ಬೆಳಗಾವಿ ವಿವಸ್ತ್ರ ಪ್ರಕರಣ : ಸಂತ್ರಸ್ತೆ ಭೇಟಿಗೆ ನಿರ್ಬಂಧ ವಿಧಿಸಿದ ಹೈಕೋರ್ಟ್‌

ಬೆಂಗಳೂರು : ಬೆಳಗಾವಿಯ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣದ ಸಂತ್ರಸ್ತೆಯು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದರಿಂದ ಯಾವುದೇ ವ್ಯಕ್ತಿ, ಗುಂಪು, ಸಮೂಹ ಅಥವಾ ರಾಜಕೀಯ ಪಕ್ಷಗಳು ಆಕೆಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯವರ ಲಿಖಿತ ಅನುಮತಿ ಪಡೆಯದೇ ಭೇಟಿಯಾಗುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಶನಿವಾರ ಆದೇಶ ಮಾಡಿದೆ. ಸಂತ್ರಸ್ತ ಮಹಿಳೆಯ ಪುತ್ರ ಅದೇ ಗ್ರಾಮದ ಯುವತಿಯನ್ನು … Continued

ತನ್ನ ಗರ್ಲ್‌ ಫ್ರೆಂಡ್ ಮೇಲೆಯೇ ಕಾರು ಹರಿಸಿ ಕೈ-ಕಾಲು ಮುರಿದ ಐಎಎಸ್‌ ಅಧಿಕಾರಿಯ ಪುತ್ರ : ದೂರು ದಾಖಲು

ಮುಂಬೈ : ತನ್ನ ಗೆಳತಿಯ ಮೇಲೆಯೇ ಆಕೆಯ ಬಾಯ್‌ಫ್ರೆಂಡ್‌ ಕಾರು ಹರಿಸಿ ಕೈ- ಕಾಲು ಮುರಿದಿರುವ ಅಮಾನುಷ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಪ್ರಿಯಾ ಸಿಂಗ್ ಎಂಬವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಿಯಾ ಸಿಂಗ್ ಅವರ ಮೇಲೆ ಕಾರು ಹರಿಸಿದ ವ್ಯಕ್ತಿಯನ್ನು ಅಶ್ವಜಿತ್ ಗಾಯಕವಾಡ್‌ ಎಂದು ಗುರುತಿಸಲಾಗಿದೆ. ಮುಂಬೈ ಥಾಣೆಯ ಕಾಸರವಾಡದ ಪೊಲೀಸ್ … Continued

ಮಹಿಳೆ ವಿವಸ್ತ್ರ ಪ್ರಕರಣ : ಸರ್ಕಾರವೇ ಬೆಳಗಾವಿಯಲ್ಲಿದ್ರೂ ಸಿಎಂ, ಡಿಜಿಪಿ ಸಂತ್ರಸ್ತೆಯನ್ನು ಯಾಕೆ ಭೇಟಿಯಾಗಿಲ್ಲ-ಬಿಜೆಪಿ ಸತ್ಯಶೋಧನಾ ಸಮಿತಿ ಆಕ್ಷೇಪ

ಬೆಳಗಾವಿ: ಸಂಪೂರ್ಣ ಆಡಳಿತವೇ ಬೆಳಗಾವಿಯಲ್ಲಿದ್ದರೂ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ಘಟನೆ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ, ಡಿಜಿಪಿ, ಮುಖ್ಯ ಕಾರ್ಯದರ್ಶಿಗಳು ಯಾಕೆ ಭೇಟಿ ನೀಡಿಲ್ಲ? ಸಂತ್ರಸ್ತೆಯನ್ನು ಯಾಕೆ ಭೇಟಿಯಾಗಿಲ್ಲ ಎಂದು ಬಿಜೆಪಿ ಸತ್ಯಶೋಧನಾ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸಂಸದರಾದ ಅಪರಾಜಿತಾ ಸಾರಂಗಿ, ಸುನಿತಾ ದುಗ್ಗಲ್, ರಂಜಿತಾ ಕೋಲಿ, ಲಾಕೆಟ್ ಚಟರ್ಜಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ … Continued

ಕೇರಳದಲ್ಲಿ ಕೋವಿಡ್ ಉಪ ತಳಿ JN.1 ಪತ್ತೆ ; ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳ

ನವದೆಹಲಿ: ಕೇರಳವು ಕೋವಿಡ್‌-19 ಉಪ-ತಳಿ JN.1 ಸೋಂಕಿನ ಪ್ರಕರಣವನ್ನು ಪತ್ತೆ ಮಾಡಿದೆ ಎಂದು ಅಧಿಕೃತ ಮೂಲಗಳು ಶನಿವಾರ ದೃಢಪಡಿಸಿವೆ. ನವೆಂಬರ್ 18 ರಂದು ಆರ್‌ಟಿ-ಪಿಸಿಆರ್‌ (RT-PCR) ಪರೀಕ್ಷೆಯಲ್ಲಿ 79 ವರ್ಷದ ಮಹಿಳೆಯ ಮಾದರಿಯಲ್ಲಿ ಇದು ಪತ್ತೆಯಾಗಿದೆ ಎಂದು ಅದು ತಿಳಿಸಿದೆ. ಶೀತ-ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ) ಹೊಂದಿದ್ದ ರೋಗಿಯು ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು … Continued

ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣ: 6ನೇ ಆರೋಪಿ ಬಂಧನ

ನವದೆಹಲಿ: ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಇಂದು, ಶನಿವಾರ (ಡಿಸೆಂಬರ್‌ ೧೬) ಆರನೇ ವ್ಯಕ್ತಿಯನ್ನು ಬಂಧಿಸಿದ್ದಾರೆ. ‘ಮಾಸ್ಟರ್ ಮೈಂಡ್’ ಲಲಿತ್ ಝಾ ದೆಹಲಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಮಹೇಶ ಕುಮಾವತ ಎಂಬಾತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. 2001 ರ ದಾಳಿಯ 22ನೇ ಕರಾಳ ವಾರ್ಷಿಕ ದಿನದಂದು ಡಿಸೆಂಬರ್ 13 ರ ಘಟನೆಯನ್ನು … Continued

ಸಚಿವ ಜಾರ್ಜ್ ವಿರುದ್ಧ ಅವಹೇಳನಕಾರಿ ಪೋಸ್ಟ್: ತೆಲಂಗಾಣದ ಬಿಆರ್‌ ಎಸ್ ಮುಖಂಡನ ಬಂಧನ

ಬೆಂಗಳೂರು : ಇಂಧನ ಸಚಿವ ಕೆ.ಜೆ ಜಾರ್ಜ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪಿದ ಮೇರೆಗೆ ಸೈಬರ್ ಕ್ರೈಂ ಪೊಲೀಸರು ತೆಲಂಗಾಣದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ತೆಲಂಗಾಣದ ಕರೀಂನಗರದ ನಿವಾಸಿ ರವಿಕಾಂತ ಶರ್ಮಾ (33) ಬಂಧಿತ ಆರೋಪಿಯಾಗಿದ್ದಾನೆ. ಈತ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ನೇತೃತ್ವದ ಭಾರತ ರಾಷ್ಟ್ರ ಸಮಿತಿ … Continued

ಭಾರತ vs ದಕ್ಷಿಣ ಆಫ್ರಿಕಾ : ಟೆಸ್ಟ್ ಸರಣಿಯಿಂದ ಹೊರಬಿದ್ದ ಮೊಹಮ್ಮದ್ ಶಮಿ, ಏಕದಿನ ಸರಣಿಯಿಂದ ಹಿಂದೆ ಸರಿದ ದೀಪಕ ಚಹಾರ್

ನವದೆಹಲಿ: ಭಾರತದ ಇಬ್ಬರು ಅನುಭವಿ ವೇಗಿಗಳನ್ನು ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗಿಡಲಾಗಿದೆ. ಮೊಹಮ್ಮದ್ ಶಮಿ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದು, ದೀಪಕ್ ಚಹಾರ್ ಏಕದಿನ ಸರಣಿಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಡಿಸೆಂಬರ್ 16 ಶನಿವಾರದಂದು ಅಧಿಕೃತ ಪತ್ರಿಕಾ ಪ್ರಕಟಣೆಯ ಮೂಲಕ ಈ ಬೆಳವಣಿಗೆ ಬಗ್ಗೆ ಪ್ರಕಟಿಸಿದೆ. 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ … Continued

ಇಸ್ರೇಲ್-ಹಮಾಸ್ ಯುದ್ಧ : ತಪ್ಪಾಗಿ ತಿಳಿದು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಕೊಂದ ಇಸ್ರೇಲಿ ಪಡೆಗಳು

ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಉತ್ತರ ಗಾಜಾದ ಶೆಜೈಯಾ ಪ್ರದೇಶದಲ್ಲಿ ನಡೆದ ಹೋರಾಟದ ಸಮಯದಲ್ಲಿ ತಮಗೆ ಬೆದರಿಕೆ ಎಂದು ತಪ್ಪಾಗಿ ಗುರುತಿಸಿ ಮೂವರು ಇಸ್ರೇಲಿ ಒತ್ತೆಯಾಳುಗಳ ಮೇಲೆ ಗುಂಡು ಹಾರಿಸಿದರು ಎಂದು ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ಶುಕ್ರವಾರ ಹೇಳಿದ್ದಾರೆ. “ಸೈನಿಕರು ಆತ್ಮಹತ್ಯಾ ಬಾಂಬರ್‌ಗಳು ಸೇರಿದಂತೆ ಅನೇಕ ಭಯೋತ್ಪಾದಕರನ್ನು ಎದುರಿಸಿದ ಪ್ರದೇಶದಲ್ಲಿ ಈ ಘಟನೆ ನಡೆದಿದೆ … Continued

ಬೆಳಗಾವಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣ: ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್

ಬೆಳಗಾವಿ: ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ ಸಿ) ಶುಕ್ರವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ. ಈ ಘಟನೆ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ ಸಿ), ತನಿಖೆಯ ಪ್ರಗತಿ, ಬಂಧನ, ಪರಿಹಾರ ನೀಡಿದ … Continued

“ಅದು ನನ್ನ ಹಣವಲ್ಲ, ಆದರೆ…”: ತೆರಿಗೆ ಇಲಾಖೆ ವಶಪಡಿಸಿಕೊಂಡ ₹ 350 ಕೋಟಿ ಹಣದಬಗ್ಗೆ ಕಾಂಗ್ರೆಸ್ ಸಂಸದರ ಮೊದಲ ಪ್ರತಿಕ್ರಿಯೆ

ನವದೆಹಲಿ : ತನಗೆ ಸಂಬಂಧಿಸಿದ ನಿವೇಶನಗಳಿಂದ ₹ 350 ಕೋಟಿ ವಶಪಡಿಸಿಕೊಂಡ ದಾಖಲೆಯ ಬಗ್ಗೆ 10 ದಿನಗಳ ನಂತರ ಮೌನ ಕಾಂಗ್ರೆಸ್ ಸಂಸದ ಧೀರಜ್ ಸಾಹು ಮೌನ ಮುರಿದಿದ್ದಾರೆ. ತಮ್ಮ ಕುಟುಂಬ ದಾಳಿಗೊಳಗಾದ ಕಂಪನಿಗಳ ವ್ಯವಹಾರವನ್ನು ನಿರ್ವಹಿಸುತ್ತದೆ ಮತ್ತು ವಸೂಲಿ ಮಾಡಿದ ಹಣವು ನೇರವಾಗಿ ತಮ್ಮದಲ್ಲ, ಆದರೆ ದಾಳಿಗೊಳಗಾದ ಕಂಪನಿಗಳಿಗೆ ಸೇರಿದೆ. ಈ ಹಣವು ಕಾಂಗ್ರೆಸ್ … Continued