ಜೈಲಿನಿಂದ ಪರಾರಿ…ದಟ್ಟ ಅರಣ್ಯದಲ್ಲಿ ತಪ್ಪಿಸಿಕೊಂಡು ಓಡಾಟ…ಡ್ರೋನ್‌ ಹುಡುಕಾಟದಲ್ಲಿ ಕೆಲ ಗಂಟೆಗಳಲ್ಲೇ ಸಿಕ್ಕಿಬಿದ್ದ ಕೈದಿಗಳು

ಚೆನ್ನೈ : ಫಿಟ್ಸ್‌ ಬಂದಿದೆ ಎಂದು ನಾಟಕವಾಡಿ ಜೈಲು ಸಿಬ್ಬಂದಿಯ ಗಮನ ಬೇರೆಡೆ ಸೆಳೆದು, ಅವರ ಮೇಲೆ ಹಲ್ಲೆ ನಡೆಸಿ ಮುಖ್ಯ ದ್ವಾರದ ಮೂಲಕವೇ ಪರಾರಿಯಾಗಿದ್ದ 17 ವಿಚಾರಣಾಧೀನ ಕೈದಿಗಳ ಪೈಕಿ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಥೇಣಿ ಜಿಲ್ಲೆಯ ತೆಕ್ಕಂಪಟ್ಟಿ ಉಪಜೈಲಿನಿಂದ ಪರಾರಿಯಾಗಿದ್ದ ಉಳಿದ ನಾಲ್ವರು ಕೈದಿಗಳಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ … Continued

20 ರೂ. ಕಚೋರಿ ತಿನ್ನಲು ನಿಂತು 20 ಲಕ್ಷ ರೂ. ಕಳೆದುಕೊಂಡ ಉದ್ಯಮಿ…!

ಜೈಪುರ: 20 ರೂಪಾಯಿಯ ಕಚೋರಿಯೊಂದು ಉದ್ಯಮಿಯೊಬ್ಬರಿಗೆ ಅತ್ಯಂತ ದುಬಾರಿ ತಿಂಡಿಯಾಗಿ ಪರಿಣಮಿಸಿದ ಘಟನೆ ಜೈಪುರದಲ್ಲಿ ನಡೆದಿದೆ. ಹಸಿವು ನೀಗಿಸಿಕೊಳ್ಳಲು 20 ರೂ. ಕೊಟ್ಟು ಕಚೋರಿ ತಿನ್ನುತ್ತ ನಿಂತಿದ್ದ ಉದ್ಯಮಿಯೊಬ್ಬರು ಬರೋಬ್ಬರಿ 20 ಲಕ್ಷ ರೂ. ಕಳೆದುಕೊಂಡಿದ್ದಾರೆ. ಉದ್ಯಮಿ ಕಚೋರಿ ತಿನ್ನುವಲ್ಲಿ ನಿರತರಾಗಿದ್ದಾಗ ಸ್ಕೂಟರ್‌ನಲ್ಲಿ ಬಂದ ಇಬ್ಬರು ಕಳ್ಳರು, ಅವರ ಬಳಿಯಿದ್ದ 20 ಲಕ್ಷ ರೂ. ನಗದು … Continued

ತದಡಿ ಬಂದರಿನಲ್ಲಿ ದುರಂತ: ಬೋಟ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಮೀನುಗಾರರು ಸಾವು

ಕಾರವಾರ : ಮೀನುಗಾರಿಕೆಯಿಂದ ಮರಳಿದ ಬೋಟ್‌ನಲ್ಲಿದ್ದ ಮೀನು ಸಂಗ್ರಹದ ಕೋಣೆಯನ್ನು ಸ್ವಚ್ಛಗೊಳಿಸಲು ಇಳಿದ ಮೂವರು ಮೀನುಗಾರರು ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಮಂಗಳವಾರ ಸಂಜೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.  ಘಟನೆಯಲ್ಲಿ ಇಬ್ಬರನ್ನು ಬಚಾವ್‌ ಮಾಡಲಾಗಿದ್ದು, ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೃತರನ್ನು ನೌಶಾದ್ … Continued

ಎಸ್‌ಐಆರ್‌-2026 ಅಂತಿಮ ಪಟ್ಟಿ ಪ್ರಕಟ ; ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 11,39,623 ಮತದಾರರು

ಕಾರವಾರ :ಕರ್ನಾಟಕದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ಬಳಿಕ ಮಂಗಳವಾರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ರಾಜ್ಯದಲ್ಲಿ 4,55,00,011 ಮತದಾರರಿದ್ದಾರೆ. 99,32,303 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ ಮಂಗಳವಾರ ತಿಳಿಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 ರ ಬಳಿಕಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 11,39,623 ಮತದಾರರಿದ್ದು, … Continued

‘ಭಾರತ ತೊರೆಯಿರಿ’ ನೋಟಿಸ್‌: ನಟ ಇಮ್ರಾನ್ ಖಾನ್‌ಗೆ‌ ತಾತ್ಕಾಲಿಕ ರಿಲೀಫ್

ಮುಂಬೈ: ಭಾರತ ತೊರೆಯುವಂತೆ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ನೀಡಿರುವ ನೋಟಿಸ್‌ ಪ್ರಶ್ನಿಸಿ ಬಾಲಿವುಡ್ ನಟ ಇಮ್ರಾನ್ ಖಾನ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಧ್ಯಂತರ ರಿಲೀಫ್‌ ನೀಡಿದೆ. ಅಕ್ಟೋಬರ್ 28, 2026ರೊಳಗೆ ಭಾರತ ತೊರೆಯುವಂತೆ ಸೂಚಿಸಿರುವ ನೋಟಿಸ್‌ ವಿರುದ್ಧದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 2ಕ್ಕೆ ಮುಂದೂಡಿದ್ದು, ಅಂದು ಮಧ್ಯಾಹ್ನ 3 … Continued

ಎಸ್‌ಐಆರ್‌ : ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಟ ; 99 ಲಕ್ಷಕ್ಕೂ ಹೆಚ್ಚು ಹೆಸರು ಡಿಲೀಟ್

ಬೆಂಗಳೂರು: ಕರ್ನಾಟಕದಲ್ಲಿ 115 ದಿನಗಳ ಕಾಲ ನಡೆದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ಬಳಿಕ ಒಟ್ಟು 99,32,303 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ ಮಂಗಳವಾರ ತಿಳಿಸಿದ್ದಾರೆ. ಅವರು ಹಂಚಿಕೊಂಡಿರುವ ಅಂಕಿಅಂಶಗಳ ಪ್ರಕಾರ, ರಾಜ್ಯದ ಅಂತಿಮ ಸಾಮಾನ್ಯ ಮತದಾರರ ಪಟ್ಟಿಯಲ್ಲಿ 4,54,55,680 ಮತದಾರರಿದ್ದಾರೆ. ಸೇವಾ ಮತದಾರರ ಪಟ್ಟಿಯಲ್ಲಿ … Continued

ಈತನ ಮೇಲಿದೆ 38 ಜನರನ್ನು ಕೊಂದು ತಿಂದ ಆರೋಪ ; ಕೊನೆಗೂ ಸಿಕ್ಕಿಬಿದ್ದ ಸರಣಿ ಹಂತಕ !

ಕಳೆದ 15 ವರ್ಷಗಳಲ್ಲಿ 38 ಮಂದಿಯನ್ನು ಕೊಂದು, ಅವರ ದೇಹವನ್ನು ತಿಂದಿದ್ದಾನೆ ಎಂಬ ಗಂಭೀರ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಉಗಾಂಡದ ಭದ್ರತಾ ಪಡೆಗಳು ಬಂಧಿಸಿವೆ. ಮುಜುರಿಜಿ ಮೋಸೆಸ್ (Mujurizi Moses) ಎಂಬಾತ 2010ರಿಂದ 2025ರ ಅವಧಿಯಲ್ಲಿ ಮಸಾಕಾ, ಇಬಾಂಡಾ ಮತ್ತು ಕಾಜೊ ಜಿಲ್ಲೆಗಳಲ್ಲಿ ಈ ಕೃತ್ಯಗಳನ್ನು ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಉಗಾಂಡದ ಸೇನಾ ಮುಖ್ಯಸ್ಥ ಜನರಲ್ … Continued

ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಜವಾಬ್ದಾರಿ ರಾಜ್ಯ ಸರ್ಕಾರದ್ದು ; ಡಿಪಿಆರ್‌ ರೂಪಿಸೋದು ಅಂದ್ರೆ ಯೋಜನೆ ಅಂತಿಮ ಎಂದಲ್ಲ : ಕೇಂದ್ರ ಸಚಿವ

 ಕಾರವಾರ: ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಜವಾಬ್ದಾರಿ ಸಂಪೂರ್ಣ ರಾಜ್ಯ ಸರ್ಕಾರದ್ದಾಗಿದ್ದು, ಕೇಂದ್ರ ಸರ್ಕಾರ ತಾಂತ್ರಿಕ ಮಾರ್ಗದರ್ಶನ ಹಾಗೂ ಸಲಹೆಯನ್ನು ನೀಡುತ್ತದೆ ಎಂದು ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್‌.ಪಾಟೀಲ ತಿಳಿಸಿದ್ದಾರೆ. ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಕುರಿತು ಆಕ್ಷೇಪಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬರೆದ ಪತ್ರಕ್ಕೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ … Continued

ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಮಿಳುನಾಡಿನ ಜೈಲಿನಿಂದ 17 ಕೈದಿಗಳ ಪರಾರಿ

ಚೆನ್ನೈ : ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ 17 ಮಂದಿ ಕೈದಿಗಳು ಜೈಲಿನಿಂದ ಪರಾರಿಯಾಗಿರುವ ಘಟನೆ ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಆಂಡಿಪಟ್ಟಿ ಸಮೀಪದ ತೆಕ್ಕಂಪಟ್ಟಿ ಗ್ರಾಮದ ಉಪಜೈಲಿನಲ್ಲಿ ಈ ಘಟನೆ ನಡೆದಿದ್ದು, ಪರಾರಿಯಾದ ಕೈದಿಗಳ ಪತ್ತೆಗಾಗಿ ತಮಿಳುನಾಡು ಪೊಲೀಸರು ರಾಜ್ಯಾದ್ಯಂತ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಈಗಾಗಲೇ ನಾಲ್ವರು … Continued

60 ಸಾವಿರ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಪ್ಯಾಕೇಜ್‌ ಘೋಷಿಸಿದ ಮೈಕ್ರೋಸಾಫ್ಟ್‌

ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಹೂಡಿಕೆ ಮುಂದುವರಿಸಿರುವ ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್‌, ವೆಚ್ಚ ಕಡಿತದ ಉದ್ದೇಶದಿಂದ ತನ್ನ ಸುಮಾರು 60 ಸಾವಿರ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನ ಯೋಜನೆಯನ್ನು ಘೋಷಿಸಿದೆ. ಸೋಮವಾರ ಈ ವಿಷಯವನ್ನು ಕಂಪನಿ ತಿಳಿಸಿದ್ದು, ತನ್ನ ಒಟ್ಟು ಉದ್ಯೋಗಿಗಳ ಪೈಕಿ ಸುಮಾರು ಕಾಲು ಭಾಗದಷ್ಟು ಮಂದಿ ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ … Continued