ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ದೂರು ದಾಖಲು

ಬೆಂಗಳೂರು: ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ ಎಂಬ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಸಚಿವ ದಿನೇಶ ಗುಂಡೂರಾವ್ ಕುಟುಂಬದವರನ್ನು ಅವಮಾನಿಸಿರುವ ಶಾಸಕ ಯತ್ನಾಳ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗಾಂಧಿನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶೇಷಾದ್ರಿಪುರ ಪೊಲೀಸ್ … Continued

ಕಾರವಾರ: ಮೋದಿ ಮತ್ತೆ ಪ್ರಧಾನಿಯಾಗಲೆಂದು ಬೆರಳನ್ನೇ ಕತ್ತರಿಸಿ ಕಾಳಿ ಮಾತೆಗೆ ಅರ್ಪಿಸಿದ ಅಭಿಮಾನಿ..!

ಕಾರವಾರ: ಅಭಿಮಾನಿಯೊಬ್ಬ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಪ್ರಾರ್ಥಿಸಿ ಕಾಳಿ ಮಾತೆಗೆ ತನ್ನ ಬೆರಳನ್ನೇ ತುಂಡು ಮಾಡಿ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಸೋನಾರವಾಡದ ಅರುಣ ವರ್ಣೇಕರ ಎಂಬವರು ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ತನ್ನ ಎಡಗೈನ ಬೆರಳನ್ನೇ ಕಾಳಿ ಮಾತೆಗೆ ಅರ್ಪಿಸಿದ್ದಾರೆ. ಎಡಗೈ ತೋರು ಬೆರಳು … Continued

ವೀಡಿಯೊ…| ಬೆಂಗಳೂರು : ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ನೆಲಕ್ಕುರುಳಿದ 120 ಅಡಿ ಎತ್ತರದ ತೇರು

ಬೆಂಗಳೂರು : ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಹೀಲಲಿಗೆ ಗ್ರಾಮದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಸುಮಾರು 120 ಅಡಿ ಉದ್ದದ ತೇರು ನೆಲಕ್ಕುರುಳಿದ ಘಟನೆ ನಡೆದಿದೆ. ಹತ್ತಾರು ಗ್ರಾಮಗಳಿಂದ ಮದ್ದೂರಮ್ಮ ಜಾತ್ರೆಗೆ ಎತ್ತುಗಳು, ಟ್ರ್ಯಾಕ್ಟರ್​ಗಳ ಮೂಲಕ ತೇರು ಎಳೆದುಕೊಂಡು ಬರಲಾಗುತ್ತದೆ. ಹೀಲಲಿಗೆ ಗ್ರಾಮದಿಂದ ಹುಸ್ಕೂರಿಗೆ ತೇರು ಬರುತ್ತಿರುವಾಗ ಕಮ್ಮಸಂದ್ರದ ಹೈಪರ್ … Continued

ವೀಡಿಯೊ..| ಇದು ಪಾಕಿಸ್ತಾನ ಕ್ರಿಕೆಟ್‌ ವಿಷ್ಯ…! ಪಾಕಿಸ್ತಾನ ಕ್ರಿಕೆಟ್ ತಂಡದ ಸೇನಾ ಶೈಲಿ ತರಬೇತಿ ವೀಡಿಯೊ ನೋಡಿ ಅಭಿಮಾನಿಗಳು ದಿಗ್ಭ್ರಮೆ…!

2024 ರ ಟಿ 20 ವಿಶ್ವಕಪ್‌ಗೆ ಮುಂಚಿತವಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ಕುತೂಹಲಕಾರಿ ತರಬೇತಿಯು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಮಾರ್ಕ್ಯೂ ಈವೆಂಟ್‌ಗೆ ಮುಂಚಿತವಾಗಿ ತಂಡದಲ್ಲಿ ಶಿಸ್ತು ಬರಲು ಮತ್ತು ತಂಡದ ಫಿಟ್‌ನೆಸ್ ಸುಧಾರಿಸಲು ಬಾಬರ್ ಅಜಮ್ ಮತ್ತು ಅವರ ತಂಡ ಮಿಲಿಟರಿ ತರಬೇತಿಯನ್ನು ಪಡೆಯಲಿದೆ ಎಂದು ಕೆಲವು ವಾರಗಳ ಹಿಂದೆ ಪ್ರಕಟಿಸಲಾಗಿತ್ತು. ಆದರೆ, ಪಾಕಿಸ್ತಾನ … Continued

ದಿನದ ಕೆಲಸ ಅಂದೇ ಮುಗಿಸಲು ಒತ್ತಡ ಹಾಕಿದ್ದಕ್ಕೆ ಸಹೋದ್ಯೋಗಿಗಳಿಂದಲೇ ಆಡಿಟರ್ ಗೆ ಥಳಿಸಲು ಸುಪಾರಿ ; ಥಳಿತದ ವೀಡಿಯೊ ವೈರಲ್ ಬಳಿಕ ಐವರ ಬಂಧನ

ಬೆಂಗಳೂರು : ಖಾಸಗಿ ಸಂಸ್ಥೆಯೊಂದರಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬೆಂಗಳೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ಐವರಲ್ಲಿ ಇಬ್ಬರು ಆಡಿಟರ್ ಅವರ ಸಹೋದ್ಯೋಗಿಗಳಾಗಿದ್ದಾರೆ. ಈ ಇಬ್ಬರು ಆಡಿಟರ್ ಅವರನ್ನು ಥಳಿಸಲು ಗೂಂಡಾಗಳನ್ನು ನೇಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆ ದಿನದ ಕೆಲಸಗಳನ್ನು ಅಂದೇ ಮುಗಿಸಿ, … Continued

ಕಾರವಾರ: ಬಸ್‌ ಅಡ್ಡಗಟ್ಟಿ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ವ್ಯಕ್ತಿ

ಕಾರವಾರ: ತನಗೆ ಬಸ್ ಚಾಲಕ ಸೈಡ್ ಬಿಟ್ಟಿಲ್ಲ ಎನ್ನುವ ಕಾರಣಕ್ಕೆ ಬೈಕ್ ಸವಾರನೊಬ್ಬ ಸಾರಿಗೆ ಬಸ್ ಅಡ್ಡಗಟ್ಟಿ ಬಸ್‌ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕನಿಗೆ ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀಪದ ಶಿರವಾಡದ ಜಾಂಬಾ ಕ್ರಾಸ್ ಬಳಿ ನಡೆದಿದೆ. ಸಾರಿಗೆ ಬಸ್‌ ಕಾರವಾರ ನಗರದಿಂದ ಸಿದ್ದರಕ್ಕೆ ಪ್ರಯಾಣಿಸುತ್ತಿತ್ತು. ಬಸ್ ಶಿರವಾಡಕ್ಕೆ ತಲುಪುತ್ತಿದ್ದಂತೆ … Continued

ಕರ್ನಾಟಕದ ಮೊದಲ ಹಂತದ ಚುನಾವಣೆ: 60 ನಾಮಪತ್ರ ತಿರಸ್ಕೃತ

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ನಡೆಯಲಿರುವ 14 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು, ಇದರಲ್ಲಿ 60 ನಾಮಪತ್ರಗಳು ತಿರಸ್ಕೃತಗೊಂಡಿವೆ. 14 ಕ್ಷೇತ್ರಗಳಲ್ಲಿ ಒಟ್ಟು 358 ಅಭ್ಯರ್ಥಿಗಳಿಂದ 492 ನಾಮಪತ್ರ ಸಲ್ಲಿಕೆಯಾಗಿದ್ದು, 13 ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ಅವುಗಳಲ್ಲಿ 276 ಅಭ್ಯರ್ಥಿಗಳ 384 ನಾಮಪತ್ರ ಕ್ರಮಬದ್ಧವಾಗಿವೆ … Continued

ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡು ಭಾರತದ ಚುನಾವಣೆ ಮೇಲೆ ಪ್ರಭಾವ ಬೀರಲು ಚೀನಾ ಯತ್ನ : ಎಚ್ಚರಿಸಿದ ಮೈಕ್ರೋಸಾಫ್ಟ್

ನವದೆಹಲಿ : ಕೃತಕ ಬುದ್ಧಿಮತ್ತೆ ಸೃಷ್ಟಿಸಿದ ವಿಷಯಗಳನ್ನು ಬಳಸಿಕೊಂಡು ಭಾರತ, ಅಮೆರಿಕ ಮತ್ತು ದಕ್ಷಿಣ ಕೊರಿಯಾದಲ್ಲಿನ ಮುಂಬರುವ ರಾಷ್ಟ್ರೀಯ ಚುನಾವಣೆಗಳಿಗೆ ಅಡ್ಡಿಪಡಿಸಲು ಚೀನಾ ಸಜ್ಜಾಗುತ್ತಿದೆ ಎಂದು ಮೈಕ್ರೋಸಾಫ್ಟ್ ಎಚ್ಚರಿಕೆ ನೀಡಿದೆ. ತೈವಾನ್‌ನ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ಚೀನಾವು ಪ್ರಾಯೋಗಿಕವಾಗಿ ಈ ಆಟ ನಡೆಸಿದ ನಂತರ, ಫಲಿತಾಂಶದ ಮೇಲೆ ಪ್ರಭಾವ ಬೀರಲು ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡ … Continued

ಬೆಂಗಳೂರು ನಗರ್ತ ಪೇಟೆ ಹಲ್ಲೆ ಪ್ರಕರಣ: ದೂರು ನೀಡಿದ್ದ ಮೊಬೈಲ್‌ ಮಳಿಗೆ ಮಾಲೀಕನ ವಿರುದ್ಧವೂ ಈಗ ಎಫ್‌ಐಆರ್‌

ಬೆಂಗಳೂರು: ರಾಜಕೀಯ ತಿರುವು ಪಡೆದು ಚರ್ಚೆಗೆ ಗ್ರಾಸವಾಗಿದ್ದ ಬೆಂಗಳೂರಿನ ನಗರ್ತಪೇಟೆಯ ಮೊಬೈಲ್‌ ಮಳಿಗೆ ಮಾಲೀಕನ ಮೇಲೆ ನಡೆಸಿದ್ದ ಹಲ್ಲೆ ಪ್ರಕರಣದಲ್ಲಿ ಈಗ ಹಲ್ಲೆಗೊಳಗಾಗಿದ್ದ ಮುಖೇಶ ಎಂಬವರ ವಿರುದ್ಧವೂ ಹಲಸೂರು ಗೇಟ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ನಗರ್ತಪೇಟೆಯ ಮೊಬೈಲ್‌ ಮಳಿಗೆ ಮಾಲೀಕ ಮುಖೇಶ ಧ್ವನಿವರ್ಧಕ ಶಬ್ದ ಕಡಿಮೆ ಮಾಡದ್ದಕ್ಕೆ ಆಕ್ಷೇಪಿಸಿ ನಾಲ್ವರು ಆತನ ಅಂಗಡಿಗೆ ನುಗ್ಗಿ ಮೇಲೆ … Continued