ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ₹9.67 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ; ಇಬ್ಬರು ಪ್ರಯಾಣಿಕರ ಬಂಧನ

ಬೆಂಗಳೂರು: ಬ್ಯಾಂಕಾಕ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರು ಪ್ರಯಾಣಿಕರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ವಶಕ್ಕೆ ಪಡೆದು, ಒಟ್ಟು ₹9.67 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಇಬ್ಬರು ಆರೋಪಿಗಳನ್ನು ‘ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್’ (NDPS) ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬ್ಯಾಂಕಾಕ್‌ನಿಂದ ಬಂದ … Continued

ಹಿಂಗಾರು ಮಳೆ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು

ಧಾರವಾಡ: ದಸರಾ ಹಬ್ಬದ ವಿಜಯದಶಮಿ ಹಾಗೂ ಆಯುಧಪೂಜೆಯ ಸಂದರ್ಭದಲ್ಲಿ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಮಳೆ-ಬೆಳೆ, ಜನಜೀವನ, ಪ್ರಕೃತಿಯ ಆಗುಹೋಗುಗಳ ಕುರಿತು ಭವಿಷ್ಯ ನುಡಿದಿದ್ದಾರೆ ಯುಗಾದಿ ವೇಳೆ ಮುಂಗಾರು ಮಳೆಯ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗಳು ಈಗ ದಸರಾ ವೇಳೆ ಹಿಂಗಾರು ಮಳೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮಂಗಳವಾರ ಧಾರವಾಡದಲ್ಲಿ ನಡೆದ … Continued

ಅಮೆರಿಕದ ಮಧ್ಯಂತರ ಚುನಾವಣೆ ಸನಿಹದಲ್ಲೇ ಟ್ರಂಪ್ ಜನಪ್ರಿಯತೆ ಸಾರ್ವಕಾಲಿಕ ಕುಸಿತ : ರಿಪಬ್ಲಿಕನ್‌ಗಳಿಗೆ ಸೋಲಿನ ಭೀತಿ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಜನಪ್ರಿಯತೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಮುಂದಿನ ತಿಂಗಳು ನಡೆಯಲಿರುವ ಮಧ್ಯಂತರ ಚುನಾವಣೆಗಳಲ್ಲಿ ಆಡಳಿತಾರೂಢ ರಿಪಬ್ಲಿಕನ್‌ ಪಕ್ಷಕ್ಕೆ ಭಾರಿ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಟ್ರಂಪ್‌ ಅವರ ಕಾರ್ಯವೈಖರಿಗೆ ಕೇವಲ ಶೇ. 31ರಷ್ಟು ಅಮೆರಿಕನ್ನರು ಮಾತ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ರಾಯಿಟರ್ಸ್‌/ಇಪ್ಸೋಸ್‌ (Reuters/Ipsos) ಸಮೀಕ್ಷೆ ತಿಳಿಸಿದೆ. ಟ್ರಂಪ್‌ ಅವರ … Continued

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಮುಹೂರ್ತ ನಿಗದಿ

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್‌ 1ರಂದು ಬೆಂಗಳೂರು–ಮುಂಬೈ ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಚಾಲನೆ ನೀಡುವ ಸಾಧ್ಯತೆಯಿದ್ದು, ನವೆಂಬರ್‌ 2ರಿಂದ ನಿಯಮಿತ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಈ ರೈಲು, ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ದೇಶದ ವಾಣಿಜ್ಯ ಮಹಾನಗರಿ ಮುಂಬೈ … Continued

ವಿಡಿಯೋ | ಮಾತನಾಡ್ಲಿಕ್ಕೇ ಆಗ್ತಿಲ್ಲ, ಇನ್ನು ಹಾಡೋದಾದ್ರೂ ಹೇಗೆ? ಗಾಯಕ ದಲೇರ್ ಮೆಹಂದಿಗೆ ವೇದಿಕೆಯಲ್ಲೇ ಸಚಿವರ ತರಾಟೆ

ಡೆಹ್ರಾಡೂನ್: “ನಿಮಗೆ ಮಾತನಾಡಲೂ ಆಗುತ್ತಿಲ್ಲ, ಇನ್ನು ಹಾಡುವುದಾದರೂ ಹೇಗೆ?” ಎಂದು ಬಾಲಿವುಡ್‌ನ ಖ್ಯಾತ ಪಂಜಾಬಿ ಗಾಯಕ ದಲೇರ್ ಮೆಹಂದಿ ಅವರನ್ನು ಉತ್ತರಾಖಂಡದ ಅರಣ್ಯ ಸಚಿವ ಸುಬೋಧ ಉನಿಯಾಲ್ ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ತೇಹ್ರಿ ಜಿಲ್ಲೆಯ ನರೇಂದ್ರನಗರದಲ್ಲಿ ನಡೆದ ಕುಂಜಾಪುರಿ ಮೇಳದಲ್ಲಿ ನಡೆದಿದೆ. ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಲೇರ್ ಮೆಹಂದಿ ಹಾಡುತ್ತಿದ್ದ … Continued

“ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್”: ದೇವರಗುಡ್ಡದಲ್ಲಿ ಗೊರವಯ್ಯ ನುಡಿದ ಕಾರ್ಣಿಕದ ಅರ್ಥವೇನು?

ಹಾವೇರಿ: ನಾಡಿನ ಪ್ರಸಿದ್ಧ ಕಾರ್ಣಿಕೋತ್ಸವಗಳಲ್ಲಿ ಒಂದಾದ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕೋತ್ಸವ ನವರಾತ್ರಿ ಪ್ರಯುಕ್ತ ಸೋಮವಾರ ನಡೆಯಿತು. ಲಕ್ಷಾಂತರ ಭಕ್ತರ ಹರ್ಷೋದ್ಗಾರದ ನಡುವೆ ದೇವರಗುಡ್ಡದ ಪವಿತ್ರ ‘ಕರಿಯಾಲ್ ಕಟ್ಟಿ’ಯ ಬಳಿ ಈ ವರ್ಷದ ಕಾರ್ಣಿಕ ದೈವವಾಣಿ ಮೊಳಗಿತು. ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು 15 ಅಡಿ ಎತ್ತರದ ಬಿಲ್ಲನ್ನೇರಿ, ‘ಕೆಂಪುಕೋಟೆಯ … Continued

ನಾವೆಲ್ಲರೂ ಒಂದು ದಿನ ಸಾಯುತ್ತೇವೆ…: ಪ್ರವಚನ ನೀಡುತ್ತಿದ್ದಾಗಲೇ ತಲೆಯ ಮೇಲೆ ಶಿಲುಬೆ ಬಿದ್ದು ಪಾದ್ರಿ ಸಾವು

ಕ್ವಿಟೊ: ಜೀವನ ಎಷ್ಟು ಅನಿಶ್ಚಿತ ಎಂಬುದರ ಕುರಿತು ಪ್ರವಚನ ನೀಡಿದ ಕೆಲವೇ ಕ್ಷಣಗಳಲ್ಲಿ ಕ್ಯಾಥೋಲಿಕ್‌ ಪಾದ್ರಿಯೊಬ್ಬರು ಸಾವಿಗೀಡಾದ ಘಟನೆ ಈಕ್ವೆಡಾರ್‌ನಲ್ಲಿ ನಡೆದಿದೆ. ಚರ್ಚ್‌ನಲ್ಲಿ ನಡೆಯುತ್ತಿದ್ದ ನೇರ ಪ್ರಸಾರದ (ಲೈವ್‌) ಸಾಮೂಹಿಕ ಪ್ರಾರ್ಥನೆಯ ವೇಳೆ, ಪಾದ್ರಿಯ ಹಿಂದೆ ಗೋಡೆಗೆ ನೇತುಹಾಕಲಾಗಿದ್ದ ಬೃಹತ್‌ ಶಿಲುಬೆ ಏಕಾಏಕಿ ಕಳಚಿ ಅವರ ತಲೆಯ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಪಾದ್ರಿ ಸ್ಥಳದಲ್ಲೇ … Continued

ಭಾರತ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಪ್ರಗ್ಯಾನ್ ಓಜಾ ನೇಮಕ; ರಮೇಶ ಪೊವಾರಗೆ ಸ್ಥಾನ

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಮಹತ್ವದ ನಿರ್ಧಾರ ಕೈಗೊಂಡಿದ್ದು, ಭಾರತ ತಂಡದ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಅವರನ್ನು ಪುರುಷರ ರಾಷ್ಟ್ರೀಯ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಇದೇ ವೇಳೆ, ಮಾಜಿ ಕ್ರಿಕೆಟಿಗ ರಮೇಶ ಪೊವಾರ್ ಅವರನ್ನೂ ಆಯ್ಕೆ ಸಮಿತಿಗೆ ಸೇರ್ಪಡೆಗೊಳಿಸಲಾಗಿದೆ. ಹಿರಿತನದ ಆಧಾರದ ಮೇಲೆ ಪ್ರಗ್ಯಾನ್ … Continued

ಟೈಗರ್‌ ಶ್ರಾಫ್‌ ಮೇಲೆ ಗುಂಡಿನ ದಾಳಿ ಪ್ರಕರಣ ; ಸೂರತ್‌ನಲ್ಲಿ ಆರೋಪಿಗಳು ಓಡಿ ಹೋಗಿ ರೈಲು ಹತ್ತಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್‌ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣದಲ್ಲಿ ಮಹತ್ವದ ಮಾಹಿತಿ ಹೊರಬಿದ್ದಿದೆ. ಸೂರತ್ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಪೊಲೀಸರು ಆರೋಪಿಗಳ ಸುಳಿವು ಪತ್ತೆಹಚ್ಚಿದ್ದು, ಪ್ರಕರಣದ ಮೂವರು ಆರೋಪಿಗಳನ್ನು ರಾಜಸ್ಥಾನದ ಕೋಟಾದಲ್ಲಿ ಸೋಮವಾರ ಬಂಧಿಸಿದ್ದಾರೆ. ಮುಂಬೈನಲ್ಲಿ ಭಾನುವಾರ ಸಂಜೆ ಗುಂಡಿನ ದಾಳಿ ನಡೆಸಿದ ಬಳಿಕ ಆರೋಪಿಗಳು ರಸ್ತೆ … Continued

ಕಡವೆ ಬೇಟೆ : ಅರಣ್ಯಾಧಿಕಾರಿ ಸಿಬ್ಬಂದಿ ದಾಳಿ; ಒಬ್ಬನ ಬಂಧನ, ಐವರು ಪರಾರಿ

ಕಾರವಾರ : ಅಡಿಕೆ ತೋಟದಲ್ಲಿ ಕಡವೆಯನ್ನು ಬೇಟೆಯಾಡಿ, ಅದನ್ನು ತಂಡರಿಸಿ ಮಾಂಶ ಹಾಗೂ ಚರ್ಮ ಬೇರ್ಪಡಿಸಿ ಚೀಲಗಳಲ್ಲಿ ತುಂಬುತ್ತಿದ್ದ ತಂಡದ ಮೇಲೆ ಅರಣ್ಯಾಧಿಕಾರಿಗಳು ದಿಢೀರ್ ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಕಲ್ಲೇಶ್ವರ ಗ್ರಾಮದಲ್ಲಿ ಅಕ್ಟೋಬರ್ 16ರ ರಾತ್ರಿ ನಡೆದ ಕಾರ್ಯಾಚರಣೆ ವೇಳೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, … Continued