ಬೆಂಗಳೂರಲ್ಲಿ ‘ಸಿಮ್ ಬಾಕ್ಸ್’ ಜಾಲ ಪತ್ತೆ ; ನಾಲ್ವರ ಬಂಧನ, 320 ಸಿಮ್‌ ಕನೆಕ್ಷನ್‌ ಸಾಮರ್ಥ್ಯದ 10 ಸಾಧನ ವಶ

ಬೆಂಗಳೂರು : ಬೆಂಗಳೂರಿನ ವೈಟ್‌ಫೀಲ್ಡ್‌ ಪ್ರದೇಶದ ಎರಡು ಅಪಾರ್ಟ್‌ಮೆಂಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಸಿಮ್‌ ಬಾಕ್ಸ್‌ ಜಾಲವನ್ನು ರಾಜ್ಯದ ಸೈಬರ್‌ ಕಮಾಂಡ್‌ ಘಟಕ ಭೇದಿಸಿದೆ. ಈ ಸಂಬಂಧ ಮಹಾರಾಷ್ಟ್ರದ ನಾಲ್ವರನ್ನು ಬಂಧಿಸಲಾಗಿದ್ದು, ಏಕಕಾಲದಲ್ಲಿ 320 ಸಿಮ್‌ ಕೆನಕ್ಷನ್‌ ಅನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವ 10 ಸಿಮ್‌ ಬಾಕ್ಸ್‌ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಜಾಲವನ್ನು ಬಳಸಿಕೊಂಡು ದೇಶಾದ್ಯಂತ ಡಿಜಿಟಲ್‌ … Continued

ಟೈಗರ್‌ ಶ್ರಾಫ್‌ ಮೇಲೆ ಗುಂಡಿನ ದಾಳಿ; ದಾಳಿಕೋರರಿದ್ದ ಹೋಟೆಲ್‌ನಲ್ಲೇ ಪಿಸ್ತೂಲ್‌ ಮಿಸ್‌ಫೈರ್‌ ಆಗಿತ್ತಂತೆ ; ಯಾರಿಗೂ ಸುಳಿವೇ ಇರಲಿಲ್ಲ !

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಗಳು, ದಾಳಿಗೂ ಮುನ್ನ ಮುಂಬೈನ ಅಂಧೇರಿ ಪೂರ್ವ ಪ್ರದೇಶದ ಸಾಧಾರಣ ಹೋಟೆಲ್‌ವೊಂದರಲ್ಲಿ ಐದು ದಿನಗಳ ಕಾಲ ತಂಗಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಹರಿಯಾಣದ ಹಿಸಾರ್ ನಿವಾಸಿಗಳೆಂದು ಹೋಟೆಲ್‌ನಲ್ಲಿ ತಮ್ಮನ್ನು ಪರಿಚಯಿಸಿಕೊಂಡಿದ್ದ ಆರೋಪಿಗಳು, ನೈಜ ಗುರುತನ್ನು ಮರೆಮಾಚಿ ದಾಳಿಗೆ ಸಿದ್ಧತೆ ನಡೆಸಿದ್ದರು … Continued

ಡ್ರೈವಿಂಗ್‌ ಲೈಸೆನ್ಸ್‌ ನಿಯಮಗಳಲ್ಲಿ ಹಲವು ಬದಲಾವಣೆಗೆ ಮುಂದಾದ ಸರ್ಕಾರ

ನವದೆಹಲಿ : ವಾಹನ ಚಾಲನಾ ಪರವಾನಗಿ ಪಡೆಯುವ ನಿಯಮಗಳಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂದಾಗಿದೆ. ‘ಸುರಕ್ಷಿತ ಚಾಲನಾ ಟ್ಯುಟೋರಿಯಲ್’ ಮೌಲ್ಯಮಾಪನ ಪರೀಕ್ಷೆಯನ್ನು ಕಠಿಣಗೊಳಿಸುವ ನಿಟ್ಟಿನಲ್ಲಿ ಈ ಮೊದಲು ತೇರ್ಗಡೆಯಾಗಲು ಅಗತ್ಯವಿದ್ದ ಶೇ. 60 ಅಂಕಗಳ ಬದಲಿಗೆ, ಇನ್ನು ಮುಂದೆ ಕನಿಷ್ಠ ಶೇ. 75 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಲಿದೆ. … Continued

ತ್ರಿಪುರ ಯುವಕನಿಗೆ ಜನಾಂಗೀಯ ನಿಂದನೆ ಮಾಡಿದ ಆರೋಪ: ಕಂಟೆಂಟ್ ಕ್ರಿಯೇಟರ್ ಬಂಧನ

ನವದೆಹಲಿ: ತ್ರಿಪುರ ಮೂಲದ ಬುಡಕಟ್ಟು ಯುವಕನೊಬ್ಬನನ್ನು ಜನಾಂಗೀಯವಾಗಿ ನಿಂದಿಸಿ, ಸಾರ್ವಜನಿಕವಾಗಿ ಅವಮಾನಿಸಿದ ಆರೋಪದ ಮೇಲೆ ಕಂಟೆಂಟ್ ಕ್ರಿಯೇಟರ್ ಅಮೀರ್ ಶಕೀನ್‌ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.  ಯುವಕನನ್ನು ಹೀಯಾಳಿಸುತ್ತಿರುವ ದೃಶ್ಯಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ಆರೋಪದ ಪ್ರಕಾರ, ಅಮೀರ್ ಶಕೀನ್ ಯುವಕನನ್ನು ‘ಚೀನಾದ ಅಧ್ಯಕ್ಷ’ ಎಂದು ವ್ಯಂಗ್ಯವಾಡಿದ್ದಲ್ಲದೆ, ಆತನನ್ನು … Continued

ಮಾಲಿನ್ಯ ನಿಯಂತ್ರಣ ಚರ್ಚೆ ವೇಳೆ ದೆಹಲಿ ಮಹಾನಗರ ಪಾಲಿಕೆಯಲ್ಲಿ ಗದ್ದಲ: ಮೈಕ್‌ ಧ್ವಂಸ, ಕಡತಗಳ ಎಸೆತ !

ನವದೆಹಲಿ: ದೆಹಲಿಯ ವಾಯುಮಾಲಿನ್ಯವನ್ನು ನಿಯಂತ್ರಿಸುವ ಕುರಿತು ಚರ್ಚೆ ನಡೆಸಬೇಕಿದ್ದ ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) ಸಭೆಯಲ್ಲಿ ಗುರುವಾರ ಭಾರಿ ಗದ್ದಲ, ತಳ್ಳಾಟ-ನೂಕಾಟ ಹಾಗೂ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದ ಘಟನೆ ನಡೆದಿದೆ. ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಆಮ್ ಆದ್ಮಿ ಪಕ್ಷದ (ಎಎಪಿ) ಸದಸ್ಯರು ಪರಸ್ಪರ ಘೋಷಣೆಗಳನ್ನು ಕೂಗುತ್ತಾ ನೀರಿನ ಬಾಟಲಿಗಳು ಮತ್ತು ಕಡತಗಳನ್ನು ಎಸೆದಿದ್ದಾರೆ. … Continued

ಕಾರವಾರ : ರಸ್ತೆ ಅಪಘಾತದಲ್ಲಿ ಖ್ಯಾತ ವೈದ್ಯ ಸಾವು

ಕಾರವಾರ: ರಸ್ತೆಯಲ್ಲಿ ಒಮ್ಮೆಲೇ   ಅಡ್ಡಬಂದ ಬಂದ ಹಸುವಿನಿಂದ ಸಂಭವಿಸಿದ ಅಪಘಾತದಲ್ಲಿ ಕಾರವಾರದ ವೈದ್ಯರೊಬ್ಬರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ಕಾರವಾರದ ಪ್ರಮುಖ ಚರ್ಮರೋಗ ತಜ್ಞ ಡಾ. ಸುಭಾಷ ತಾಂಡೇಲ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಡಾ. ತಾಂಡೇಲ ಅವರು ಪ್ರಯಾಣಿಸುತ್ತಿದ್ದ ವಾಹನದ … Continued

ಹುಬ್ಬಳ್ಳಿ: ಸ್ಕೂಟಿಯಲ್ಲಿ ಹೋಗುವಾಗ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಮಹಿಳೆ ಸಾವು

ಹುಬ್ಬಳ್ಳಿ: ಗಾಳಿಪಟ ಹಾರಿಸಲು ಬಳಸುವ ಅಪಾಯಕಾರಿ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ  ಘಟನೆ ಹುಬ್ಬಳ್ಳಿಯ ಶಿವಶಂಕರ ಕಾಲೋನಿ ಸಮೀಪ ಗುರುವಾರ ನಡೆದಿದೆ ಎಂದು ವರದಿಯಾಗಿದೆ. ಹುಬ್ಬಳ್ಳಿಯ ಭರತ ನಗರದ ನಿವಾಸಿಯಾಗಿರುವ ವಿದ್ಯಾ ಮಂಜುನಾಥ ಗೌಡರ (38) ಮೃತ ಮಹಿಳೆ ಎಂದು ಗುರುತಿಸಲಾಗಿದೆ.  ಅವರು ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. … Continued

ತಾಯಿ ಆರೋಗ್ಯಕ್ಕಾಗಿ ಶಿವನಿಗೆ ಹರಕೆ : ಓಡಿ 12 ಜ್ಯೋತಿರ್ಲಿಂಗಗಳ ದರ್ಶನಕ್ಕೆ ನಿರ್ಧಾರ; ದಿನಕ್ಕೆ 50 ಕಿಮೀ ಓಡುತ್ತಿರುವ ಯುವಕ !

ಅರಾರಿಯಾ (ಬಿಹಾರ): ತಾಯಿಯ ಅನಾರೋಗ್ಯ ಗುಣವಾಗಲಿ ಎಂದು ಶಿವನಲ್ಲಿ ಪ್ರಾರ್ಥಿಸಿ, ಆಕೆ ಚೇತರಿಸಿಕೊಂಡರೆ ದೇಶದ 12 ಜ್ಯೋತಿರ್ಲಿಂಗಗಳ ದರ್ಶನ ಮಾಡುವುದಾಗಿ ಹರಕೆ ಹೊತ್ತಿದ್ದ 19 ವರ್ಷದ ಯುವಕನೊಬ್ಬ, ತಾಯಿ ಗುಣಮುಖರಾದ ನಂತರ ತನ್ನ ಹರಕೆ ತೀರಿಸಲು ದೇಶಾದ್ಯಂತ ಓಡುತ್ತ ಸಾಗುತ್ತಿದ್ದಾನೆ. ಬಿಹಾರದ ಅರಾರಿಯಾ ಜಿಲ್ಲೆಯ ಮೋನು ಮೇತೂರ್ಬಲಾ ಎಂಬ ಯುವಕ, ತಾಯಿಯ ಆರೋಗ್ಯ ಸುಧಾರಿಸಿದ ಬಳಿಕ … Continued

‘ನಾನು ಟ್ರಾವೆಲ್ ಏಜೆಂಟ್‌ ಅಲ್ಲ’ : ರಾಹುಲ್ ಗಾಂಧಿ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದ ಶಶಿ ತರೂರ್

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿರುವಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಲ್ಕು ದಿನಗಳ ವಿಯೆಟ್ನಾಂ ಪ್ರವಾಸ ಕೈಗೊಂಡಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ಸಂಸದ ಶಶಿ ತರೂರ್ ನಿರಾಕರಿಸಿದ್ದು, ಪತ್ರಕರ್ತರ ಪ್ರಶ್ನೆಗೆ, “ನಾನೇನು ಟ್ರಾವೆಲ್ ಏಜೆಂಟಾ?” ಎಂದು ಉತ್ತರಿಸಿದ್ದಾರೆ. ಬಿಜೆಪಿ ರಾಹುಲ್ ಗಾಂಧಿ … Continued

ದಸರಾ ಆಯುಧ ಪೂಜೆ ವೇಳೆ ಸೀರೆ ಉಟ್ಟು ಎಕೆ-47ನಿಂದ ಗುಂಡು ಹಾರಿಸಿದ ಮಹಿಳಾ ಐಪಿಎಸ್ ಅಧಿಕಾರಿ; ವಿಡಿಯೋ ವೈರಲ್‌

ರಾಯ್ಪುರ: ಛತ್ತೀಸ್‌ಗಢದ ರಾಜನಂದಗಾಂವ ಜಿಲ್ಲೆಯಲ್ಲಿ ದಸರಾ ಹಬ್ಬದ ಅಂಗವಾಗಿ ನಡೆದ ಸಾಂಪ್ರದಾಯಿಕ  ಆಯುಧ  ಪೂಜೆ ವೇಳೆ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಶಸ್ತ್ರಾಸ್ತ್ರಗಳ ಸುರಕ್ಷಿತ ನಿರ್ವಹಣೆ, ಪೊಲೀಸ್ ಇಲಾಖೆಯ ಶಿಸ್ತು ಹಾಗೂ ಇಂತಹ ಆಚರಣೆಗಳ ಸಂದರ್ಭದಲ್ಲಿ ಅನುಸರಿಸಬೇಕಾದ … Continued