ಮೇ ತಿಂಗಳಲ್ಲಿ ₹1.94 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ: ಶೇ. 3.2 ರಷ್ಟು ಪ್ರಗತಿ

ನವದೆಹಲಿ: ದೇಶದ ಆರ್ಥಿಕತೆಯ ಸದೃಢತೆಯನ್ನು ಬಿಂಬಿಸುವಂತೆ, ಮೇ 2026ರ ಅವಧಿಯಲ್ಲಿ ಭಾರತದ ಒಟ್ಟು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸಂಗ್ರಹವು ವರ್ಷದಿಂದ ವರ್ಷಕ್ಕೆ (YoY) ಶೇಕಡಾ 3.2 ರಷ್ಟು ಹೆಚ್ಚಳವಾಗಿದ್ದು, ₹1.94 ಲಕ್ಷ ಕೋಟಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ, ಅಂದರೆ ಮೇ 2025 ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ₹1.88 ಲಕ್ಷ … Continued

“ಎರಡು ದಿನ ಕಾಯಿರಿ…” : ದೆಹಲಿಗೆ ತೆರಳುವ ಮುನ್ನ ಹೊಸ ಪಕ್ಷ ಸ್ಥಾಪನೆ ವದಂತಿಗಳಿಗೆ ಉತ್ತರಿಸಿದ ಅಣ್ಣಾಮಲೈ

ಚೆನ್ನೈ: ಬಿಜೆಪಿಗೆ ರಾಜೀನಾಮೆ ನೀಡಿ ತಾವೇ ಸ್ವತಃ ಹೊಸ ಪಕ್ಷವನ್ನು ಸ್ಥಾಪಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಕೆ. ಅಣ್ಣಾಮಲೈ ಸೋಮವಾರ ಪ್ರತಿಕ್ರಿಯಿಸಿದ್ದಾರೆ. ನವದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ತಮಿಳುನಾಡು ಘಟಕದ ಮಾಜಿ ಅಧ್ಯಕ್ಷ ಅಣ್ಣಾಮಲೈ, “ದಯವಿಟ್ಟು ಸ್ವಲ್ಪ ಕಾಯಿರಿ. ಇನ್ನು ಎರಡು ದಿನಗಳಲ್ಲಿ ನಾವೆಲ್ಲರೂ ಒಟ್ಟಿಗೆ ಕುಳಿತು … Continued

ಡಿಕೆಶಿ ಪ್ರಮಾಣವಚನಕ್ಕೂ ಮುನ್ನ ಜಮೀರ್ ಅಹ್ಮದ್ ಆಡಿಯೋ ವೈರಲ್‌ ; ಕಾಂಗ್ರೆಸ್ಸಿನಲ್ಲಿ ತಲ್ಲಣ ; ಅದು ನಕಲಿ ಎಂದ ಜಮೀರ್‌

ಬೆಂಗಳೂರು: ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭರ್ಜರಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ,  ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪಿತ ಆಡಿಯೋ ಕ್ಲಿಪ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ತೀವ್ರ ರಾಜಕೀಯ ಸಂಚಲನ ಮೂಡಿಸಿದೆ. … Continued

ದೀದಿ ಪಕ್ಷದಲ್ಲಿ ಬೀದಿಗೆ ಬಂದ ಒಳಜಗಳ ; ಇಬ್ಬರು ಶಾಸಕರನ್ನು ಉಚ್ಚಾಟಿಸಿದ ಟಿಎಂಸಿ…!

ಕೋಲ್ಕತ್ತಾ:  ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಸೋಮವಾರ ತನ್ನ ಇಬ್ಬರು ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಿದೆ. ಶಾಸಕರಾದ ಸಂದೀಪನ್ ಸಹಾ ಮತ್ತು ರಿತಬ್ರತಾ ಬ್ಯಾನರ್ಜಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಟಿಎಂಸಿ ಹೇಳಿದೆ.  2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಅಧಿಕಾರ ಕಳೆದುಕೊಂಡ ಬೆನ್ನಲ್ಲೇ, ಪಕ್ಷದ ನಾಯಕರಲ್ಲಿ … Continued

ಸೊಳ್ಳೆಗಳ ನಾಶಕ್ಕೆ 3.2 ಕೋಟಿ ‘ಸೊಳ್ಳೆಗಳ ಮಹಾಸೈನ್ಯ’ವನ್ನೇ ಪರಿಸರಕ್ಕೆ ಬಿಡುತ್ತಿದೆ ಗೂಗಲ್‌ ! ಇದು ಹೇಗೆ ಕೆಲಸ ಮಾಡುತ್ತದೆ ಗೊತ್ತೆ ?

ವಾಷಿಂಗ್ಟನ್: ಸೊಳ್ಳೆಗಳ ಕಾಟವನ್ನು ತಗ್ಗಿಸಲು ಅಥವಾ ಅವುಗಳ ಸಂತತಿಯನ್ನು ನಾಶಪಡಿಸಲು ಲಕ್ಷಾಂತರ ಸೊಳ್ಳೆಗಳನ್ನೇ ಪರಿಸರಕ್ಕೆ ಮುಕ್ತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದರೆ ಯಾರಿಗಾದರೂ ಆಶ್ಚರ್ಯವಾಗಬಹುದು. ಆದರೆ, ಜಾಗತಿಕ ತಂತ್ರಜ್ಞಾನ ದೈತ್ಯ ‘ಗೂಗಲ್’ ಸಂಸ್ಥೆ ಈಗ ಇಂತಹದ್ದೊಂದು ವಿಭಿನ್ನ ಹಾಗೂ ಅಚ್ಚರಿಯ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಸೊಳ್ಳೆಗಳಿಂದ ಹರಡುವ ಪ್ರಾಣಾಂತಿಕ ಕಾಯಿಲೆಗಳನ್ನು ನಿಯಂತ್ರಿಸುವ ಪ್ರಯೋಗದ ಭಾಗವಾಗಿ, ಅಮೆರಿಕದ … Continued

ವಿಡಿಯೋ | ಬೆಂಗಳೂರು : ರಾಜ್ಯಪಾಲರ ಸಂಚಾರಕ್ಕಾಗಿ ಸಂಚಾರ ಸ್ಥಗಿತ ; ಗರ್ಭಿಣಿ ಪತ್ನಿ ಚಿಕಿತ್ಸೆಗಾಗಿ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿದ ಪತಿ !

ಬೆಂಗಳೂರು: ನಗರದ ಸಂಚಾರ ದಟ್ಟಣೆಯ ನಡುವೆ ವಿಐಪಿ (VIP) ಸಂಸ್ಕೃತಿಯ ಅತಿರೇಕ ಮತ್ತೊಮ್ಮೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯಪಾಲರ ಬೆಂಗಾವಲು ಪಡೆಯ (ಕಾನ್ವಾಯ್) ಸುಗಮ ಸಂಚಾರಕ್ಕಾಗಿ ಪೊಲೀಸರು ಬರೋಬ್ಬರಿ 30 ನಿಮಿಷಗಳ ಕಾಲ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ, ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದ ಗರ್ಭಿಣಿ ಪತ್ನಿಯ ತುರ್ತು ವೈದ್ಯಕೀಯ ತಪಾಸಣೆಗಾಗಿ ಆಕೆಯ ಪತಿ … Continued

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ

ನವದೆಹಲಿ: ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಉಪಾಹಾರ ಮಂದಿರಗಳಲ್ಲಿ ಬಳಸಲಾಗುವ ವಾಣಿಜ್ಯ ಬಳಕೆಯ (Commercial) ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಸೋಮವಾರದಿಂದ ಏರಿಕೆಯಾಗಿದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 42 ರೂಪಾಯಿಯಷ್ಟು ಹೆಚ್ಚಳ ಮಾಡಿವೆ. ಆದರೆ, ಗೃಹಬಳಕೆಯ ಅಡುಗೆ ಅನಿಲದ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮೆಟ್ರೋ ನಗರಗಳಲ್ಲಿನ … Continued

ಭಾರತೀಯ ಚಿತ್ರರಂಗದ ಮಧುರ ಧ್ವನಿ ಸುಮನ್ ಕಲ್ಯಾಣಪುರ ಇನ್ನಿಲ್ಲ

ಮುಂಬೈ: ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ಹಾಗೂ ಜನಪ್ರಿಯ ಹಿನ್ನೆಲೆ ಗಾಯಕಿ, ಪದ್ಮಭೂಷಣ ಪುರಸ್ಕೃತೆ ಸುಮನ್ ಕಲ್ಯಾಣಪುರ (89) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ಸಂಜೆ ಮುಂಬೈನ ಲೋಖಂಡ್‌ವಾಲಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರ ಆಪ್ತ ಒಡನಾಡಿ ಹಾಗೂ ಲೇಖಕಿ ಮಂಗಲಾ ಖಾಡಿಲ್ಕರ ಈ ವಿಷಯವನ್ನು ಖಚಿತಪಡಿಸಿದ್ದು, ಭಾನುವಾರ ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ … Continued

ಐಪಿಎಲ್ 2026 ಫೈನಲ್ : ಬೌಲರ್‌ಗಳ ಕರಾಮತ್ತು, ಕೊಹ್ಲಿ ಅಬ್ಬರ; ಸತತ 2ನೇ ಬಾರಿ ಐಪಿಎಲ್ ಚಾಂಪಿಯನ್‌ ಆದ ಆರ್‌ಸಿಬಿ

ಅಹಮದಾಬಾದ್: 18 ವರ್ಷಗಳ ಕಾಯುವಿಕೆಗೆ ಹೋದ ವರ್ಷವಷ್ಟೇ ತೆರೆ ಎಳೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಇದೀಗ ಕೇವಲ 12 ತಿಂಗಳಲ್ಲಿ ತನ್ನ ಎರಡನೇ ಐಪಿಎಲ್ ಮುಕುಟವನ್ನು ಮುಡಿಗೇರಿಸಿಕೊಂಡಿದೆ. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026ರ ಐಪಿಎಲ್ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ (GT) ತಂಡವನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದ ಆರ್‌ಸಿಬಿ, ಸತತ … Continued