ಕಾಂಗ್ರೆಸ್ ತೊರೆದವರನ್ನು ‘ಹೇಡಿಗಳು’ ಎಂದು ಕರೆದ ರಾಹುಲ್ ಗಾಂಧಿ ; ಅವರೆಲ್ಲ ನಿಮ್ಮ ಸ್ನೇಹಿತರಾಗಿದ್ರು ಎಂದು ಕಾಲೆಳೆದ ಖರ್ಗೆ !

ನವದೆಹಲಿ: ಕಾಂಗ್ರೆಸ್‌ ಪಕ್ಷದ ಕಚೇರಿ ಇಂದಿರಾ ಭವನದಲ್ಲಿ ನಡೆದ ಯುವ ಕಾರ್ಯಕರ್ತರ ಜೊತೆಗಿನ ಅನೌಪಚಾರಿಕ ಚಹಾ ಸಂವಾದವು ಪಕ್ಷ ತೊರೆದ ನಾಯಕರ ಕುರಿತು ಲೋಕಸಭೆಯ ವಿಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವಿನ ನೇರ ಹಾಗೂ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ರಾಜಕೀಯ ಒತ್ತಡಕ್ಕೆ ಮಣಿಯದೆ ಕಾಂಗ್ರೆಸ್‌ನಲ್ಲಿ … Continued

ಹಾರುವ ಕಾರಿನ ಅದ್ಭುತ ವಿಡಿಯೊಗಳು | ಗಾಳಿಯಲ್ಲಿ ಹಾರುವ, ತಲೆಕೆಳಗಾಗಿ ಚಲಿಸುವ, ಪಲ್ಟಿ ಹೊಡೆದು ಮತ್ತೆ ಓಡುವ ಟೆಸ್ಲಾ ಕಾರು

ವಾಷಿಂಗ್ಟನ್‌: ಭವಿಷ್ಯದಲ್ಲಿ ಹಾರುವ ಕಾರುಗಳು ಇರಲಿವೆ ಎಂಬುದು ಈಗ ನಿಜವಾಗುತ್ತಿದೆ ಎಂದು ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್‌ ಪ್ರಕಟಿಸಿದ್ದಾರೆ. ತಮ್ಮ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ಸ್ಪೇಸ್‌ಎಕ್ಸ್‌ (SpaceX) ಅಭಿವೃದ್ಧಿಪಡಿಸಿದ ಥ್ರಸ್ಟರ್‌ಗಳ ನೆರವಿನಿಂದ ಮರುವಿನ್ಯಾಸಗೊಳಿಸಲಾದ ಟೆಸ್ಲಾ ರೋಡ್‌ಸ್ಟರ್‌ (Tesla Roadster) ಕಾರು ಗಾಳಿಯಲ್ಲಿ ಹಾರುವ, ಇತರ ವಾಹನಗಳನ್ನು ಗಾಳಿಯಲ್ಲೇ ದಾಟುವ ಹಾಗೂ ಸುರಕ್ಷಿತವಾಗಿ ನೆಲಕ್ಕಿಳಿಯುವ ದೃಶ್ಯಗಳಿರುವ ವಿಡಿಯೊವನ್ನು … Continued

ಎಸ್‌ಐಆರ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್‌ ನಟ ಇಮ್ರಾನ್ ಖಾನ್‌ಗೆ ಭಾರತ ತೊರೆಯಲು ಸೂಚನೆ

ಮುಂಬೈ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೆಲವೇ ದಿನಗಳಲ್ಲಿ ಬಾಲಿವುಡ್ ನಟ ಇಮ್ರಾನ್ ಖಾನ್ ಅವರಿಗೆ ಭಾರತ ತೊರೆಯುವಂತೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದಾರೆ. ಬಾಲಿವುಡ್ ನಟ ಆಮಿರ್ ಖಾನ್ ಅವರ ಸಂಬಂಧಿಯಾಗಿರುವ ಇಮ್ರಾನ್ ಖಾನ್, ಭಾರತೀಯ ಪ್ರಜೆಯಲ್ಲದಿದ್ದರೂ ದೇಶದಲ್ಲಿ ರಾಜಕೀಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು … Continued

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರೆ ಒಬಿಸಿ ಮೀಸಲಾತಿ ಸಿಗಲ್ಲ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಹಿಂದೂ ಧರ್ಮದಿಂದ ಇಸ್ಲಾಂ, ಕ್ರೈಸ್ತ ಧರ್ಮ ಅಥವಾ ಇತರ ಹಿಂದೂಯೇತರ ಸಾಮಾಜಿಕ ವ್ಯವಸ್ಥೆಗೆ ಮತಾಂತರಗೊಂಡವರು, ಮತಾಂತರಕ್ಕೂ ಮುನ್ನ ಹೊಂದಿದ್ದ ಜಾತಿ ಅಥವಾ ಸಮುದಾಯದ ಸ್ಥಾನಮಾನದ ಆಧಾರದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಸೌಲಭ್ಯವನ್ನು ಪಡೆಯಲು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಮತಾಂತರಗೊಂಡವರನ್ನು ಹಿಂದುಳಿದ ವರ್ಗದ ಮುಸ್ಲಿಮರೆಂದು ಪರಿಗಣಿಸಲು … Continued

ಮೂರು ವರ್ಷಗಳಿಂದ ಉಳಿಸುತ್ತ ಬಂದ ₹10ರ ನಾಣ್ಯಗಳಿಂದ ₹1.23 ಲಕ್ಷದ ಹೋಂಡಾ ಆಕ್ಟಿವಾ ಖರೀದಿಸಿದ ವ್ಯಕ್ತಿ !

ಮಂಚೇರಿಯಲ್‌ (ತೆಲಂಗಾಣ): ದಿನನಿತ್ಯದ ಖರ್ಚಿನಲ್ಲಿ ಸಿಗುವ ಚಿಲ್ಲರೆ ಹಣವನ್ನು ಉಳಿಸುತ್ತ ಹೋದರೆ ದೊಡ್ಡ ಕನಸನ್ನೂ ನನಸಾಗಿಸಬಹುದು ಎಂಬುದಕ್ಕೆ ತೆಲಂಗಾಣದ ಮಂಚೇರಿಯಲ್‌ ಜಿಲ್ಲೆಯ ಲಕ್ಸೆಟ್ಟಿಪೇಟ್‌ನ 51 ವರ್ಷದ ಪಾದ್ರಿ ಬಿ. ರವಿ ಜೋಸೆಫ್‌ ಅವರೇ ಉದಾಹರಣೆ. ಸತತ ಮೂರು ವರ್ಷಗಳ ಕಾಲ ₹10ರ ನಾಣ್ಯಗಳನ್ನು ಸಂಗ್ರಹಿಸಿದ ಅವರು, ಒಟ್ಟು ₹1.23 ಲಕ್ಷ ಮೊತ್ತದ ನಾಣ್ಯಗಳನ್ನು ನೀಡಿ ಹೊಸ … Continued

ಕಾರವಾರ: ಅಕ್ಟೋಬರ್‌ 16ರಂದು ಸ್ವದೇಶಿ ನಿರ್ಮಿತ ಬಹುಪಯೋಗಿ ನೌಕೆ ‘ಸಮರ್ಥಕ್’ ನೌಕಾಪಡೆಗೆ ಸೇರ್ಪಡೆ

ಕಾರವಾರ: ಸ್ವದೇಶಿ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಬಹುಉದ್ದೇಶದ ನೌಕೆ ಐಎನ್‌ಎಸ್‌ ಸಮರ್ಥಕ್‌ (INS Samarthak) ಅಕ್ಟೋಬರ್‌ 16ರಂದು ಕಾರವಾರದ ನೌಕಾನೆಲೆಯಲ್ಲಿ ನಡೆಯುವ ಸಮಾರಂಭದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿದೆ. ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಕೃಷ್ಣ ಸ್ವಾಮಿನಾಥನ್‌ ಪಾಲ್ಗೊಳ್ಳಲಿದ್ದಾರೆ. ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು, ನೌಕಾಪಡೆಯ … Continued

ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ, ಸಿಜೆಐ ವಿರುದ್ಧ ಪೋಸ್ಟ್‌: ಕಾಂಗ್ರೆಸ್‌, ರಾಹುಲ್ ಗಾಂಧಿಗೆ ನೋಟಿಸ್

ನವದೆಹಲಿ: ಅಕ್ಟೋಬರ್ 12 ರಂದು ಸುಪ್ರೀಂ ಕೋರ್ಟ್‌ಗೆ ಮೆರವಣಿಗೆಯಲ್ಲಿ ತೆರಳಿ, ಅರ್ಜಿ ಸಲ್ಲಿಸಲು ನ್ಯಾಯಾಲಯದ ನೋಂದಣಿ ಕಚೇರಿಯೊಳಗೆ (registry) ಪ್ರವೇಶಿಸಿದ ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿ ಸಲ್ಲಿಸಲಾದ ಅರ್ಜಿಯ ಮೇರೆಗೆ, ಸುಪ್ರೀಂ ಕೋರ್ಟ್ ಗುರುವಾರ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ಮತ್ತು ‘ಇಂಡಿಯಾ’ (INDIA) ಒಕ್ಕೂಟದ ಇತರ ನಾಯಕರಿಗೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯದ ಆವರಣದಲ್ಲಿ … Continued

ಇನ್ಮುಂದೆ ಅಪರಿಚಿತರು ಕಾಲ್‌ ಮಾಡಿದ್ರೂ ಮೊಬೈಲ್‌ನಲ್ಲಿ ಅವರ ಹೆಸರು ಕಾಣಿಸುತ್ತೆ ! ನ.1ರಿಂದ ಇದು ಜಾರಿ

ನವದೆಹಲಿ: ಇನ್ಮುಂದೆ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಅಪರಿಚಿತರ ಕಾಲ್‌ ಬಂದ್ರೂ ಕರೆ ಮಾಡುತ್ತಿರುವವರು ಯಾರು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಯಾಕೆಂದರೆ, ಕಾಲ್‌ ಮಾಡುವವರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಮೊಬೈಲ್‌ ಪರದೆಯ ಮೇಲೆ ತೋರಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ದೂರಸಂಪರ್ಕ ಇಲಾಖೆ (DoT) 2026ರ ನವೆಂಬರ್‌ 1ರಿಂದ ಕಾಲಿಂಗ್‌ ನೇಮ್‌ … Continued

ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಾಸಿನಲ್ಲಿ ಬಿಜೆಪಿ ನಾಯಕನ ಮನೆಗೆ ನುಗ್ಗಿ, ಕಟ್ಟಿ ಹಾಕಿ ₹50 ಲಕ್ಷ ದೋಚಿದ ದರೋಡೆಕೋರರು

ಕಾನ್ಪುರ: ರಾಜಕೀಯದಲ್ಲಿ ಹೊಸ ಜವಾಬ್ದಾರಿ ಸಿಕ್ಕ ಸಂಭ್ರಮದಲ್ಲಿದ್ದ ಬಿಜೆಪಿ ನಾಯಕನಿಗೆ ಅದೇ ದಿನ ಮಧ್ಯರಾತ್ರಿ ಆಘಾತ ಎದುರಾಗಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ನೂತನ ರಾಜ್ಯ ಕಾರ್ಯದರ್ಶಿ ರಮೇಶ ಯಾದವ್ ಅವರ ಫಾರ್ಮ್‌ಹೌಸ್‌ಗೆ ಮಾಸ್ಕ್‌ ಹಾಕಿದ್ದ ದರೋಡೆಕೋರರು ನುಗ್ಗಿ, ಅವರನ್ನು ಕಟ್ಟಿ ಹಾಕಿ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ನಗದು … Continued

ಖ್ಯಾತ ಯಕ್ಷಗಾನ ಕಲಾವಿದ ಶ್ರೀಪಾದ ಭಟ್‌ ಥಂಡಿಮನೆ ನಿಧನ

ಶಿರಸಿ: ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಶ್ರೀಪಾದ ಭಟ್‌ ಥಂಡಿಮನೆ (62 ವರ್ಷ) ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಥಂಡಿಮನೆಯವರಾದ ಅವರು ಯಕ್ಷಗಾನದಲ್ಲಿ ನಾಯಕ ಹಾಗೂ ಪ್ರತಿ ನಾಯಕನ ಪಾತ್ರ ಎರಡರಲ್ಲೂ ಹೆಸರುವಾಸಿಯಾಗಿದ್ದರು. ವಿಶೇಷವಾಗಿ ರಾವಣ, ಭೀಮ, ಘಟೋದ್ಗಜ, ಕಂಸ, ಕೌರವ, ಆಂಜನೇಯ, ಸಾಲ್ವ, ದಕ್ಷ, … Continued