‘ಮೋದಿ ಕಾ ಬಾಪ್ ಭೀ ಜಾಯೇಗಾ’: ಪಾಟ್ನಾ ಕಾರ್ಯಕ್ರಮದಲ್ಲಿ ಖರ್ಗೆ ವಿವಾದಾತ್ಮಕ ಹೇಳಿಕೆ; ಭುಗಿಲೆದ್ದ ಆಕ್ರೋಶ

ಪಾಟ್ನಾ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಾಟ್ನಾದಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದ ಮಾತು ತೀವ್ರ ವಿವಾದಕ್ಕೆ ಕಾರಣವಾಗಿದೆ. ಬಿಹಾರದ ಮೊದಲ ಮುಖ್ಯಮಂತ್ರಿ, ಜನಪ್ರಿಯವಾಗಿ ‘ಶ್ರೀ ಬಾಬು’ ಎಂದೇ ಗುರುತಿಸಿಕೊಂಡಿದ್ದ ಡಾ. ಶ್ರೀಕೃಷ್ಣ ಸಿಂಗ್ ಅವರ 139ನೇ ಜನ್ಮದಿನದ ಅಂಗವಾಗಿ ಪಾಟ್ನಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಭಾಷಣ ಮಾಡುತ್ತಿದ್ದಾಗ  “ಮೋದಿ ಕಾ ಬಾಪ್ ಭೀ ಜಾಯೇಗಾ” (ಮೋದಿಯವರ ಅಪ್ಪನೂ … Continued

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮ ಪಕ್ಷದಿಂದ ಸ್ಪರ್ಧೆ ; ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್

ಲಕ್ನೋ : ಉತ್ತರ ಪ್ರದೇಶದ ರಾಜಕೀಯಕ್ಕೆ ಇತ್ತೀಚೆಗಷ್ಟೇ ಪ್ರವೇಶಿಸಿರುವ ಭಾರತೀಯ ಆಡಳಿತ ಸೇವೆ (ಐಎಎಸ್) ಮಾಜಿ ಅಧಿಕಾರಿ ದಿವ್ಯಾ ಮಿತ್ತಲ್, ತಮ್ಮ ಜನನೀತಿ ಭಾರತ್ ಪಕ್ಷವು ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ 403 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಘೋಷಿಸಿದ್ದಾರೆ. ಹೊಸದಾಗಿ ಪಕ್ಷ ಸ್ಥಾಪಿಸಿರುವ ಅವರು, ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಸಮರ್ಥ … Continued

ಬೆಂಗಳೂರಿನ ಸ್ಫೋಟ ಪ್ರಕರಣ ಭೇದಿಸಿದ ಪೊಲೀಸರು: ವೈಯಕ್ತಿಕ ದ್ವೇಷವೇ ಕೃತ್ಯಕ್ಕೆ ಕಾರಣ ; ಮೂವರ ಬಂಧನ

ಬೆಂಗಳೂರು: ನಗರದ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಿರ್ಮಾಣ ಹಂತದ ಮನೆಯೊಂದರಲ್ಲಿ ಕಳೆದ ವಾರ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣವನ್ನು ಬೆಂಗಳೂರು ನಗರ ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವೈಯಕ್ತಿಕ ದ್ವೇಷವೇ ಸ್ಫೋಟಕ್ಕೆ ಕಾರಣವಾಗಿದ್ದು, ಈ ಘಟನೆಯ ಹಿಂದೆ ಯಾವುದೇ ಭಯೋತ್ಪಾದಕ ಉದ್ದೇಶವಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. … Continued

ಚಿಕ್ಕಪ್ಪನ ಮನೆಯಿಂದ 150 ಗ್ರಾಂ ಚಿನ್ನ ಕದ್ದು ₹10 ಲಕ್ಷಕ್ಕೆ ಮಾರಿ ಥಾರ್ ಖರೀದಿಸಿದ ಯುವಕ ; ಹೊಸ ವಾಹನದ ಪೂಜೆಗೆ ಚಿಕ್ಕಪ್ಪನನ್ನೇ ಕರೆದ !

ಕೊಲ್ಲಾಪುರ: 19 ವರ್ಷದ ಯುವಕನೊಬ್ಬ ತನ್ನ ಚಿಕ್ಕಪ್ಪನ ಮನೆಯಲ್ಲಿದ್ದ ಸುಮಾರು 15 ತೊಲೆ (ಅಂದಾಜು 150 ಗ್ರಾಂ) ಚಿನ್ನಾಭರಣಗಳನ್ನು ಕದ್ದು, ಅವುಗಳನ್ನು ₹10 ಲಕ್ಷಕ್ಕೆ ಮಾರಾಟ ಮಾಡಿ ಮಹೀಂದ್ರಾ ಥಾರ್‌ ಎಸ್‌ಯುವಿ ಖರೀದಿಸಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಚ್ಚರಿಯ ಸಂಗತಿಯೆಂದರೆ, ತಾನು ಖರೀದಿಸಿದ ಹೊಸ ವಾಹನವನ್ನು ಮನೆಗೆ ತಂದ ಬಳಿಕ ಅದರ … Continued

ಆಂಧ್ರ ಕರಾವಳಿಗೆ ಅಕ್ಟೋಬರ್ 28ರಂದು ತೀವ್ರ ಚಂಡಮಾರುತ ಅಪ್ಪಳಿಸುವ ಸಾಧ್ಯತೆ; ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಮಳೆ ನಿರೀಕ್ಷೆ

ನವದೆಹಲಿ : ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತವು ತೀವ್ರ ಚಂಡಮಾರುತವಾಗಿ ಬಲಗೊಳ್ಳುವ ಸಾಧ್ಯತೆಯಿದ್ದು, ಅಕ್ಟೋಬರ್ 28ರಂದು ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಚಂಡಮಾರುತದ ಪರಿಣಾಮ ಆಂಧ್ರಪ್ರದೇಶ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಗಂಟೆಗೆ 115ರಿಂದ 125 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ. … Continued

ಜೆಡಿಯುನಿಂದ ಶಾಸಕ ಅನಂತ ಸಿಂಗ್‌ ಉಚ್ಚಾಟನೆ ; ಶಾಸಕ ಸ್ಥಾನ ರದ್ದತಿಗೂ ಶಿಫಾರಸು

ಪಾಟ್ನಾ: ಬಿಹಾರದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಮೋಕಾಮಾ ಕ್ಷೇತ್ರದ ಶಾಸಕ ಅನಂತ ಸಿಂಗ್ ಅವರನ್ನು ಜನತಾ ದಳ (ಯುನೈಟೆಡ್‌) ಅಂದರೆ ಜೆಡಿಯು ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟಿಸಲಾಗಿದೆ.  ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಹಾಗೂ ಪ್ರತಿಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ … Continued

ಕೆಪಿಎಸ್‌ಸಿ ಹಗರಣ; ಐಎಎಸ್‌ ಅಧಿಕಾರಿ ಜ್ಞಾನೇಂದ್ರಕುಮಾರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರದ ಅನುಮತಿ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC Scam) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ ಗಂಗ್ವಾರ್ (IAS Gyanendra Kumar) ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗಿಸಲು ಮತ್ತು ಚಾರ್ಜ್‌ಶೀಟ್ ಸಲ್ಲಿಸಲು ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರಅವರು ಕಡತ ಹಾಗೂ ದಾಖಲೆಗಳನ್ನು ಪರಿಶೀಲಿಸಿ … Continued

ಸಿದ್ದರಾಮಯ್ಯ ವಿರುದ್ಧದ ನಕಲಿ ಸ್ಟಿಂಗ್‌ ಆಪರೇಷನ್‌ ಪ್ರಕರಣ: ದೆಹಲಿಯ ವ್ಯಕ್ತಿಯ ಬಂಧನ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡಿದೆ ಎನ್ನಲಾದ ಸ್ಟಿಂಗ್‌ ಆಪರೇಷನ್‌ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್‌ ಅಪರಾಧ ವಿಭಾಗದ ವಿಶೇಷ ತಂಡ ದೆಹಲಿ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ನಡೆದಿರುವ ಮೊದಲ ಬಂಧನ ಇದಾಗಿದ್ದು, ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡಿದವರು ಯಾರು ಮತ್ತು ಅದು ಹೇಗೆ ವ್ಯಾಪಕವಾಗಿ … Continued

ವಿಡಿಯೋ | ತರಬೇತಿ ವೇಳೆ ಆಕಾಶದಲ್ಲಿ ಡಿಕ್ಕಿಯಾದ ಎರಡು ಸೇನಾ ವಿಮಾನಗಳು; ನಾಲ್ವರು ಪೈಲಟ್‌ಗಳು ಸಾವು

ಫಿಲಿಪ್ಪೀನ್ಸ್ ವಾಯುಪಡೆಯ ಎರಡು ಸೇನಾ ವಿಮಾನಗಳು ತರಬೇತಿ ಕಾರ್ಯಾಚರಣೆಯ ವೇಳೆ ವಾಯುಮಧ್ಯದಲ್ಲೇ ಪರಸ್ಪರ ಡಿಕ್ಕಿಯಾಗಿ ಪತನಗೊಂಡಿದ್ದು, ಘಟನೆಯಲ್ಲಿ ಕನಿಷ್ಠ ನಾಲ್ವರು ಪೈಲಟ್‌ಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ದೇಶದ ಬಟಾಂಗಾಸ್ ಪ್ರಾಂತ್ಯದಲ್ಲಿರುವ ಫರ್ನಾಂಡೊ ವಾಯುನೆಲೆಯಲ್ಲಿ ಶುಕ್ರವಾರ ಈ ಅಪಘಾತ ಸಂಭವಿಸಿದೆ. ಎರಡು ವಿಮಾನಗಳು ಆಕಾಶದಲ್ಲೇ ಡಿಕ್ಕಿಯಾಗುವ ಮತ್ತು ಬಳಿಕ ನೆಲಕ್ಕೆ ಅಪ್ಪಳಿಸುವ ದೃಶ್ಯಗಳನ್ನು ಸೆರೆಹಿಡಿದಿರುವ … Continued

ವಿಡಿಯೋ | ವಿದ್ಯುತ್‌ ಚಾಲಿತ ಹಾರುವ ಕಾರು ತಯಾರಿಸಿದ ಉತ್ತರಾಖಂಡದ ಬಿ.ಎ. ಪದವೀಧರ ! ಪರೀಕ್ಷಾರ್ಥ ಹಾರಾಟ ಯಶಸ್ವಿ

ಉತ್ತರಾಖಂಡದ ಪರ್ವತ ಪ್ರದೇಶಗಳಲ್ಲಿ ಕಠಿಣ ರಸ್ತೆಗಳು, ದೂರದ ಪ್ರಯಾಣ ಹಾಗೂ ಆಸ್ಪತ್ರೆ ಸೇರಿದಂತೆ ಅಗತ್ಯ ಸೇವೆಗಳನ್ನು ತಲುಪಲು ಎದುರಾಗುವ ಸಮಸ್ಯೆಗಳಿಗೆ ಪರ್ಯಾಯ ಸಾರಿಗೆ ವ್ಯವಸ್ಥೆಯನ್ನು ರೂಪಿಸಬೇಕೆಂಬ ಆಲೋಚನೆಯಿಂದ ಆರಂಭವಾದ ಪ್ರಯತ್ನವೊಂದು ಈಗ ಹೊಸ ತಂತ್ರಜ್ಞಾನದ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ. ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ರವಿ ತಮ್ತಾ ಎಂಬವರು ವಿದ್ಯುತ್‌ ಚಾಲಿತ ಹಾರುವ ಕಾರೊಂದನ್ನು ಅಭಿವೃದ್ಧಿಪಡಿಸಿದ್ದು, ಅವರ … Continued