ಭಾರತದ ವಾಯುನೆಲೆ ಹೊಡೆದಿದ್ದೇವೆ ಎಂದ ಪಾಕಿಸ್ತಾನದ ಹಸಿ ಸುಳ್ಳು ಬಯಲಿಗೆ …! ಅದು ನಕಲಿ ಉಪಗ್ರಹ ಚಿತ್ರ, ಕಟ್ಟು ಕಥೆ ಎಂದ ಡೇಮಿಯನ್ ಸೈಮನ್

ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಡಿ ಪಾಕಿಸ್ತಾನ ವಾಯು ನೆಲೆಗಳ ಮೇಲೆ ಭಾರತದ ನಿಖರವಾದ ದಾಳಿ ನಡೆಸಿದ ನಂತರ ಪಾಕಿಸ್ತಾನ ನಕಲಿ ಉಪಗ್ರಹ ಚಿತ್ರಗಳು, ಫೋಟೋಗಳನ್ನು ಹಂಚಿಕೊಂಡು ಭಾರತದ ಮೇಲೆ ದಾಳಿ ನಡೆಸಿದ್ದೇವೆ ಎಂದು ತಪ್ಪು ಮಾಹಿತಿ ನೀಡುತ್ತಿರುವುದು ಈಗ ಬಯಲಾಗಿದೆ. ಪಂಜಾಬ್‌ನ … Continued

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ; ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ಘೋಷಣೆ ; ಬದಲಾಗಲಿದೆಯೇ ಬಿಹಾರ ರಾಜಕೀಯ ಚಿತ್ರಣ..?

ನವದೆಹಲಿ: ಲೋಕ ಜನಶಕ್ತಿ ಪಕ್ಷದ (ರಾಮ ವಿಲಾಸ್) ಮುಖ್ಯಸ್ಥ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಭಾನುವಾರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ “ಜನರು ತಮಗಾಗಿ ನಿರ್ಧರಿಸುವ” ಸ್ಥಾನದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದು ಅವರು ರಾಜ್ಯ ರಾಜಕೀಯಕ್ಕೆ ಮರಳುವ ಬಗ್ಗೆ ವಾರಗಳ ಊಹಾಪೋಹಗಳಿಗೆ ಕೊನೆ ಹಾಡಿದೆ. “ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆಯೇ ಎಂದು ಎಲ್ಲರೂ ತಿಳಿದುಕೊಳ್ಳಲು ಬಯಸುತ್ತಾರೆ. … Continued

5 ರೂಪಾಯಿ ಬೆಲೆಯ ಪಾರ್ಲೆ-ಜಿ ಬಿಸ್ಕತ್ತಿನ ಬೆಲೆ ಗಾಜಾದಲ್ಲಿ ಬರೋಬ್ಬರಿ 2,342 ರೂ.ಗಳು…!

ನವದೆಹಲಿ: ಭಾರತೀಯ ಮನೆಗಳಲ್ಲಿ ಪ್ರಧಾನವಾಗಿ ಇರುವ ಪಾರ್ಲೆ-ಜಿ ಬಿಸ್ಕತ್ತುಗಳು, ಬಾಲ್ಯ, ಚಹಾ ಮತ್ತು ಕಡಿಮೆ ಬೆಲೆಯ ಪೌಷ್ಟಿಕಾಂಶದೊಂದಿಗೆ ಸಂಬಂಧ ಹೊಂದಿವೆ.ಭಾರತದಲ್ಲಿ ಪಾರ್ಲೆ-ಜಿ ಬಿಸ್ಕತ್ತು ಮಧ್ಯಮ ವರ್ಗದ ದಿನ ನಿತ್ಯದ ಆಹಾರವಾಗಿದೆ. ಎಲ್ಲಾ ಭಾರತೀಯ ಕುಟುಂಬಗಳಿಗೆ ಇದು ಚಿರಪರಿಚಿತ. ಇವುಗಳನ್ನು ಎಂದಿಗೂ ಐಷಾರಾಮಿ ಎಂದು ಯಾರೂ ಭಾವಿಸಿಲ್ಲ. ಆದರೆ ಯುದ್ಧಪೀಡಿತ ಗಾಜಾದಲ್ಲಿ, ಆಹಾರದ ಕೊರತೆಯು ತೀವ್ರ ಕ್ಷಾಮವಾಗಿ … Continued

ಮಂಗಳೂರು | ಸುಹಾಸ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಎನ್‌ಐಎ ಹೆಗಲಿಗೆ

ಮಂಗಳೂರು: ರೌಡಿಶೀಟರ್ ಹಾಗೂ ಹಿಂದೂಪರ ಕಾರ್ಯಕರ್ತ ಸುಹಾಸ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಇಲಾಖೆಯು ರಾಷ್ಟ್ರೀಯ ತನಿಖಾ ದಳಕ್ಕೆ ( NIA ) ವಹಿಸಿದೆ. ಸುಹಾಸ ಶೆಟ್ಟಿಯನ್ನು ದುಷ್ಕರ್ಮಿಗಳು ಬಜಪೆಯ ಕಿನ್ನಿಪದವು ಎಂಬಲ್ಲಿ ಮೇ 1ರಂದು ತಲವಾರಿನಿಂದ ಕೊಚ್ಚಿ ಹತ್ಯೆ ಮಾಡಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಪೊಲೀಸ್‌ ಸಿಸಿಬಿ ಘಟಕ … Continued

ಬೆಂಗಳೂರು ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ ನೀಡಿರುವ ಪರಿಹಾರದ ಮೊತ್ತ ಹೆಚ್ಚಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡಿದ್ದ ಪರಿಹಾರ ಮೊತ್ತವನ್ನು 10 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ರಾಜ್ಯ ಸರ್ಕಾರ ಶನಿವಾರ ಪ್ರಕಟಿಸಿದೆ. ಜೂನ್ 4 ರಂದು ಐಪಿಎಲ್ 2025 ವಿಜೇತರಾದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತಂಡಕ್ಕೆ ಸನ್ಮಾನ ಸಮಾರಂಭದ ವೇಳೆ ಬೆಂಗಳೂರಿನ ಎಂ. … Continued

ವಿಮಾನ ಹಾರಿಸಲು ನಿರಾಕರಿಸಿದ ಪೈಲಟ್…45 ನಿಮಿಷ ಕಾಯ್ದ ಮಹಾರಾಷ್ಟ್ರ ಡಿಸಿಎಂ ; ನಂತರ ಸಂಭವಿಸಿತು ಜೀವ ಉಳಿಸುವ ಟ್ವಿಸ್ಟ್‌…!

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ನಿಗದಿತ ಸಮಯಕ್ಕಿಂತ ತಡವಾಗಿ ತಲುಪಿದ ನಂತರ ಜಲಗಾಂವ್ ವಿಮಾನ ನಿಲ್ದಾಣದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು. ಅವರು ಶುಕ್ರವಾರ ರಾತ್ರಿ 9:15 ಕ್ಕೆ ವಿಮಾನ ನಿಲ್ದಾಣ ತಲುಪಿದರು, ಆದರೆ ಪೈಲಟ್ ವಿಮಾನ ಟೇಕ್ ಆಫ್ ಮಾಡಲು ನಿರಾಕರಿಸಿದರು. ಶಿಂಧೆ ಅವರ ವಿಳಂಬ ಉಲ್ಲೇಖಿಸಿ, ಇದು ತಮ್ಮ … Continued

ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು

ಶಿಮ್ಲಾ: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಅಧಿಕ ರಕ್ತದೊತ್ತಡದ (high blood) ಹೆಚ್ಚಾದ ನಂತರ ಶನಿವಾರ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ತಮ್ಮ ಪುತ್ರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಶಿಮ್ಲಾಕ್ಕೆ ವೈಯಕ್ತಿಕ ಪ್ರವಾಸದಲ್ಲಿದ್ದ ಸೋನಿಯಾ ಗಾಂಧಿ (78) ಅವರನ್ನು ಆಸ್ಪತ್ರೆಯಲ್ಲಿ ಕೆಲವು ಪರೀಕ್ಷೆಗಳಿಗೆ … Continued

ವೀಡಿಯೊ..| ಪರಸ್ಪರ ಒಂದನ್ನೊಂದು ದಾಟುವ ‘ವಂದೇ ಭಾರತ’ ರೈಲುಗಳ ವೀಡಿಯೊ ಭಾರಿ ವೈರಲ್‌ : ಕೌತುಕದ ಈ ವೀಡಿಯೊ ‘ವಿಜ್ಞಾನವೇ? ಗೇಮಿಂಗ್ ಸೈಟೆ…?

ರೈಲ್ವೆ ಜಂಕ್ಷನ್‌ನಲ್ಲಿ ಮೂರು ಹೈಸ್ಪೀಡ್ ರೈಲುಗಳು ಸರಾಗವಾಗಿ ಪರಸ್ಪರ ದಾಟುತ್ತಿರುವುದನ್ನು ತೋರಿಸುವ ಅದ್ಭುತ ಅನಿಮೇಟೆಡ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಆಕರ್ಷಣೆ ಮತ್ತು ಚರ್ಚೆಗೆ ಕಾರಣವಾಗಿದೆ. ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ವೀಡಿಯೊ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಪ್ರಶಂಸಿಸುತ್ತಾ ಭಾರತದ ಮುಂದುವರಿದ ರೈಲ್ವೆ ಮೂಲಸೌಕರ್ಯವನ್ನು ಪ್ರದರ್ಶಿಸುತ್ತದೆ ಎಂದು ಹೇಳುತ್ತದೆ. ಆದರೆ, ಇದು … Continued

ಭಾರತದಲ್ಲಿ ತೀವ್ರ ಬಡತನದ ಪ್ರಮಾಣ 27.1%ರಿಂದ 5.3%ಕ್ಕೆ ಇಳಿಕೆ ; ವಿಶ್ವಬ್ಯಾಂಕ್ ವರದಿ

ನವದೆಹಲಿ: ಭಾರತವು ಕಳೆದ ದಶಕದಲ್ಲಿ ತನ್ನ ತೀವ್ರ ಬಡತನದ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪ್ರಗತಿ ಸಾಧಿಸಿದೆ, ಇದು 2011-12ರಲ್ಲಿ ಶೇಕಡಾ 27.1ರಷ್ಟು ಇದ್ದಿದ್ದು, 2022-23ರಲ್ಲಿ ಶೇಕಡಾ 5.3 ಕ್ಕೆ ಇಳಿದಿದೆ ಎಂದು ವಿಶ್ವಬ್ಯಾಂಕ್‌ನ ಇತ್ತೀಚಿನ ದತ್ತಾಂಶವು ಬಹಿರಂಗಪಡಿಸಿದೆ. 2022-23ರ ಅವಧಿಯಲ್ಲಿ ಭಾರತದಲ್ಲಿ ಸುಮಾರು 7.52 ಕೋಟಿ ಜನರು ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ. ಇದು 2011-12ರಲ್ಲಿ … Continued

ಮಂಗಳೂರು | ಸೆಮಿನಾರ್ ತಪ್ಪಿಸಿಕೊಳ್ಳಲು ಆಸ್ಪತ್ರೆಗೆ ಬಾಂಬ್ ಬೆದರಿಕೆ ಕರೆ ಮಾಡಿ ಕೊನೆಗೂ ಸಿಕ್ಕಿಬಿದ್ದ ವೈದ್ಯಕೀಯ ವಿದ್ಯಾರ್ಥಿನಿ…!

 ಮಂಗಳೂರು : ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಬಾಂಬ್ ಬೆದರಿಕೆ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿದ್ದು, ವಿಚಾರ ಸಂಕಿರಣವನ್ನು ತಪ್ಪಿಸಿಕೊಳ್ಳಲು ಹುಸಿ ಕರೆ ಮಾಡಿದ ಆರೋಪದ ಮೇಲೆ ಸ್ನಾತಕೋತ್ತರ (ಪಿಜಿ) ವೈದ್ಯಕೀಯ ವಿದ್ಯಾರ್ಥಿನಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಜೂನ್ 4 ರಂದು ಬೆಳಿಗ್ಗೆ 8:45 ರ ಸುಮಾರಿಗೆ ಆಸ್ಪತ್ರೆಯ ಆವರಣದಲ್ಲಿ ಬಾಂಬ್ ಇಡಲಾಗಿದೆ … Continued