ದಾರಿತಪ್ಪಿ ಮಹಾರಾಷ್ಟ್ರ ತಲುಪಿದ್ದ ಹಾವೇರಿ ಜಿಲ್ಲೆಯ ವೃದ್ಧೆ ; ಗೂಗಲ್‌ ಸರ್ಚ್‌, ಚಾಟ್‌ಜಿಪಿಟಿ ನೆರವಿನಿಂದ ಮರಳಿ ಮನೆಗೆ

ಮುಂಬೈ: ದಾರಿ ತಪ್ಪಿ ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಗೆ ತಲುಪಿದ್ದ ಕರ್ನಾಟಕಹಾವೇರಿ ಜಿಲ್ಲೆಯ 70 ವರ್ಷದ ಮಹಿಳೆಯೊಬ್ಬರು, ಕೃತಕ ಬುದ್ಧಿಮತ್ತೆ (ಎಐ) ಮತ್ತು ಗೂಗಲ್‌ ಸರ್ಚ್‌ ನೆರವಿನಿಂದ 16 ದಿನಗಳ ಬಳಿಕ ತಮ್ಮ ಕುಟುಂಬವನ್ನು ಸೇರಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ರಜಾಕ್‌ ಬೀ ಎಂಬ ಮಹಿಳೆ ಮಾನಸಿಕ ಆರೋಗ್ಯ ಸಮಸ್ಯೆ ಹಾಗೂ ಸ್ಮರಣಶಕ್ತಿ ಕಳೆದುಕೊಂಡು ಬಳಲುತ್ತಿದ್ದರು. ಅಕ್ಟೋಬರ್‌ … Continued

ಎಲ್ಲ ಎಸ್‌ಐಆರ್‌ ನಿರ್ಧಾರ ಸರ್ವಾನುಮತದಿಂದಲೇ ತೆಗೆದುಕೊಂಡಿದ್ದು ; ಫಾರಂ 6ಕ್ಕೆ ತಿದ್ದುಪಡಿ ಮಾಡಿಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಚುನಾವಣಾ ಆಯೋಗ

ನವದೆಹಲಿ: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision — SIR)ಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನೂ ಚುನಾವಣಾ ಆಯೋಗವು (ECI) ಸರ್ವಾನುಮತದಿಂದ ಕೈಗೊಂಡಿದೆ ಎಂದು ಭಾರತದ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶಕುಮಾರ ಅವರ ಕಾರ್ಯವೈಖರಿ ಹಾಗೂ ಚುನಾವಣಾ ಆಯೋಗದ ಕೆಲವು ನಿರ್ಧಾರಗಳ ಕಾನೂನುಬದ್ಧತೆಯನ್ನು ಪ್ರಶ್ನಿಸಿ … Continued

ನ್ಯಾಯಾಧೀಶರ ಅಪ್ರಾಪ್ತ ಪುತ್ರ ಚಲಾಯಿಸುತ್ತಿದ್ದ ಕಾರು ಡಿಕ್ಕಿ : ಸ್ಕೂಟರ್‌ ಸವಾರ ಸಾವು

ಕೊಚ್ಚಿ: ಕೇರಳದ ನ್ಯಾಯಾಧೀಶರೊಬ್ಬರ 17 ವರ್ಷದ ಪುತ್ರ ಚಲಾಯಿಸುತ್ತಿದ್ದ ಮರ್ಸಿಡಿಸ್‌ ಬೆಂಜ್‌ ಕಾರು ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಕೊಚ್ಚಿಯಲ್ಲಿ ಸಂಭವಿಸಿದೆ  ಎಂದು ವರದಿಯಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಠಾಣೆಯಲ್ಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ತನಿಖೆಯ ಭಾಗವಾಗಿ ಬಾಲಕನನ್ನು ಮತ್ತೊಮ್ಮೆ ವಿಚಾರಣೆಗೆ … Continued

₹100 ಕೋಟಿ ಶಾಲಾ ಭ್ರಷ್ಟಾಚಾರ ಪ್ರಕರಣ: ತಮಿಳುನಾಡಿನ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ ಬಂಧನ

ಚೆನ್ನೈ: ಖಾಸಗಿ ಶಾಲೆಗಳಿಗೆ ಸರ್ಕಾರದ ಅನುಮತಿ ಹಾಗೂ ಮಾನ್ಯತೆ ನೀಡುವ ಪ್ರಕ್ರಿಯೆಯಲ್ಲಿ ಹಣಕಾಸಿನ ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಶಾಲಾ ಶಿಕ್ಷಣ ಸಚಿವ ಹಾಗೂ ಡಿಎಂಕೆ (DMK) ನಾಯಕ ಅನ್ಬಿಲ್ ಮಹೇಶ ಪೊಯ್ಯಮೊಳಿ ಅವರನ್ನು ಚೆನ್ನೈ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮದ್ರಾಸ್ ಹೈಕೋರ್ಟ್ ಅವರ ನಿರೀಕ್ಷಣಾ ಜಾಮೀನು … Continued

ಬೆಳಗಾವಿ| ಕಬ್ಬು ದರ ನಿಗದಿ ; ಸಿಎಂ ಸಭೆಗೂ ಮುನ್ನ ಕೈಕೈ ಮಿಲಾಯಿಸಿದ ಇಬ್ಬರು ರೈತ ನಾಯಕರ ಬೆಂಬಲಿಗರು

ಬೆಳಗಾವಿ: ಕಬ್ಬಿಗೆ ಬೆಲೆ ನಿಗದಿಪಡಿಸುವ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯ ಮೊದಲೇ ಇಬ್ಬರು ರೈತ ಮುಖಂಡರ ಬೆಂಬಲಿಗರ ನಡುವೆ ತೀವ್ರ ವಾಗ್ವಾದ ನಡೆದು, ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ ಘಟನೆ ನಡೆದಿದೆ. ಸಭಾಂಗಣದೊಳಗೆ ಪರಸ್ಪರ ತಳ್ಳಾಟ, ನೂಕಾಟ ಹಾಗೂ ಕೂಗಾಟದಿಂದ ಕೆಲಕಾಲ ಗದ್ದಲದ ವಾತಾವರಣ … Continued

ಬಟ್ಟೆಯಲ್ಲೇ ಟಚ್‌ಸ್ಕ್ರೀನ್‌ : ಬೆರಳಿನಿಂದ ಅಂಗಿಯ ತೋಳು ಮುಟ್ಟಿದ್ರೆ ಸಾಕು, ಅದು ಮೊಬೈಲ್‌ನಂತೆ ಕೆಲಸ ಮಾಡುತ್ತದೆ…!

ಸಿಂಗಾಪುರ: ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದ (ಎನ್‌ಯುಎಸ್‌) ವಿಜ್ಞಾನಿಗಳು ಬಟ್ಟೆಯಲ್ಲೇ ಅಳವಡಿಸಬಹುದಾದ ಟಚ್‌ಸ್ಕ್ರೀನ್‌ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ವಿಶೇಷ ಎಲೆಕ್ಟ್ರಾನಿಕ್‌ ನಾರುಗಳಿಂದ ತಯಾರಿಸಿದ ಈ ಪರದೆಯನ್ನು ಬಟ್ಟೆಯೊಂದಿಗೆ ನೇಯಬಹುದು. ಇದು ಚಿತ್ರ, ವಿಡಿಯೊಗಳನ್ನು ತೋರಿಸುವುದಲ್ಲದೆ, ಬೆರಳಿನಿಂದ ಮುಟ್ಟಿದಾಗ ಪ್ರತಿಕ್ರಿಯಿಸುತ್ತದೆ ಮತ್ತು ವೈರ್‌ಲೆಸ್‌ ಮೂಲಕ ಇತರ ಸಾಧನಗಳಿಗೂ ಸಂಪರ್ಕ ಕಲ್ಪಿಸುತ್ತದೆ. ವಿಶೇಷವೆಂದರೆ, ಈ ಬಟ್ಟೆಯನ್ನು ಯಂತ್ರದಲ್ಲಿ 50 ಬಾರಿ ತೊಳೆದರೂ … Continued

ಜೋಗಿ, ಕಬ್ಬಿನಾಲೆ, ಶಿವಾನಂದ ಹೆಗಡೆಗೆ ಕೆರೆಮನೆ ʼಮಹಾಬಲ ಪ್ರಶಸ್ತಿʼ ಪ್ರಕಟ

ಕುಮಟಾ: ಸಾಹಿತ್ಯ ಹಾಗೂ ಮಾಧ್ಯಮ, ಕನ್ನಡದ ಛಂದಸ್ಸು, ಹಾಗೂ ಯಕ್ಷಗಾನ–ರಂಗಭೂಮಿ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಕನ್ನಡದ ಮೂವರು ಸಾಧಕರಿಗೆ ‘ಶ್ರೀ ಮಹಾಬಲ ಶೋಧ ಸಂಸ್ಥಾನಂ’ ವತಿಯಿಂದ ಯಕ್ಷಗಾನದ ಯುಗದ ಕಲಾವಿದ ರೆಂದು ಖ್ಯಾತರಾದ ಡಾ. ಮಹಾಬಲ ಹೆಗಡೆ ಯವರ ಸ್ಮರಣೆಯಲ್ಲಿ ನೀಡಲಾಗುವ ಮೂರು ವಿಶೇಷ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಹಿರಿಯ ಪತ್ರಕರ್ತ, ಪ್ರಸಿದ್ಧ ಲೇಖಕ ಹಾಗೂ … Continued

ಕೊಲೆ ಪ್ರಕರಣದಿಂದ ಪಾರಾಗಲು ಎಐ ಬಳಸಿ ತನ್ನದೇ ಸಾವಿನ ನಾಟಕ ; ಮೇಕೆ ಅಂತ್ಯಕ್ರಿಯೆ, ನಕಲಿ ಡೆತ್‌ ಸರ್ಟಿಫಿಕೆಟ್‌ ಸಲ್ಲಿಕೆ ; ಆದ್ರೂ ಸಿಕ್ಕಿಬಿದ್ದ !

ಮೌ : ಕೊಲೆ ಪ್ರಕರಣದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ತನ್ನದೇ ಸಾವಿನ ನಾಟಕವಾಡಿದ್ದಾನೆ. ಶವಸಂಸ್ಕಾರದ ಚಿತೆಯ ಮೇಲೆ ಮಲಗಿರುವ ಮೃತದೇಹದಂತೆ ಕಾಣುವ ಚಿತ್ರವನ್ನು ಎಐ ಮೂಲಕ ಸೃಷ್ಟಿಸಿ, ನಿಜವಾದ ಶವದ ಬದಲಿಗೆ ಮೇಕೆಯನ್ನು ಸುಟ್ಟು, ಮರಣ ಪ್ರಮಾಣಪತ್ರವನ್ನೂ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಿದ್ದಾನೆ. ಆದರೆ, ಸತ್ತಿದ್ದಾನೆಂದು ನಂಬಿಸಿ ಕಾನೂನಿನ ಕಣ್ಣಿಗೆ … Continued

ಹೆಂಡತಿಯನ್ನು ತಬ್ಬಿಕೊಂಡ ಗಂಡ; ಆದ್ರೆ ಆಕೆಯ 5 ಪಕ್ಕೆಲುಬೇ ಮುರಿದು ಹೋಯ್ತು !

ಚೀನಾದಲ್ಲಿ ಗಂಡನೊಬ್ಬ ತನ್ನ ಪತ್ನಿಯನ್ನು ಪ್ರೀತಿಯಿಂದ ತಬ್ಬಿಕೊಂಡಿದ್ದೇ ಆಕೆಯ ಐದು ಪಕ್ಕೆಲುಬುಗಳು ಮುರಿಯಲು ಕಾರಣವಾಗಿದೆ. ಆರನೇ ಪಕ್ಕೆಲುಬಿನಲ್ಲೂ ಸಣ್ಣ ಬಿರುಕು ಕಾಣಿಸಿಕೊಂಡಿದೆ. ತೀವ್ರ ಮೂಳೆ ಸವೆತದ ಕಾಯಿಲೆ (osteoporosis) ಮೂಳೆಗಳು ದುರ್ಬಲಗೊಂಡಿದ್ದರಿಂದ ಸಾಮಾನ್ಯ ಅಪ್ಪುಗೆಯ ಒತ್ತಡವನ್ನೂ ತಡೆದುಕೊಳ್ಳಲಾಗದೆ ಈ ಘಟನೆ ಸಂಭವಿಸಿದೆ ಎಂದು ಸಿಂಗಾಪುರ ಮೂಲದ ಮಾಧ್ಯಮ ಸಂಸ್ಥೆ ಮದರ್‌ಶಿಪ್ ವರದಿ ಮಾಡಿದೆ. ವರದಿಯ ಪ್ರಕಾರ, … Continued

23 ದೇಶ ಸುತ್ತಿ 20 ಸಾವಿರಕ್ಕೂ ಹೆಚ್ಚು ಕಿಮೀ ಹಾರಾಟ ನಡೆಸಿ ಸಮುದ್ರ ದಾಟಿ ಮಣಿಪುರಕ್ಕೆ ಮರಳಿ ಬಂದ ಅಮೂರ್ ಫಾಲ್ಕನ್‌ ಪಕ್ಷಿಗಳು !

ತಮೆಂಗ್ಲಾಂಗ್‌: ಏಷ್ಯಾ ಮತ್ತು ಆಫ್ರಿಕಾದ 23 ದೇಶಗಳನ್ನು ಸುತ್ತಿ ವಾರ್ಷಿಕ ವಲಸೆ ಚಕ್ರವನ್ನು ಪೂರ್ಣಗೊಳಿಸಿರುವ ಜಿಯೋ-ಟ್ಯಾಗ್ ಅಳವಡಿಸಲಾದ ಎರಡು ಅಮೂರ್ ಫಾಲ್ಕನ್‌ಗಳು ಗುರುವಾರ ಮಣಿಪುರದ ತಮೆಂಗ್ಲಾಂಗ್‌ಗೆ ಮರಳಿವೆ. ಅಲಾಂಗ್‌ (Alang) ಮತ್ತು ಅಪಾಪಾಂಗ್‌ (Apapang) ಎಂದು ಹೆಸರಿಸಲಾದ ಈ ಎರಡು ವಲಸೆ ಹಕ್ಕಿಗಳ ಯಶಸ್ವಿ ವಾಪಸಾತಿ, ಅಮೂರ್ ಫಾಲ್ಕನ್‌ಗಳ ಸಂರಕ್ಷಣಾ ಕಾರ್ಯದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಈ … Continued