75ಕ್ಕೂ ಹೆಚ್ಚು ದೇಶಗಳ ಸರಕಿಗೆ ವಿಧಿಸಿದ್ದ ಸುಂಕ 90 ದಿನ ತಡೆಹಿಡಿದ ಟ್ರಂಪ್‌ ; ಆದ್ರೆ ಚೀನಾ ಸರಕುಗಳ ಮೇಲಿನ ಸುಂಕ 125%ಕ್ಕೆ ಹೆಚ್ಚಳ…!

ವಾಷಿಂಗ್ಟನ್‌ : ಜಾರಿಗೆ ಬಂದ ಕೇವಲ 24 ಗಂಟೆಗಳ ನಂತರ ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿ ಸುಂಕ ವಿಧಿಸಿದ್ದನ್ನು 90 ದಿನಗಳ ಕಾಲ ತಡೆಹಿಡಿಯುವುದಾಗಿ ಘೋಷಿಸಿದ್ದಾರೆ. ಇದು ಒಂದು ಪ್ರಮುಖ ವ್ಯಾಪಾರ ಯುದ್ಧದ ಭಯಕ್ಕೆ ಕಾರಣವಾಗಿ ಜಾಗತಿಕ ಮಾರುಕಟ್ಟೆ ಕುಸಿತಕ್ಕೆ ಕಾರಣವಾಯಿತು. ಜಾಗತಿಕ ಆರ್ಥಿಕ ಹಿಂಜರಿತದ ಬಗ್ಗೆ ಆತಂಕ ಸೃಷ್ಟಿಸಿತು. ಆದರೆ … Continued

ಒಂದೇ ಸಮನೆ ಅಳುತ್ತಿದೆ ಎಂದು ಕೋಪಗೊಂಡು ಮೂರು ತಿಂಗಳ ಮಗುವನ್ನು ಕೊಂದು ನೀರಿನ ಟ್ಯಾಂಕಿಗೆ ಎಸೆದ ತಾಯಿ…!

ಅಹಮದಾಬಾದ್: ಮೂರು ತಿಂಗಳ ಮಗು ಒಂದೇ ಸಮನೆ ನಿರಂತರವಾಗಿ ಅಳುತ್ತಿದ್ದ ಕಾರಣಕ್ಕೆ ಬೇಸತ್ತ 22 ವರ್ಷದ ಮಹಿಳೆಯೊಬ್ಬರು ಆತನನ್ನು ಭೂಗತ ನೀರಿನ ಟ್ಯಾಂಕ್‌ಗೆ ಎಸೆದು ಕೊಲೆ ಮಾಡಿದ ಆರೋಪದ ಮೇಲೆ ಇಲ್ಲಿ ಬಂಧಿತಳಾಗಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಕರಿಷ್ಮಾ ಬಾಘೇಲ್ ಎಂಬ 22 ವರ್ಷದ ಮಹಿಳೆ ಕಳೆದ ಶನಿವಾರ ತನ್ನ ಮೂರು ತಿಂಗಳ ಮಗ … Continued

ಎರಡನೇ ಪತಿಗೆ ಡೈವೋರ್ಸ್‌ ನೀಡಿ, ಹಿಂದೂ ಧರ್ಮಕ್ಕೆ ಮತಾಂತರಗೊಂಡು 12ನೇ ತರಗತಿ ವಿದ್ಯಾರ್ಥಿಯನ್ನು ಮದುವೆಯಾದ 3 ಮಕ್ಕಳ ತಾಯಿ…!

ಅಮ್ರೋಹಾ : 30 ವರ್ಷದ ಮಹಿಳೆಯೊಬ್ಬರು ಹಿಂದೂ ಧರ್ಮಕ್ಕೆ ಮತಾಂತರಗೊಂಡು 12 ನೇ ತರಗತಿಯ ವಿದ್ಯಾರ್ಥಿನಿಯನ್ನು ದೇವಾಲಯದ ಸಮಾರಂಭದಲ್ಲಿ ವಿವಾಹವಾದ ವಿದ್ಯಮಾನ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಸನ್‌ಪುರದ ವೃತ್ತ ಅಧಿಕಾರಿ ದೀಪಕುಮಾರ ಪಂತ್ ಅವರ ಪ್ರಕಾರ, ಶಿವಾನಿ ಎಂಬ ಮಹಿಳೆಯನ್ನು ಈ ಹಿಂದೆ ಶಬ್ನಮ್ ಎಂದು ಕರೆಯಲಾಗುತ್ತಿತ್ತು.ಈ … Continued

ವಾಲ್ಮೀಕಿ ನಿಗಮ ಹಗರಣ ; ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ಪ್ರಾಸಿಕ್ಯೂಷನ್ ​ಗೆ ಅನುಮತಿ ನೀಡಿದ ರಾಜ್ಯಪಾಲರು

ಬೆಂಗಳೂರು : ಬಹುಕೋಟಿ ಮೌಲ್ಯದ ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಶಾಸಕ ಬಿ. ನಾಗೇಂದ್ರ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕರ್ನಾಟಕ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅನುಮತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ನಾಗೇಂದ್ರ ವಿರುದ್ಧ ನ್ಯಾಯಾಲಯದಲ್ಲಿ ಔಪಚಾರಿಕ … Continued

ಕೇಂದ್ರ ಸಚಿವ ಜಿತನ ಮಾಂಝಿ ಮೊಮ್ಮಗಳನ್ನು ಗುಂಡಿಕ್ಕಿ ಕೊಂದ ಗಂಡ…!?

ಗಯಾ : ಆಘಾತಕಾರಿ ಘಟನೆಯೊಂದರಲ್ಲಿ, ಕೇಂದ್ರ ಸಚಿವರಾದ ಜಿತನ್ ರಾಮ ಮಾಂಝಿ ಅವರ ಮೊಮ್ಮಗಳನ್ನು ಬುಧವಾರ (ಏಪ್ರಿಲ್ 9) ಗಯಾದಲ್ಲಿ ಅವರ ಪತಿಯೇ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇಂದ್ರ ಸಚಿವರಾದ ಜಿತನ್ ರಾಮ ಮಾಂಝಿ ಮೊಮ್ಮಗಳು ಸುಷ್ಮಾ ದೇವಿ ಅವರನ್ನು ಗಯಾದಲ್ಲಿರುವ ಅವರ ಮನೆಯಲ್ಲಿ ಅವರ ಪತಿ ರಮೇಶ ಗುಂಡಿಕ್ಕಿ ಕೊಂದಿದ್ದಾನೆ ಎಂದು … Continued

ಸಿಂಗಾಪುರದ ಶಾಲೆಯಲ್ಲಿ ಬೆಂಕಿ ಅನಾಹುತದಲ್ಲಿ ಆಂಧ್ರ ಡಿಸಿಎಂ ಪವನ ಕಲ್ಯಾಣ ಪುತ್ರನಿಗೆ ಗಾಯ ; ಆಸ್ಪತ್ರೆಗೆ ದಾಖಲು

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣ ಅವರ ಕಿರಿಯ ಪುತ್ರ ಮಾರ್ಕ್ ಶಂಕರ ಅವರು ಸಿಂಗಾಪುರದ ತಮ್ಮ ಶಾಲೆಯಲ್ಲಿ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹೊಗೆಯಿಂದ ಉಸಿರಾಟದ ತೊಂದರೆಯ ಜೊತೆಗೆ ಶಂಕರ ಅವರ ಕೈಗಳು ಮತ್ತು ಕಾಲುಗಳಿಗೆ ಗಾಯಗಳಾಗಿವೆ ಎಂದು ಆರಂಭಿಕ ವರದಿಗಳು ಸೂಚಿಸುತ್ತವೆ. ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಪಮುಖ್ಯಮಂತ್ರಿ ಕಲ್ಯಾಣ ಅವರು … Continued

ದ್ವಿತೀಯ ಪಿಯುಸಿ 2025ರ ಪರೀಕ್ಷೆ 2, 3ರ ವೇಳಾ ಪಟ್ಟಿ ಬಿಡುಗಡೆ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್ಇಎಬಿ) ಇಂದು ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಫಲಿತಾಂಶಗಳ ಜೊತೆಗೆ, ಮುಂಬರುವ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2 ಮತ್ತು 3 ರ ದಿನಾಂಕಗಳನ್ನು ಸಹ ಪ್ರಕಟಿಸಿದೆ. ಮಾರ್ಚ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದ ಅಥವಾ ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಬಯಸುವ ವಿದ್ಯಾರ್ಥಿಗಳು … Continued

ಇನ್ಮುಂದೆ ಆಧಾರ್ ಕಾರ್ಡ್ ಸ್ಕ್ಯಾನ್ ಮಾಡುವ, ಫೋಟೊಕಾಪಿ ಸಲ್ಲಿಸುವ ಅಗತ್ಯವಿಲ್ಲ ; ಕೇಂದ್ರ ಸರ್ಕಾರದಿಂದ ಹೊಸ ಆ್ಯಪ್ ಬಿಡುಗಡೆ

ನವದೆಹಲಿ: ಡಿಜಿಟಲ್ ಅನುಕೂಲತೆ ಮತ್ತು ಗೌಪ್ಯತೆ ರಕ್ಷಣೆ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ, ಕೇಂದ್ರವು ಮಂಗಳವಾರ ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಅದು ಬಳಕೆದಾರರು ತಮ್ಮ ಆಧಾರ್ ವಿವರಗಳನ್ನು ಡಿಜಿಟಲ್ ಆಗಿ ಪರಿಶೀಲಿಸಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರಿಂದ ಭೌತಿಕ ಆಧಾರ್ ಕಾರ್ಡ್‌ಗಳನ್ನು ಒಯ್ಯುವ ಅಥವಾ ಫೋಟೊಕಾಪಿಗಳನ್ನು ಸಲ್ಲಿಸುವ ಅಗತ್ಯ ಇಲ್ಲವಾಗುತ್ತದೆ. ಆ್ಯಪ್ … Continued

ವಕ್ಫ್ ತಿದ್ದುಪಡಿ ಕಾಯ್ದೆ ಏಪ್ರಿಲ್ 8ರಿಂದ ಜಾರಿಗೆ

ನವದೆಹಲಿ : ಕಳೆದ ವಾರ ಸಂಸತ್ತು ಅಂಗೀಕರಿಸಿದ ವಕ್ಫ್ (ತಿದ್ದುಪಡಿ) ಕಾಯ್ದೆ ಏಪ್ರಿಲ್ 8ರಿಂದ ಜಾರಿಗೆ ಬಂದಿದೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಅಧಿಸೂಚನೆಯಲ್ಲಿ, “ವಕ್ಫ್ (ತಿದ್ದುಪಡಿ) ಕಾಯ್ದೆ-2025 (2025 ರ 14) ರ ಸೆಕ್ಷನ್ 1 ರ ಉಪವಿಭಾಗ (2) ರಿಂದ ನೀಡಲಾದ ಅಧಿಕಾರವನ್ನು ಚಲಾಯಿಸಿ, ಕೇಂದ್ರ ಸರ್ಕಾರವು ಈ … Continued

ಚೀನಾದ ಮೇಲೆ 104% ಸುಂಕ ವಿಧಿಸಿದ ಅಮೆರಿಕ ; ದೃಢಪಡಿಸಿದ ಶ್ವೇತಭವನ : ಏಪ್ರಿಲ್ 9 ರಿಂದ ಜಾರಿಗೆ

ವಾಷಿಂಗ್ಟನ್‌ : ಏಪ್ರಿಲ್ 9 ರಿಂದ ಜಾರಿಗೆ ಬರುವಂತೆ ಅಮೆರಿಕವು ಚೀನಾದ ಮೇಲೆ ಶೇ. 104 ರಷ್ಟು ಸುಂಕಗಳನ್ನು ವಿಧಿಸಿದ್ದು, ಶ್ವೇತಭವನವು ಫಾಕ್ಸ್ ಬಿಸಿನೆಸ್ ವರದಿಗಾರರಿಗೆ ದೃಢಪಡಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾಕ್ಕೆ ಅಮೆರಿಕದ ಆಮದುಗಳ ಮೇಲಿನ ಶೇ. 34 ರಷ್ಟು ಪ್ರತಿಸುಂಕವನ್ನು ಹಿಂಪಡೆಯುವಂತೆ ಒತ್ತಾಯಿಸಿ ನೀಡಿದ ಎಚ್ಚರಿಕೆ ಮತ್ತು ಒಂದು ದಿನದ ಗಡುವಿನ … Continued