ಭಾರತಕ್ಕೆ ಅಮೆರಿಕದಿಂದ 20 ಶತಕೋಟಿ ಡಾಲರ್‌ ರಕ್ಷಣಾ ಸಾಮಗ್ರಿ ಪೂರೈಕೆ

ವಾಷಿಂಗ್ಟನ್: ಭಾರತಕ್ಕೆ ಪ್ರಮುಖ ರಕ್ಷಣಾ ಸಾಧನಗಳ ಮಾರಾಟವು ಈಗ 20 ಶತಕೋಟಿ ಯುಎಸ್ ಡಾಲರ್‌ಗಳಿಗೆ ತಲುಪಿದೆ. ಇದು ಭಾರತದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಅಮೆರಿಕದ ಬದ್ಧತೆ ತೋರಿಸುತ್ತದೆ ಎಂದು ಬೈಡೆನ್ ಆಡಳಿತ ಹೇಳಿದೆ. ಈ ವರ್ಷಾಂತ್ಯದ ವೇಳೆಗೆ ಭಾರತಕ್ಕೆ 20 ಬಿಲಿಯನ್ ಡಾಲರ್‌ಗಳಷ್ಟು ರಕ್ಷಣಾ ಸಾಮಗ್ರಿಗಳ ಮಾರಾಟವನ್ನು ಅಮೆರಿಕ ಅಧಿಕೃತಗೊಳಿಸಿದೆ. ಇದು ಭಾರತದ ಸಾರ್ವಭೌಮತೆ ಮತ್ತು … Continued

ಭಾರತ-ಜಪಾನ್ ಜಂಟಿ ಸಹಭಾಗಿತ್ವದಲ್ಲಿ ಕೊಲಂಬೊ ಬಂದರಿನ ವೆಸ್ಟರ್ನ್ ಕಂಟೇನರ್ ಟರ್ಮಿನಲ್ ಅಭಿವೃದ್ಧಿ ಪ್ರಸ್ತಾಪ ಅಂಗೀಕಾರ

ಕೊಲಂಬೊ: ಭಾರತ ಮತ್ತು ಜಪಾನ್ ಜಂಟಿ ಸಹಭಾಗಿತ್ವದಲ್ಲಿ ಆಯಕಟ್ಟಿನ ಕೊಲಂಬೊ ಬಂದರಿನ ವೆಸ್ಟರ್ನ್ ಕಂಟೇನರ್ ಟರ್ಮಿನಲ್ (ಡಬ್ಲ್ಯುಸಿಟಿ) ಯನ್ನು 35 ವರ್ಷಗಳ ಅವಧಿಗೆ ಅಭಿವೃದ್ಧಿಪಡಿಸುವ ಪ್ರಸ್ತಾಪ ಅಂಗೀಕರಿಸಿದೆ ಎಂದು ಶ್ರೀಲಂಕಾ ಮಂಗಳವಾರ ಪ್ರಕಟಿಸಿದೆ. ಶ್ರೀಲಂಕಾ ಬಂದರು ಪ್ರಾಧಿಕಾರ ಮತ್ತು ಭಾರತ ಮತ್ತು ಜಪಾನ್‌ ಸಹಯೋಗದೊಂದಿಗೆ ಕೊಲಂಬೊ ದಕ್ಷಿಣ ಬಂದರಿನ ಪಶ್ಚಿಮ ಕಂಟೈನರ್ ಟರ್ಮಿನಲ್ ಅನ್ನು ಖಾಸಗಿ … Continued

ನೈಜೀರಿಯಾ: ಅಪಹೃತ ೨೭೯ ಶಾಲಾ ಬಾಲಕಿಯರ ಬಿಡುಗಡೆ

ಗುಸೌ: ಕಳೆದ ವಾರ ಬಂದೂಕುಧಾರಿ ವ್ಯಕ್ತಿಗಳ ತಂಡ ನೈಜೀರಿಯಾದ ವಾಯುವ್ಯ ಜಾಮ್ಫಾರಾ ರಾಜ್ಯದ ಬೋರ್ಡಿಂಗ್ ಶಾಲೆಯಿಂದ ಅಪಹರಿಸಿದ್ದ ನೂರಾರು ಶಾಲಾ ಬಾಲಕಿಯರನ್ನು ಬಿಡುಗಡೆ ಮಾಡಿದ್ದಾರೆ ಎಂದು ರಾಜ್ಯಪಾಲರು ಮಂಗಳವಾರ ತಿಳಿಸಿದ್ದಾರೆ. ಜಂಗೆಬೆ ಪಟ್ಟಣದ ಸರ್ಕಾರಿ ಬಾಲಕಿಯ ಕಿರಿಯ ಮಾಧ್ಯಮಿಕ ಶಾಲೆಯಿಂದ ಬಂದೂಕುಧಾರಿಗಳು ಬಾಲಕಿಯರನ್ನು ಅಪಹರಿಸಿದ್ದರು.ಅದರಲ್ಲಿ 279 ಬಾಲಕಿಯರನ್ನು ಮಂಗಳವಾರ ಅಪಹರಣಕಾರರು ಬಿಡುಗಡೆ ಮಾಡಿದ್ದಾರೆ ಎಂದು ಜಾಮ್ಫಾರಾ … Continued

ರಷ್ಯಾ ವಿರುದ್ಧ ನಿರ್ಬಂಧ ಘೋಷಿಸಿದ ಅಮೆರಿಕ

ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರಿಗೆ ವಿಷದ ಇಂಜೆಕ್ಷನ್‌ ನೀಡಿದ್ದು ಮತ್ತು ಅವರಿಗೆ ಜೈಲುವಾಸ ನೀಡಿದ್ದರ ಬಗ್ಗೆ ಬಿಡೆನ್ ಆಡಳಿತವು ರಷ್ಯಾ ವಿರುದ್ಧ ನಿರ್ಬಂಧಗಳನ್ನು ಘೋಷಿಸಿದೆ. ಈ ನಿರ್ಬಂಧಗಳು ರಷ್ಯಾದ ವಿರುದ್ಧ ಅಮೆರಿದ ಅಧ್ಯಕ್ಷ ಜೋ ಬಿಡನ್ ಆದೇಶಿಸಿದ ಮೊದಲ ಆದೇಶವಾಗಿದೆ ಮತ್ತು ಪುಟಿನ್ ಅವರೊಂದಿಗಿನ ಸಂಬಂಧಕ್ಕೆ ಇದು ನಾಂದಿ ಹಾಡಲಿದೆ. ರಷ್ಯಾದಲ್ಲಿ ಬಂಧಿಸಲ್ಪಟ್ಟಿರುವ … Continued

೩೦ ತಾಲಿಬಾನ್‌ ಉಗ್ರರ ಕೊಂದ ಅಫ್ಘಾನಿಸ್ತಾನ್‌ ರಕ್ಷಣಾ ಪಡೆಗಳು

ಕಾಬೂಲ್: ಆಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯವಾದ ಕಪಿಸಾದಲ್ಲಿ ಆಫ್ಘಾನಿಸ್ತಾನ ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿ ಅಲ್-ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ 16 ಜನ ಸೇರಿದಂತೆ ಸೇರಿದಂತೆ 30 ತಾಲಿಬಾನ್ ಉಗ್ರರನ್ನು ಕೊಂದಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಕಪಿಸಾದ ನಿಜ್ರಾಬ್ ಜಿಲ್ಲೆಯಲ್ಲಿ ಆಫ್ಘಾನಿಸ್ತಾನ ರಾಷ್ಟ್ರೀಯ ರಕ್ಷಣಾ ಪಡೆ ಮತ್ತು ಆಫ್ಘನ್ ರಾಷ್ಟ್ರೀಯ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ … Continued

ಸೈನ್ಯದ ಗುಂಡಿನ ದಾಳಿ ನಂತರ ಮ್ಯಾನ್ಮಾರ್‌ನಲ್ಲಿ ಜನರ ಹೋರಾಟ ತೀವ್ರ

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತ ನಡೆಸಿದ ದಾಳಿಯಲ್ಲಿ ೧೮ ಜನರು ಮೃತಪಟ್ಟ ನಂತರ ಮ್ಯಾನ್ಮಾರ್‌ ಜನರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಆಂಗ್‌ ಸಾನ್‌ ಸೂಕಿ ಅವರ ಸರಕಾರವನ್ನು ಮತ್ತೆ ಸ್ಥಾಪಿಸಬೇಕೆಂದು ಒತ್ತಾಯಿಸಿ ದೇಶದ ವಿವಿಧೆಡೆ ಪ್ರತಿಭಟನೆ ನಡೆದಿದೆ. ಯಾಂಗೋನ್‌ನಲ್ಲಿ ಜನಸಂದಣಿಯ ಮೇಲೆ ಗುಂಡು ಹಾರಿಸಿದ್ದರಿಂದ ಹಲವರು ಜೀವ ಕಳೆದುಕೊಂಡಿದ್ದಾರೆ. ಸೈನ್ಯವು ಅಧಿಕಾರವನ್ನು ವಶಪಡಿಸಿಕೊಂಡ ನಂತರ … Continued

ಗಾಲ್ವಾನ್‌ ಘರ್ಷಣೆಯಲ್ಲಿ ಸತ್ತ ಚೀನಾ ಸೈನಿಕರೆಷ್ಟು? ಮುಗಿಯದ ಗೊಂದಲ

ನವದೆಹಲಿ: ಕಳೆದ ವರ್ಷ ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆಯೊಂದಿಗೆ ಮುಖಾಮುಖಿಯಾಗಿ ಚೈನೀಸ್ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ಎಷ್ಟು ಸೈನಿಕರು ಕೊಲ್ಲಲ್ಪಟ್ಟರು? ಅದು ನಾಲ್ಕು ಆಗಿದೆಯೇ? ಅಥವಾ ಒಂಬತ್ತು? ಅಥವಾ 14 ಎಂಬುದು ಪಿಎಲ್‌ಎ ಕೂಡ ಖಚಿತವಾದಂತಿಲ್ಲ. ಭಾರತದೊಂದಿಗಿನ ವಿವಿಧ ಹಂತದ ಮಾತುಕತೆಗಳ ಸಮಯದಲ್ಲಿ, ಚೀನಾದ ಅಧಿಕಾರಿಗಳು ವಿವಿಧ ಸಮಯಗಳಲ್ಲಿ, … Continued

ಮತ್ತೆ ಏಷ್ಯಾದ ಅತ್ಯಂತ ಸಿರಿವಂತ ವ್ಯಕ್ತಿ ಎನಿಸಿದ ಮುಕೇಶ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ಅತ್ಯಂತ ಸಿರಿವಂತ ವ್ಯಕ್ತಿಯಾಗಿದ್ದಾರೆ. ಅವರು ಚೀನಾದ ಜಾಂಗ್‌ ಶಾನ್‌ಶಾನ್‌ ಅವರನ್ನು ಹಿಂದಿಕ್ಕಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಚೀನಾದ ಉದ್ಯಮಿ ಆಸ್ತಿ 76.6 ಬಿಲಿಯನ್ ಡಾಲರ್‌ ಮೌಲ್ಯದ್ದಾಗಿದ್ದರೆ, ಅಂಬಾನಿಯ ಆಸ್ತಿ ಸುಮಾರು 80 ಬಿಲಿಯನ್ ಡಾಲರ್‌ ಆಗಿದೆ. ಅಂಬಾನಿ ತನ್ನ ಸಾಮ್ರಾಜ್ಯವನ್ನು ಟೆಕ್ ಮತ್ತು ಇ-ಕಾಮರ್ಸ್‌ಗೆ … Continued

ಮ್ಯಾನ್ಮಾರ್‌ನಲ್ಲಿ ನಡೆದ ದಂಗೆಯಲ್ಲಿ ೧೮ ಜನರ ಸಾವು

ಮ್ಯಾನ್ಮಾರ್‌ನಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ದೌರ್ಜನ್ಯದಲ್ಲಿ ಕನಿಷ್ಟ ೧೮ ಜನರು ಸಾವನ್ನಪ್ಪಿದ್ದು, ೩೦ ಜನರು ಗಾಯಗೊಂಡಿದ್ದಾರೆ ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ. ಯಾಂಗೊನ್, ದಾವೆ, ಮಾಂಡಲೆ, ಮೈಕ್, ಬಾಗೊ ಮತ್ತು ಪೊಕೊಕ್ಕುಗಳಲ್ಲಿ ಜನಸಮೂಹಕ್ಕೆ ಗುಂಡು ಹಾರಿಸಿದ ಪರಿಣಾಮವಾಗಿ ಸಾವುಗಳು ಸಂಭವಿಸಿವೆ. ಹಲವೆಡೆ ಅಶ್ರುವಾಯು ಮತ್ತು ಫ್ಲ್ಯಾಷ್-ಬ್ಯಾಂಗ್ ಮತ್ತು ಸ್ಟನ್ ಗ್ರೆನೇಡ್‌ಗಳಲ್ಲಿ ಬಳಕೆಯಾಗಿದೆ … Continued

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಅನುಮತಿ

ವಾಷಿಂಗ್ಟನ್: ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಸರ್ಕಾರ ಅನುಮತಿ ನೀಡಿದೆ. ಅಮೆರಿಕದಲ್ಲಿ ಸೋಂಕು ತಡೆಯಲು ಈ ಲಸಿಕೆಗೆ ಜೋ ಬೈಡನ್ ಆಡಳಿತ ಅನುಮತಿ ಕೊಟ್ಟಿದೆ. ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಸಂಸ್ಥೆಯ ಕೋವಿಡ್‌ ಲಸಿಕೆಯ ಪ್ರಯೋಗಾತ್ಮಕ ವರದಿಯಲ್ಲಿ ಲಸಿಕೆ ಸೋಂಕಿತರ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ತುರ್ತು … Continued