ವಿಡಿಯೊಗಳು…: ಭೀಕರ ಬಿಸಿಗಾಳಿಗೆ ಕರಗಿದ ರಸ್ತೆಗಳು, ಬಾಗಿದ ರೈಲು ಹಳಿಗಳು ; ನೂರಾರು ಸಾವು : ತತ್ತರಿಸಿದ ಯುರೋಪ್

ಲಂಡನ್: ಯುರೋಪ್ ಖಂಡವು ತನ್ನ ಇತಿಹಾಸದಲ್ಲೇ ಅತ್ಯಂತ ಕಠಿಣ ಮತ್ತು ಭೀಕರವಾದ ಬಿಸಿಗಾಳಿಗೆ (Heatwave ತತ್ತರಿಸಿದೆ. ಸೂರ್ಯನ ಪ್ರಖರ ಶಾಖಕ್ಕೆ ರಸ್ತೆಗಳು ಕರಗುತ್ತಿದ್ದು, ಟ್ರ್ಯಾಮ್ ರೈಲುಗಳ ಹಳಿಗಳು ಬಾಗುತ್ತಿವೆ. ವಿಪರೀತ ಶಾಖದ ಹಿನ್ನೆಲೆಯಲ್ಲಿ ಸಾವಿರಾರು ಜನ ಆಸ್ಪತ್ರೆ ಸೇರುತ್ತಿದ್ದಾರೆ. ಇತಿಹಾಸದ ಎಲ್ಲಾ ದಾಖಲೆಗಳನ್ನು ಮುರಿಯುತ್ತಿರುವ ತಾಪಮಾನವು ಹಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಈಗಾಗಲೇ 40°C ಗಡಿಯನ್ನು ದಾಟಿದೆ. … Continued

ಅಮೆರಿಕದ ಜನ್ಮಸಿದ್ಧ ಪೌರತ್ವ ಹಕ್ಕು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ ; ಅಧ್ಯಕ್ಷ ಟ್ರಂಪ್‌ಗೆ ಭಾರಿ ಹಿನ್ನಡೆ

ವಾಷಿಂಗ್ಟನ್ : ಅಮೆರಿಕದ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದ್ದು, ಜನ್ಮಸಿದ್ಧ ಪೌರತ್ವ (Birthright Citizenship) ಹಕ್ಕನ್ನು ಎತ್ತಿಹಿಡಿದಿದೆ. ಅಮೆರಿಕದಲ್ಲಿ ವಲಸಿಗರಿಗೆ ಜನಿಸುವ ಅನೇಕ ಮಕ್ಕಳಿಗೆ ಸಂವಿಧಾನಾತ್ಮಕವಾಗಿ ದೊರೆಯುವ ಜನ್ಮಸಿದ್ಧ ಪೌರತ್ವದ ಹಕ್ಕನ್ನು ನಿರಾಕರಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದ ಕಾರ್ಯನಿರ್ವಾಹಕ ಆದೇಶವನ್ನು ನ್ಯಾಯಾಲಯ ತಿರಸ್ಕರಿಸಿದೆ. ತೀರ್ಪಿನಲ್ಲಿ, “ಅಮೆರಿಕದಲ್ಲಿ ಕಾನೂನುಬಾಹಿರವಾಗಿ ಅಥವಾ ತಾತ್ಕಾಲಿಕವಾಗಿ ನೆಲೆಸಿರುವ … Continued

ಕೇತನ ಅಗರ್ವಾಲ್ ಹತ್ಯೆ ಪ್ರಕರಣದ ಬಳಿಕ ಲೋಹಗಡ ಕೋಟೆಯತ್ತ ಜನರ ದಂಡು ; ಪ್ರವಾಸಿಗರ ಸಂಖ್ಯೆ ಶೇ.50 ಹೆಚ್ಚಳ

ಪುಣೆ: ಛತ್ರಪತಿ ಶಿವಾಜಿ ಮಹಾರಾಜರ ಜೊತೆ ನಿಕಟ ಸಂಬಂಧ ಹೊಂದಿರುವ ಹಾಗೂ ಯುನೆಸ್ಕೋ ಮಾನ್ಯತೆ ಪಡೆದಿರುವ ಐತಿಹಾಸಿಕ ಲೋಹಗಢ ಕೋಟೆ ಇದೀಗ ಮತ್ತೊಂದು ಕಾರಣಕ್ಕೆ ದೇಶದಾದ್ಯಂತ ಸುದ್ದಿಯಾಗಿದೆ. ಸಾಮಾನ್ಯವಾಗಿ 2–3 ಗಂಟೆಗಳ ಸುಲಭ ಟ್ರೆಕ್ಕಿಂಗ್ ಹಾಗೂ ನೈಸರ್ಗಿಕ ಸೌಂದರ್ಯಕ್ಕಾಗಿ ಪ್ರಸಿದ್ಧವಾಗಿರುವ ಈ ಕೋಟೆಗೆ ಈಗ ಕೇತನ ಅಗರ್ವಾಲ್ ಹತ್ಯೆ ನಡೆದ ಸ್ಥಳವನ್ನು ಕಣ್ಣಾರೆ ನೋಡಲು ಪ್ರವಾಸಿಗರ … Continued

ಹೆಸರಾಂತ ಚಿತ್ರಕಲಾವಿದ ಕೆ.ಟಿ ಶಿವಪ್ರಸಾದ ನಿಧನ

ಬೆಂಗಳೂರು: ಹೆಸರಾಂತ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ (KT Shivaprasad) ಅವರು ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 1947ರಲ್ಲಿ ಕೊಡಗಿನ ಮಡಿಕೇರಿ ತಾಲೂಕಿನ ಕೃಷಿ ಕುಟುಂಬದಲ್ಲಿ ಜನಿಸಿದ ಶಿವಪ್ರಸಾದ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆಯತ್ತ ಆಸಕ್ತಿ ಇತ್ತು. ಆದರೆ … Continued

ದಾವಣಗೆರೆ : ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಆಮ್ಲಜನಕ ಸಿಲಿಂಡರ್ ಸ್ಫೋಟ

ದಾವಣಗೆರೆ : ದಾವಣಗೆರೆ ಜಿಲ್ಲೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ (ಆಪರೇಷನ್ ಥಿಯೇಟರ್) ಮಂಗಳವಾರ ಬೆಳಿಗ್ಗೆ ಆಮ್ಲಜನಕ (ಆಕ್ಸಿಜನ್) ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸ್ಫೋಟದ ಪರಿಣಾಮ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿದ್ದ ಕೆಲವು ವೈದ್ಯಕೀಯ ಉಪಕರಣಗಳು ಬೆಂಕಿಗಾಹುತಿಯಾಗಿದ್ದು, ಸುತ್ತಮುತ್ತಲಿನ ಇತರೆ ಕೊಠಡಿಗಳಿಗೂ ಹಾನಿಯಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಯ ಆರೋಗ್ಯ ಇಲಾಖೆ ಸಿಬ್ಬಂದಿ … Continued

ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಂದು ಭಾರಿ ಆಘಾತ; ಶಿಂಧೆ ಬಣಕ್ಕೆ ಸೇರ್ಪಡೆಯಾದ ಪರಿಷತ್‌ ಸದಸ್ಯ ಸಚಿನ್ ಅಹಿರ್

ಮುಂಬೈ: ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)ಗೆ ಮತ್ತೊಂದು ದೊಡ್ಡ ರಾಜಕೀಯ ಹಿನ್ನಡೆಯಾಗಿದೆ. ಪಕ್ಷದ ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ಸಚಿನ್ ಅಹಿರ್ ಅವರು ಶಿವಸೇನೆ (ಯುಬಿಟಿ) ತೊರೆದು ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಬಣಕ್ಕೆ ಸೇರ್ಪಡೆಯಾಗಿದ್ದಾರೆ. ಶಿಂಧೆ ಬಣ ಸೇರ್ಪಡೆಯಾದ ತಕ್ಷಣವೇ ಸಚಿನ್ ಅಹಿರ್ ಅವರು ಮಹಾರಾಷ್ಟ್ರ ವಿಧಾನ ಪರಿಷತ್ತಿನ ಉಪಸಭಾಪತಿ ಹುದ್ದೆಗೆ … Continued

ಇನ್ಮುಂದೆ ಜೋರಾಗಿ ಅಬ್ಬರಿಸಲಿದೆಯಂತೆ ಮುಂಗಾರು ; ಅವಳಿ ಹವಾಮಾನ ವ್ಯವಸ್ಥೆಯಿಂದ ದೇಶಾದ್ಯಂತ ಭಾರಿ ಮಳೆಯ ಮುನ್ಸೂಚನೆ

ನವದೆಹಲಿ: ಹಲವು ವಾರಗಳಿಂದ ದೇಶದ ಬಹುತೇಕ ಕಡೆ  ನೈರುತ್ಯ ಮುಂಗಾರು ಮಳೆಯ ಕೊರತೆ ದಿನೇದಿನೇ ಹೆಚ್ಚಾಗುತ್ತಿದ್ದ  ವೇಳೆ ಈಗ ಅದು ಮತ್ತೆ ಚುರುಕುಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಹವಾಮಾನ ತಜ್ಞರ ಪ್ರಕಾರ, ಈ ವಾರ ಬಂಗಾಳ ಕೊಲ್ಲಿ ಮತ್ತು ಮಧ್ಯ ಭಾರತದ ಭಾಗಗಳಲ್ಲಿ ಎರಡು ಮಹತ್ವದ ಹವಾಮಾನ ವ್ಯವಸ್ಥೆಗಳು (ಕಡಿಮೆ ಒತ್ತಡದ ಪ್ರದೇಶಗಳು) ರೂಪುಗೊಳ್ಳುವ ಸಾಧ್ಯತೆ ಇದೆ. … Continued

ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆ ಅಬ್ಬರದ ಮುನ್ಸೂಚನೆ ; ಜುಲೈ 5ರ ವರೆಗೆ ಆರೆಂಜ್‌ ಅಲರ್ಟ್‌ ಘೋಷಣೆ

ಬೆಂಗಳೂರು: ನೈರುತ್ಯ ಮುಂಗಾರು ಕರ್ನಾಟಕದ ಕರಾವಳಿ ಭಾಗದಲ್ಲಿ ಅಬ್ಬರಿಸುತ್ತಿದ್ದು, ರಾಜ್ಯದ ಇತರ ಭಾಗಗಳಲ್ಲಿಯೂ ಚುರುಕಾಗುತ್ತಿದೆ. ಜೂನ್ 30ರಿಂದ ಜುಲೈ 5ರ ವರೆಗೆ ಉತ್ತರ ಕನ್ನಡ- ಉಡುಪಿ-ದಕ್ಷಿಣ ಕನ್ನಡದಲ್ಲಿ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಜುಲೈ 5 ರವರೆಗೂ ಆರೆಂಜ್ ಅಲರ್ಟ್ ಕೊಡಲಾಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ ಜಿಲ್ಲೆಗಳಿಗೆ ಭಾರಿ ಮಳೆ ಸಾಧ್ಯತೆ ಇದ್ದು, … Continued