ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗೆ ತೀವ್ರ ಕಳವಳ ವ್ಯಕ್ತಪಡಿಸಿದ ಬ್ರಿಟನ್‌ ಸಂಸದರು

ಲಂಡನ್: ಬಾಂಗ್ಲಾದೇಶದಲ್ಲಿನ ಚಿಂತಾಜನಕ ಪರಿಸ್ಥಿತಿಯ ಕುರಿತು ಬ್ರಿಟನ್‌ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಂಗಳವಾರ ‘ತುರ್ತು’ ವಿಷಯವನ್ನು ಮಂಡಿಸಲಾಯಿತು. ಸಂಸತ್ತಿನ ಸದಸ್ಯರು ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ಇತ್ತೀಚಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ದೇಶದಲ್ಲಿ ಮಧ್ಯಂತರ ಸರ್ಕಾರವು ಹಿಂದೂ ಸನ್ಯಾಸಿಗಳ ಮೇಲಿನ ಧಾರ್ಮಿಕ ದಮನದ ಬಗ್ಗೆಯೂ ಚರ್ಚಿಸಿದರು. ಲೇಬರ್ ಪಕ್ಷದ ಸಂಸದ ಬ್ಯಾರಿ … Continued

ವೀಡಿಯೊ | ವಿಕೆಟ್ ಪಡೆದ ನಂತ್ರ ಸಂಭ್ರಮಿಸುವ ‘ಸ್ಟೈಲ್‌ ನಕಲು’ ಮಾಡಲು ಹೋಗಿ ಗಾಯಗೊಂಡ ಬೌಲರ್ ; ಗೆಲ್ಲಬಹುದಾದ ಪಂದ್ಯ ಸೋತ ನೇಪಾಳ..!

ಬಾಂಗ್ಲಾದೇಶ ವಿರುದ್ಧದ U-19 ಏಷ್ಯಾಕಪ್ ಪಂದ್ಯದಲ್ಲಿ ನೇಪಾಳ ಕ್ರಿಕೆಟ್ ತಂಡದ ಬೌಲರ್ ಯುವರಾಜ ಖತ್ರಿ ಅವರು ವಿಕೆಟ್‌ ಪಡೆದ ಖುಚಿಯಲ್ಲಿ ಚಿತ್ರವಿಚಿತ್ರ ಸಂಭ್ರಮಾಚರಣೆ ಮಾಡಲು ಹೋಗಿ ಗಾಯಗೊಂಡು ಮೈದಾನದಿಂದ ನಿರ್ಗಮಿಸಬೇಕಾಯಿತು. ಇದರಿಂದಾಗಿ ಗೆಲ್ಲುವ ಸ್ಥಿತಿಯಲ್ಲಿದ್ದ ನೇಪಾಳ ಪಂದ್ಯವನ್ನೇ ಸೋಲಬೇಕಾಯಿತು. ಪಂದ್ಯದಲ್ಲಿ ಯುವರಾಜ ಅವರು ನಾಲ್ಕು ವಿಕೆಟ್‌ಗಳನ್ನು ಪಡೆದು ಅದ್ಭುತ ಫಾರ್ಮ್‌ನಲ್ಲಿದ್ದರು ಆದರೆ ಅವರ ಸಂತೋಷವು ಶೀಘ್ರದಲ್ಲೇ … Continued

ಬಾಂಗ್ಲಾದೇಶ | ಬಂಧಿತ ಹಿಂದೂ ಸ್ವಾಮೀಜಿಯ ವಕೀಲರ ಮೇಲೆ ದಾಳಿ ; ಐಸಿಯುನಲ್ಲಿ ಚಿಕಿತ್ಸೆ : ಇಸ್ಕಾನ್

ನವದೆಹಲಿ: ಬಂಧಿತ ಹಿಂದೂ ಸನ್ಯಾಸಿ ಚಿನ್ಮಯ ಕೃಷ್ಣ ದಾಸ್ ಬ್ರಹ್ಮಚಾರಿಯ ಪರ ವಾದಿಸುತ್ತಿರುವ ಬಾಂಗ್ಲಾದೇಶದ ವಕೀಲರ ಮೇಲೆ “ಇಸ್ಲಾಮಿಸ್ಟ್‌ಗಳು ಅವರ ಮನೆಯಲ್ಲಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ” ಮತ್ತು ಪ್ರಸ್ತುತ ಅವರು ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಇಸ್ಕಾನ್ ಇಂಡಿಯಾ ಹೇಳಿಕೊಂಡಿದೆ. ದೇಶದ್ರೋಹದ ಆರೋಪದ ಮೇಲೆ ಸನ್ಯಾಸಿಯ ಬಂಧನದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಹಿಂಸಾಚಾರದ … Continued

ವೀಡಿಯೊ…| ಫುಟ್ಬಾಲ್ ಪಂದ್ಯದಲ್ಲಿ ಎರಡು ತಂಡಗಳ ಅಭಿಮಾನಿಗಳ ನಡುವೆ ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ಸಾವು : ವರದಿ

ಗಿನಿಯಾದ ಎರಡನೇ ಅತಿದೊಡ್ಡ ನಗರವಾದ ಎನ್‌ಜೆರೆಕೋರ್‌ನಲ್ಲಿ ಫುಟ್‌ಬಾಲ್ ಅಭಿಮಾನಿಗಳ ನಡುವಿನ ಹೊಡೆದಾಟದಲ್ಲಿ ಭಾನುವಾರ ಹತ್ತಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ದೇಹಗಳು ತುಂಬಿ ತುಳುಕುತ್ತಿರುವ ದೃಶ್ಯಗಳು ಕಂಡು ಬಂದವು. “ಆಸ್ಪತ್ರೆಯಲ್ಲಿ ಎಲ್ಲೆಡೆ ಶವಗಳಿವೆ, ಹಜಾರದ ಮಹಡಿಗಳಲ್ಲಿಯೂ ಸಹ ಶವಗಳಿವೆ. ಶವಾಗಾರ ತುಂಬಿದೆ” ಎಂದು ವೈದ್ಯರು ಹೇಳಿದ್ದಾರೆ. ಸುಮಾರು 100 ಮಂದಿ ಸತ್ತಿದ್ದಾರೆ … Continued

ನಾಲ್ವರನ್ನು ಬಂಧಿಸಿದ ನಂತರ 54 ಇಸ್ಕಾನ್ ಸನ್ಯಾಸಿಗಳು ಭಾರತಕ್ಕೆ ಬರುವುದನ್ನು ತಡೆದ ಬಾಂಗ್ಲಾದೇಶ…!

ಢಾಕಾ : ಬಾಂಗ್ಲಾದೇಶವು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ನ ಕನಿಷ್ಠ 54 ಸದಸ್ಯರನ್ನು ಭಾರತಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದೆ ಮತ್ತು ಬೆನಾಪೋಲ್ ಗಡಿ ಚೆಕ್ಪಾಯಿಂಟ್‌ನಿಂದ ಅವರನ್ನು ಹಿಂದಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶದ ವಲಸೆ ಪೊಲೀಸರು “ಅನುಮಾನಾಸ್ಪದ ಪ್ರಯಾಣ” ಎಂದು ಉಲ್ಲೇಖಿಸಿ, ಮಾನ್ಯವಾದ ದಾಖಲೆಗಳನ್ನು ಹೊಂದಿದ್ದರೂ ಅವರನ್ನು ಭಾರತಕ್ಕೆ ಪ್ರವೇಶಿದಂತೆ ನಿರ್ಬಂಧಿಸಿ ಹಿಂದಕ್ಕೆ … Continued

ಐಕ್ಯೂ(IQ) ಸ್ಕೋರ್‌ ನಲ್ಲಿ ವಿಜ್ಞಾನಿಗಳಾದ ಆಲ್ಬರ್ಟ್ ಐನ್‌ಸ್ಟೈನ್, ಸ್ಟೀಫನ್ ಹಾಕಿಂಗ್ ಅವರನ್ನೂ ಹಿಂದಿಕ್ಕಿದ 10 ವರ್ಷದ ಭಾರತೀಯ ಮೂಲದ ಬ್ರಿಟಿಷ್ ಹುಡುಗ…!

ಭಾರತೀಯ ಮೂಲದ 10 ವರ್ಷದ ಬ್ರಿಟಿಷ್ ಹುಡುಗ ಕ್ರಿಶ್ ಅರೋರಾ ಇತ್ತೀಚೆಗೆ 162 ರ ಐಕ್ಯೂ ಸಾಧಿಸುವ ಮೂಲಕ ಸುದ್ದಿಯಾಗಿದ್ದಾನೆ. ಈ ಐಕ್ಯೂ ಮಟ್ಟ ವಿಜ್ಞಾನಿಗಳಾದ ಆಲ್ಬರ್ಟ್ ಐನ್‌ಸ್ಟೈನ್ ಮತ್ತು ಸ್ಟೀಫನ್ ಹಾಕಿಂಗ್‌ ಅವರ ಐಕ್ಯೂ ಮಟ್ಟಗಳಿಂತಲೂ ಹೆಚ್ಚು. ಆಲ್ಬರ್ಟ್ ಐನ್‌ಸ್ಟೈನ್ ಮತ್ತು ಸ್ಟೀಫನ್ ಹಾಕಿಂಗ್‌ ಅವರ ಐಕ್ಯೂ ಮಟ್ಟ 160 ರಷ್ಟಿತ್ತು ಎಂದು ಭಾವಿಸಲಾಗಿದೆ. … Continued

ಬಾಂಗ್ಲಾದೇಶದಲ್ಲಿ ಇಬ್ಬರು ಹಿಂದೂ ಸನ್ಯಾಸಿಗಳ ಬಂಧನ; ಭಾರತದ ನಾಗರಿಕನಿಗೆ ಥಳಿತ

ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ವಿರುದ್ಧ ಕ್ರಮ ಮುಂದುವರಿದ್ದು, ಇನ್ನೂ ಇಬ್ಬರು ಇಸ್ಕಾನ್ ಸನ್ಯಾಸಿಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶದ ಚಟ್ಟೋಗ್ರಾಮದಲ್ಲಿ ಚಿನ್ಮಯ ಕೃಷ್ಣ ದಾಸ್‌ ಅವರಿಗೆ ಆಹಾರವನ್ನು ತಲುಪಿಸಲು ಹೋದಾಗ ಅವರನ್ನು ಬಂಧಿಸಲಾಯಿತು, ಅವರ ಬಂಧನವು ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು. ಇದು ಇತ್ತೀಚಿನ ತಿಂಗಳುಗಳಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ವಿಶೇಷವಾಗಿ ಹಿಂದೂ ಸಮುದಾಯದ … Continued

ಮ್ಯಾಚ್ ಫಿಕ್ಸಿಂಗ್ ಪ್ರಕರಣ ; ದಕ್ಷಿಣ ಆಫ್ರಿಕಾದ ಮೂವರು ಮಾಜಿ ಕ್ರಿಕೆಟಿಗರ ಬಂಧನ

2015-16 ರ ರಾಮ್ ಸ್ಲಾಮ್ T20 ಚಾಲೆಂಜ್ ಮ್ಯಾಚ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾದ ಮೂವರು ಮಾಜಿ ಕ್ರಿಕೆಟ್‌ ಆಟಗಾರರನ್ನು ಬಂಧಿಸಲಾಗಿದೆ. ಮಾಜಿ ಅನುಭವಿ ಆಟಗಾರರಾದ ಲೊನ್ವಾಬೊ ತ್ಸೊಟ್ಸೊಬೆ, ಥಾಮಿ ತ್ಸೊಲೆಕಿಲೆ ಮತ್ತು ಎಥಿ ಎಂಬಾಲಾಟಿ ಅವರನ್ನು ಬಂಧಿಸಲಾಗಿದೆ ಮತ್ತು ಅವರ ಅನೇಕ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇವರು ದಕ್ಷಿಣ … Continued

ಒಂದು ಬಾಳೆಹಣ್ಣಿಗೆ ₹52 ಕೋಟಿ ಕೊಟ್ಟು ಖರೀದಿಸಿದ ಕ್ರಿಪ್ಟೋಕರೆನ್ಸಿ ಉದ್ಯಮಿ…! ಏನಿದರ ವಿಶೇಷತೆ..?

ಹಾಂ​ಕಾಂಗ್ : ಇತ್ತೀಚಿಗೆ ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಹರಾಜಿನಲ್ಲಿ 6.2 ಮಿಲಿಯನ್​ ಡಾಲರ್ (52.45 ಕೋಟಿ ರೂ.)​ ಕೊಟ್ಟು ಗೋಡೆ ಮೇಲೆ ಟೇಪ್​ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು ಖರೀದಿಸಿದ್ದರು. ಈಗ ಅವರು ತಾವು ಅಷ್ಟೊಂದು ಮೊತ್ತಕ್ಕೆ ಖರೀದಿಸಿದ್ದ “ಕಮೀಡಿಯನ್” ಕಲಾಕೃತಿ ಗೋಡೆ ಮೇಲೆ ಟೇಪ್​ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು ಶುಕ್ರವಾರ ತಿಂದಿದ್ದಾರೆ. ಹಾಂ​ಕಾಂಗ್​ನ ಖಾಸಗಿ … Continued

ವೀಡಿಯೊ..| ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅತ್ಯದ್ಭುತ ಕ್ಯಾಚ್‌ ಹಿಡಿದ ಗ್ಲೆನ್ ಫಿಲಿಪ್ಸ್ ; ‘ಕ್ರಿಕೆಟ್‌ ಸೂಪರ್‌ಮ್ಯಾನ್’ ಎಂದ ಅಭಿಮಾನಿಗಳು..!

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರ ಗ್ಲೆನ್ ಫಿಲಿಪ್ಸ್ ಹಿಡಿದ ಕ್ಯಾಚ್ ಎಲ್ಲರನ್ನೂ ಬೆರಗಾಗಿಸಿದೆ. ಕ್ರೈಸ್ಟ್ ಚರ್ಸ್​​ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್​​ನಲ್ಲಿ 348 ರನ್ ಕಲೆಹಾಕಿದೆ. ನಂತರ ಬ್ಯಾಟಿಂಗ್‌ಗೆ ಇಳಿದ … Continued