ಮಕ್ಕಳಾಗದ್ದಕ್ಕೆ ದಂಪತಿ ನಡುವೆ ಜಗಳ: ಗಂಡನನ್ನು ಚಾಕುವಿನಿಂದ ಚುಚ್ಚಿ ಕೊಂದ ಪತ್ನಿ

ಬೆಂಗಳೂರು: ಮಕ್ಕಳಾಗದ ವಿಚಾರವಾಗಿ ದಂಪತಿ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯೇ ಪತಿಗೆ ಅಡುಗೆ ಮನೆಯ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಬುಧವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತ ವ್ಯಕ್ತಿಯನ್ನು 44 ವರ್ಷದ ರಾಜಶೇಖರ ಎಂದು ಗುರುತಿಸಲಾಗಿದೆ. ಇವರು ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ 35 ವರ್ಷದ ಮಾಲಾಶ್ರೀ ಗೃಹಿಣಿಯಾಗಿದ್ದು, … Continued

ಉತ್ತರ ಪ್ರದೇಶ | ಚುನಾವಣೆಗೂ ಮುನ್ನ ಕೈಜೋಡಿಸಿದ ಓವೈಸಿ–ಆಜಾದ್ ; ಎಐಎಂಐಎಂ–ಆಜಾದ್ ಸಮಾಜ ಪಾರ್ಟಿ ಮಧ್ಯೆ ಮೈತ್ರಿ ಘೋಷಣೆ

ಲಕ್ನೋ : ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸನಿಹದಲ್ಲಿದ್ದಾಗಲೇ ಹೊಸ ರಾಜಕೀಯ ಮೈತ್ರಿಕೂಟವೊಂದು ಅಸ್ತಿತ್ವಕ್ಕೆ ಬಂದಿದೆ. ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಆಜಾದ್ ಸಮಾಜ ಪಾರ್ಟಿ (ಕಾನ್ಶಿರಾಮ್) ನಾಯಕ ಚಂದ್ರಶೇಖರ ಆಜಾದ್ ಅವರು ಗುರುವಾರ (ನವೆಂಬರ್ 12) 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೈಜೋಡಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಒಗ್ಗಟ್ಟಾಗಿ ಸ್ಪರ್ಧಿಸುವ … Continued

ನ.13ರಂದು ಬೆಂಗಳೂರು–ಗೋವಾ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ; ಯಾವೆಲ್ಲ ನಿಲ್ದಾಣಗಳಲ್ಲಿ ನಿಲುಗಡೆ ?

ಬೆಂಗಳೂರು: ಮಲೆನಾಡು ಹಾಗೂ ಕರಾವಳಿ ಭಾಗದ ರೈಲು ಸಂಪರ್ಕ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು (SWR) ಬೆಂಗಳೂರು ಮತ್ತು ಗೋವಾ ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 13 ಮತ್ತು 14ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ … Continued

ಕಾಶ್ಮೀರ : ಗುಂಡೇಟಿನ ಗಾಯಗಳಿರುವ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ ಮೃತದೇಹ ಪತ್ತೆ

ಶ್ರೀನಗರ : ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ದೂರದ ದುರ್ಗಮ ಪ್ರದೇಶವಾದ ದಚ್ಛನ್‌–ಮರ್ವಾಹ್‌ನಲ್ಲಿ ಗಸ್ತು ಕರ್ತವ್ಯಕ್ಕೆ ತೆರಳಿದ್ದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ (ಎಸ್‌ಪಿಒ) ಮೃತದೇಹಗಳು ಪತ್ತೆಯಾಗಿದ್ದು, ದೇಹಗಳು ಗುಂಡುಗಳಿಂದ ಜರ್ಝರಿತವಾಗಿವೆ. ಇಬ್ಬರೂ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಧೇರ್ನಾ ಪೋಸ್ಟ್‌ನ ಶೋಧ ತಂಡಕ್ಕೆ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು 40 ವರ್ಷದ … Continued

ಮೈ ಜುಂ ಎನ್ನುವ ವಿಡಿಯೋ | ಎರಡು ಬಾರಿ ಬೈಕ್‌ ಸವಾರನ ಮೇಲೆ ಕಾಲಿಟ್ಟ ಕಾಡಾನೆ ; ಆದ್ರೂ ಪವಾಡಸದೃಶ ರೀತಿಯಲ್ಲಿ ಪಾರು

ಡೆಹ್ರಾಡೂನ್ : ಹರಿದ್ವಾರ–ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆಯೊಂದು ಬೈಕ್ ಸವಾರನ ಮೇಲೆ ಎರಡು ಬಾರಿ ಕಾಲಿಟ್ಟರೂ ಆತ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಆನೆಯ ಕಾಲಿನಡಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡಿದ ಬೈಕ್ ಸವಾರ, ಆನೆ ಅಲ್ಲಿಂದ ತೆರಳುತ್ತಿದ್ದಂತೆಯೇ ಎದ್ದು ನಿಂತಿರುವ ದೃಶ್ಯ ಸೆರೆಯಾಗಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಗುರುವಾರ … Continued