ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ : ರಾಜಸ್ಥಾನದಲ್ಲಿ ಮೂವರು ಆರೋಪಿಗಳ ಬಂಧನ

ಮುಂಬೈ/ಕೋಟಾ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಸೋಮವಾರ ಬಂಧಿಸಲಾಗಿದೆ. ರಾಜಸ್ಥಾನ ಪೊಲೀಸರು ಮತ್ತು ಆ್ಯಂಟಿ ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್ (AGTF) ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೂ … Continued

ಕಾಕ್ರೋಚ್ ಜನತಾ ಪಾರ್ಟಿಗೆ ಠಕ್ಕರ್ ಕೊಡಲು ʼಲಾಲ್ ಹಿಟ್ ಜನತಾ ಪಾರ್ಟಿʼಯ ಉದಯ ! ಯಾವುದು ಈ ಸಂಘಟನೆ?

ನವದೆಹಲಿ: ಕಾಕ್ರೋಚ್‌ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೇ, ಅದಕ್ಕೆ ಪರ್ಯಾಯವಾಗಿ ಲಾಲ್ ಹಿಟ್ ಜನತಾ ಪಾರ್ಟಿ’ (Lal Hit Janata Party)ಎಂಬ ಹೊಸ ಸಂಘಟನೆ ದೆಹಲಿಯಲ್ಲಿ ಉದಯಿಸಿದೆ. ಇದು ಜಿರಳೆಗಳನ್ನು ಕೊಲ್ಲಲು ಬಳಸುವ ಪ್ರಸಿದ್ಧ ಕೀಟನಾಶಕ ‘ಲಾಲ್ ಹಿಟ್’ (Lal HIT) ಹೆಸರನ್ನು ಬಳಸಿಕೊಂಡು ರಚನೆಯಾಗಿರುವ ಗುಂಪಿನ ಒಂದು ವ್ಯಂಗ್ಯಾತ್ಮಕ (Satirical) … Continued

ಕೈಗೆ ಬ್ಯಾಂಡೇಜ್‌, ಭುಜ-ಎದೆಯ ಭಾಗಕ್ಕೆ ಡ್ರೆಸ್ಸಿಂಗ್ ; ಗುಂಡಿನ ದಾಳಿ ಬಳಿಕ ನಟ ಟೈಗರ್ ಶ್ರಾಫ್ ಮೊದಲ ಫೋಟೊ ಬಿಡುಗಡೆ

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿದಂತೆ, ದಾಳಿಯ ಬಳಿಕ ಗಾಯಗೊಂಡ ಸ್ಥಿತಿಯಲ್ಲಿರುವ ನಟನ ಮೊದಲ ಛಾಯಾಚಿತ್ರಗಳು ಹೊರಬಂದಿವೆ. ಛಾಯಾಚಿತ್ರಗಳಲ್ಲಿ ಟೈಗರ್ ಶ್ರಾಫ್ ಅವರು ಅಂಗಿ ಧರಿಸದೆ ಸೋಫಾದ ಮೇಲೆ ಕುಳಿತಿದ್ದು, ಒಂದು ಕೈಗೆ ದಪ್ಪವಾದ … Continued

ಚೀನಿ ಏಜೆಂಟಗೆ ಭದ್ರತೆಯ ಸೂಕ್ಷ್ಮ ಮಾಹಿತಿ ಹಂಚಿಕೊಂಡ ಆರೋಪ: ಸೇನಾಧಿಕಾರಿ ಪತ್ನಿ ವಿರುದ್ಧ ಪ್ರಕರಣ ದಾಖಲು

ಜಮ್ಮು: ಕೃತಕ ಬುದ್ಧಿಮತ್ತೆ (ಎಐ) ಸಾಧನಗಳಾದ ಚಾಟ್‌ಜಿಪಿಟಿ ಮತ್ತು ಕ್ಲಾಡ್‌ ಬಳಸಿ ದೇಶದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳ ಕುರಿತು ವಿಶ್ಲೇಷಣಾತ್ಮಕ ವರದಿಗಳನ್ನು ಸಿದ್ಧಪಡಿಸಿ, ಚೀನಾದ ಗುಪ್ತಚರ ಏಜೆಂಟರಿಗೆ ಒದಗಿಸಿದ ಆರೋಪದ ಮೇಲೆ ಸೇನಾಧಿಕಾರಿಯೊಬ್ಬರ ಪತ್ನಿ ವಿರುದ್ಧ ಜಮ್ಮು-ಕಾಶ್ಮೀರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ. ತೆಲಂಗಾಣ ಮೂಲದ ಆರೋಪಿತ … Continued

ವಿಡಿಯೋ | ಬಾಲಿವುಡ್‌ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಮೂವರು ಅಪರಿಚಿತರು ಗುಂಡಿನ ದಾಳಿ ನಡೆಸಿರುವ ದೃಶ್ಯದ ವಿಡಿಯೊವೊಂದು ಹೊರಬಿದ್ದಿದೆ. ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ನಟ ಟೈಗರ್ ಶ್ರಾಫ್ ಪಾರಾಗಿದ್ದಾರೆ. ಆದರೆ, ಅವರ ಕಾರಿನ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ … Continued

ಕಾರು ಡಿಕ್ಕಿಯಾಗಿ 8 ನರೇಗಾ ಕಾರ್ಮಿಕರ ದಾರುಣ ಸಾವು ; 12 ಮಂದಿಗೆ ಗಾಯ

ಸಂಗ್ರೂರ್‌: ವೇಗವಾಗಿ ಬಂದ ಕಾರೊಂದು ರಸ್ತೆ ಬದಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಗುಂಪಿನ ಮೇಲೆ ಹರಿದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದು, 12 ಜನರು ಗಾಯಗೊಂಡ ಘಟನೆ ಪಂಜಾಬ್‌ನ ಸಂಗ್ರೂರ್‌ ಜಿಲ್ಲೆಯಲ್ಲಿ ನಡೆದಿದೆ. ಭಾನುವಾರ ಸಂಜೆ ಲೆಹ್ರಾಗಾಗಾ–ಜಖಲ್‌ ರಸ್ತೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲಿಶೇರ್‌ ಗ್ರಾಮದ ಸಮೀಪ ಈ ಘಟನೆ … Continued

ಗೋಕರ್ಣ: ಪ್ರವಾಸಕ್ಕೆ ಬಂದಿದ್ದ ಬಾಲಕನಿಗೆ ಕಚ್ಚಿದ ಹಾವು

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದ ಧಾರವಾಡ ಮೂಲದ ಬಾಲಕನಿಗೆ ಗೋಕರ್ಣದ ಮುಖ್ಯ ಕಡಲತೀರದ ಸಮೀಪ ನಾಗರಹಾವು ಕಡಿದ ಘಟನೆ ಭಾನುವಾರ ನಡೆದಿದೆ ಎಂದು ವರದಿಯಾಗಿದೆ. ಜೀವ ರಕ್ಷಕ ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿ ಬಾಲಕನನ್ನು ತಕ್ಷಣವೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಿದ್ದು,ಹೆಚ್ಚಿನ ಚಿಕಿತ್ಸೆಗೆ ಅಂಕೋಲಾ … Continued

ಖ್ಯಾತ ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ; ಬೈಕ್‌ನಲ್ಲಿ ಬಂದಿದ್ದ ಮೂವರು ಆರೋಪಿಗಳು ಪರಾರಿ

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ವಾಹನದ ಮೇಲೆ ಮುಂಬೈನ ಜುಹು ಪ್ರದೇಶದಲ್ಲಿ ಭಾನುವಾರ ಸಂಜೆ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ನಟ ನಟ ಟೈಗರ್ ಶ್ರಾಫ್ ಅವರ ಕಾರಿನ ಚಾಲಕ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅದೃಷ್ಟವಶಾತ್, ಟೈಗರ್ ಶ್ರಾಫ್ ಅವರಿಗೆ ಯಾವುದೇ ಗುಂಡೇಟಿನ … Continued

ಕೆ.ಆರ್.ನಗರ | ಐತಿಹಾಸಿಕ ಅರ್ಕೇಶ್ವರ ದೇಗುಲದ ಗೋಡೆ ಮೇಲೆ ಶಿಲುಬೆ, ಮಸೀದಿ ಚಿತ್ರ

ಮೈಸೂರು : ಜಿಲ್ಲೆಯ ಕೃಷ್ಣರಾಜನಗರ (ಕೆ.ಆರ್.ನಗರ) ತಾಲೂಕಿನ ಪುರಾತನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಎಡತೊರೆ ಗ್ರಾಮದ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣದ ಗೋಡೆಯ ಮೇಲೆ ಅನ್ಯ ಧರ್ಮಗಳ ಚಿಹ್ನೆಗಳನ್ನು ಬಿಡಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ನಂತರ ತಾಲೂಕು ಆಡಳಿತ ಇಬ್ಬರ … Continued

ಮಂಗಳೂರು : ಬಾಲಕರಿಗೆ ಲೈಂಗಿಕ ಕಿರುಕುಳದ ಆರೋಪ: ಚರ್ಚ್‌ ಪಾದ್ರಿ ಬಂಧನ

ಮಂಗಳೂರು: ಮಂಗಳೂರಿನ ಚರ್ಚ್‌ನಲ್ಲಿ ಹಲವು ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಾದ್ರಿಯೊಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಾರ್ಥನೆಗೆ ಹೋದ ಸಂದರ್ಭದಲ್ಲಿ ಬಾಲಕರಿಗೆ ವೆಲೆನ್ಸಿಯಾ ಚರ್ಚ್‌ನ ಪಾದ್ರಿ ಸಿಪ್ರಿಯನ್ ಪಿಂಟೋ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೆ, ಮಕ್ಕಳ ಪೋಷಕರು ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು … Continued