ಸೈಬರ್ ವಂಚನೆ ಪ್ರಕರಣ : ನಿರ್ಲಕ್ಷ್ಯ ಸಾಬೀತಾದಲ್ಲಿ ಬ್ಯಾಂಕ್‌ಗಳೇ ಪರಿಹಾರ ನೀಡಲಿ ಎಂದ ಸುಪ್ರೀಂ ಕೋರ್ಟ್‌

ನವದೆಹಲಿ: ಡಿಜಿಟಲ್ ಅರೆಸ್ಟ್‌ (ಡಿಜಿಟಲ್ ಬಂಧನ) ಸೇರಿದಂತೆ ಸೈಬರ್ ವಂಚನೆ ಪ್ರಕರಣಗಳಲ್ಲಿ ಬ್ಯಾಂಕ್‌ಗಳ ಪರಿಶೀಲನಾ ವೈಫಲ್ಯದಿಂದ ಗ್ರಾಹಕರು ಹಣ ಕಳೆದುಕೊಂಡಿದ್ದರೆ, ಸಂಬಂಧಪಟ್ಟ ಹಣಕಾಸು ಸಂಸ್ಥೆಗಳೇ ಸಂತ್ರಸ್ತರಿಗೆ ಪರಿಹಾರ ನೀಡುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ರೂಪಿಸುತ್ತಿರುವ ನಿಯಮಗಳಲ್ಲಿ ಕಡ್ಡಾಯಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಮಹತ್ವದ ಸೂಚನೆ ನೀಡಿದೆ. ವಂಚನೆಗೆ ಹಣಕಾಸು ಸಂಸ್ಥೆಯ ಸೂಕ್ತ ಪರಿಶೀಲನೆಯಲ್ಲಿನ … Continued

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್‌ ವಿಡಿಯೊದಲ್ಲಿರುವುದು ಕಟ್ಟುಕಥೆ ; ಸಿಸಿಬಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್​​ನಲ್ಲಿ ಬರುವ ಎಲ್ಲ ವಿಚಾರಗಳು ಕಟ್ಟುಕಥೆ ಎಂದು ಪ್ರಕರಣ ತನಿಖೆ ನಡೆಸಿದ ಸಿಸಿಬಿ ಗುರುವಾರ ಹೇಳಿದ್ದು, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಗುರುವಾರ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಬೆಂಗಳೂರು ನಗರ … Continued

ಕರ್ನಾಟಕದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ-1, ಪರೀಕ್ಷೆ 2ರ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು (KSEAB) ಮಾರ್ಚ್/ಏಪ್ರಿಲ್-2027ರಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ  ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1 ಹಾಗೂ ಪರೀಕ್ಷೆ-2ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪ್ರಕಟಣೆಯ ಪ್ರಕಾರ, ಎಸ್.ಎಸ್.ಎಲ್.ಸಿ ಪರೀಕ್ಷೆ-1 ಮಾರ್ಚ್ 22 ರಿಂದ ಆರಂಭವಾಗಿ ಏಪ್ರಿಲ್ 5ರವರೆಗೆ ನಡೆಯಲಿದೆ. ನಂತರದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಮೇ 24 ರಿಂದ ಆರಂಭಗೊಂಡು ಮೇ … Continued

2011ರ ಕೆಎಎಸ್‌ ನೇಮಕಾತಿ ಪ್ರಕರಣ: ಕರ್ನಾಟಕದ 2022ರ ಕಾಯ್ದೆಯನ್ನೇ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳ ಹಿನ್ನೆಲೆಯಲ್ಲಿ ಈ ಹಿಂದೆ ರದ್ದುಗೊಳಿಸಲಾಗಿದ್ದ ಕರ್ನಾಟಕದ 2011ನೇ ಬ್ಯಾಚ್‌ನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ  ನೇಮಕಾತಿಗಳಿಗೆ ಮಾನ್ಯತೆ ನೀಡಿದ್ದ ಕರ್ನಾಟಕ ನಾಗರಿಕ ಸೇವೆಗಳ (2011ನೇ ಬ್ಯಾಚ್‌ನ ಗೆಜೆಟೆಡ್ ಪ್ರೊಬೇಷನರಿಗಳ ಆಯ್ಕೆ ಮತ್ತು ನೇಮಕಾತಿ ಮಾನ್ಯಗೊಳಿಸುವಿಕೆ) ಕಾಯ್ದೆ, 2022 ಅನ್ನು ಸುಪ್ರೀಂ ಕೋರ್ಟ್ ಗುರುವಾರ ಅಸಂವಿಧಾನಿಕ ಎಂದು ಘೋಷಿಸಿ ರದ್ದುಗೊಳಿಸಿದೆ. ನ್ಯಾಯಾಲಯಗಳೇ … Continued

ಭಟ್ಕಳ : ಶಿರಾಲಿಯಲ್ಲಿ ನವಜಾತ ಶಿಶು ಸಾವು ; ವೈದ್ಯರ ಮೇಲೆ ಹಲ್ಲೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶುವೊಂದು ಮೃತಪಟ್ಟ ಘಟನೆ ಉದ್ವಿಗ್ನತೆಗೆ ಕಾರಣವಾಗಿದ್ದು, ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಪಾಲಕರು ಹಾಗೂ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವೈದ್ಯರು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಭಟ್ಕಳ ತಾಲೂಕಿನ … Continued

ಜನತೆಗೆ ದರ ಏರಿಕೆ ಶಾಕ್‌ : ನಂದಿನ ಹಾಲಿನ ದರ ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಳ ; ನ.1ರಿಂದಲೇ ಜಾರಿ

ಬೆಂಗಳೂರು: ಕೆಎಂಎಫ್‌ (KMF) ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪರಿಷ್ಕೃತ ದರ ನವೆಂಬರ್‌ 1ರಿಂದ ಜಾರಿಗೆ ಬರಲಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಿಸಲು ನಿರ್ಧರಿಸಲಾಗಿದೆ. ಹಾಲಿನ … Continued

ಕರ್ನಾಟಕದಲ್ಲಿ ಎಸ್‌ಐಆರ್‌ ಸಮರ್ಪಕವಾಗಿ ನಡೆದಿದೆ ಎಂದ ಸಚಿವ ಸತೀಶ ಜಾರಕಿಹೊಳಿ ; ಕಾಂಗ್ರೆಸ್‌ ನಿಲುವಿಗೆ ವ್ಯತಿರಿಕ್ತ ಹೇಳಿಕೆ

ಬೆಂಗಳೂರು: ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಕಾಂಗ್ರೆಸ್‌ ವಿರೋಧಿಸುತ್ತಿರುವ ಸಂದರ್ಭದಲ್ಲೇ, ಕರ್ನಾಟಕದಲ್ಲಿ ನಡೆದ ಎಸ್‌ಐಆರ್‌ ಪ್ರಕ್ರಿಯೆಯನ್ನು ಸಚಿವ ಸತೀಶ ಜಾರಕಿಹೊಳಿ ಸಮರ್ಥಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಸರಿಯಾಗಿ ನಡೆದಿದೆ.  ಕಾಂಗ್ರೆಸ್‌ ಪಕ್ಷ ನೀಡಿದ ತರಬೇತಿಯ ಪರಿಣಾಮವಾಗಿ ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ … Continued

ಕ್ಯಾನ್ಸರ್‌ ಔಷಧಗಳ ಬೆಲೆ ಇಳಿಕೆ : ಜೆನರಿಕ್‌ ಔಷಧಗಳು ಶೇ. 93ರಷ್ಟು ಅಗ್ಗ; 65 ದುಬಾರಿ ಔಷಧಗಳ ಬೆಲೆ ಯಥಾಸ್ಥಿತಿ

ನವದೆಹಲಿ: ಕೇಂದ್ರ ಸರ್ಕಾರವು ಕ್ಯಾನ್ಸರ್‌ ಔಷಧಗಳ ಬೆಲೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮದಿಂದ ಹಲವು ಜೆನರಿಕ್‌ (Generic) ಮತ್ತು ಬಯೋಸಿಮಿಲರ್‌ (Biosimilar) ಔಷಧಗಳ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ (ಎಂಆರ್‌ಪಿ) ಶೇ. 93ರಷ್ಟು ಕಡಿಮೆಯಾಗಿದೆ. ಔಷಧಗಳ ವಿತರಕರು, ಸಗಟು ಮಾರಾಟಗಾರರು ಸೇರಿದಂತೆ ಮಧ್ಯವರ್ತಿಗಳು ವಿಧಿಸಬಹುದಾದ ವ್ಯಾಪಾರ ಲಾಭದ ಮಿತಿಯನ್ನು ಶೇ. 30ಕ್ಕೆ ನಿಗದಿಪಡಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಔಷಧ … Continued

ಲ್ಯಾಪ್‌ಟಾಪ್‌ ಲಾಗ್‌ಔಟ್‌, ಐಡಿ ನಿಷ್ಕ್ರಿಯ : ಇನ್ನೊಡಾಟಾ ಕಂಪನಿಯಿಂದ ಭಾರತದಲ್ಲಿ 500ಕ್ಕೂ ಹೆಚ್ಚು ಉದ್ಯೋಗಿಗಳು ವಜಾ

ನವದೆಹಲಿ: ಅಮೆರಿಕ ಮೂಲದ ಕೃತಕ ಬುದ್ಧಿಮತ್ತೆ (AI) ಸೇವಾ ಕಂಪನಿ ಇನ್ನೊಡಾಟಾ (Innodata) ಭಾರತದಲ್ಲಿ 500ಕ್ಕೂ ಹೆಚ್ಚು ಉದ್ಯೋಗಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ವಜಾಗೊಳಿಸಿದೆ ಎಂದು ವರದಿಯಾಗಿದೆ. ಈ ಉದ್ಯೋಗ ಕಡಿತದ ಪರಿಣಾಮ ಫಿಲಿಪ್ಪೀನ್ಸ್‌ನಲ್ಲಿರುವ ಉದ್ಯೋಗಿಗಳ ಮೇಲೂ ಬೀರಿದೆ ಎಂದು ಹೇಳಲಾಗಿದೆ. ಅಕ್ಟೋಬರ್ 26ರಂದು ಈ ಬೆಳವಣಿಗೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಾದ ಎಕ್ಸ್‌ (X) … Continued

ಫ್ಲೈದುಬೈ ಕಾಕ್‌ಪಿಟ್‌ ದಾಳಿ : ಪೈಲಟ್‌ ಸ್ಮಿತ್ ಮಚ್ಚಾರ್‌ ಗಾಯದ ಚಿತ್ರಗಳು ಬಹಿರಂಗ ; ತಲೆ ಮೇಲಿನ ಹೊಲಿಗೆಗಳು ಗೋಚರ

ದುಬೈ : ವಿಮಾನ ಅಪಹರಣದ ಯತ್ನವನ್ನು ವಿಫಲಗೊಳಿಸಿ, ವಿಮಾನದಲ್ಲಿದ್ದ 170ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಭಾರತೀಯ ಪೈಲಟ್‌ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ (Smit Machchhar) ಮತ್ತು ಅವರ ಫ್ಲೈದುಬೈ (flydubai) ವಿಮಾನದ ಸಿಬ್ಬಂದಿಯನ್ನು ಸಂಯುಕ್ತ ಅರಬ್ ಎಮಿರೇಟ್ಸ್‌ (ಯುಎಇ) ಸರ್ಕಾರ ಗೌರವಿಸಿದೆ. ಈ ಸಮಾರಂಭದಲ್ಲಿ ಪೈಲಟ್‌ ಸ್ಮಿತ್ ಅವರ ತಲೆಯ … Continued