ಬಿಲ್ ತುಂಬಲಾಗದೆ ಮನೆ ವಿದ್ಯುತ್‌ ಸಂಪರ್ಕ ಕಡಿತ ; ಈತನಿಗೆ ಆದಾಯ ತೆರಿಗೆ ಇಲಾಖೆಯಿಂದ 11 ಕೋಟಿ ರೂ. ಪಾವತಿಸಲು ನೋಟಿಸ್…!

ಅಲಿಗಢ: ವಿದ್ಯುತ್‌ ಬಿಲ್ ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ಅಲಿಗಢದ ವ್ಯಕ್ತಿಯೊಬ್ಬರ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ, ಆದರೆ ಅವರಿಗೆ ಆದಾಯ ತೆರಿಗೆ ಇಲಾಖೆ ಅವರಿಗೆ ದೊಡ್ಡ ಶಾಕ್‌ ನೀಡಿದೆ. ಕ್ಷಯರೋಗದಿಂದ ಬಳಲುತ್ತಿರುವ ಪತ್ನಿ ಇರುವ ಕಾರ್ಮಿಕನಿಗೆ 11 ಕೋಟಿ ರೂ.ಗಳಿಗೂ ಹೆಚ್ಚು ತೆರಿಗೆ ಬಾಕಿ ಇದೆ ಎಂದು ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿದೆ…! ಉತ್ತರ ಪ್ರದೇಶದ … Continued

ವಕ್ಫ್ (ತಿದ್ದುಪಡಿ) ಮಸೂದೆ-2024 ; ಇಂದು ಲೋಕಸಭೆಯಲ್ಲಿ ಮಂಡನೆ

ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ-2024 ಬುಧವಾರ (ಏಪ್ರಿಲ್ 2)ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವಕ್ಫ್ ತಿದ್ದುಪಡಿ ಮಸೂದೆ-2024 ಅನ್ನು ಬುಧವಾರ ಮಂಡಿಸಲಾಗುತ್ತದೆ ಮಂಗಳವಾರ ಪ್ರಕಟಿಸಿದರು. ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಪ್ರಶ್ನೋತ್ತರ ಅವಧಿಯ ನಂತರ ಮಸೂದೆಯನ್ನು ಮಂಡಿಸಲಾಗುವುದು, ನಂತರ 8 ಗಂಟೆಗಳ ಚರ್ಚೆಯ ನಂತರ ಅದನ್ನು … Continued

ವಿಜಯಪುರ | ಭಾರಿ ಶಬ್ದ, ಕಂಪಿಸಿದ ಭೂಮಿ ; ಗಾಬರಿಯಿಂದ ಮನೆಯಿಂದ ಹೊರಗೆ ಓಡಿದ ಜನ

ವಿಜಯಪುರ: ಜಿಲ್ಲೆಯ ತಿಕೋಟಾ(Tikota) ಹಾಗೂ ವಿಜಯಪುರ ತಾಲೂಕಿನ ಹಲವೆಡೆ ಸೋಮವಾರ ಭೂಮಿಯಿಂದ ಕೇಳಿಸಿದ ಜೋರಾದ ಶಬ್ದಕ್ಕೆ ಜನರು ಗಾಬರಿಗೊಂಡಿದ್ದು, ಭೂಕಂಪನದ ಅನುಭವವಾಗಿದ್ದರಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ಮಧ್ಯಾಹ್ನದ ಆಸಪಾಸು ವಿಜಯಪುರ ತಾಲೂಕಿನ ಕೆಲ ಭಾಗ ಹಾಗೂ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಕಳ್ಳಕವಟಗಿ, ಗೋಣಸಗಿ, ಹಡಗಿನಾಳ ಸೇರಿದಂತೆ ಹಲವೆಡೆ ಭಾರಿ ಶಬ್ದ … Continued

ಅತ್ಯಾಚಾರ ಪ್ರಕರಣ: ‘ಯೇಸು ಯೇಸು’ ಪಾದ್ರಿ ಬಜಿಂದರ್ ಸಿಂಗ್ ಗೆ ಜೀವಾವಧಿ ಶಿಕ್ಷೆ

ನವದೆಹಲಿ: ಪಂಜಾಬಿನ ಮೊಹಾಲಿಯ ನ್ಯಾಯಾಲಯವು 2018 ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ-ಘೋಷಿತ ಬೋಧಕ ಹಾಗೂ ಕ್ರೈಸ್ತ ಪಾದ್ರಿ ಬಜೀಂದರ್ ಸಿಂಗ್ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. “ಯೇಸು ಯೇಸು ಪ್ರವಾದಿ” ಎಂದು ಜನಪ್ರಿಯತೆ ಪಡೆದಿದ್ದ 42 ವರ್ಷದ ಬಜೀಂದರ್‌ ಸಿಂಗ್, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ) … Continued

ಕರ್ನಾಟಕದ ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್‌ ; ಡೀಸೆಲ್ ದರ ಹೆಚ್ಚಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಅನೇಕ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರ, ಈಗ ಮತ್ತೊಂದು ಬೆಲೆ ಏರಿಕೆಯ ಶಾಕ್ ನೀಡಿದ್ದು, ರಾಜ್ಯದಲ್ಲಿ ಡೀಸೆಲ್ ಬೆಲೆ ಹೆಚ್ಚಳ ಮಾಡಿದೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ಹಾಲು, ವಿದ್ಯುತ್ ದರ ಏರಿಕೆ ಮಾಡಿರುವ ಸರ್ಕಾರ, ಈಗ ಈ ಪಟ್ಟಿಗೆ ಡೀಸೆಲ್ ಅನ್ನು ಸೇರಿಸಿದೆ. ಡೀಸೆಲ್ ಬೆಲೆ ಮೇಲಿನ ಮಾರಾಟ ತೆರಿಗೆಯನ್ನು … Continued

ಎಲ್ಲಾ ನಕಲಿ ಇಲ್ಲಿ… | ಎಕ್ಸಿಡೆಂಟ್‌ ನಕಲಿ…ಅಂತ್ಯಕ್ರಿಯೆ ನಕಲಿ…! 2 ಕೋಟಿ ವಿಮೆ ಹಣ ಪಡೆಯಲು ಮಗ ಸತ್ತಿದ್ದಾನೆಂದು ಬಿಂಬಿಸಿ ಸಿಕ್ಕಿಬಿದ್ದರು..!

ನವದೆಹಲಿ: ವಿಮಾ ಕಂಪನಿ(Insurance Company)ಯಿಂದ 2 ಕೋಟಿ ರೂ. ಇನ್ಶೂರೆನ್ಸ್ ಹಣ ಪಡೆಯಲು ವ್ಯಕ್ತಿಯೊಬ್ಬ ಬದುಕಿರುವ ತನ್ನ ಮಗನನ್ನು ಸತ್ತಿದ್ದಾನೆಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ನಜಾಫ್‌ಗಢ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಈ ಸಂಬಂಧ ನಕಲಿ ಮರಣ ಪ್ರಮಾಣ ಪತ್ರವನ್ನೂ ಸಿದ್ಧಪಡಿಸಲಾಗಿತ್ತು, ನಕಲಿ ಅಂತ್ಯಕ್ರಿಯೆಯನ್ನೂ … Continued

ಬೆಂಗಳೂರು | ಉದ್ಯಮಿ ಹನಿಟ್ರ್ಯಾಪ್ ಪ್ರಕರಣ ; ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಆರೋಪ ; ಪ್ರಿಸ್ಕೂಲ್ ಶಿಕ್ಷಕಿ, ಇಬ್ಬರ ಬಂಧನ

ಬೆಂಗಳೂರು : ಉದ್ಯಮಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಶಿಶುವಿಹಾರದ ಶಿಕ್ಷಕಿ ಸೇರಿದಂತೆ ಮೂವರನ್ನು ಬೆಂಗಳೂರು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಂಧಿಸಿದೆ ಎಂದು ವರದಿಯಾಗಿದೆ ಶಿಶುವಿಹಾರ (ಪ್ರಿ ಸ್ಕೂಲ್‌)ದ ಮಗುವಿನ ತಂದೆಯಿಂದ ಹಣ ಸುಲಿಗೆ ಮಾಡಿದ ಆರೋಪದ ಮೇಲೆ 25 ವರ್ಷದ ಶ್ರೀದೇವಿ ರೂಡಗಿ ಮತ್ತು ಗಣೇಶ ಕಾಳೆ (38) … Continued

ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ : 13 ಕಾರ್ಮಿಕರ ಸಾವು ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ಪಾಲನಪುರ: ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ಮಂಗಳವಾರ ಪಟಾಕಿ ಕಾರ್ಖಾನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಸಂಭವಿಸಿದ ಸ್ಫೋಟದಲ್ಲಿ ಕಟ್ಟಡ ಕುಸಿದು ಕನಿಷ್ಠ 13 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೀಸಾ ಪಟ್ಟಣದ ಬಳಿ ಇರುವ ಘಟಕದಲ್ಲಿ ಈ ಘಟನೆ ನಡೆದಿದೆ. “ಮಂಗಳವಾರ ಬೆಳಿಗ್ಗೆ 9: 45 ರ ಸುಮಾರಿಗೆ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ, ಇದರಿಂದಾಗಿ … Continued

ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ? “ಹಿಮಾಲಯ, ಮುಂಬೈ…ಮೀನುಗಾರಿಕೆ…: ವಿವರ ಹಂಚಿಕೊಂಡ ಗಗನಯಾತ್ರಿ ಸುನಿತಾ ವಿಲಿಯಮ್ಸ್​

ವಾಷಿಂಗ್ಟನ್ : ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ? ಭಾರತೀಯ ಮೂಲದ ಬಾಹ್ಯಾಕಾಶ ಪರಿಶೋಧಕಿ ಸುನೀತಾ ವಿಲಿಯಮ್ಸ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ “ನಂಬಲಾಗದಂತಹ” ಅದ್ಭುತ ಹಿಮಾಲಯದ ಮೇಲೆ ಹಾದುಹೋದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಬಾಹ್ಯಾಕಾಶದಲ್ಲಿ 286 ದಿನಗಳ ವಾಸ್ತವ್ಯದ ನಂತರ ಭಾರತವು ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಎಂಬ ಪ್ರಶ್ನೆಗೆ “ಅದ್ಭುತವಾಗಿದೆ, ಅದ್ಭುತವಾಗಿದೆ” ಎಂದು ಅವರು ಉತ್ತರಿಸಿದರು. “ಭಾರತ … Continued

ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ದರದಲ್ಲಿ ಇಳಿಕೆ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ಮಂಗಳವಾರದಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ 41 ರೂಪಾಯಿ ಇಳಿಕೆ ಮಾಡುವುದನ್ನು ಘೋಷಿಸಿವೆ. ದೆಹಲಿಯಲ್ಲಿ ಮಂಗಳವಾರ (ಏಪ್ರಿಲ್‌ 1)ದಿಂದ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ 1762 ರೂ.ಗಳಾಗಿವೆ. ಮುಂಬೈ: 1,714.50 ರೂ. ( 1,755.50 ರೂ. ಇತ್ತು) … Continued