ಭಾರತದ ವಾಯುದಾಳಿಗೆ ಪಾಕಿಸ್ತಾನ ಸೇನೆ ತತ್ತರ : ನೂರ್ ಖಾನ್ ವಾಯುನೆಲೆ ಮೇಲಿನ ದಾಳಿ ನಂತರ ಬಂಕರ್‌ ನಲ್ಲಿ ಅಡಗಿದ ಪಾಕ್‌ ಸೇನಾ ಮುಖ್ಯಸ್ಥ..?!

ಆಪರೇಷನ್ ಸಿಂಧೂರ ಹೆಸರಿನ ಭಾರತದ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನೆಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ ನಡೆಸಿದ ನಿಖರ ದಾಳಿಯ ನಂತರ, ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರನ್ನು ರಾವಲ್ಪಿಂಡಿಯಲ್ಲಿರುವ ಜನರಲ್ ಹೆಡ್‌ಕ್ವಾರ್ಟರ್ಸ್ (GHQ) ನಲ್ಲಿರುವ ಸುರಕ್ಷಿತ ಬಂಕರ್‌ಗೆ ಸ್ಥಳಾಂತರಿಸಲಾಗಿದೆ ಎಂದು ಕೆಲ ವರದಿಗಳು ತಿಳಿಸಿವೆ. ಮೂಲಗಳು ಹೇಳುವಂತೆ ಪಾಕಿಸ್ತಾನಿ ಸೇನಾ … Continued

ವೀಡಿಯೊ…| ಪಿಒಕೆ ಹಿಂಪಡೆವ ಬಗ್ಗೆ ಮಾತ್ರ ಮಾತುಕತೆ, ಪರಮಾಣು ಬ್ಲ್ಯಾಕ್‌ ಮೇಲ್‌ ಸಹಿಸಲ್ಲ..ಪಾಕಿಸ್ತಾನದ ಹೃದಯಕ್ಕೆ ಹೊಡೆದಿದ್ದೇವೆ..ಮಿಲಿಟರಿ ಕ್ರಮ ಅಮಾನತು ಅಷ್ಟೆ ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ

ನವದೆಹಲಿ: ಭಾರತದ ಸೇನೆಯ ಆಪರೇಷನ್ ಸಿಂಧೂರ ಕುರಿತು ಸೋಮವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಮಧ್ಯೆ ಯಾವುದೇ ರೀತಿಯ ಪರಮಾಣು ಬ್ಲ್ಯಾಕ್‌ ಮೇಲ್‌ ಅನ್ನು ಭಾರತ ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತಕ್ಕೆ ಮರಳಿಸುವ ಕುರಿತು ಮಾತ್ರ ಪಾಕಿಸ್ತಾನದ ಜೊತೆ ಮಾತುಕತೆ ನಡೆಸಲಾಗುವುದು … Continued

ಆಪರೇಷನ್ ಸಿಂಧೂರ | ಇಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಮಿಲಿಟರಿ ಸಂಘರ್ಷದ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಇಂದು ಸೋಮವಾರ (ಮೇ 12) ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಭೂಮಿ, ವಾಯು ಮತ್ತು ಸಮುದ್ರದಾದ್ಯಂತ ಎಲ್ಲಾ ಮಿಲಿಟರಿ ದಾಳಿಗಳನ್ನು ನಿಲ್ಲಿಸಲು ಎರಡೂ ದೇಶಗಳು ಪರಸ್ಪರ ಒಪ್ಪಂದಕ್ಕೆ ಬಂದ ಕೆಲವೇ ದಿನಗಳ ನಂತರ ಅವರು … Continued

ಆಪರೇಶನ್‌ ಸಿಂಧೂರ | ಪಾಕಿಸ್ತಾನದ ಮಿರಾಜ್ ಯುದ್ಧ ವಿಮಾನ, ಚೀನಾ ನಿರ್ಮಿತ ಏರ್ ಡಿಫೆನ್ಸ್ ಧ್ವಂಸ : ಸೇನೆಯಿಂದ ವೀಡಿಯೊ ಬಿಡುಗಡೆ

ನವದೆಹಲಿ: ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾದ ಘಟನೆಗೆ ಪ್ರತಿಯಾಗಿ ಆರಂಭಿಸಲಾದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಯಲ್ಲಿ ಪಾಕಿಸ್ತಾನದ ಮಿರಾಜ್ ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಭಾರತ ಸೋಮವಾರ ತಿಳಿಸಿದೆ. ಭಾರತೀಯ ಸೇನೆಯು X ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಪಾಕಿಸ್ತಾನದ ಮಿರಾಜ್ ಜೆಟ್‌ನ ತುಂಡಾಗಿ ಬಿದ್ದಿರುವ ಅವಶೇಷಗಳು ಕಂಡುಬಂದಿವೆ. ಪಾಕಿಸ್ತಾನದ … Continued

ಸುಲಭವಲ್ಲ, ಆದ್ರೆ ಸರಿ ಅನಿಸುತ್ತದೆ….”: ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಭಾರತದ ಕ್ರಿಕೆಟ್‌ ದಿಗ್ಗಜ ವಿರಾಟ್ ಕೊಹ್ಲಿ

ನವದೆಹಲಿ: ಭಾರತದ ಕ್ರಿಕೆಟ್‌ ದಿಗ್ಗಜ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದಿದ್ದಾರೆ. ಹಲವು ದಿನಗಳ ಊಹಾಪೋಹಗಳ ನಂತರ, ಭಾರತೀಯ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಭಾವನಾತ್ಮಕ ಪೋಸ್ಟ್ ಮೂಲಕ ಟೆಸ್ಟ್ ಕ್ರಿಕೆಟ್‌ನಿಂದ ತಕ್ಷಣದಿಂದಲೇ ನಿವೃತ್ತಿ ಘೋಷಿಸಿದ್ದಾರೆ. ಭಾರತದ ಟೆಸ್ಟ್ ನಾಯಕ ರೋಹಿತ್ ಶರ್ಮಾ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಬೆನ್ನಿಗೇ ಈಗ ವಿರಾಟ … Continued

‘ಕಾಮಿಡಿ ಕಿಲಾಡಿಗಳು-3’ ವಿಜೇತ ರಾಕೇಶ ಪೂಜಾರಿ ನಿಧನ

ಉಡುಪಿ: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ ಪೂಜಾರಿ ( 33) ಅವರು ಸೋಮವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ‌ ನಿಟ್ಟೆಯಲ್ಲಿ ಪರಿಚಯಸ್ಥರ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದಾಗ ಅವರಿಗೆ ಹೃದಯಾಘಾತವಾಗಿದ್ದು, ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಇಂದು, ಸೋಮವಾರ (ಮೇ 12) ಮುಂಜಾನೆ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಇದ್ದಕ್ಕಿದ್ದಂತೆ ಲೋ … Continued

ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದಿನಿಂದ ಗುಡುಗು ಸಹಿತ ಗಾಳಿ ಮಳೆ ; ಮುನ್ಸೂಚನೆ

ಬೆಂಗಳೂರು : ಕರ್ನಾಟಕದಾದ್ಯಂತ ಮೇ 13ರಿಂದ ಮಳೆ(Rain)ಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದ್ದು, ಗುಡುಗು ಸಹಿತ ಮಳೆಯಾಗಲಿದೆ ಹಾಗೂ ಗಾಳಿಯ ವೇಗ ಗಂಟೆಗೆ 30-40 ಕಿ.ಮೀ ಇರಲಿದೆ ಎಂದು ತಿಳಿಸಿದೆ. ಇಂದು, ಸೋಮವಾರ ( ಮೇ 12) ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, … Continued

ಜಿನೀವಾ ಮಾತುಕತೆಯ ನಂತರ ಅಮೆರಿಕ-ಚೀನಾ ಮಧ್ಯೆ ವ್ಯಾಪಾರ ಒಪ್ಪಂದ

ಜಿನೀವಾ: ಹಾನಿಕಾರಕ ವ್ಯಾಪಾರ ಯುದ್ಧವನ್ನು ತಗ್ಗಿಸಲು ಚೀನಾದ ಉನ್ನತ ಆರ್ಥಿಕ ಅಧಿಕಾರಿಗಳೊಂದಿಗೆ ಅಮೆರಿಕ ನಡೆಸಿದ ಮಾತುಕತೆಗಳಲ್ಲಿ “ಗಣನೀಯ ಪ್ರಗತಿ” ಕಂಡುಬಂದಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಭಾನುವಾರ ವರದಿ ಮಾಡಿದ್ದಾರೆ. ಆದರೆ ಜಿನೀವಾದಲ್ಲಿ ಎರಡು ದಿನಗಳ ಮಾತುಕತೆಗಳು ಮುಕ್ತಾಯಗೊಂಡ ನಂತರ ತಲುಪಿದ ಒಪ್ಪಂದದ ಬಗ್ಗೆ ವಿವರಗಳನ್ನು ನೀಡಿಲ್ಲ. ಸೋಮವಾರ ವಿವರಗಳನ್ನು ಪ್ರಕಟಿಸಲಾಗುವುದು ಮತ್ತು … Continued

‘ಹಾವಿನ ತಲೆಗಾಗಿ ಹೋಗಿದ್ದೇವೆ….’: ಪಾಕ್ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯ ಬಗ್ಗೆ

ನವದೆಹಲಿ: ಭಾರತವು ಈ ಬಾರಿ “ಹಾವಿನ ತಲೆಯನ್ನು ಕೊಲ್ಲಲು ನಿರ್ಧರಿಸಿದೆ, ಕಾಲಾಳುಗಳನ್ನಲ್ಲ” ಎಂದು ಸರ್ಕಾಋವು ಜಗತ್ತಿಗೆ ಮತ್ತು ಪಾಕಿಸ್ತಾನಕ್ಕೆ ಸ್ಪಷ್ಟಪಡಿಸಿದೆ, ಇದು ಪಾಕಿಸ್ತಾನದೊಳಗಿನ ಭಯೋತ್ಪಾದಕರನ್ನು ಕೊಲ್ಲುವ ತನ್ನ ಹೊಸ ವಿಧಾನವನ್ನು ಪ್ರದರ್ಶಿಸುತ್ತದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಮಾರಕ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾದ ಘಟನೆಗೆ ಪ್ರತಿಯಾಗಿ ಭಾರತವು … Continued

ಪಿಒಕೆ ಹಿಂತಿರುಗಿಸಿ, ಉಗ್ರರನ್ನು ಹಸ್ತಾಂತರಿಸಿ ; ಇದು ಬಿಟ್ಟು ಬೇರೆ ಮಾತುಕತೆ ಇಲ್ಲ; ಡಿಜಿಎಂಒ ಸಭೆಗೂ ಮುನ್ನ ಪಾಕಿಸ್ತಾನಕ್ಕೆ ಭಾರತ ಸ್ಪಷ್ಟ ಸಂದೇಶ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದ ನಡುವೆ, ಭಾರತವು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವೊಂದನ್ನು ರವಾನಿಸಿದೆ. ಪಾಕಿಸ್ತಾನದೊಂದಿಗೆ ಮಾತುಕತೆ ನಡೆದರೆ ಅದು ಪಾಕ್‌ ಆಕ್ರಮಿತ ಕಾಶ್ಮೀರ (PoK) ಬಿಟ್ಟು ತೊಲಗುವುದು ಹಾಗೂ ಉಗ್ರರ ಹಸ್ತಾಂತರಕಷ್ಟೇ ಸೀಮಿತ ಎಂದು ತಿಳಿಸಿದೆ. ಇದನ್ನು ಹೊರತುಪಡಿಸಿ ಎರಡು ದೇಶಗಳ ಮಧ್ಯೆ ಯಾವುದೇ ರೀತಿಯ ಮಾತುಕತೆ ಇಲ್ಲ ಎಂದು ಭಾರತ … Continued