ವಿಮಾನ ಅಪಘಾತ | ಮೃತ ಪತ್ನಿ ಚಿತಾಭಸ್ಮ ವಿಸರ್ಜನೆಗೆ ಬಂದಿದ್ದ ಲಂಡನ್ ವ್ಯಕ್ತಿ ಸಾವು ; ಅಲ್ಲಿ ತಂದೆಗಾಗಿ ಕಾಯುತ್ತಿದ್ದಾರೆ ಇಬ್ಬರು ಕಂದಮ್ಮಗಳು

ಅಹಮದಾಬಾದ್: ಅಹಮದಾಬಾದ್‌ನಲ್ಲಿ ನಡೆದ ವಿನಾಶಕಾರಿ ಏರ್ ಇಂಡಿಯಾ ವಿಮಾನ ಅಪಘಾತದ ನಂತರ ದುಃಖಕರವಾದ ವೈಯಕ್ತಿಕ ಕಥೆಗಳು ಹೊರಬರುತ್ತಿವೆ. ಪ್ರತಿಯೊಂದೂ ಹೃದಯವಿದ್ರಾವಕವಾಗಿದೆ. ಅವುಗಳಲ್ಲಿ ಒಂದು ದುರಂತವು ವಿಧಿಯ ಕ್ರೂರ ತಿರುವುಗಳಂತೆ ಕಂಡುಬರುತ್ತಿದೆ; ಮೃತಪಟ್ಟ ಪತ್ನಿಯ ಕೊನೆಯ ಆಸೆಯನ್ನು ಪೂರೈಸಲು ಲಂಡನ್‌ನಿಂದ ಅಹಮದಾಬಾದ್‌ಗೆ ಬಂದಿದ್ದ ವ್ಯಕ್ತಿಯೊಬ್ಬರು ಆಕೆಯ ಚಿತಾ ಭಸ್ಮವನ್ನು ವಿಸಜರ್ಜಿಸಿ ಲಂಡನ್‌ಗೆ ಹಿಂದಿರುಗುವಾಗ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ … Continued

ಯೋಗೇಶ ಗೌಡ ಕೊಲೆ ಪ್ರಕರಣ : ಕೋರ್ಟಿಗೆ ಹಾಜರಾದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ವಶಕ್ಕೆ ಪಡೆದ ಸಿಬಿಐ

ಬೆಂಗಳೂರು : ಧಾರಾಡದ ಬಿಜೆಪಿ ಮುಖಂಡ ಯೋಗೇಶ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಶಾಸಕ ವಿನಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ನಡೆದಿದ್ದ ಧಾರವಾಡ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದ ಯೋಗೇಶ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌‍ ಶಾಸಕ ವಿನಯ … Continued

ಇರಾನಿನ ಪರಮಾಣು, ಕ್ಷಿಪಣಿ ನೆಲೆಗಳ ಮೇಲೆ ಇಸ್ರೇಲ್ ವಾಯು ದಾಳಿ; ದಾಳಿಯಲ್ಲಿ ಇರಾನಿನ ಇಬ್ಬರು ಉನ್ನತ ಮಿಲಿಟರಿ ಮುಖ್ಯಸ್ಥರ ಸಾವು

ಇಸ್ರೇಲ್ ಶುಕ್ರವಾರ ಮುಂಜಾನೆ ಇರಾನ್ ವಿರುದ್ಧ ಆಪರೇಷನ್ ಲಯನ್ ಎಂದು ಹೆಸರಿಸಲಾದ ದೊಡ್ಡ ಪ್ರಮಾಣದ ಮಿಲಿಟರಿ ದಾಳಿ ನಡೆಸಿತು. ಇದು ಇರಾನಿನ ನಿರ್ಣಾಯಕ ಪರಮಾಣು ಶಸ್ತ್ರಾಗಾರ ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇರಾನಿನ ನಗರಗಳಲ್ಲಿ ಬಹು ಸ್ಫೋಟಗಳು ವರದಿಯಾಗಿವೆ. ಇರಾನಿನ ಪರಮಾಣು ಶಸ್ತ್ರಾಗಾರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ನ 12ಕ್ಕೂ ಅಧಿಕ ಜೆಟ್ ಗಳು ಶುಕ್ರವಾರ … Continued

ಅಹಮದಾಬಾದ್ ವಿಮಾನ ಅಪಘಾತ : ಭಾರತದ 10 ಅತಿ ದೊಡ್ಡ ವಿಮಾನ ದುರಂತಗಳು

ಗುರುವಾರ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು. ವಿಮಾನದಲ್ಲಿದ್ದ ಒಟ್ಟು ೨೪೨ ಜನರಲ್ಲಿ ಓರ್ವ ಮಾತ್ರ ಬದುಕಿದ್ದಾನೆ. ಉಳಿದ ೨೪೧ ಜನರು ಸಾವಿಗೀಡಾಗಿದ್ದಾರೆ. ವಿಮಾನದಲ್ಲಿ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು 242 ಜನರನ್ನು ಹೊತ್ತು ಲಂಡನ್ … Continued

ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 265 ಸಾವು

ಅಹಮದಾಬಾದ್‌ : ಗುರುವಾರ ಭಾರತದಲ್ಲಿ ತನ್ನ ಭೀಕರ ವಿಮಾನ ದುರಂತ ಸಂಭವಿಸಿ ಅದರಲ್ಲಿದ್ದ 241 ಜನರು ಸಾವಿಗೀಡಾಗಿದ್ದಾರೆ. ಪವಾಡಸದೃಶರೀತಿಯಲ್ಲಿ ಓರ್ವ ಪ್ರಯಾಣಿಕ ಮಾತ್ರ ಬದುಕಿದ್ದಾನೆ. ಒಟ್ಟು 230 ಪ್ರಯಾಣಿಕರು, 10 ಸಿಬ್ಬಂದಿ ಮತ್ತು ಇಬ್ಬರು ಪೈಲಟ್‌ಗಳೊಂದಿಗೆ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ … Continued

ಭಾರಿ ಮಳೆ ; ಉತ್ತರ ಕನ್ನಡ ಜಿಲ್ಲೆಯ ಐದು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ-ಪ್ರೌಢ ಶಾಲೆಗಳಿಗೆ ಇಂದು (ಜೂನ್ 13) ರಜೆ ಘೋಷಣೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ, ಅದರಲ್ಲಿಯೂ ವಿಶೇಷವಾಗಿ ಕರಾವಳಿ ತಾಲೂಕುಗಳಲ್ಲಿ ಶುಕ್ರವಾರ (ಜೂನ್ 13) ಅತ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ (ಜೂನ್ 13) ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ … Continued

ಪತಿ ಜೊತೆ ಲಂಡನ್‌ ಗೆ ತೆರಳಲು 2 ದಿನದ ಹಿಂದೆ ಹುದ್ದೆಗೆ ರಾಜೀನಾಮೆ ನೀಡಿದ್ದ ವೈದ್ಯೆ ; ವಿಮಾನ ಅಪಘಾತದಲ್ಲಿ 3 ಮಕ್ಕಳು ಸೇರಿ ಇಡೀ ಕುಟುಂಬ ಸಾವು

ಅಹಮದಾಬಾದ್‌ನಲ್ಲಿ ಸಂಭವಿಸಿದ ವಿನಾಶಕಾರಿ ಏರ್ ಇಂಡಿಯಾ ವಿಮಾನ ಅಪಘಾತವು ಲಂಡನ್‌ನಲ್ಲಿ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಹೊರಟಿದ್ದ ರಾಜಸ್ಥಾನದ ಬನ್ಸ್ವಾರಾದ ಇಡೀ ಕುಟುಂಬವನ್ನು ಬಲಿ ತೆಗೆದುಕೊಂಡಿತು. ಈ ವಿಮಾನ ಅಪಘಾತದಲ್ಲಿ ರಾಜಸ್ತಾನದವರು 10 ಮಂದಿ ಸಾವಿಗೀಡಾಗಿದ್ದು, ಅವರಲ್ಲಿ ಐವರು ಡಾ. ಪ್ರತೀಕ್ ಜೋಶಿ ಕುಟುಂಬದವರು. ಪ್ರತೀಕ್ ಜೋಶಿ ಕಳೆದ ಆರು ವರ್ಷಗಳಿಂದ ಲಂಡನ್‌ನಲ್ಲಿ ವಾಸಿಸುತ್ತಿದ್ದರು. ಜೋಶಿ … Continued

ಅಹಮದಾಬಾದ್‌ ವಿಮಾನ ಅಪಘಾತದಲ್ಲಿ ಗುಜರಾತ್‌ ಮಾಜಿ ಸಿಎಂ ವಿಜಯ ರೂಪಾನಿ ಸಾವು

ಅಹಮದಾಬಾದ್‌ : ಗುರುವಾರ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಪತನದಲ್ಲಿ ಹಿರಿಯ ಬಿಜೆಪಿ ನಾಯಕ ಮತ್ತು ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಯುನೈಟೆಡ್‌ ಕಿಂಗ್ಡಂನ ಲಂಡನ್‌ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನವು ನಿಲ್ದಾಣದ ಬಳಿಯ ನಾಗರಿಕ ಪ್ರದೇಶದಲ್ಲಿ … Continued

ವಿಮಾನ ಟೇಕ್‌ ಆಫ್‌ ಆದ ನಿಮಿಷದಲ್ಲೇ ಪತನ ; ಮತ್ತೊಂದು ವೀಡಿಯೊದಲ್ಲಿ ವಿಮಾನದ ಟೇಕ್‌ ಆಫ್‌-ಹಾರಾಟ-ಪತನದ ದೃಶ್ಯ ಸೆರೆ

ಅಹಮದಾಬಾದ್‌ : ಗುರುವಾರ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನವು ಟೇಕ್‌ ಆಫ್‌ ಆದ ನಂತರ ಕೇವಲ 30 ಸೆಕೆಂಡುಗಳ ಕಾಲ ಮಾತ್ರ ಹಾರಾಟ ನಡೆಸಿತು ಮತ್ತು ಮೇಘನಿನಗರದ ವೈದ್ಯಕೀಯ ಕಾಲೇಜಿನ ವಸತಿ ಆವರಣಕ್ಕೆ ಅಪ್ಪಳಿಸುವ ಮೊದಲು ಅದಕ್ಕೆ ಎತ್ತರಕ್ಕೆ ಹಾರಲು ಸಾಧ್ಯವಾಗಲಿಲ್ಲ ಎಂದು ಅಹಮದಾಬಾದ್‌ನ ಹೊಸ ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತವೆ. ವೀಡಿಯೊದಲ್ಲಿ, ವಿಮಾನವು ರನ್‌ ವೇಯಿಂದ … Continued

ಪವಾಡ | ಏರ್ ಇಂಡಿಯಾ ವಿಮಾನ ಪತನ ; ಅವಶೇಷದ ಅಡಿಯಿಂದ ಜೀವಂತ ಹೊರಬಂದ ವ್ಯಕ್ತಿ…! ನಡೆದುಹೋದ ವೀಡಿಯೊ ವೈರಲ್‌

ಅಹಮದಾಬಾದ್‌ : ಅಹಮದಾಬಾದ್‌ನಲ್ಲಿ 200 ಕ್ಕೂ ಹೆಚ್ಚು ಜನರ ಪ್ರಾಣವನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ ವಿಮಾನ AI171 ಅಪಘಾತದ ಅವಶೇಷಗಳಡಿಯಲ್ಲಿ ಒಬ್ಬ ವ್ಯಕ್ತಿ ಜೀವಂತವಾಗಿ ಪತ್ತೆಯಾಗಿದ್ದಾರೆ…! ಬದುಕುಳಿದ ಏಕೈಕ ವ್ಯಕ್ತಿ, 40 ವರ್ಷದ ಬಾರತೀಯ ಮೂಲದ ಬ್ರಿಟಿಷ್ ಪ್ರಜೆ ವಿಶ್ವಾಸಕುಮಾರ ರಮೇಶ ಅವರನ್ನು ಅವರನ್ನು ವಿಮಾನದ 11A ಸೀಟಿನಿಂದ ರಕ್ಷಿಸಲಾಗಿದೆ ಮತ್ತು ಪ್ರಸ್ತುತ ಅಸರ್ವಾದ ಸಿವಿಲ್ … Continued