಜನರನ್ನು ಹೊಗಳಿ ಅವರನ್ನು ‘ಭಾರತದ ದೊಡ್ಡ ಆಸ್ತಿ’ ಎಂದು ಕರೆದಿದ್ದಾರೆ ಎಂದು ಡಾನ್ ವರದಿ ಮಾಡಿದ್ದು, ಅವರ ಹೇಳಿಕೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಪಾಕಿಸ್ತಾನದ ದಿನಪತ್ರಿಕೆಯ ಪ್ರಕಾರ, ಅಯ್ಯರ್ ಅವರು … Continued

ಅಯೋಧ್ಯೆ ರಾಮ ಮಂದಿರದ ಮಂಡಲಾರಾಧನೆ ಪೂಜೆಗೆ ಮುಧೋಳ ಅರ್ಚಕ ಆಯ್ಕೆ

ಬಾಗಲಕೋಟೆ: ಅಯೋಧ್ಯೆ ರಾಮ ಮಂದಿರದ ಮಂಡಲಾರಾಧನೆ ಪೂಜೆಗೆ ಜಿಲ್ಲೆಯ ಮುಧೋಳ (Mudhol) ಮೂಲದ ಅರ್ಚಕ ಗುರುನಾಥ ಜೋಶಿ ಅವರು ಆಯ್ಕೆಯಾಗಿದ್ದಾರೆ. ಅರ್ಚಕ ಗುರುನಾಥ ಜೋಶಿ ಅವರು ಮುರಗೋಡ ಚಿದಂಬರ ವೇದ ಸಂಸ್ಕೃತ ಪಾಠಶಾಲೆಯಲ್ಲಿ ಶುಕ್ಲ ಯಜುರ್ವೇದ ಅಧ್ಯಯನ‌ ಮಾಡಿರುವ ಅವರು, ಮೂಲತಃ ಮುಧೋಳ ತಾಲೂಕಿನ ಮಾಚಕನೂರು ನಿವಾಸಿ. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು ಗುರುನಾಥ … Continued

ಇಂದಿನಿಂದ ವಿಧಾನಮಂಡಲ ಬಜೆಟ್‌ ಅಧಿವೇಶನ

ಬೆಂಗಳೂರು : ವಿಧಾನ ಮಂಡಲದ ಬಜೆಟ್‌ ಅಧಿವೇಶನ ಇಂದಿನಿಂದ (ಫೆಬ್ರವರಿ 12ರಿಂದ) ಆರಂಭವಾಗಲಿದ್ದು, ಫೆ.23ರವರೆಗೆ ನಡೆಯಲಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 16ರಂದು ಬಜೆಟ್‌ ಮಂಡನೆ ಮಾಡಲಿದ್ದಾರೆ. ಇಂದು, ಸೋಮವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ … Continued